FILM
WATCH VIDEO: ಐಶ್ – ಅಭಿ ವಿಚ್ಛೇದನದ ಸುದ್ದಿಗೆ ಪೂರ್ಣ ವಿರಾಮ ಹಾಕಿದೆ ಆ ಒಂದು ವೀಡಿಯೋ!
Published
1 month agoon
By
NEWS DESK4ಮಂಗಳೂರು : ಬಾಲಿವುಡ್ ಅಂಗಳದಲ್ಲಿ ಮದುವೆ – ವಿಚ್ಛೇದನ ಸಾಮಾನ್ಯ. ಆದರೆ, ಹಲವು ವರ್ಷಗಳಿಂದ ಈ ಜೋಡಿಯ ವಿಚ್ಛೇದನದ ಗಾಸಿಪ್ ಒಂದು ಹರಿದಾಡುತ್ತಿದೆ. ಹೌದು, ಬಿ ಟೌನ್ ನ ಹಾಟ್ ಫೆವರೇಟ್ ಕಪಲ್ ಅಭಿಷೇಕ್ ಬಚ್ಚನ್ – ಐಶ್ವರ್ಯ ರೈ ಬಚ್ಚನ್ ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಗುಲ್ಲೊಂದು ಸದಾ ಇದೆ. ಆದರೆ, ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡೋ, ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕಾನೋ ಈ ಸುದ್ದಿಯನ್ನು ಟುಸ್ ಮಾಡಿದ್ದೂ ಇದೆ. ಆದ್ರೆ, ಇತ್ತೀಚೆಗೆ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿತ್ತು. ಇದೀಗ ಆ ಒಂದು ವೀಡಿಯೋ ಮತ್ತೆ ವೈರಲ್ ಸುದ್ದಿಯನ್ನು ಸುಳ್ಳಾಗಿಸಿದೆ.
ಅನಂತ್ ಅಂಬಾನಿ ಮದುವೆ – ಗಾಸಿಪ್ :
ಆ ಒಂದು ಮದುವೆ ಐಶ್ – ಅಭಿ ಅಭಿಮಾನಿಗಳಿಗಳೆ ಗಾಬರಿ ಹುಟ್ಟಿಸಿತ್ತು. ಅದು ಜುಲೈನಲ್ಲಿ ಅದ್ದೂರಿಯಾಗಿ ನಡೆದಿದ್ದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಕ್ಯಾಮೆರಾಕ್ಕೆ ಪೋಸ್ ನೀಡಿದ್ದರು. ಆದರೆ, ಐಶ್ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಬಂದಿದ್ದರು. ಐಶ್ ಮಗಳು ಆರಾಧ್ಯ ಜೊತೆ ಬಂದಿದ್ದರೆ, ಅಭಿಷೇಕ್ ತನ್ನ ಫ್ಯಾಮಿಲಿ ಜೊತೆ ಬಂದಿದ್ದರು. ಓ…ಇವರು ಬೇರ್ಪಟ್ಟಿರೋದು ನಿಜ ಎಂದೇ ಎಲ್ಲರೂ ಭಾವಿಸಿದ್ದರು.
ಅಸಲಿ ಕಥೆ ರಿವೀಲ್ :
ಹೊರಗೆ ಬೇರೆ ಬೇ ರೆಯಾಗಿ ಕಾಣಿಸಿಕೊಂಡಿದ್ದ ದಂಪತಿ ಒಳಗೆ ಜೊತೆಯಾಗಿಯೇ ಇದ್ದರು. ಮಗಳ ಅಕ್ಕ ಪಕ್ಕ ಕೂತು ಮದುವೆ ಸಮಾರಂಭವನ್ನು ಎಂಜಾಯ್ ಮಾಡಿದ್ದರು. ಇದು ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಅದ್ದೂರಿ ವಿವಾಹ ಮಹೋತ್ಸವದ ಡಾಕ್ಯುಮೆಂಟರಿಯಲ್ಲಿ ಸೆರೆಯಾಗಿದೆ. ಈ ಟೀಸರ್ ನಲ್ಲಿ ದಂಪತಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿರೋದು ಸುಳ್ಳಲ್ಲ.
ಇದನ್ನೂ ಓದಿ : ಕುತ್ತಾರು ಕೊರಗಜ್ಜನ ಕಟ್ಟೆಗೆ ನಟ ಶಿವರಾಜ್ ಕುಮಾರ್ ಭೇಟಿ
ವಿವಾಹದ ವೈಭವೋಪೇತ ಅದ್ಭುತ ಕ್ಷಣಗಳು ಈ ವೀಡಿಯೋದಲ್ಲಿದ್ದು, ಒಂದೆಡೆ ನಟ ಅಮಿತಾಭ್ ಬಚ್ಚನ್ ತಮ್ಮ ಪತ್ನಿ ಜಯಾ ಬಚ್ಚನ್ ಜೊತೆ ಕುಳಿತುಕೊಂಡಿದ್ದಾರೆ. ಮತ್ತೊಂದೆಡೆ ಮಗಳೊಂದಿಗೆ ಸೋಫಾ ಮೇಲೆ ಕೂತು ಐಶ್ – ಅಭಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ, ಬಿಡುಗಡೆಯಾಗಿರೋ ಈ ವೀಡಿಯೋ ವೈರಲ್ ಆಗಿದ್ದು, ಮತ್ತೆ ಚರ್ಚೆ ಹುಟ್ಟು ಹಾಕಿದೆ.
FILM
ದಿಲೀಪ್ ಕುಮಾರ್ ಆಗಿದ್ದ ಎ.ಆರ್ ರೆಹಮಾನ್ ಧರ್ಮ ಬದಲಿಸಿದ್ದು ಯಾಕೆ ಗೊತ್ತಾ ??
Published
2 hours agoon
22/11/2024ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಸುಮಾರು 29 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಘೋಷಣೆ ಮಾಡಿದ್ದು ಬಹಳ ಅಚ್ಚರಿ ಮೂಡಿಸಿತ್ತು. ಈ ವಿಚ್ಚೇದನದ ಸುದ್ದಿಯಿಂದಾಗಿ ಎ.ಆರ್ ರೆಹಮಾನ್ ಅವರ ವೈಯಕ್ತಿನ ಬದುಕಿನ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ.
‘ರೆಹಮಾನ್’ ಎಂಬ ಹೆಸರಿನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದ ದಿಲೀಪ್ ಕುಮರ್ 1980ರಲ್ಲಿ ತಂದೆಯ ಮರಣದ ನಂತರ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡ ನಂತರ, ಬಹುಕಾಲದ ಆಸೆಯಾಗಿದ್ದ ರೆಹಮಾನ್’ ಎಂಬ ಹೆಸರನ್ನು ಬಳಸಲು ನಿರ್ಧರಿಸಿದರು.
ತಂಗಿಯ ಮದುವೆಗೆ ಜ್ಯೋತಿಷ್ಯ ನೋಡುವಾಗ, ಒಬ್ಬ ಹಿಂದೂ ಜ್ಯೋತಿಷಿ ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಎಂಬ ಹೆಸರುಗಳನ್ನು ಸೂಚಿಸಿದ್ದಾಗಿ ರೆಹಮಾನ್ ಆಗಾಗ ನನಪಿಸುಕೊಳ್ಳುತ್ತಿರುತ್ತಾರೆ. ‘ರೆಹಮಾನ್’ ಹೆಸರು ಇಷ್ಟವಾಗಿದ್ದ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡರು. ತಾಯಿಯ ಮನದಿಚ್ಚೆಯಂತೆ, ‘ಅಲ್ಲಾ ರಕ್ಕಾ’ ಎಂಬುದನ್ನು ಸೇರಿಸಿ ಎ.ಆರ್. ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
‘ದೇವರಿಂದ ರಕ್ಷಿಸಲ್ಪಟ್ಟವರು’ ಎಂಬ ಅರ್ಥವನ್ನು ಹೊಂದಿರುವ ಎ.ಆರ್. ರೆಹಮಾನ್ ಎಂಬ ಹೆಸರು ಇಂದು ಸಂಗೀತ ಲೋಕದಲ್ಲಿ ಅನುಪಮ ಸ್ಥಾನ ಪಡೆದಿದೆ. ಈ ಹೆಸರು ಬದಲಾವಣೆ ರೆಹಮಾನ್ ಅವರ ಆಧ್ಯಾತ್ಮಿಕ ಪಯಣವನ್ನು ಸೂಚಿಸುವುದು ಮಾತ್ರವಲ್ಲದೆ, ಜಾಗತಿಕ ಖ್ಯಾತಿಗೆ ಅವರ ಏಳಿಗೆಯ ಆರಂಭವನ್ನೂ ಸೂಚಿಸುತ್ತದೆ, ರೆಹಮಾನ್ ಎಂಬ ಹೆಸರು ವಿಶ್ವದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.
29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ರೆಹಮಾನ್ ಸಾಯಿರಾ ದಂಪತಿ ವಕೀಲರಾದ ವಂದನಾ ಶಾ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಮೂಲಕ ಪ್ರತ್ಯೇಕಗೊಂಡಿರುವ ವಿಚಾರ ತಿಳಿಸಿದರು. ತಮ್ಮ ತಂದೆಯನ್ನು ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ್ದ ಸೂಫಿ ಸಂತರೊಬ್ಬರ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಧರ್ಮಕ್ಕೆ ರೆಹಮಾನ್ ಮತಾಂತರಗೊಂಡರು ಎನ್ನಲಾಗಿದೆ. ‘ಈ ನಂಬಿಕೆಯ ಬದಲಾವಣೆ ಮನಸ್ಸಿಗೆ ಶಾಂತಿ ನೀಡಿದ್ದು, ತಾವು ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲು ಇಷ್ಟಪಡುವುದಿಲ್ಲ’ ಎಂದು ಸ್ವತಃ ರೆಹಮಾನ್ ಹೇಳಿಕೊಂಡಿದ್ದಾರೆ.
FILM
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
Published
4 hours agoon
22/11/2024By
NEWS DESK4ಮಂಗಳೂರು/ಬೆಂಗಳೂರು : ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕನಾಗಿ ಮಿಂಚಿ ಸಕತ್ ಫೇಮಸ್ ಆಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸರಳವಾಗಿ ಅವರ ನಿಶ್ಚಿತಾರ್ಥ ಕಾರ್ಯ ನೆರವೇರಿದೆ.
ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ರಾಣಾ ಎಂಗೇಜ್ಮೆಂಟ್ ಆಗಿರುವ ಹುಡುಗಿ ಯಾರು? ಎಲ್ಲಿಯವರು? ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ಫೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರೇಮ್ ಮಿಸ್ ಯಾಕೆ?
ರಾಣಾ ಎಂಗೇಜ್ಮೆಂಟ್ ಸಮಾರಂಭದಲ್ಲಿ ನಟಿ ರಕ್ಷಿತಾ ಪ್ರೇಮ್ ಕುಟುಂಬ ಇದೆ. ಆದ್ರೆ ನಿರ್ದೇಶಕ ಪ್ರೇಮ್ ಇಲ್ಲ. ಅವರು ಏನು ಭಾಗಿಯಾಗಿಲ್ಲ ಎಂಬ ಅನುಮಾನ ಹುಟ್ಟಿರೋದು ಸಹಜ. ಪ್ರೇಮ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋದರಿಂದ ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಅವರು ಚಿಕ್ಕಮಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಣಾ, ಪ್ರೇಮ್ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ್ ಈಶ್ವರ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಾನ್ವಿ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.
LATEST NEWS
ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ವರದಿ ನಿರಾಕರಿಸಿದ ಕೆನಡಾ ಸರ್ಕಾರ
ಕದ್ರಿ ಪಾರ್ಕ್ನಲ್ಲಿ ‘ಕಲಾಪರ್ಬ’; ಯು.ಟಿ.ಖಾದರ್ನಿಂದ ಲಾಂಛನ ಬಿಡುಗಡೆ
ನಾಳೆ ಉಪಚುನಾವಣೆಯ ಮತಎಣಿಕೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ
ಶೀಘ್ರದಲ್ಲೇ ಉಬರ್ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ