Connect with us

    DAKSHINA KANNADA

    ಟ್ಯಾಂಕರ್ ಸ್ಕೂಟರ್ ಭೀ*ಕರ ಅ*ಪಘಾತ: ಮಹಿಳೆ ಸಾ*ವು

    Published

    on

    ಉಳ್ಳಾಲ: ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅ*ಪಘಾತದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ಎದುರಿನ ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ನಿನ್ನೆ (ನ.9) ಸಂಜೆ ಸಂಭವಿಸಿದೆ.

    ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಸಿಬ್ಬಂದಿ ರೆಹಮತ್ (47) ಮೃ*ತ ಮಹಿಳೆ ಎಂದು ಗುರುತಿಸಲಾಗಿದೆ.

    ದೇರಳಕಟ್ಟೆ ಕಡೆಯಿಂದ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆ*ಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಮೇಲೆ ಚ*ಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾ*ರುಣವಾಗಿ ಸಾ*ವನ್ನಪ್ಪಿದ್ದಾರೆ.

    ರಸ್ತೆ ಅವ್ಯವಸ್ಥೆಯಿಂದಾಗಿ ಘಟನೆ ನಡೆದಿರುವುದಾಗಿ ಆರೋಪಿಸಿದ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದೆ. ಇದರಿಂದಾಗಿ ತೊಕ್ಕೊಟ್ಟು ಕೊಣಾಜೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನಗಳೆಲ್ಲವೂ ಸರತಿ ಸಾಲುಗಳಲ್ಲಿ ನಿಂತರೆ, ಹಲವು ವಾಹನಗಳು ಬೀರಿ ಮಾರ್ಗವಾಗಿ ಸಂಚರಿಸುತ್ತಿದೆ.

    ಉದ್ರಿಕ್ತ ಗುಂಪು ಹಾಗೂ ಉಳ್ಳಾಲ ಪೊಲೀಸರ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಫೋಳೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    DAKSHINA KANNADA

    ತಾಲೂಕು ಮಟ್ಟದ ಪ್ರತಿಭಾ ಕಾರಂಜಿ :  ಮಾಣಿ ಬಾಲವಿಕಾಸ  ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

    Published

    on

    ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ  ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ   ಸಮಯನ್ವಯಾಧಿಕಾರಿಯವರ ಕಚೇರಿ, ಬಂಟ್ವಾಳ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ, ಬಂಟ್ವಾಳ ತಾಲೂಕು ಇವರ ಸ0ಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ  ಪ್ರತಿಭಾ ಕಾರಂಜಿ 2024-25 ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಜರುಗಿತು.

    ಮಾಣಿ ವಿದ್ಯಾನಗರ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ (9ನೇ ತರಗತಿ ), ಪ್ರೌಢ ಶಾಲಾ ಮಟ್ಟದ ಕನ್ನಡ ಆಶು ಭಾಷಣ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಾಥಮಿಕ ವಿಭಾಗದಲ್ಲಿ ದಿಶಾ (4ನೇ ತರಗತಿ)  ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ : ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸಾ*ವು!

    ಪ್ರೌಢ ಶಾಲಾ ವಿಭಾಗದಲ್ಲಿ ಸ್ವಸ್ತಿ ಎಸ್ ಭಟ್ ( 10ನೇ ತರಗತಿ ) ಭಾವಗೀತೆಯಲ್ಲಿ ದ್ವಿತೀಯ ಮತ್ತು ಸಂಸ್ಕೃತ  ಧಾರ್ಮಿಕ ಪಠಣದಲ್ಲಿ  ತೃತೀಯ,  ವೈಷ್ಣವಿ (10ನೇ ತರಗತಿ) ಗಝಲ್ ನಲ್ಲಿ ತೃತೀಯ, ಪೂರ್ವಿ ಎ ಭಾರಧ್ವಜ್ (9ನೇ ತರಗತಿ ) ಹಿಂದಿ ಭಾಷಣದಲ್ಲಿ ತೃತೀಯ, ದೇವಿಕಾ ಕೆ (9ನೇ ತರಗತಿ) ಕವನ ವಾಚನದಲ್ಲಿ ತೃತೀಯ, ಆರೋನ್ ಪಾಯಸ್ (10ನೇ ತರಗತಿ ) ಮತ್ತು ಪುನೀತ್ ಕೆ ಜಿ (10ನೇ ತರಗತಿ ) ರಸಪ್ರಶ್ನೆಯಲ್ಲಿ ತೃತೀಯ, ಮೊಹಮ್ಮದ್ ನವಾವಿ (10ನೇ ತರಗತಿ ), ಅಬ್ದುಲ್ ಮಾಹಿಜ್ (10ನೇ ತರಗತಿ ), ಮುಹಮ್ಮದ್ ಫಾಝಿಲ್ (10ನೇ ತರಗತಿ ), ಎಂ. ಮುಹಮ್ಮದ್ ಸಿಯಾನ್ (10ನೇ ತರಗತಿ ), ಮುಹಮ್ಮದ್ ಹಿಷಾಮ್ (10ನೇ ತರಗತಿ ), ಮೊಹಮ್ಮದ್ ಶುರೈಫ್ (9ನೇ ತರಗತಿ ) ಕವ್ವಾಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

    Continue Reading

    DAKSHINA KANNADA

    ವಿಟ್ಲ: ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ದಾಂಧಲೆ; ಮೇಜಿನ ಗಾಜು ಪುಡಿಪುಡಿ

    Published

    on

    ವಿಟ್ಲ: ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮನೆಯೊಂದರ ಅಡಿಸ್ಥಳದ ಹಕ್ಕು ಪತ್ರ ಪಡೆಯುವ ವಿಚಾರದಲ್ಲಿ ರಾಜಕೀಯ ಮುಖಂಡರ ಬೆಂಬಲಿಗರಿಂದ ದಾಂಧಲೆ ನಡೆದಿದ್ದು, ಮೇಜಿನ ಗಾಜನ್ನು ಪುಡಿಗೈದ ಘಟನೆ ನಿನ್ನೆ ನಡೆದಿದೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಸಿದ್ದಾರೆ. ವೀರಕಂಬ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವ್ಯಕ್ತಿಯೊಬ್ಬರ ಭೂ ದಾಖಲೆ ವಿಚಾರವಾಗಿ ಕಚೇರಿಯೊಳಗೆ ದಾಂಧಲೆ ನಡೆದಿದೆ ಎನ್ನಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವ ಸಂದರ್ಭದಲ್ಲಿ ಮನೆ ಅರಣ್ಯ ಇಲಾಖೆಯಿಂದ ನಿರ್ದಿಷ್ಟ ದೂರದಲ್ಲಿದ್ದು, ಅಲ್ಲಿಂದ ಒಪ್ಪಿಗೆ ಪಡೆಯುವ ಬಗ್ಗೆ ಷರಾ ಬರೆದಿದ್ದಾರೆ.

    ಇದರಿಂದ ಜಾಗ ಮಂಜೂರಾತಿ ಕಷ್ಟವಿದ್ದು, ಅದನ್ನು ತೆಗೆಯಬೇಕೆಂದು ಇಲಾಖೆಗೆ ಒತ್ತಡ ಹಾಕುವ ಕಾರ್ಯವಾಗಿತ್ತು. ಅಧಿಕಾರಿಗಳು ಅದಕ್ಕೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಮಾಧವ ಮಾವೆ ಬೆಂಬಲಿಗರ ಜತೆಗೆ ವಿಟ್ಲದ ಆರ್ ಐ ಕಚೇರಿಗೆ ಆಗಮಿಸಿದ್ದು, ಮಾತಿನ ಮಧ್ಯೆ ಆಕ್ರೋಶಿತ ವ್ಯಕ್ತಿ ಸರ್ಕಾರಿ ಅಧಿಕಾರಿಯನ್ನು ನಿಂದಿಸಿ ಮೇಜಿಗೆ ಕೈಯನ್ನು ಬಡಿದು ದಾಂಧಲೆ ನಡೆಸಿದ್ದಾರೆ.

    ಈ ವೇಳೆ ಮೇಜಿನ ಮೇಲೆ ಅಳವಡಿಸಲಾಗಿದ್ದ ಗಾಜು ಪುಡಿ ಪುಡಿಯಾಗಿದೆ. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.

    Continue Reading

    DAKSHINA KANNADA

    ಉಳ್ಳಾಲದಲ್ಲಿ ಕೊಲೆ ಯತ್ನ; ಆರೋಪಿಗಳ ಬಂಧನ

    Published

    on

    ಮಂಗಳೂರು: ನಗರ ಹೊರವಲಯದ ತಲಪಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಕೆಸಿ ರೋಡ್ ರಸ್ತೆ-ಉಚ್ಚಿಲ ಮಾರ್ಗದ ಬಳಿ ನವೆಂಬರ್ 8ರಂದು ನಡೆದಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಬಾಲಾಪರಾಧಿ ಸಹಿತ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

    ಕೇರಳದ ಕಾಸರಗೋಡು ಜಿಲ್ಲೆಯ ಬಡಾಜೆ ಕಡಂಬಾರ್ ಶಾಲೆಯ ಬಳಿಯ ಫಾತಿಮಾ ಮಂಜಿಲ್ ನಿವಾಸಿ ಮೊಹಮ್ಮದ್ ಆಸಿಫ್ (33) ಮಂಗಳೂರಿನಿಂದ ಕೇರಳಕ್ಕೆ ಕುಟುಂಬ ಸಮೇತ ಮನೆಗೆ ತೆರಳುತ್ತಿದ್ದಾಗ ರಾತ್ರಿ 7:40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆತನನ್ನು ಕೊಲ್ಲುವ ಉದ್ದೇಶದಿಂದ ದಾಳಿಕೋರರು ದಾಳಿ ನಡೆಸಿದ್ದರು ಎಂದು ದೂರು ನೀಡಲಾಗಿತ್ತು. ಆರೋಪಿಗಳಾದ ಸುರತ್ಕಲ್‌ನ ಇಡ್ಯ ಈಶ್ವರನಗರ ನಿವಾಸಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (24) , ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ನಾರ್ಲ ಪಡೀಲ್ ನ ಭಗವತಿ ನಿಲಯದ ಸಚಿನ್ (24), ಬಂಟ್ವಾಳ ತಾಲೂಕಿನ ಪಜೀರ್ ಪೋಸ್ಟ್ ಕಂಬ್ರಪದವು ಪಡಲಕೋಡಿ ನಿವಾಸಿ ಕುಶಿತ್ (18) ಹಾಗೂ ಬಾಲಾಪರಾಧಿಯೊಬ್ಬನನ್ನು ಬಂಧಿಸಲಾಗಿದೆ. ನವೆಂಬರ್ 11 ರಂದು ಬೆಳಿಗ್ಗೆ ಬಂಧಿಸಲಾಯಿತು.

    Continue Reading

    LATEST NEWS

    Trending