Connect with us

DAKSHINA KANNADA

ಯುವ ಪೀಳಿಗೆಗೆ ತಾಳಮದ್ದಳೆ ಕಲಿಸುವ ಅನಿವಾರ್ಯತೆ ಇದೆ – ಸಂಜೀವ ಶೆಟ್ಟಿ

Published

on

” ಯುವ ಜನಾಂಗವು ಯಕ್ಷಗಾನ ಬಯಲಾಟ ವನ್ನು ನೋಡಿ ನೃತ್ಯ ಕಲಿತು ವೇಷಧಾರಿಗಳಾಗುತ್ತಿರುವುದು ಸ್ವಾಗತಾರ್ಹ.ಆದರೆ ತಾಳಮದ್ದಳೆ ಅರ್ಥಧಾರಿಗಳಾಗುವಲ್ಲಿ ಯುವಜನಾಂಗ ಉತ್ಸಾಹ ತೋರುವುದಿಲ್ಲ”

ಮಂಗಳೂರು :” ಯುವ ಜನಾಂಗವು ಯಕ್ಷಗಾನ ಬಯಲಾಟ ವನ್ನು ನೋಡಿ ನೃತ್ಯ ಕಲಿತು ವೇಷಧಾರಿಗಳಾಗುತ್ತಿರುವುದು ಸ್ವಾಗತಾರ್ಹ.ಆದರೆ ತಾಳಮದ್ದಳೆ ಅರ್ಥಧಾರಿಗಳಾಗುವಲ್ಲಿ ಯುವಜನಾಂಗ ಉತ್ಸಾಹ ತೋರುವುದಿಲ್ಲ.

ಆ ದಿಕ್ಕಿನಲ್ಲಿ ಚಿಂತನೆ ನಡೆಯಬೇಕು.ಸಂಘದ ತಾಳಮದ್ದಳೆ ಕೂಟಗಳಿಗೆ ಕಾಯಕಲ್ಪ ಬೇಕು . ವಾಗೀಶ್ವರೀ ಸಂಘದ ಶತಮಾನೋತ್ಸವದ ಪರಿಕಲ್ಪನೆಯ ಕಾರ್ಯಕ್ರಮಗಳು ಅಭಿನಂದನೀಯ” ಎಂದು
ಹಿರಿಯ ಅರ್ಥಧಾರಿ ,ಲಯನ್ಸ್ ಸೇವಾಕ್ಷೇತ್ರದ ಹಿರಿಯ ನಾಯಕ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಅವರು ವಾಗೀಶ್ವರೀ ಸಂಘದಲ್ಲಿ ಅರ್ಥಹೇಳಿದ್ದ ನೆನಪನ್ನು ಹಂಚಿಕೊಂಡರು.

ಮಂಗಳೂರಿನ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ – 13 ರ ಸಂಮಾನ ಭಾಜನರಾಗಿ ಅವರು ಮಾತನಾಡಿದರು.

ಬಸ್ಸ್ ಮಾಲಕ ,ಕಲಾಪೋಷಕ ಎ.ಕೆ.ಜಯರಾಮ ಶೇಖ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.

ಮುಖ್ಯ ಅತಿಥಿ ಜನಾರ್ಧನ ಹಂದೆ ಅವರು ಸ್ವರಚಿತ ಕವನ ವಾಚನ ದೊಂದಿಗೆ ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅರ್ಕುಳ ಶಿವರಾಯ ಆಚಾರ್ಯ ಸಂಸ್ಮರಣೆ
ವಾಗೀಶ್ವರೀ ಸಂಘದಲ್ಲಿ ಭಾಗವತನಾಗಿ ,ಅರ್ಥಧಾರಿಯಾಗಿ ಹಲವು ವರ್ಷ ಸೇವೆಗೈದಿದ್ದ ಹಿರಿಯ ಕಲಾವಿದ ಅರ್ಕುಳ ಶಿವರಾಯ ಆಚಾರ್ಯ ಅವರ ಸಂಸ್ಮರಣೆ ಮಾಡಲಾಯಿತು. ಅವರು ಕೌರವ ,ಜರಾಸಂಧ ,ಭೀಮ ,ರಾವಣ ಮೊದಲಾದ ಪಾತ್ರನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದರು.

ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ “ಸಂಮಾನ ,ಸಂಸ್ಮರಣೆ ,ತಾಳಮದ್ದಳೆ “ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.

ಸಂಘದ ಗೌರವಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ , ಅಧ್ಯಕ್ಷ ಶ್ರೀನಾಥ್ ಪ್ರಭು, ಕಾರ್ಯಾಧ್ಯಕ್ಷ ನಾಗೇಶ್ ಪ್ರಭು ,ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್. ಭಂಢಾರಿ, ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.

ಯಕ್ಷಗುರು ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು.

ಪ್ರಧಾನ ಸಂಚಾಲಕ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

ಎಫ್.ಎಚ್.ಒಡೆಯರ್ ನೆನಪು
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ,ವೈದ್ಯ ,ಯಕ್ಷಗಾನ ಸಂಘಟಕ ,ಅರ್ಥಧಾರಿ ದಿ. ಎಫ್.ಎಚ್.ಒಡೆಯರ್ ಅವರನ್ನು ಬಾಲ್ಯದಲ್ಲಿ ನೋಡಿದ್ದೆ ಎಂದು ನೆನಪಿಸಿ ಕೊಂಡ ಜಯರಾಮ ಶೇಖ ಅವರು ಒಡೆಯರ್ ಗರಡಿಯಲ್ಲಿ ಪಳಗಿದ್ದ ತಮ್ಮ ಹಿರಿಯರೊಂದಿಗಿನ ಒಡೆಯರ್ ಸಾಹಚರ್ಯವನ್ನು ಸ್ಮರಿಸಿದರು. ಒಡೆಯರ್ ಅವರು ಮಸಲ್ಮಾನರಾಗಿದ್ದು ಕುರಾನ್ ನೀತಿವಾಕ್ಯಗಳನ್ನುಅರ್ಥಗಾರಿಕೆಯಲ್ಲಿಸೊಗಸಾಗಿ ಪೋಣಿಸುತ್ತಿದ್ದರು. ವಾಗೀಶ್ವರೀ ಸಂಘದಲ್ಲಿ ಹಲವಾರು ವರ್ಷ ಅರ್ಥಧಾರಿಗಳಾಗಿ ಪಾಲ್ಗೊಂಡಿದ್ದರು.

ಶ್ರೀರಾಮ ಯಕ್ಷಗಾನ ಮಂಡಳಿ ಬಿ.ಸಿ.ರೋಡ್ ಇದರ ಸದಸ್ಯರ ಕೂಡುವಿಕೆಯಲ್ಲಿ ” ಸೀತಾನ್ವೇಷಣೆ” ತಾಳಮದ್ದಳೆ ಜರಗಿತು.

DAKSHINA KANNADA

UDUPI : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಬಾ.. ಬಾ.. ಎಂದು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ

Published

on

ಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಸ್ಥಳೀಯರೊಬ್ಬರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆ  ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಉಪ್ಪಿನಕೋಟೆಯ ಬಳಿ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಧರ್ಭದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಆಕ್ರೋಶಗೊಂಡಿದ್ದಾರೆ.

ಮತಾಂತರ ಮಾಡಲು ಬಂದಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ ಆತ ಬಳಿಕ ಕೋಲು ಹಿಡಿದು ಅವರನ್ನು ಓಡಿಸಿದ್ದಾರೆ. ಅವ್ಯಾಚ ಶಬ್ಧಗಳಿಂದ ನಿಂದಿಸಿ ಮಹಿಳೆಯರನ್ನು ಓಡಿಸಿದ್ದು, ಹೆದರಿ ಓಡಿದ ಮಹಿಳೆಯರನ್ನು ಬೆನ್ನು ಹತ್ತಿ ಇನ್ನೊಮ್ಮೆ ಈ ಭಾಗಕ್ಕೆ ಭಾರದಂತೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಬಗ್ಗೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

Continue Reading

DAKSHINA KANNADA

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜ ಮರ ಸ್ಥಾಪನೆ

Published

on

ಸುರತ್ಕಲ್‍: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21ರಂದು  ಜರಗಿತು.


ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು,ಪೂಜೆ ನೆರವೇರಿದ ಬಳಿಕ ಧ್ವಜಮರವನ್ನು ಪುನರ್ ಸ್ಥಾಪಿಸಲಾಯಿತು.

ಇದೇ ಸಂದರ್ಭ ಎ.22ರಿಂದ 30ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ಉಮೇಶ್ ಗುತ್ತಿನಾರ್ ಶಿಬರೂರುಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಶೆಟ್ಟಿ, ಸಿ.ಎ ಉದಯಕುಮಾರ್ ಶೆಟ್ಟಿ, ಉದಯ ಸುಂದರ್ ಶೆಟ್ಟಿ, ಯದುನಾರಾಯಣ ಶೆಟ್ಟಿ , ಸುಧಾಕರ ಪೂಂಜ ಸುರತ್ಕಲ್, ಸಿ.ಎ ಸುದೇಶ್ ಕುಮಾರ್ ರೈ, ಬಾಲಕೃಷ್ಣ ಕೊಠಾರಿ,ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಕ್ಷೇತ್ರದ ಸಮಿತಿ ಪ್ರಮುಖರು, ಸಂಬಂಧಪಟ್ಟ ಗುತ್ತು ಮನೆತನದವರು , ಗ್ರಾಮಸ್ಥರು ಭಾಗವಹಿಸಿದ್ದರು

Continue Reading

DAKSHINA KANNADA

ಮಂಗಳೂರು : ಹಲವು ಕ್ರಿಮಿನಲ್ ಕೃತ್ಯದಲ್ಲಿ ಶಾಮೀಲಾಗಿದ್ದ ಕುಖ್ಯಾತ ಕಳ್ಳರಿಬ್ಬರ ಬಂಧನ

Published

on

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಾಟೆಕಲ್ ಸಮೀಪದ ಕಲ್ಕಟ್ಟ ಎಂಬಲ್ಲಿನ  ಅಬ್ದುಲ್ ಫಯಾನ್ (26) ಮತ್ತು ನರಿಂಗಾನ ಸಮೀಪದ ತೌಡುಗೋಳಿ ಕ್ರಾಸ್ ನಿವಾಸಿ ಮೊಯಿದ್ದೀನ್ ಹಫೀಸ್ ಯಾನೆ ಆಬಿ (47) ಬಂಧಿತ ಆರೋಪಿಗಳು.  ಅಬ್ದುಲ್ ಫಯಾನ್ ಎಂಬಾತನು ಕೊಣಾಜೆ, ಉಳ್ಳಾಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಕಡಬ ಪೊಲೀಸ್ ಠಾಣೆಗಳಲ್ಲಿನ ವಿವಿಧ ಕಡೆಗಳಲ್ಲಿ ಸರಕಾರಿ ಕಚೇರಿ, ಶಾಲೆ ಹಾಗೂ ಅಂಗಡಿಗಳಲ್ಲಿ ಕಳ್ಳತನ ಸಹಿತ 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ಕಾರಾಗೃಹದೊಳಗೆ ಇತರ ಕೈದಿಗಳಿಗೆ ಹಲ್ಲೆ ನಡೆಸಿದ ಮತ್ತು ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪವೂ ಇದೆ. ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಈತ ಕಳೆದ 2 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಈತನನ್ನು ಬಂಧಿಸಿದ್ದಾರೆ.

ಮೊಯಿದ್ದೀನ್ ಹಫೀಸ್ ಯಾನೆ ಆಬಿ ಕೊಣಾಜೆ, ಉಳ್ಳಾಲ, ಬಂದರ್, ಸುರತ್ಕಲ್, ಕಂಕನಾಡಿ ನಗರ ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ/ಸಾಗಾಟ ಸಹಿತ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಈತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಈತನನ್ನು ಮಂಜೇಶ್ವರ ಸಮೀಪದ ಮೀಂಜದಿಂದ ಬಂಧಿಸಲಾಗಿದೆ.

 

Continue Reading

LATEST NEWS

Trending