Connect with us

STATE

ಸರ್ಕಾರಿ ಶಾಲೆಯ ಟ್ಯಾಬ್ ಕಳ್ಳತನ: ಹೆಡೆಮುರಿ ಕಟ್ಟಿದ ಪೊಲೀಸರು

Published

on

ಕಲಬುರಗಿ: ಸರ್ಕಾರಿ ಶಾಲೆಯಲ್ಲಿನ ಟ್ಯಾಬ್​ಗಳನ್ನು ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ ಕಲಬುರಗಿಯ ಮಾದನಹಿಪ್ಪರಗಾದಲ್ಲಿ ನಡೆದಿದೆ.

ನಿಂಬಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ, ಇನ್ಫೋಸಿಸ್ ಫೌಂಡೆಶನ್ ನೀಡಿದ್ದ ಟ್ಯಾಬ್​ಗಳನ್ನು ಆರೋಪಿಗಳು ಕಳೆದ ವರ್ಷದ ಡಿಸೆಂಬರ್​ 21 ರಂದು ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದರು.

ಸುಮಾರು 1.46 ಲಕ್ಷ ಮೌಲ್ಯದ ಟ್ಯಾಬ್​ಗಳು ಕಳ್ಳರ ವಶವಾಗಿ ವಿದ್ಯಾರ್ಥಿಗಳು ಆನ್​ಲೈನ್​ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದರು.

ಭರ್ಜರಿ ಕಾರ್ಯಾಚರಣೆ ನಡೆಸಿದ ಮಾದನಹಿಪ್ಪರಗಾ ಪೊಲೀಸರು ಘಟನೆ ನಡೆದು ಒಂದು ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ರಾಮದ ಈರಣ್ಣಾ ಪಿರಂಗಿ, ಬಸವರಾಜ ಗದ್ದೆ ಮತ್ತು ಶಿವಾನಂದ ನಂದೆಣೆ ಬಂಧಿತ ಆರೋಪಿಗಳು.

ಸದ್ಯ ಖದೀಮರಿಂದ 22 ಟ್ಯಾಬ್​ ಒಂದು ಬೈಕ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂವರು ಆರೋಪಿಗಳ ಮೇಲೆ ಕೇಸ್​ ಜಡಿದು ಕಂಬಿಯ ಹಿಂದೆ ನಿಲ್ಲಿಸಿದ್ದಾರೆ.

LATEST NEWS

ಮುಸ್ಲಿಂ ಬಾಲಕನಿಂದ ಬದಲಾಯ್ತು ದೇವಸ್ಥಾನದ ಹೆಸರು…!

Published

on

ಮಂಗಳೂರು ( ಕೇರಳ ): ಮಂಚ್ ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲಿ ಹೇಳಿ. ಸಣ್ಣ ಮಕ್ಕಳಿಗಂತೂ ಈ ಚಾಕೊಲೇಟ್ ಅಚ್ಚುಮೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಹಾಗೂ ಗೋವಾದ ನೆಸ್ಲೆ ಫ್ಯಾಕ್ಟರಿಯಲ್ಲಿ ಈ ಮಂಚ್ ತಯಾರಾಗುತ್ತದೆ. ಬಿಸ್ಕೆಟ್‌ಗಳಿಂದ ಕೂಡಿದ ಅದರ ಮೇಲ್ಭಾಗದಲ್ಲಿ ಚಾಕೋ ಕ್ರೀಮ್ ಇರುವ ಮಂಚ್ ತಿನ್ನಲು ಎಲ್ಲರೂ ಇಷ್ಟ ಪಡ್ತಾರೆ. ಇಂತಹ ಮಂಚ್‌ ಚಾಕಲೋಟ್‌ ಈಗ ದೇವರಿಗೆ ನೈವೇದ್ಯವಾಗುತ್ತಿದೆ.

ಹೌದು ಭಾರತದಲ್ಲಿ ದೇವಾಲಯಗಳ ವಿಶೇಷತೆ ಹಾಗೂ ಮಹಿಮೆಯ ಬಗ್ಗೆ ಜನರಿಗೆ ಹೆಚ್ಚಾಗಿ ಹೇಳಬೇಕಿಲ್ಲ. ದೇವರ ನಂಬಿ ವಿವಿಧ ಹರಕೆಗಳನ್ನು ಕಟ್ಟಿಕೊಳ್ಳುವ ಜನರು ಸಹ ಬಹಳಷ್ಟಿದ್ದಾರೆ. ಸಾಮಾನ್ಯವಾಗಿ ನಾವು ದೇವರಿಗೆ ಸಿಹಿ ಪದಾರ್ಥ, ಹೂವು, ಹಣ್ಣು ಈ ರೀತಿ ಪದಾರ್ಥಗಳನ್ನು ನೈವೇದ್ಯ ಮಾಡುತ್ತೇವೆ. ಆದರೆ ದೇವರಿಗೆ ಮಂಚ್ ಚಾಕೊಲೇಟ್ ಹರಕೆ ನೀಡುವ ದೇವಲಾಯದ ಬಗ್ಗೆ ನಿಮಗೆ ಗೊತ್ತಾ? ಹೌದು, ಅದೊಂದು ದೇವಸ್ಥಾನದಲ್ಲಿ ಮಂಚ್ ಚಾಕೊಲೇಟ್  ಹರಕೆಯ ರೂಪದಲ್ಲಿ ದೇವರಿಗೆ ಸಮರ್ಪಣೆಯಾಗುತ್ತದೆ. ಯಾವುದು ಈ ದೇವಸ್ಥಾನ ಎನ್ನುವುದರ ಬಗ್ಗೆ ತಿಳಿಯೋಣ.

ಕೇರಳದ ದೇವಾಲಯ ಇದು

ಕೇರಳದ ಒಂದು ಸಣ್ಣ ಮೂಲೆಯಲ್ಲಿರುವ ಈ ದೇವಸ್ಥಾನ ಆಧುನಿಕತೆಯ ಮತ್ತೊಂದು ರೂಪ ಎನ್ನಬಹುದು. ಸಾಮಾನ್ಯವಾಗಿ ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡು ಹೀಗೆ ಅರ್ಪಣೆ ಮಾಡುತ್ತೇವೆ. ಆದರೆ ಅಲಪ್ಪುಳದ ಬಾಲಮುರುಗನ್ ದೇವರಿಗೆ ಮಂಚ್ ಚಾಕೋಲೇಟ್ ಅಂದ್ರೆ ಇಷ್ಟವಂತೆ. ಕಳೆದ ಆರು ವರ್ಷಗಳಿಂದ ಇಲ್ಲಿ ಬಾಲಮುರಗ ದೇವರಿಗೆ ಬಹುತೇಕ ಎಲ್ಲಾ ಸೇವೆಗಳು ಮಂಚ್‌ ಚಾಕೋಲೇಟ್‌ನಿಂದಲೇ ನಡೆಯುತ್ತದೆ.  ಹೀಗಾಗಿ ಹಿಂದೆ ಬಾಲಮುರುಗ ಅಂತ ಹೆಸರಿದ್ದ ಈ ದೇವಸ್ಥಾನ ಈಗ ಮಂಚ್ ಮುರುಗನ್ ದೇವಸ್ಥಾನ ಎಂದೇ ಫೇಮಸ್ ಆಗಿದೆ.

ವಿಶೇಷವಾಗಿ ಬಾಲಮುರುಗ ದೇವಸ್ಥಾನ ಅಂದ್ರೆ ಮಕ್ಕಳಿಗೆ ಬಹಳ ಇಷ್ಟವಾದ ದೇವಸ್ಥಾನವಾಗಿದೆ. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಹೆಚ್ಚಾಗಿ ಈ ದೇವಾಲಯಕ್ಕೆ ಬಂದು ದೇವರಿಗೆ ಒಂದು ಮಂಚ್ ಕೊಟ್ಟು ಪರೀಕ್ಷೆ ಸುಲಭ ಇರಲಿ ಎಂದು ಪ್ರೀತಿಯಿಂದ ಬೇಡುತ್ತಾರೆ. ಹೀಗೆ ಮಕ್ಕಳು ಇಲ್ಲಿ ಹೆಚ್ಚಾಗಿ ಬರಲು, ದೇವರಿಗೆ ಮಂಚ್ ಚಾಕೋಲೇಟ್ ಹರಕೆ ನೀಡಲೂ ಒಂದು ಕಾರಣ ಇದೆ. ಹಿಂದೆ ಸಾಮಾನ್ಯ ಎಲ್ಲಾ ದೇವಾಲಯದಂತೆ ಇಲ್ಲೂ ಬೇರೆಯೇ ಹರಕೆ ಸೇವೆ ನಡೆಯುತ್ತಿದ್ದರೂ ಅದೊಂದು ಕಾರಣದಿಂದ ಇತ್ತೀಚಿನ ವರ್ಷದಲ್ಲಿ ಇದು ಮಂಚ್‌ ಸೇವೆಗೆ ಬದಲಾಗಿದೆ.

ಏನಿದು ಮಂಚ್ ಮುರುಗನ್ ಕಥೆ?

ಸುಮಾರು 6 ವರ್ಷಗಳ ಹಿಂದೆ ಆಟವಾಡುತ್ತಿದ್ದ ಒಬ್ಬ ಪುಟ್ಟ ಮುಸ್ಲಿಂ ಬಾಲಕ ಈ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ್ದ ಎಂಬ ಕಾರಣಕ್ಕೆ ಪೋಷಕರು ಆತನಿಗೆ ಹೆದರಿಸಿದ್ದರಂತೆ. ಆದರೆ ಆ ರಾತ್ರಿಯೇ ಬಾಲಕನ ಆರೋಗ್ಯ ಹದಗೆಡುತ್ತದೆ. ಕನಸಿನಲ್ಲಿ ಸಹ ಆ ಬಾಲಕ ಮುರುಗನ್ ಹೆಸರು ಕನವರಿಸುತ್ತಿದ್ದ. ಹಾಗಾಗಿ ಪೋಷಕರು ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ಆಗ ಅಲ್ಲಿನ ಅರ್ಚಕರು ಇವರ ಕಥೆ ಕೇಳಿ ದೇವರಿಗೆ ಏನಾದರೂ ನೈವೇದ್ಯ ಮಾಡಿ ಎನ್ನುತ್ತಾರೆ. ಆ ಬಾಲಕ ತನ್ನ ಕೈಯಲ್ಲಿದ್ದ ಮಂಚ್ ಚಾಕೊಲೇಟ್ ಅರ್ಪಣೆ ಮಾಡುವುದಾಗಿ ಹಠ ಮಾಡುತ್ತಾರೆ. ಅವನ ಆಸೆಯಂತೆ ಮಂಚ್ ಅರ್ಪಣೆ ಮಾಡಿದ ಕೆಲವೇ ಸಮಯದಲ್ಲಿ ಆ ಬಾಲಕನ ಆರೋಗ್ಯ ಸುಧಾರಿಸುತ್ತದೆ. ಈ ಸುದ್ದಿ ಗಾಳಿಯಂತೆ ಇಡೀ ಊರಿಗೆ ಹರಡುತ್ತದೆ. ಈ ಘಟನೆಯ ನಂತರ ಈ ದೇವರಿಗೆ ಮಂಚ್ ಮುರುಗನ್ ಎಂದು ಕರೆಯಲು ಆರಂಭಿಸುತ್ತಾರೆ.

ಭಕ್ತರಿಗೂ ಮಂಚ್ ಪ್ರಸಾದ

ಈ ದೇವಾಲಯದ ವಾರ್ಷಿಕ ಜಾತ್ರೆಯಂದು ಕೇರಳದ ವಿವಿಧ ಭಾಗಗಳಿಂದ ಭಕ್ತರು ಮಂಚ್ ಚಾಕೊಲೇಟ್‌ಗಳನ್ನು ಬಾಕ್ಸ್ ಬಾಕ್ಸ್‌ನಲ್ಲಿ ತಂದು ದೇವರಿಗೆ ಸಮರ್ಪಿಸುತ್ತಾರೆ. ಅದೇ ಮಂಚನ್ನು ದೇವರಿಗೆ ನೈವೇದ್ಯ ರೂಪಲ್ಲಿ ಇಟ್ಟು ಬಳಿಕ ಅದನ್ನು ಪ್ರಸಾದದ ರೂಪವಾಗಿ ಜನರಿಗೆ ನೀಡಲಾಗುತ್ತದೆ. ಒಟ್ಟಾರೆಯಾಗಿ 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಮತ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್ಗಳ ಬಾಕ್ಸ್ ಹಿಡಿದು ದೇಗುಲಕ್ಕೆ ಬರುತ್ತಾರೆ ಎಂಬುದು ವಿಶೇಷ.

Continue Reading

FILM

ನೇಹಾ ಹ*ತ್ಯೆ ಪ್ರಕರಣ : ಏನಂದ್ರು ನಟ ದರ್ಶನ್?

Published

on

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಆ ಒಂದು ಕೊ*ಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹಾಡಹಗಲೇ ಫಯಾಝ್ ಎಂಬಾತನಿಂದ ಪ್ರಾ*ಣ ಕಳೆದುಕೊಂಡಿದ್ದಳು. ಈ ಘಟನೆಗೆ ರಾಜ್ಯವ್ಯಾಪಿ ಆಕ್ರೋಶ ಕೇಳಿ ಬಂದಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ #justiceforneha ಎಂಬ ಅಭಿಯಾನವೂ ಆರಂಭವಾಗಿದೆ. ಇದಕ್ಕೆ ಸಿನಿ ತಾರೆಯರೂ ಕೈ ಜೋಡಿಸಿದ್ದಾರೆ. ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ದರ್ಶನ್ ಏನಂದ್ರು?

ನೇಹಾ ಕೊ*ಲೆ ಭಯಹುಟ್ಟಿಸಿರೋದು ಸುಳ್ಳಲ್ಲ. ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯಬಾರದು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.


ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ #justicefornehahiremath ಎಂದು ಹ್ಯಾಶ್ ಟ್ಯಾಗ್ ಕೂಡಾ ಬಳಸಿದ್ದಾರೆ.

ವಿ ವಾಂಟ್ ಜಸ್ಟೀಸ್ ಎಂದ ಡಿಂಪಲ್ ಕ್ವೀನ್ :

ಇನ್ನು ಘಟನೆಗೆ ನಟಿ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ, ಧರ್ಮ, ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ. ಅಷ್ಟೇ. ಈ ರೀತಿಯ ಕೃತ್ಯ ಮಾಡುವವರನ್ನು ಗ*ಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ. #WEWANTJUSTICE ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿ, ಸಹೋದರಿ ನೇಹಾ ಹಿರೇಮಠ್ ರ ಹ*ತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ ಲಿ ಹ*ತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ ಎಂದಿದ್ದಾರೆ.

ಘಟನೆ ಬಗ್ಗೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಆಕ್ರೋಶ ಹೊರ ಹಾಕಿದ್ದಾರೆ. ನೇಹಾ ಹಿರೇಮಠ್ ಗೆ ನ್ಯಾಯ ಸಿಗಲೇಬೇಕು. ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಕಾಲೇಜಿಗೆ ಹೋಗುವ ಯುವತಿಯರಿಗೂ ಕೂಡ ರಕ್ಷಣೆ ಇಲ್ಲ. ಶೇಮ್ ಶೇಮ್ ಎಂದಿದ್ದಾರೆ.

ಪ್ರೀತಿಸಬೇಕು ಅಂತ ಅದ್ಹೇಗೆ ಒತ್ತಾಯಿಸಲು ಸಾಧ್ಯ? ಪ್ರೀತಿಯನ್ನ ಒಪ್ಪಿಕೊಳ್ಳಲಿಲ್ಲ ಅಂತ ಬರ್ಬರವಾಗಿ ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್ನಲ್ಲೇ ಹ*ತ್ಯೆ ಮಾಡಿದ್ದಾನೆ. ಅದೆಂಥಾ ಮೈಂಡ್ ಸೆಟ್ ಹೊಂದಿದ್ದಾರೆ ಆ ವಯಸ್ಸಿನ ಹುಡುಗರು? ಪೋಷಕರಾಗಿ ನಮ್ಮ ಗಂಡು ಮಕ್ಕಳಿಗೆ ಕೆಲವು ಬೇಸಿಕ್ ಸಂಗತಿಗಳನ್ನ ನಾವು ಹೇಳಿಕೊಡಲೇಬೇಕು. ಅದನ್ನೆಲ್ಲಾ ಶಾಲಾ ಕಾಲೇಜುಗಳಲ್ಲಿ ಕಲಿಸುವುದಿಲ್ಲ. ಇದನ್ನ ಸಹಿಸಲು ಸಾಧ್ಯವೇ ಇಲ್ಲ. ಶೇಮ್ ಶೇಮ್. ಪೋಷಕರಾಗಿ ನನ್ನ ಹೃದಯ ಛಿದ್ರವಾಗುತ್ತಿದೆ ಎಂದು ರಕ್ಷಿತಾ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠಳನ್ನು ಫಯಾಜ್ ಎಂಬಾತ ಕಾಲೇಜ್ ಕ್ಯಾಂಪಸ್ ನಲ್ಲಿ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದ. ಹುಬ್ಬಳ್ಳಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಹಾ ಪ್ರಥಮ ವರ್ಷದ ಎಂಸಿಎ ಓದುತ್ತಿದ್ದಳು. ಸದ್ಯ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Continue Reading

DAKSHINA KANNADA

ಸೀಸನ್ 10ರ ವಿನ್ನರ್‌ಗೆ ಕೈ ಕೊಟ್ರಾ ಬಿಗ್‌ ಬಾಸ್…? ಕಾರ್ತಿಕ್ ಹೇಳಿದ್ದೇನು..?

Published

on

ಬಿಗ್‌ಬಾಸ್ ಜನರ ಮನಸ್ಸನ್ನ ಗೆದ್ದ ರಿಯಾಲಿಟಿ ಶೋ. ಈ ಶೋನ ಅಭಿಮಾನಿಗಳು ತುಂಬಾ ಜನ ಇದ್ದಾರೆ. ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10 ಮೂಲಕ ಗೆದ್ದು ಬಂದವರು. ಇದರಿಂದ ಇವರ ಹೆಸರು ಇನ್ನಷ್ಟು ಹೆಚ್ಚಾಗಿದೆ. ಅವರಿಗೆ ಹೊಸ ಹೊಸ ಸಿನಿಮಾ ಆಫರ್‌ಗಳು ಬರುತ್ತಿವೆ.

 

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್​ಗೆ 50 ಲಕ್ಷ ರೂಪಾಯಿ ಜೊತೆಗೆ ಒಂದು ಎಲೆಕ್ಟ್ರಿಕ್ ಬೈಕ್, ಕಾರು ಕೊಡುವುದಾಗಿ ಬಿಗ್ ಬಾಸ್ ಕಡೆಯಿಂದ ಘೋಷಣೆ ಆಗಿತ್ತು. ಈಗಾಗಲೇ ಬೈಕ್ ಅವರ ಮನೆ ಸೇರಿದೆ. ಮಾರುತಿ ಸುಜುಕಿ ಬ್ರೇಜಾ ಕಾರು ಅವರಿಗೆ ಸಿಗಬೇಕಿತ್ತು. ಆದರೆ ಇದಕ್ಕೆ ಮತ್ತಷ್ಟು ಸಮಯ ಹಿಡಿಯಲಿದೆಯಂತೆ. ಈ ಬಗ್ಗೆ ಕಾರ್ತಿಕ್ ಮಹೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಕಾರ್ತಿಕ್ ಅವರಿಗೆ ಮನೆ ಕಟ್ಟೊ ಆಸೆ ತುಂಬಾ ಇತ್ತು. ಇದಕ್ಕೆ ಮೆಟ್ಟಿಲಾಗಿ ಈಗ ಬಿಗ್‌ಬಾಸ್ ಶೋನಲ್ಲಿ ಬಂದ ಹಣದಿಂದ ಕಾರ್ತಿಕ್ ಅವರು ಮನೆ ಕಟ್ಟೋ ಆಸೆಯನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲಿ ನಾನು ಮನೆ ನೋಡ್ತಾ ಇದ್ದೇನೆ. ಆದ್ರೆ ಬಿಗ್‌ಬಾಸ್‌ನಲ್ಲಿ ಬಂದ ಹಣ ಮನೆ ತೆಕೋಳೊಗೆ ಏನೂ ಸಾಕಾಗಲ್ಲ. ಅದಕ್ಕಾಗಿ ನಾನು ದುಡಿಯಬೇಕು ಎಂದು ಕಾರ್ತಿಕ್ ಅವರು ಹೇಳಿದ್ದಾರೆ.

ಬಿಗ್‌ಬಾಸ್‌ನಲ್ಲಿ ನನಗೆ 50 ಲಕ್ಷ ರೂಪಾಯಿ ಸಿಕ್ಕಿದೆ. ಐವತ್ತರಲ್ಲಿ 35 ಲಕ್ಷ ರೂಪಾಯಿ ಬರುತ್ತದೆ. 15 ಲಕ್ಷ ರೂಪಾಯಿ ಟ್ಯಾಕ್ಸ್​ ಕಟ್ ಆಗುತ್ತದೆ. ಹಂತ ಹಂತವಾಗಿ ಹಣ ಬರುತ್ತಿದೆ ಎಂದಿದ್ದಾರೆ ಕಾರ್ತಿಕ್.

Continue Reading

LATEST NEWS

Trending