Connect with us

  FILM

  ‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ

  Published

  on

  ಬೆಂಗಳೂರು: ನಟಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ನಿರ್ಮಾಪಕನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

  ಅನ್ನಪೂರ್ಣೇಶ್ವರಿನಗರದ ಡಿ ಗ್ರೂಪ್‌ ಲೇಔಟ್‌ ನಿವಾಸಿ ಹರ್ಷವರ್ಧನ್‌ ಅಲಿಯಾಸ್‌ ವಿಜಯ್‌ ಭಾರ್ಗವ್‌ (42) ಬಂಧಿತ. 41 ವರ್ಷದ ನಟಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

  ಸ್ಯಾಂಡಲ್‌ವುಡ್‌ನ‌ ಹತ್ತಾರು ಸಿನಿಮಾಗಳು ಮತ್ತು ಧಾರವಾಹಿಗಳಲ್ಲಿ ನಟಿಸುತ್ತಿರುವ 41 ವರ್ಷದ ನಟಿಗೆ ಆರೋಪಿ,

  ಎರಡು ವರ್ಷಗಳ ಹಿಂದೆ ಮದುವೆಯಾಗುವುದಾಗಿ ನಂಬಿಸಿ, ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಮದುವೆಯಾಗುವಂತೆ ಮನವಿ ಮಾಡಿದಾಗ, ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿಂದಿಸಿದ್ದಾನೆ.

  ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಕುರಿತು ಸಂತ್ರಸ್ತೆ ಜ.27ರಂದು ದೂರು ನೀಡಿದ್ದರು. ಈ ಸಂಬಂಧ ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

  FILM

  ಜನರೇ ಮೆಚ್ಚುವ ಕೆಲಸಕ್ಕೆ ಮುಂದಾದ ಬಿಗ್‌ಬಾಸ್ ಡ್ರೋನ್ ಪ್ರತಾಪ್

  Published

  on

  ಬೆಂಗಳೂರು: ಡ್ರೋನ್ ಪ್ರತಾಪ್ ಎನ್ನುವ ಹೆಸರು ಎಲ್ಲರಿಗೂ ಈಗ ತಿಳಿದಿದೆ. ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿ ಮಾಡಿದ ವ್ಯಕ್ತಿ ಡ್ರೋನ್ ಪ್ರತಾಪ್. ಅಲ್ಲದೇ ಬಿಗ್‌ಬಾಸ್ ಸೀಸನ್ 10 ರಿಯಾಲಿಟಿ ಶೋಗೆ ಹೋಗಿ ಅದರಲ್ಲಿ ರನ್ನರ್ ಅಪ್ ಆದ ನಂತರ ಡ್ರೋನ್ ಪ್ರತಾಪ್ ಹವಾ ಬೇರೆ ಲೆವೆಲ್‌ಗೆ ಟರ್ನ್‌ ಆಯಿತು.

  ಇನ್ನು ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಬಂದ ಹಣದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಡ್ರೋನ್ ಪ್ರತಾಪ್‌ಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಹೊಸ ಹೊಸ ಕೆಲಸಕ್ಕೆ ಮುಂದಾಗಿರುವ ಇವರು ಈ ಬಾರೀ ತನ್ನ ಹುಟ್ಟುಹಬ್ಬಕ್ಕೆ ಜನರೇ ಮೆಚ್ಚುವಂತ ಒಂದು ಒಳ್ಳೆಯ ಕೆಲಸ ಮಾಡಲು ತಯಾರಾಗಿದ್ದಾರೆ.

  ಜೂನ್ 11 ರಂದು ಡ್ರೋನ್ ಪ್ರತಾಪ್ ಇವರ ಹುಟ್ಟುಹಬ್ಬ. ಹಾಗಾಗಿ ಡಾ. ರಾಜ್‌ಕುಮಾರ್ ಅವರು ನೇತ್ರದಾನ ಮಹಾದಾನ ಎಂದು ಹೇಳುತ್ತಿದ್ದರು. ಈ ಬಾರೀ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದೇನೆ. ಯಾರಾದರೂ 5 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೀನಿ. ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ ಇರುವವರು ಇದ್ದರೆ ದಯವಿಟ್ಟು ನಮಗೆ ತಿಳಿಸಿ ಎಂದು ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ.

  ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿ ಅಥವಾ ಕಮೆಂಟ್ ಸೆಕ್ಷನ್​ನಲ್ಲಿ ಅವರನ್ನು ಮೆನ್ಷನ್ ಮಾಡಿ. ನಾವು ಅಗತ್ಯವಿರುವ ಐದು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  ಕೆಲವರು ಬಿಗ್​ಬಾಸ್​ನಲ್ಲಿ ನಿಮಗೆ ವೋಟ್​ ಮಾಡಿದ್ದಕ್ಕೆ ಸಾರ್ಥಕವಾಯ್ತು, ಕಲಿ ಯುಗದ ಕರ್ಣ ನಮ್ಮ ಡ್ರೋನ್​ ಪ್ರತಾಪ್​ ಅಣ್ಣ, ಹೆಮ್ಮೆಯಿಂದ ಹೇಳಬಲ್ಲೆ ನಾನು ಒಳ್ಳೆಯ ವ್ಯಕ್ತಿಗೆ ವೋಟ್​ ಮಾಡಿದ್ದೇನೆ ಎಂದು, ಕಾರ್ತಿಕ್ ಬದಲು ನೀನಾದ್ರೂ ಗೆದ್ದಿದ್ರೆ ಇನ್ನು ತುಂಬಾ ಕೆಲಸ ಆಗ್ತಾ ಇತ್ತು ಅನ್ಸುತ್ತೆ, ದೇವರು 100 ವರ್ಷ ಸುಖ ನೆಮ್ಮದಿ ಕೊಟ್ಟು ಕಾಪಾಡಲಿ, ಅಗತ್ಯ ಇರುವವರ ಮೊಬೈಲ್ ಸಂಖ್ಯೆ, ವಿಳಾಸಗಳನ್ನು ಕಮೆಂಟ್ ಸೆಕ್ಷನ್​ನಲ್ಲಿ ಹಾಕುತ್ತಿದ್ದಾರೆ.

  Continue Reading

  FILM

  ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

  Published

  on

  ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


  ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

  ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

  ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

  Continue Reading

  FILM

  ‘ಅಣ್ಣಾವ್ರ’ ಹಾಡು ಹಾಡಿದ ‘ಮೋಹನ್ ಲಾಲ್’; ವೀಡಿಯೋ ವೈರಲ್

  Published

  on

  ಬೆಂಗಳೂರು: ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್‌ ಲಾಲ್ ರವರು ಡಾ. ರಾಜ್‌ಕುಮಾರ್ ಜೊತೆ ಅವಿನಾಭಾವ ಸಂಬಂಧವಿತ್ತು. ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಹೊಸ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ರಾಜ್‌ಕುಮಾರ್‌ ನಟನೆಯ ‘ಎರಡು ಕನಸು’ ಸಿನೆಮಾದ ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ..’ ಎಂಬ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಇನ್ನು ಡಾ. ರಾಜ್‌ಕುಮಾರ್ ಅವರಿಗೆ ಟಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಕಡೆ ಅಭಿಮಾನಿಗಳು ಇರುವುದು ವಿಶೇಷ.

  mohan lal

  Read More..; ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ; ಡ್ರ*ಗ್ಸ್ ಪತ್ತೆ! ಪಾರ್ಟಿಯಲ್ಲಿದ್ದರು ನಟ – ನಟಿಯರು,.!

  ಇನ್ನು ಮೋಹನ್‌ಲಾಲ್ ಕನ್ನಡ ಸಿನೆಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಲಾಲೇಟ ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿರುವ ಮೋಹನ್‌ಲಾಲ್‌ರವರ ಮೇ.21ರಂದು ಹುಟ್ಟುಹಬ್ಬ.

  Continue Reading

  LATEST NEWS

  Trending