Connect with us

    LATEST NEWS

    “ಸ್ವಾಭಿಮಾನದ ನಡಿಗೆ’ ಜಾತಿ, ಮತ, ಧರ್ಮವನ್ನು ಮೀರಿ ಯಶಸ್ವಿಯಾಗಿದೆ”

    Published

    on

    ಮಂಗಳೂರು: ಬಿಲ್ಲವ ನೇತಾರ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ಜ.26ರಂದು ನಡೆದ ‘ಸ್ವಾಭಿಮಾನದ ನಡಿಗೆ’ ಜಾತಿ, ಮತ, ಧರ್ಮವನ್ನು ಮೀರಿ ಯಶಸ್ವಿಯಾಗಿ ನಡೆದಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್‌.ಪದ್ಮರಾಜ್‌ ಅವರು ತಿಳಿಸಿದ್ದಾರೆ.


    ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ನಮ್ಮ ಹೋರಾಟ ಒಂದು ಹಂತದ ಪ್ರಾರಂಭ ಮಾತ್ರ. ಕರ್ನಾಟಕದಲ್ಲಿ ಜಾತಿಗೊಂದರಂತೆ ನಿಗಮ ಮಂಡಳಿಯಾದರೂ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬಿಲ್ಲವ, ಈಡಿಗ ಸಮಾಜದ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪನೆಗೆ ಇನ್ನೂ ದಿನ ಕೂಡಿಬಂದಿಲ್ಲ.

    ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ನಾಮಕರಣ ಮಾಡಲು ಒತ್ತಾಯ ಇದೆ. ಇದು ಎರಡು ವರ್ಷದಿಂದ ಕಡತಗಳಲ್ಲೇ ಬಾಕಿಯಾಗಿದೆ. ಈ ಬಗ್ಗೆ ಪಕ್ಷಾತೀತವಾಗಿ, ಸಂಘರ್ಷ ರಹಿತವಾಗಿ ಮಾಡುತ್ತೇವೆ ಎಂದರು.
    ಮುಂದಿನ ದಿನಗಳಲ್ಲಿ ಬಿಲ್ಲವರಿಗೆ ಸೂಕ್ತ ಸ್ಥಾನಕ್ಕಾಗಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಯಲಿದೆ.

    ಗುರುಗಳ ತತ್ವದಂತೆ ಸಂಘರ್ಷ ರಹಿತವಾಗಿ ನಡೆಯುವ ಎಲ್ಲ ಹೋರಾಟಗಳಿಗೂ ಈ ಜಾಥಾ ಮುನ್ನುಡಿಯಾಗಿದೆ.
    ಬಿಲ್ಲವ ಮಹಾ ಮಂಡಳದ ಉಪಾಧ್ಯಕ್ಷ ಸೂರ್ಯಕಾಂತ್‌, ನಾರಾಯಣ ಗುರು ವಿಚಾರ ವೇದಿಕೆಯ ಸಂಚಾಲಕ ಸತ್ಯಜಿತ್‌ ಸುರತ್ಕಲ್‌, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ ಉಪಸ್ಥಿತರಿದ್ದರು.

    ಹರಿಕೃಷ್ಣ ಮಾತಿಗೆ ಏನು ಬೆಲೆ ಇಲ್ಲ: ಸತ್ಯಜಿತ್‌ ಸುರತ್ಕಲ್‌
    ಇದೇ ವೇಳೆ ಮುಂದಿನ ವರ್ಷ ಕರ್ನಾಟಕದಿಂದ ನಾರಾಯಣ ಗುರು ಟ್ಯಾಬ್ಲೋ ಹೋಗುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್‌ ಹೇಳಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,

    ಹರಿಕೃಷ್ಣ ಬಂಟ್ವಾಳ ಮುಖ್ಯಮಂತ್ರಿಯಲ್ಲ, ರಾಜ್ಯಾಧ್ಯಕ್ಷರೂ‌ ಅಲ್ಲಾ. ಕೇವಲ ಕಿಯೋನಿಕ್ಸ್ ಸಂಸ್ಥೆಯ ನಿರ್ದೇಶಕರು. ಅವರು ಎಷ್ಟು ದಿನ ನಿಗಮದಲ್ಲಿ ಇರುತ್ತಾರೆ ಗೊತ್ತಿಲ್ಲ.

    ಅವರ ಮಾತಿಗೆ ಏನು ಬೆಲೆ ಇಲ್ಲ ಎಂದರು. ಜೊತೆಗೆ ರಾಜ್ಯದ ಸಚಿವರಿಗೆ ಜಟಾಯು ಯಾವುದು ಗಂಡಬೇರುಂಢ ಯಾವುದು ಎಂಬುದು ಗೊತ್ತಿಲ್ಲ. ಪಕ್ಷವನ್ನು ಸಮರ್ಥನೆ ಮಾಡುವಾಗ ಸರಿ ಯಾವುದು ಎಂದು ಯೋಚನೆ ಮಾಡಲಿ ಸತ್ಯಜಿತ್‌ ಸುರತ್ಕಲ್‌ ಹೇಳಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ದೇವರನ್ನು ರಾಜಕೀಯದಿಂದ ದೂರವಿಡಿ ; ಸುಪ್ರೀಂ ಕೋರ್ಟ್ ಸೂಚನೆ..!

    Published

    on

    ನವ ದೆಹಲಿ : ತಿರುಪತಿ ಲಡ್ಡು ವಿವಾದದಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದೆ. ದೇವರನ್ನು ರಾಜಕೀಯದಿಂದ ಹೊರಗೆ ಇಡಿ ಎಂದು ಕೋರ್ಟ್‌ ಹೇಳಿದೆ. ಕನಿಷ್ಟ ಪಕ್ಷ ದೇವರುಗಳನ್ನು ರಾಜಕೀಯದಿಂದ ದೂರ ಇಡಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರ ಹೇಳಿಕೆಯನ್ನೇ ಪ್ರಶ್ನೆ ಮಾಡಿದೆ. ಸಿಎಂ ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಕೋರ್ಟ್‌ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ ವಿಶ್ವನಾಥನ್‌ ಅವರ ಪೀಠವು ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.

    ಸಾಂವಿಧಾನಕವಾಗಿ ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಯಾಗಿ ಈ ರೀತಿ ಕೋಟ್ಯಾಂತರ ಜನರ ಭಾವನೆ ಮೇಲೆ ಪರಿಣಾಮ ಬೀರುವ ಹೇಳಿಕೆ ನೀಡಬಾರದು ಎಂದು ಪೀಠ ಹೇಳಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ವಿಚಾರವಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕೋರಿ ಸಲ್ಲಿಸಿದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ದೇವರನ್ನು ರಾಜಕೀಯದಿಂದ ದೂರ ಇಡಬೇಕು ಎಂದು ನಿರೀಕ್ಷಿಸುವುದಾಗಿ ಪೀಠ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಚಾಟಿ ಬೀಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಲಾಗಿದೆ.

    Continue Reading

    LATEST NEWS

    ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವು

    Published

    on

    ಮಂಗಳೂರು: ಬಾವಿಯ ಕಾಂಪೌಂಡ್‌ ಸ್ವಚ್ಛಗೊಳಿಸುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾ*ವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರುನಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನೆತ್ತಿಲ ಎಂಬಲ್ಲಿ ನಡೆದಿದೆ.

    ನವೀನ್ ಬೆಳ್ಳಾಡ(48) ಮೃತ ವ್ಯಕ್ತಿ. ನವೀನ್ ಅವರು ಭಾನುವಾರ ಸಂಜೆ ಮನೆಯ ಹಿಂಭಾಗದ ಬಾವಿಯ ಕಾಂಪೌಂಡ್ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಆಯ ತಪ್ಪಿ ಬಾವಿಗೆ ಬಿದ್ದು ಮೃ*ತಪಟ್ಟಿದ್ದಾರೆ. ಮನೆಯೊಳಗೆ ನವೀನ್ ಕಾಣದಾಗ ಪತ್ನಿ ಮತ್ತು ಮಕ್ಕಳು ಹುಡುಕಾಡಿ ಬಾವಿಯ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಸ್ಥಳೀಯರು ಸೇರಿ ನವೀನ್ ರನ್ನು ಬಾವಿಯಿಂದ ಮೇಲಕ್ಕೆತ್ತಿದ್ದು ಅದಾಗಲೇ ಅವರು ಮೃ*ತಪಟ್ಟಿದ್ದರು ಎನ್ನಲಾಗಿದೆ. ಸೆಂಟ್ರಿಗ್ ಕೆಲಸ ಮಾಡುತ್ತಿದ್ದ ನವೀನ್ ಅವರಿಗೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Continue Reading

    DAKSHINA KANNADA

    ಕಾರ್ಕಳದಲ್ಲಿ ಭೀಕರ ಅಪಘಾತ; ತಂದೆ ಸಹಿತ ಮೂರು ಮಕ್ಕಳ ದುರ್ಮರಣ

    Published

    on

    ಕಾರ್ಕಳ : ಕಾರ್ಕಳ – ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಇಂದು (ಸೆ.30) ಭೀಕರ ಅಪಘಾತ ಸಂಭವಿಸಿದೆ. ಮಿನಿ ಲಾರಿ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.


    ವೇಣೂರಿನಿಂದ ನಲ್ಲೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಕಾರ್ಕಳದಿಂದ ಗುರುವಾಯನಕೆರೆಯತ್ತ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
    ಬೈಕ್ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದರು. ತಂದೆ ಸುರೇಶ್ ಆಚಾರ್ಯ (36), ಮಕ್ಕಳಾದ ಸಮಿಕ್ಷಾ (7) ಸುಶ್ಮಿತಾ (5) ಸುಶಾಂತ್ (2) ಮೃತಪಟ್ಟವರು. ತಾಯಿ ಮೀನಾಕ್ಷಿ (32) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending