Connect with us

    BANTWAL

    ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ : 9 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು- ವಾಹನ -ನಗದು ವಶ..!

    Published

    on

    ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ : 9 ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು- ವಾಹನ -ನಗದು ವಶ..!

    ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಭಂಡಾರಿಬೆಟ್ಟುವಿನ ಭಂಡಾರಿಬೆಟ್ಟುವಿನ ವಸತಿ ಸಂಕೀರ್ಣದಲ್ಲಿ ಅ.20 ರಂದು ಸುರೇಂದ್ರ ಬಂಟ್ವಾಳ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

    ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ , ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ, ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು,ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸಯ್ಯದ್ ಶರೀಪ್ ,ವತ್ಸಿ ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ ,ಶರಣ್ ಯಾನೆ ಆಕಾಶ್‌ಭವನ ಶರಣ್‌ ,ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ರಾಜೇಶ್,ದಿವ್ಯರಾಜ್,ಅನಿಲ್ ಪಂಪ್‌ವೆಲ್ ಬಂಧಿತ ಆರೋಪಿಗಳಾಗಿದ್ದಾರೆ.

    ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ 1 ಬೈಕ್,2 ಕಾರು,ಮೊಬೈಲ್ ಹಾಗೂ ನಗದು 2.50 ಲಕ್ಷ ರೂ. ವನ್ನು ವಶಪಡಿಸಲಾಗಿದ್ದು,ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯನಡೆಯುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಜಿಲ್ಲೆಯ ವಿವಿಧ ಠಾಣೆಗಳ ನುರಿತ ಸಿಬ್ಬಂದಿಗಳನ್ನೊಳಗೊಂಡ ೫ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಎಸ್‌ ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಆರೋಪಿಗಳ ಪೈಕಿ ಸತೀಶ್ ಕುಲಾಲ್ ಮತ್ತು ಗಿರೀಶ್ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಪ್ರದೀಪ್ ಯಾನೆ ಪಪ್ಪು ಕೊಲೇಗೀಡಾದ ಸುರೇಂದ್ರನ ಸ್ನೇಹಿತನಾಗಿದ್ದರು. ಆರೋಪಿ ಪ್ರದೀಪ್ ತನ್ನ ಚಿನ್ನದ ಉದ್ಯಮಕ್ಕಾಗಿ ಸುರೇಂದ್ರನಿಂದ ಸಾಲಪಡೆದಿದ್ದು,ಅದರಲ್ಲಿ 7 ಲಕ್ಷ ರೂ ವಾಪಾಸ್ ನೀಡಲು ಬಾಕಿ ಇತ್ತು.

    ಈ ಹಣವನ್ನು ಅತನಿಗೆ ವಾಪಾಸ್ ಕೊಡುವ ವಿಚಾರದಲ್ಲಿ ಈ ಕೃತ್ಯ ನಡೆಸಲಾಗಿದೆ.ಸುರೇಂದ್ರನ ಕೊಲೆಗೆ ಆರೋಪಿ ಪ್ರದೀಪ್ 2 ಲಕ್ಷರೂ.ವನ್ನು ಆಕಾಶ್ ಭವನ ಶರಣ್ ಗೆ ಅತನ ಪರಿಚಿತನ ಮೂಲಕ ಪೂರೈಸಿದ್ದಾನೆ.ಈ ಅಪರಿಚಿತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ವೆಂಕಪ್ಪ ಕೂಡ ಸುರೇಂದ್ರನಿಂದ ಸಾಲಪಡೆದಿದ್ದು,ಇದನ್ನು ಅತನಿಗೆ ವಾಪಾಸ್ ನೀಡಲು ಬಾಕಿ ಇದೆ.

    ಈ ಹಿನ್ನಲೆಯಲ್ಲಿ ಸುರೇಂದ್ರನ ಕೊಲೆಗೆ ಸತೀಶ್ ಗೆ ಮುಂಗಡವಾಗಿ 90 ಸಾ.ರೂ.ನೀಡಿದ್ದು,ಕೃತ್ಯದ ಬಳಿಕ ಹೆಚ್ಚಿನ ಹಣ ನೀಡುವ ಭರವಸೆಯಿತ್ತಿದ್ದ.ಆರೋಪಿ ಶರೀಫ್ ವಯಕ್ತಿಕ ದ್ವೇಷದಿಂದ ಕೃತ್ಯದಲ್ಲಿ ಸಹಕರಿಸಿದ್ದರೆ,ಕಾರಾಗೃಹದಲ್ಲಿದ್ದ ಶರಣ್ ವಯಕ್ತಿಕ ದ್ವೇಷ ವೊಂದಿದ್ದರಿಂದ ಗಿರೀಶನನ್ನು ಪುಸಲಾಯಿಸಿ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ತೀರಿಸುವಂತೆ ಪ್ರರೇಪಿಸಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.

    ಆರೋಪಿಗಳಾದ ದಿವ್ಯರಾಜ್,ಅನಿಲ್ ಪಂಪ್ ವೆಲ್ ನಿಂದ ಕೃತ್ಯಕ್ಕೆ ವಾಹನ ವ್ಯವಸ್ಥೆ ಮಾಡಿದ್ದರೆ,ಕೃತ್ಯದ ಬಳಿಕ ಉಜಿರೆ ಪರಿಸರದಲ್ಲಿ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ವ್ಯವಸ್ಥೆ ಮಾಡಿ ತದನಂತರ ಆರೋಪಿಗಳು ಇಲ್ಲಿಂದ ತಪ್ಪಿಸಿಕೊಳ್ಳಲು ವಾಹನ ವ್ಯವಸ್ಥೆ ಮಾಡಿದ್ದ.

    ಆರೋಪಿಗಳ ಪೈಕಿ ದಿವ್ಯರಾಜ್ 2017 ರಲ್ಲಿ ನಡೆದ ಅಶ್ರಫ್ ಕಲಾಯಿ ಹತ್ಯಾ ಪ್ರಕರಣ ಆರೋಪಿಯಾಗಿದ್ದು,ಕೊಲೆಗೀಡಾದ ಕಿಸನ್ ಹೆಗ್ಡೆಯ ಆಪ್ತನಾಗಿದ್ದಾನೆ.

    .ಆರೋಪಿ ಶರಣ್ ಕೊಲೆ,ಕೊಲೆಯತ್ನ,ಲೈಂಗಿಕ ದೌರ್ಜನ್ಯ ಸಹಿತ 20 ಕ್ಕು ಅಧಿಕ ಪ್ರಕರಣ ಈತನ ಮೇಲೀದ್ದು,ಸದ್ಯ ಎರಡು ವರ್ಷದಿಂದ ಬೆಂಗಳೂರು ಕಾರಾಗೃಹದಲ್ಲಿದ್ದು ಅಲ್ಲಿದ್ದುಕೊಂಡೇ ಸುರೇಂದ್ರನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ಲಕ್ಷೀಪ್ರಸಾದ್ ಪ್ರಕಟಣೆ ತಿಳಿಸಿದೆ.

    ಹಣಕಾಸು ಮತ್ತು ವಯಕ್ತಿಕ ದ್ವೇಷದಿಂದ ಸುರೇಂದ್ರ ಹತ್ಯೆ ನಡೆಸಲಾಗಿದೆ ಎಂದು ತನಿಖೆಯಿಂದ ಬಯಲಿಗೆ ಬಂದಿದೆ.ಸದ್ಯ 9 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು,ತನಿಖೆ ಮುಂದುವರಿದೆ.

    ಬಂಟ್ವಾಳ ಉಪವಿಭಾಗದಡಿವೈಎಸ್ಪಿ ವೆಲಂಟೈನ್ ಡಿಸೋಜಾ ಪೊಲೀಸ್ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರ ನೇತೃತ್ವದಲ್ಲಿ ಪಿಎಸ್ ಐ ಅವಿನಾಶ್ ಹೆಚ್ ಗೌಡ,ಪ್ರಸನ್ನ ಎಂ.ಸ್ , ಸಂಜೀವ ಕೆ, ನಂದಕುಮಾರ್ , ವಿನೋದ್ ರೆಡ್ಡಿ, ರಾಜೇಶ್ ಕೆ .ವಿ., ಕಲೈಮಾರ್, ಕುಮಾರ್ ಕಾಂಬ್ಳೆ , ಶ್ರೀ ರವಿ ಬಿ ಎಸ್.,ಡಿಸಿಐಬಿ ಪಿಐ ಚೆಲುವರಾಜ್ ಹಾಗೂ ಡಿಸಿಐಬಿ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

    BANTWAL

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು

    Published

    on

    ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.

    ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.

    ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending