Saturday, August 20, 2022

ನಾಳೆಯಿಂದ ಮಂಗಳೂರು ವಿಮಾನ ನಿಲ್ದಾಣ ಅದಾನಿ ಸುಪರ್ದಿಗೆ..!

ನಾಳೆಯಿಂದ ಮಂಗಳೂರು ವಿಮಾನ ನಿಲ್ದಾಣ ಅದಾನಿ ಸುಪರ್ದಿಗೆ..!

ಮಂಗಳೂರು : ಇದುವರೆಗೂ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ನವೆಂಬರ್ 1 ರಿಂದ (ನಾಳೆ) ತನ್ನ ಅಧಿಕೃತ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಲಿದೆ.

ವಿಮಾನ ನಿಲ್ದಾಣ ಖಾಸಗೀಕರಣದ ಮೊದಲ ಹಂತದ ಹರಾಜು ಪ್ರಕ್ರಿಯೆಯ ನಂತರ ಅದಾನಿ ಸಮೂಹ ದೇಶಾದ್ಯಂತ ಆರು ಸರ್ಕಾರಿ ವಿಮಾನ ನಿಲ್ದಾಣಗಳನ್ನು ಹರಾಜಿನಲ್ಲಿ ಗೆದ್ದುಕೊಂಡಿತ್ತು. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಕೂಡ ಒಂದಾಗಿದೆ.

2018 ರಲ್ಲಿ ಕೇಂದ್ರ ಸರ್ಕಾರ ದೇಶದ ಪ್ರಮುಖ ಆರು ವಿಮಾನ ನಿಲ್ದಾಣಗಳನ್ನು ಅವುಗಳ ದಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಖಾಸಗೀಕರಣಗೊಳಿಸಲು ನಿರ್ಧರಿಸಿತು.

ವಿಮಾನ ನಿಲ್ದಾಣಗಳಿಗೆ 50 ವರ್ಷಗಳ ಗುತ್ತಿಗೆ ಅವಧಿಯನ್ನು ನೀಡಲಾಗುವುದು. ಹೆಚ್ಚಿನ ಭಾಗವಹಿಸುವಿಕೆಯನ್ನು ಆಹ್ವಾನಿಸಲು, ವಿಮಾನ ನಿಲ್ದಾಣದ ನಿರ್ವಹಣೆಯಲ್ಲಿ ಅನುಭವದ ಹೊಂದಿರಬೇಕೆಂಬ ಕಡ್ಡಾಯ ಮಾನದಂಡಗಳಲ್ಲಿ ಇರಲಿಲ್ಲ.

ಗುಜರಾತ್‌ ಮೂಲದ ಅದಾನಿ ಗ್ರೂಪ್‌ ಭಾರತೀಯ ವಿಮಾನ ನಿಲ್ದಾಣದ ನಿರ್ವಹಣೆಯ ಯೋಜನೆ ಪಡೆಯುತ್ತಿದ್ದಂತೆಯೆ, ಪ್ರತಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಟೀಕಿಸಿದ್ದರು.

ದೇಶದ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ನರೇಂದ್ರ ಮೋದಿ ತನ್ನ ಉದ್ಯಮಿ ಗೆಳೆಯರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಸರ್ಕಾರ ಯಾವುದೇ ಗಣನೆಗೆ ತಗೊಳ್ಳದೇ ಖಾಸಾಗಿ ರಂಗಕ್ಕೆ ಹಸ್ತಾಂತರ ಮಾಡಿದೆ,

1951 ರಲ್ಲಿ ಕಾರ್ಯಾರಂಭ ಮಾಡಿದ್ದ ಮಗಳೂರು ವಿಮಾನ ನಿಲ್ದಾಣವನ್ನು ಅಂದಿನ ಪ್ರಧಾನಿ ಜವಹಾರ್‌ ಲಾಲ್ ನೆಹರು ಲೋಕಾರ್ಪಣೆ ಮಾಡಿದ್ದರು.

ಬೆರಳೆಣಿಕೆಯ ವಿಮಾನಗಳ ಹಾರಾಟವಿದ್ದ ಈ ನಿಲ್ದಾಣವನ್ನು ಆ ಬಳಿಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಿದ್ದು. ಇಲ್ಲಿಂದ ಮುಂಬೈ ದೆಹಲಿ, ಹೈದ್ರಾಬಾದ್, ಚೈನೈ ಅಲ್ಲದೇ ಕೊಲ್ಲಿ ರಾಷ್ಟ್ರಗಳಾದ ದುಬೈ, ಕುವೈತ್ , ಸೌದಿ ಅರೇಬಿಯಾ, ಬಹರೀನ್  ಮುಂತಾದ ದೇಶಗಳಿಗೆ ವಿಮಾನ ಸೇವೆ ನಡೆಸಲಾಗುತ್ತಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಮಡಿಕೇರಿ, ಈ ಭಾಗದ ಜನರು ಪ್ರಯೋಜನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics