Connect with us

    DAKSHINA KANNADA

    ಲಾಕ್ ಡೌನ್ ಸಂಕಷ್ಟದಿಂದ ಸುರತ್ಕಲ್ ಯುವಕ ಆತ್ಮಹತ್ಯೆಗೆ ಶರಣು..!

    Published

    on

    ಮುಲ್ಕಿ : ಮಂಗಳೂರು ಹೊರವಲಯದ ಸುರತ್ಕಲ್ ವ್ಯಾಪ್ತಿಯಲ್ಲಿ ನಾಪತ್ತೆಯಾದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

    ಮುಕ್ಕ ಸಮೀಪದ ಸಸಿಹಿತ್ಲುನಲ್ಲಿ ಬೀಚ್ ಬಳಿ ಯುವಕನ ಶವ ಪತ್ತೆಯಾಗಿದೆ. ನಾಪತ್ತೆಯಾದವನನ್ನು ಮುಕ್ಕ ನಿವಾಸಿ ಕಿರಣ್ (40) ಎಂದು ಗುರುತ್ತಿಸಲಾಗಿದೆ.

    ಜು. 14ರಂದು ಮುಂಜಾನೆ 4ಗಂಟೆಗೆ ತನ್ನ ಬೈಕ್ ನ ಕೀ, ವಾಚ್ ಮನೆಯಲ್ಲಿ ಬಿಟ್ಟು ಹೋಗಿ ಕಿರಣ್ ನಾಪತ್ತೆಯಾಗಿದ್ದ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು, ಕಿರಣ್ ಅವರು ಪಾಲುದಾರಿಕೆಯಲ್ಲಿ ಅಂಗಡಿ ನಡೆಸುತ್ತಿದ್ದರು.

    ಕರೋನಾ ಕಾರಣ ವ್ಯಾಪಾರ ಇಲ್ಲದೆ ಹಣದ ಸಮಸ್ಯೆಯಿಂದ ಇದ್ದರು ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಗೆಳೆಯರಲ್ಲಿ ವಿಚಾರಿಸಿದ್ದು ಅವರಲ್ಲಿಗೆ ಬಂದ ಬಗ್ಗೆ ಮಾಹಿತಿ ಸಿಗಲಿಲ್ಲ ಎಂದು ಮನೆಯವರು ದೂರಿನಲ್ಲಿ ತಿಳಿಸಿದ್ದರು.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು: ಮುಚ್ಚುವ ಶಾಲೆಯನ್ನು ಉಳಿಸಿದ ಮುಖ್ಯಶಿಕ್ಷಕಿ; ಸ್ಲಂ ಮಕ್ಕಳ ಮನೆಮನೆಗೆ ತೆರಳಿ ಶಾಲೆಗೆ ಸೇರಿಸಿ ಕ್ರಾಂತಿ

    Published

    on

    ಮಂಗಳೂರು : ರಾಜ್ಯದಲ್ಲಿ ದಕ್ಷಿಣ ಕನ್ನಡ ಶೈಕ್ಷಣಿಕ ಕ್ರಾಂತಿ ಮಾಡಿದ ಜಿಲ್ಲೆಯೆಂದೇ ಹೆಸರುವಾಸಿ. ಈ ಕ್ರಾಂತಿಯ ಹಿಂದೆ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಶಿಕ್ಷಕ – ಶಿಕ್ಷಕಿಯರ ಪರಿಶ್ರಮವೂ ಅಷ್ಟೇ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಪಾಲಿಗೆ ವರವಾಗಿದ್ದಾರೆ.

    ಹೌದು, ಬೋಳಾರದ ದ.ಕ.ಜಿ.ಪಂ.ಹಿ.ಪ್ರಾ‌.ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸಲ್ಢಾನಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ. ಕ್ಲಸ್ಟರ್ ಸಿ.ಆರ್.ಪಿ. ಆಗಿದ್ದ ಗೀತಾ ಜುಡಿತ್ ಸಲ್ದಾನಾ ಕೌನ್ಸೆಲಿಂಗ್‌ ಸಂದರ್ಭ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆಗಸ್ಟ್ 31ರ ವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ ಕೇವಲ 9. ಹಾಜರಾಗುತ್ತಿದ್ದವರು ಐದು ಅಥವಾ ಆರು ಮಂದಿ ಮಾತ್ರ. ಒಂದರ್ಥದಲ್ಲಿ ಶಾಲೆಯನ್ನು ಮುಚ್ಚುವ ಸ್ಥಿತಿಯೇ ಎದುರಾಗಿತ್ತು. ಸೆ.1 ರಂದು ಪ್ರಭಾರ ಮುಖ್ಯಶಿಕ್ಷಕಿಯಾಗಿ ಇವರು ಶಾಲೆಗೆ ಬಂದಾಗ ಇಲ್ಲಿದ್ದ ಮಕ್ಕಳ ಸಂಖ್ಯೆ ನೋಡಿ ದಂಗಾದರು.

    ತಕ್ಷಣ ಕಾರ್ಯಪ್ರವೃತ್ತರಾದ ಗೀತಾ ಜುಡಿತ್ ಸಲ್ದಾನಾ ಪರಿಸರದ ಸ್ಲಂ ಪ್ರದೇಶಗಳಲ್ಲಿ ಸರ್ವೇಗೆ ಇಳಿದರು. ಬಿಹಾರದ ವಲಸೆ ಕಾರ್ಮಿಕರು ಬೋಳಾರ ಪರಿಸರದಲ್ಲಿ ಮೀನು ಕಾರ್ಖಾನೆಯಲ್ಲಿ ಮೀನು ಕಟ್ಟಿಂಗ್ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು ಶಾಲೆಗೆ ಹೋಗದೆ ಅಲ್ಲಿಯೇ ಇರುತ್ತಿದ್ದರು. ಆದ್ದರಿಂದ ವಲಸೆ ಕಾರ್ಮಿಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಪರಿಣಾಮ ಒಂದೇ ತಿಂಗಳಲ್ಲಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 52ಕ್ಕೆ ಏರಿದೆ.

    ಇದನ್ನೂ ಓದಿ : ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಯುವಕನ ಮೇಲೆರಗಿ ಬಾಲಕಿಯ ರಕ್ಷಿಸಿದ ಕೋತಿಗಳು!

    ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಗೀತಾ ಜುಡಿತ್ ಸೇರಿ ಇಬ್ಬರು ಶಿಕ್ಷಕಿಯರಿದ್ದಾರೆ.‌ ಅಕ್ಷರದಾಸೋಹದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದೆ. ಸದ್ಯ ದಾನಿಗಳ ಸಹಕಾರದಿಂದ ಸ್ಲೇಟ್, ಕಡ್ಡಿಗಳು ಮಾತ್ರ ಲಭ್ಯವಾಗಿದೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ವಿದ್ಯಾರ್ಥಿಗಳಿಗೆ ಯೂನಿಫಾರಂ ಇಲ್ಲ. ತೊಡಲು ಬಟ್ಟೆಯಿಲ್ಲ. ಪುಸ್ತಕ, ಬ್ಯಾಗ್, ಚಪ್ಪಲಿಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಈ ಶಾಲೆಯನ್ನು ಉಳಿಸಲು ದಾನಿಗಳ ಸಹಕಾರ ಅಗತ್ಯವಿದೆ. ದಾನಿಗಳು ಗೀತಾ ಜುಡಿತ್ ಸಲ್ದಾನಾ(9845901136) ರನ್ನು ಸಂಪರ್ಕಿಸಬಹುದು.

    Continue Reading

    BANTWAL

    VIDEO: ಕೆಸರುಗದ್ದೆಯಲ್ಲಿ ಜಿಲ್ಲಾಧಿಕಾರಿಯ ಪಿಲಿ ನಲಿಕೆ

    Published

    on

    ಬಂಟ್ವಾಳ: ತಾಲೂಕಿನ ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6 ನೇ ವರ್ಷದ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ವಹಿಸಿದ್ದರು.

    ಕಾರ್ಯಕ್ರಮದ ಧ್ವಜಾರೋಹಣವನ್ನು ಡಾ.ರೂಪಲತಾ ಕೊಂಗಲಾಯಿ ನೆರವೇರಿಸಿ , ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ನೆರವೇರಿಸಿದರು. ಕ್ರೀಡಾಕೂಟದ ಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ನೆರವೇರಿಸಿದರು.

    ಕೆಸರು ಗದ್ದೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ನಮ್ಮ ತುಳುವ ಸಂಸ್ಕೃತಿಯ ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ಹೆಣೆಯುವುದು,  ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು. 

    ಕತ್ತಲು ಆವರಿಸಿದ ಬ್ರಹ್ಮಗಿರಿಯ ಪ್ರವಾಸಿತಾಣ..! ಮೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಕಡಿತ

    ವೇದಿಕೆಯಲ್ಲಿ ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲ್ಲರಾಯ ದೈವ ಪರಿಚರಕರುಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮೊದಲಾದವರು ಉಪಸ್ಥಿತರಿದ್ದರು.

    ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಜಿಲ್ಲಾಧಿಕಾರಿ
    ಈಗಾಗಲೇ ಶಾಲಾ ಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಫೇವರೆಟ್ ಆಗಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅನಂತಾಡಿಯಲ್ಲಿ ಸಂಘಟನೆಯವರು ಆಯೋಜನೆ ಮಾಡಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ಕೆಸರಿನಲ್ಲಿ ಆಟವಾಡಿದ್ದಾರೆ. ಅಲ್ಲದೇ ಕರಾವಳಿಯ ಪಿಲಿ ನಲಿಕೆಗೆ ಹೆಜ್ಜೆ ಹಾಕಿ ಎಲ್ಲರ ಹುಬ್ಬೆರಗಾಗುವಂತೆ ಮಾಡಿದ್ದಾರೆ. ಮಕ್ಕಳ ಜೊತೆ ತಾನೂ ಮಗುವಾಗಿ ಮೈಮರೆತು ಹಾಡಿನ ನೃತ್ಯ ಮಾಡಿದ ಜಿಲ್ಲಾಧಿಕಾರಿಗಳ ನಡೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದರ ಜೊತೆಗೆ ಯುವಕರ ಜೊತೆ ವಾಲಿಬಾಲ್ ಆಡುವ ಮೂಲಕವೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಎಲ್ಲರ ಗಮನ ಸೆಳೆದಿದ್ದಾರೆ.

     

    Continue Reading

    DAKSHINA KANNADA

    WATCH: ಕೆಪಿಟಿ ಬಳಿ ಭೀಕರ ಅಪಘಾ*ತ: ಲಾರಿಯಡಿ ಬಿದ್ದ ಬೈಕ್ ಸವಾರ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು : ಬೈಕ್ ಸವಾರನ ಮೇಲೆ ಲಾರಿ ಹರಿದು ಸವಾರ ಗಂಭೀ*ರವಾಗಿ ಗಾ*ಯಗೊಂಡಿರುವ ಘಟನೆ ಮಂಗಳೂರಿನ ಕೆಪಿಟಿ ಬಳಿ ನಡೆದಿದೆ. ತಲಪಾಡಿ ಕಿನ್ಯಾ ಮೂಲದ ಅಶೋಕ್(44) ಗಂಭೀ*ರವಾಗಿ ಗಾಯಗೊಂಡವರು.

    ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್​ ಬಳಿಯ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.

    ಇದನ್ನೂ ಓದಿ : ಕಳ್ಳರ ಜೊತೆ ಕೈ ಜೋಡಿಸಿ ಲಕ್ಷಗಟ್ಟಲೆ ಕೊಳ್ಳೆ ಹೊಡೆದ ಪೊಲೀಸ್; ತಗಲಾಕ್ಕೊಂಡಿದ್ದು ಹೇಗೆ?

    ಪರಿಣಾಮ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.  ಅಪಘಾ*ತದ ದೃಶ್ಯ ಪೆಟ್ರೋಲ್‌ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Continue Reading

    LATEST NEWS

    Trending