Thursday, September 29, 2022

ಸುರತ್ಕಲ್‌ನಲ್ಲಿ ಕತ್ತಿ ಬೀಸಿ ಹುಚ್ಚಾಟ: ಓರ್ವನ ಬಂಧನ

ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಾಂಡ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕಾನದಲ್ಲಿ ನಡೆದಿದೆ.

ಅತಲ್ ಕುಲ್ಲು (30) ಬಂಧಿತ ವ್ಯಕ್ತಿ.


ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದಾನೆ. ನಂತರ ಸಾರ್ವಜನಿಕರ ಜೊತೆ ಒರಟಾಗಿ ವರ್ತಿಸಿದ್ದು ವೆಂಕಪ್ಪ ಎಂಬ ಸ್ಥಳೀಯ ವ್ಯಕ್ತಿಗೆ ಬೆದರಿಸಿ, ಆತನ ಬಳಿ ಇರುವ ಕತ್ತಿಯನ್ನು ತೆಗೆದುಕೊಂಡು ಅದನ್ನು ಬೀಸುತ್ತ ಜನರಲ್ಲಿ ಆತಂಕ ಸೃಷ್ಠಿಸಿದ್ದಾನೆ.


ಅಷ್ಟೇ ಅಲ್ಲದೆ ಗ್ಯಾರೇಜ್ ಮಾಲೀಕ ಇಮ್ರಾನ್ ಎಂಬ ವ್ಯಕ್ತಿಗೆ ಕತ್ತಿ ತಾಗಿ ಸಣ್ಣಪುಟ್ಟ ಗಾಯಗಳಾಗಿವೆ. ಸಾರ್ವಜನಿಕರು ಅತಲ್‌ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ವ್ಯಕ್ತಿ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ದ್ವೇಷದ ಕಿಚ್ಚು ಹಚ್ಚುವ ಸಂಘಟನೆಗಳ ವಿರುದ್ಧ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳಿ: ಖಾದರ್‌ ಕಿಡಿ

ಮಂಗಳೂರು: ಸರ್ಕಾರ ಕೆಲವು ನೀತಿಗಳಲ್ಲಿ ತಾರತಮ್ಯ ಮಾಡುತ್ತದೆ. ಪರಿಹಾರ ಕೊಡುವುದರಲ್ಲಿ ಕೂಡಾ ಸರ್ಕಾರ ಭೇಧಭಾವ ಮಾಡಿದೆ. ಈ ರೀತಿಯ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಪಿಎಫ್‌ಐ ಬ್ಯಾನ್ ಮಾಡಿದಂತೆ ಯಾವ ಸಂಘಟನೆಗಳು ದೇಶದಲ್ಲಿ...

ಕೇರಳದಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ : ನಟಿಯಿಂದ ಅಭಿಮಾನಿಗೆ ದಂಡಂ ದಶಗುಣಂ..!

ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಈ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಮುಟ್ಟಬಾರದ ಜಾಗಗಳಿಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕೋಯಿಕ್ಕೋಡ್ : ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂ ನಟಿಯರ...

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...