Thursday, September 29, 2022

E-Court ಸೇವೆಯಲ್ಲಿ ತಾಂತ್ರಿಕ ವ್ಯತ್ಯಯ: ಲೋಪ ಸರಿಪಡಿಸಲು ಮಂಗಳೂರು ವಕೀಲರ ಸಂಘ ಮನವಿ

ಮಂಗಳೂರು: ಕಳೆದ ಸುಮಾರು 3-4 ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಕೋರ್ಟ್ ಸೇವೆ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಯಿಂದ ಸಾವಿರಾರು ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ, ನ್ಯಾಯಾಂಗ ಇಲಾಖೆ ಮಧ್ಯಪ್ರವೇಶಿಸುವಂತೆ ಮಂಗಳೂರು ವಕೀಲರ ಸಂಘದ ಮನವಿ ಮಾಡಿದೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ. ಪೃಥ್ವಿರಾಜ್ ರೈ, E-Courts Service ದೇಶದಲ್ಲಿ ನ್ಯಾಯಾಲಯದ ಮಾಹಿತಿ ನೀಡುವ ಅಗತ್ಯ ಡಿಜಿಟಲ್ ಸೇವೆಯಾಗಿದೆ. ಈ ಸೇವೆಯು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮತ್ತು ನೇರವಾಗಿ ಇ-ಕೋರ್ಟ್ ವೆಬ್‌ಸೈಟ್‌ನಿಂದ ಲಭ್ಯವಿದೆ.

ವಕೀಲರು, ದಾವೆದಾರರು, ನ್ಯಾಯಾಂಗ, ಸರ್ಕಾರಕ್ಕೆ ಇದು ಉಪಯುಕ್ತ ಮಾಹಿತಿ ನೀಡುವ ಸೇವೆಯಾಗಿದೆ. ಭಾರತದಾದ್ಯಂತ ನ್ಯಾಯಾಲಯದ ವ್ಯವಸ್ಥೆಗಳಲ್ಲಿ ವಿಚಾರಣೆಗೆ / ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ, ಡೇಟಾವನ್ನು ಪಡೆಯಲು ಅನುಕೂಲವಾಗುತ್ತದೆ.

ಪೊಲೀಸ್ ಮತ್ತು ಕಕ್ಷಿದಾರರ ಹೆಸರು, ವಕೀಲರ ಹೆಸರು, ಕೇಸ್ ಸಂಖ್ಯೆ, ಎಫ್‌ಐಆರ್ ಸಂಖ್ಯೆ, ನ್ಯಾಯಾಲಯದ ಹೆಸರು ಇತ್ಯಾದಿಗಳನ್ನು ಬಳಸಿಕೊಂಡು ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇ-ಕೋರ್ಟ್ ಸೇವೆಗಳಲ್ಲಿ ಹುಡುಕಬಹುದು. ವಿವಿಧ ನ್ಯಾಯಾಲಯಗಳಿಂದ ಲಭ್ಯವಿರುವ ಡೇಟಾವನ್ನು ವಕೀಲರು ಇತರ ಮಧ್ಯಸ್ಥಗಾರರು ನಿಯಮಿತವಾಗಿ ಮಾಹಿತಿಯನ್ನು ಪಡೆಯಲು ಡೌನ್‌ಲೋಡ್ ಮಾಡುತ್ತಾರೆ.

ಪ್ರಕರಣದ ಪ್ರಗತಿಯ ಬಗ್ಗೆ. ಇ-ಕೋರ್ಟ್ ಸೇವೆಗಳ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 07-05- 2021 ರಂತೆ ಡೌನ್‌ಲೋಡ್‌ಗಳ ಸಂಖ್ಯೆ 5.81 ಮಿಲಿಯನ್‌ಗಿಂತಲೂ ಹೆಚ್ಚು ತಲುಪಿದೆ. ಈ ಪ್ರಮುಖ ಸೇವೆ ಭಾರತದ ಸುಪ್ರೀಂ ಕೋರ್ಟ್‌ನ ಇ- ಸಮಿತಿಯ ಒಡೆತನದಲ್ಲಿದೆ. ಭಾರತ ಸರ್ಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಇ-ಕೋರ್ಟ್ಸ್ ಸರ್ವಿಸ್ ಸೇವೆಯನ್ನು ಹೋಸ್ಟ್ ಮಾಡಿ ಅಭಿವೃದ್ಧಿಪಡಿಸಿರುತ್ತದೆ.

ಇ-ಕೋರ್ಟ್ ಸೇವೆಗಳು ಪ್ರಕರಣಗಳ ಬಗ್ಗೆ ವಾರದ ಎಲ್ಲ ದಿನಗಳಲ್ಲೂ 24X7 ಗಂಟೆಗಳ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಆದರೆ, ಕಳೆದ ಸುಮಾರು 3-4 ವಾರಗಳಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸೇವೆ ವಕೀಲರಿಗೆ, ಕಕ್ಷಿದಾರರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇತರ ಕೆಲವು ಜಿಲ್ಲೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ನ್ಯಾಯಾಲಯಗಳು ಸೇವೆಗಳು ಲಭ್ಯವಿವೆ. ಇದೇ ವೇಳೆ, ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿಯೂ ಸೇವೆಗಳಿಗೆ ಸಂಬಂಧಿಸಿದಂತೆ ತೊಂದರೆಯಾಗಿರುವುದು ಕಂಡುಬರುತ್ತದೆ.

ಇ-ಕೋರ್ಟ್ ವೆಬ್‌ಸೈಟ್‌ನಲ್ಲಿ ಉಂಟಾದ ಈ ತಾಂತ್ರಿಕ ಸಮಸ್ಯೆಯಿಂದಾಗಿ ಸಾವಿರಾರು ವಕೀಲರು, ಕಕ್ಷಿದಾರರು ಮತ್ತು ಇತರರಿಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಅಡ್ಡಿಯಾಗಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಗೌರವಾನ್ವಿತ ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ ಎಂದು ಮಂಗಳೂರು ವಕೀಲರ ಸಂಘ ತಿಳಿಸಿದೆ.

ಇದೇ ವೇಳೆ, ಮಂಗಳೂರು ವಕೀಲರ ಸಂಘವು ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಕಾನೂನು ಸಚಿವರು, ನ್ಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರ ಗಮನಕ್ಕೆ ಇಮೇಲ್ ಮೂಲಕ ತಂದಿರುತ್ತದೆ.

ಇ-ಕೋರ್ಟ್ಸ್ ಸೇವೆಯಲ್ಲಿ ಉಂಟಾಗಿರುವ ಅಡಚಣೆ ಬಗ್ಗೆ ನಿಖರವಾದ ಕಾರಣಗಳು ಇದುವರೆಗೆ ಗೊತ್ತಾಗಿಲ್ಲ. ಆದರೂ, ವಕೀಲರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸುವುದು ಅಗತ್ಯವೆಂದು ಮಂಗಳೂರು ವಕೀಲರ ಸಂಘ ಭಾವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ನ್ಯಾಯಾಂಗ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

ಕೇರಳದಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ : ನಟಿಯಿಂದ ಅಭಿಮಾನಿಗೆ ದಂಡಂ ದಶಗುಣಂ..!

ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಈ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಮುಟ್ಟಬಾರದ ಜಾಗಗಳಿಗೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕೋಯಿಕ್ಕೋಡ್ : ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂ ನಟಿಯರ...

PFIನ್ನು ಕರ್ನಾಟಕದಲ್ಲಿ ಪೋಷಿಸಿದ್ದು ಕಾಂಗ್ರೆಸ್‌-ಸಚಿವ ಸುನಿಲ್ ವಾಗ್ದಾಳಿ

ಉಡುಪಿ: 'ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ ಪಿಎಫ್ ಐ ಇಷ್ಟು ದೊಡ್ಡ ಪ್ರ‌ಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣವಾಗಿತ್ತು. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು....