FILM
ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!
ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಭಾರೀ ಯಶಸ್ಸನ್ನು ಗಳಿಸಿದ ಚಿತ್ರ. ಚಿತ್ರ ನೋಡಿ ಮತ್ತೆ ಮತ್ತೆ ವೀಕ್ಷಿಸಲು ಥಿಯೇಟರ್ ಗೆ ಜನ ಲಗ್ಗೆ ಇಡುತ್ತಿದ್ದಾರೆ. ಮಲಯಾಳಂ ಸಿನಿ ಪ್ರಿಯರು ಚಿತ್ರ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಿನಿಮಾ ಬಂದ್ರೂ ಅದು ಓಟಿಟಿಯಲ್ಲಿ ಯಾವಾಗ ಬರುತ್ತೆ ಅಂತ ಕಾಯೋದು ಸಹಜ. ಇದೀಗ ‘ಮಂಜುಮ್ಮೆಲ್ ಬಾಯ್ಸ್’ ಸರದಿ.
ಅತಿ ಹೆಚ್ಚು ಗಳಿಕೆ :
‘ಮಂಜುಮ್ಮೆಲ್ ಬಾಯ್ಸ್’ ಸರಳ ಕಥಾಹಂದರ ಹೊಂದಿದ್ದರೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಚಿತ್ರವನ್ನು ಚಿದಂಬರಂ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಫೆಬ್ರವರಿ 22 ರಂದು ಈ ಚಿತ್ರ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.
ಶೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ಬಾಲು ವರ್ಗೀಸ್, ಗಣಪತಿ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಅಂದಾಜು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸ್ಟಾರ್ ನಟರಿಲ್ಲದ ಈ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿರೋದು ಆಶ್ಚರ್ಯ ಹುಟ್ಟು ಹಾಕಿದೆ.
ಓಟಿಟಿಯಲ್ಲಿ ಯಾವಾಗ ?
‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾವನ್ನು ಥಿಯೇಟರ್ ಅಂಗಳದಲ್ಲಿ ನೋಡಿ ಎಂಜಾಯ್ ಮಾಡಿದವರು ಅನೇಕ ಮಂದಿ ಇದ್ದಾರೆ. ಇದೀಗ ಸಿನಿಮಾ ಓಟಿಟಿಯಲ್ಲಿ ಯಾವಾಗ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ಉತ್ತರವೂ ಸಿಕ್ಕಿದೆ.
ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಮೇ 3 ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 22 ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು, ಏಕಕಾಲಕ್ಕೆ ಓಟಿಟಿಯಲ್ಲಿ ಸ್ಕ್ರೀಮಿಂಗ್ ಆಗಲಿದೆಯಾ ಎಂಬುದು ತಿಳಿದು ಬಂದಿಲ್ಲ.
DAKSHINA KANNADA
`ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್
ಮಂಗಳೂರು : ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು. ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ ‘ಕಲ್ಜಿಗ’ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಮಾತನಾಡಿದರು.
ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಚಲನಚಿತ್ರ ತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಅನ್ನುವುದು ಚಿತ್ರದ ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ.
ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಮಿಗಿಲಾಗಿ ಅಜ್ಜನ ವಿಚಾರಗಳ ಕುರಿತು ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದಲ್ಲಿ , ಅವರು ಯಾವ ಸ್ಥಳಕ್ಕೆ ಬರುತ್ತಾರೋ? ಅಲ್ಲಿಗೆ ಮುಂಚಿತವಾಗಿ ತಾನೇ ಬಂದು ನಿಂತು ಮಾತನಾಡುವೆನು. ಸಿನೆಮಾ ಒಮ್ಮೆಯಾದರೂ ನೋಡಿ, ನೋಡದೆ ನಿಲ್ಲಿಸಬೇಕು ಅನ್ನುವ ಮಾತುಗಳನ್ನು ಆಡದಿರಿ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ನಡೆಸಿರುವೆನು ಎಂದರು.
ಕಾಂತಾರ-2 ಅವಕಾಶ ಸಿಕ್ಕಿದೆ !
ಕಲ್ಜಿಗ ಚಿತ್ರ ಒಂದೂವರೆ ವರ್ಷದ ಹಿಂದೆ ಶೂಟಿಂಗ್ ಆರಂಭವಾದ ದಿನಗಳಿಂದ ಶುಭ ಘಳಿಗೆ ನನ್ನ ಪಾಲಿಗೆ ಒದಗಿಬಂದಿದೆ. ಅಜ್ಜನ ದಯೆಯಿಂದಾಗಿ ಕಾಂತಾರ-2 ಬ್ಯಾಂಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವಂತೆ ಅವಕಾಶ ಒದಗಿಬಂತು. ಖುದ್ದು ಚಿತ್ರತಂಡದ ಮುಖ್ಯಸ್ಥರೇ ಕರೆ ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ ಕಲ್ಜಿಗ ಚಿತ್ರದ ಸಸಿಹಿತ್ಲು ಶೂಟಿಂಗ್ ಸ್ಪಾಟ್ ನಲ್ಲಿ ಯಾವುದೇ ರೀತಿಯ ಅಡಚಣೆಗಳಿರಲಿಲ್ಲ. ಅಜ್ಜನ ದಯೆ ಎಷ್ಟಿತ್ತೆಂದರೆ ದಿನವಿಡೀ ಶೂಟಿಂಗ್ ನಡೆಸಿದರೂ ಸುಸ್ತು ಅನ್ನುವ ವಿಚಾರವೇ ಬರಲಿಲ್ಲ. ನೇರ ಮನೆಗೆ ಹೋಗಿ ಆರಾಮವಾಗಿ ಮಲಗುತ್ತಿದ್ದೆವು. ಇಂತಹ ದೈವೀ ಶಕ್ತಿಯನ್ನು ಎಂದಿಗೂ ಅಪಚಾರ ನಡೆಸಲು ಸಾಧ್ಯವೇ ? ಎಂದರು.
ಇದನ್ನೂ ಓದಿ : ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ ರಾಜ್ ಬಿ ಶೆಟ್ಟಿಯ ಮತ್ತೊಂದು ಸಿನಿಮಾ
ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.
FILM
ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ.
ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.
FILM
ಸಲ್ಮಾನ್ ಖಾನ್ ಧರಿಸಿದ ವಾಚಿನಲ್ಲಿ 714 ವಜ್ರಗಳು; ವಾಚ್ ಮಾರಿದ್ರೆ ಬರುತ್ತೆ 5 ರೋಲ್ಸ್ ರಾಯ್ಸ್ ಕಾರು
ಸಲ್ಮಾನ್ ಖಾನ್ ಅವರು ಯಾವಾಗಲೂ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಜಾಕೋಬ್ ಅರಾಬೋ ಕಂಪನಿಯ ವಾಚ್ ಧರಿಸಿದ್ದರು. ವಾಚ್ನ ಧರಿಸಿ ಅವರು ಪೋಸ್ ಕೊಟ್ಟಿದ್ದಾರೆ. ಇದು ಬಿಲಿಯನೇರ್ III ವಾಚ್ ಅನ್ನೋದು ವಿಶೇಷ. ಇದರಲ್ಲಿ ನೂರಾರು ಡೈಮಂಡ್ಸ್ ಇದೆ. ಜಾಕೋಬ್ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
ಜಾಕೋಬ್ ಅವರು ಸಲ್ಲುಗೆ ವಾಚ್ ತೊಡಿಸುತ್ತಿರುವ ಫೋಟೋ ವೈರಲ್ ಆಗಿದೆ. ನಂತರ ಸಲ್ಲು ಅವರು ವಾಚ್ನ ಕ್ಯಾಮೆರಾಗೆ ಶೋ ಮಾಡಿದ್ದಾರೆ. ಯಾರಿಗೂ ಈ ವಾಚ್ನ ಧರಿಸೋಕೆ ನಾನು ಅವಕಾಶ ನೀಡುವುದಿಲ್ಲ ಎಂದಿರುವ ಅವರು ಸಲ್ಲು ಮೇಲಿನ ವಿಶೇಷ ಗೌರವದಿಂದಾಗಿ ಅವರು ವಿಶೇಷವಾಗಿ ಈ ಅವಕಾಶ ನೀಡಿದ್ದಾರೆ.
ಈ ವಾಚ್ನಲ್ಲಿ 152 ವೈಟ್ ಡೈಮಂಡ್ಸ್ ಇದೆ. ಪ್ರತಿ ಸೆಗ್ಮೆಂಟ್ನಲ್ಲಿ 76 ಡೈಮಂಡ್ಸ್ ಇದೆ. ಬ್ರೆಸ್ಲೆಟ್ನಲ್ಲಿ 504 ಡೈಮಂಡ್ಗಳು ಇವೆ. ಇದು ಸೇರಿದಂತೆ ವಾಚ್ನಲ್ಲಿ 714 ಡೈಮಂಡ್ಸ್ ಇವೆ. ಈ ವಾಚ್ನ ಬೆಲೆ 41.5 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಾಚ್ ಮಾರಿದರೆ ಏನಿಲ್ಲವೆಂದರೂ 5 ರೋಲ್ಸ್ ರಾಯ್ಸ್ ಬರುತ್ತದೆ ಎಂದು ಅನೇಕರು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರು ಈ ವಾಚ್ನ ಖರೀದಿ ಮಾಡಿಲ್ಲ. ಅದನ್ನು ಧರಿಸಿ ಪೋಸ್ ಕೊಟ್ಟಿದ್ದಾರಷ್ಟೇ. ಹಾಗಂತ ಸಲ್ಲು ಮನಸ್ಸು ಮಾಡಿದರೆ ಇಷ್ಟು ದುಬಾರಿ ವಾಚ್ನ ಖರೀದಿಸೋದು ಅವರಿಗೆ ಎಷ್ಟು ಹೊತ್ತಿನ ಕೆಲಸವೂ ಅಲ್ಲ. ಸಲ್ಮಾನ್ ಖಾನ್ ಸದ್ಯ ‘ಸಿಖಂದರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಅಟ್ಲಿ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!