FILM
ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ಸುಮಲತಾ ಅಂಬರೀಷ್; ರಾಜಕೀಯದಿಂದ ದೂರ ಉಳಿದ ಬಗ್ಗೆ ಏನಂದ್ರು?
Published
2 weeks agoon
By
NEWS DESK4ಮಂಗಳೂರು/ಮಂಡ್ಯ : ಲೋಕಸಭಾ ಚುನಾವಣೆ ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಸುಮಲತಾ ಇದೀಗ ಮತ್ತೆ ರಾಜಕೀಯದತ್ತ ಮುಖ ಮಾಡುವ ಲಕ್ಷಣ ಕಾಣಿಸುತ್ತಿದೆ. ಇಂದು ಮಂಡ್ಯದ ಚಾಮುಂಡೇಶ್ವರಿ ನಿವಾಸಕ್ಕೆ ಆಗಮಿಸಿದ್ದಾರೆ.
ಜನವರಿ ನಂತರ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿರುವ ಅವರು, ಸ್ವಲ್ಪ ರೆಸ್ಟ್ ಬೇಕಿತ್ತು. ಹಾಗಾಗಿ ಗ್ಯಾಪ್ ತೆಗೆದುಕೊಂಡಿದ್ದೆ ಎಂದಿದ್ದಾರೆ. ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟು ಕೊಟ್ಟೆ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಿದ್ದೇನೆ. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.
ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ :
ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಹೋಗಿದ್ದೇನೆ. ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಅಂತ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಬಿಜೆಪಿ ಸ್ಟ್ರೆಂತ್ ಹೆಚ್ಚು ಮಾಡಬೇಕು ಅನ್ನೋದನ್ನು ತಿಳಿಸಿದ್ದೇನೆ. ನಾನು ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬೆಂಬಲಿಗರು ಆಸೆ ಪಡೋದ್ರಲ್ಲಿ ತಪ್ಪೇನಿಲ್ಲ. ಮೂರು ನಾಲ್ಕು ತಿಂಗಳಲ್ಲೆ ಎಲ್ಲಾ ಆಗಬಿಡಬೇಕು ಅಂತ ಏನಿಲ್ಲ. ನಮಗೂ ಟೈಮ್ ಬೇಕು, ಅವ್ರಿಗೂ ಟೈಮ್ ಬೇಕು ಹೀಗಾಗಿ ನಾನು ಯಾವುದನ್ನೂ ನೆಗೆಟಿವ್ ಆಗಿ ನೋಡ್ತಿಲ್ಲ ಎಂದು ಸುಮಲತಾ ಹೇಳಿದ್ದಾರೆ.
ದರ್ಶನ್ ಬಗ್ಗೆ ಏನಂದ್ರು?
ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ಬಗ್ಗೆಯೂ ಸುಮಲತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ದರ್ಶನ್ ಪತ್ನಿ ನನ್ನ ಟಚ್‌ನಲ್ಲಿ ಇದ್ದಾರೆ. ದರ್ಶನ್ ಆರೋಗ್ಯ ಸುಧಾರಿಸಬೇಕಿದೆ. ಸಾಕಷ್ಟು ಚಾಲೆಂಜಸ್ ಇದೆ. ಎಲ್ಲಾ ಆರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದಿದ್ದಾರೆ.
ನಮ್ಮ ಸಂಬಂಧ ಹಾಗೆ ಇದೆ. ನನ್ನ ಲೈಫ್ ಇರೋ ವರೆಗೂ ದರ್ಶನ್ ನನ್ನ ಮಗನೆ. ಎಲ್ಲಾ ಒಳ್ಳೆದಾಗಬೇಕು ಅಂದುಕೊಳ್ಳುತ್ತಿದ್ದೇನೆ. ನಿಜ ಹೊರ ಬಂದು ನಿರಪರಾಧಿ ಆಗಬೇಕು ಅನ್ನೋದು ನನ್ನ ಆಸೆ. ವಕೀಲರು ನಿಜಾಂಶ ಏನು ಅನ್ನೋದನ್ನ ಸಾಬೀತು ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
ಬೆನ್ನು ನೋವು ತುಂಬಾ ಇದೆ ಆದ್ರೆ ಸರ್ಜರಿಗೆ ಇಂಟ್ರೆಸ್ಟ್ ಇಲ್ಲ ಅಂತಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂತು. ಸರ್ಜರಿ ಆದ್ರೆ ರಿಕವರಿಗೆ ತುಂಬ ಸಮಯ ಬೇಕಾಗತ್ತೆ. ಸಿನಿಮಾ ಇಂಡಸ್ಟ್ರಿಯಲ್ಲೂ ಸಾಕಷ್ಟು ನಷ್ಟ ಆಗಿದೆ. ದರ್ಶನ್ ಸುತ್ತ ಟೈಟ್ ಸೆಕ್ಯುರಿಟಿ ಇದೆ, ಪೋನ್ ಕೂಡ ಉಪಯೋಗಿಸ್ತಿಲ್ಲ. ದರ್ಶನ್ ಪತ್ನಿ ಅವರಿಂದ ಅಷ್ಟೇ ಮಾಹಿತಿ ಸಿಕ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನ: ರೈಲು ನಿಲ್ದಾಣದಲ್ಲಿ ಬಾಂ*ಬ್ ಸ್ಫೋ*ಟ; 20 ಜನರು ಸಾ*ವು
ದರ್ಶನ್ ಅವರನ್ನು ದೇವರು ಕಾಪಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ. ದರ್ಶನ್ ಗೆ ತಾಯಿಯಾಗಿ ನಾನು ಏನಾದರೂ ಹೇಳೋದಿದ್ರೆ ಪರ್ಸನಲ್ ಆಗಿ ಹೇಳ್ತಿನಿ, ಮೀಡಿಯಾ ಮುಂದೆ ಅಲ್ಲ. ದರ್ಶನ್ ಪರ ನಾನಂತೂ ಇದ್ದೇನೆ ಅಂತ ಹೇಳ್ತಿನಿ ಎಂದು ಸಮಲತಾ ಹೇಳಿದ್ದಾರೆ.
FILM
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
Published
2 hours agoon
22/11/2024By
NEWS DESK4ಮಂಗಳೂರು/ಬೆಂಗಳೂರು : ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕನಾಗಿ ಮಿಂಚಿ ಸಕತ್ ಫೇಮಸ್ ಆಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸರಳವಾಗಿ ಅವರ ನಿಶ್ಚಿತಾರ್ಥ ಕಾರ್ಯ ನೆರವೇರಿದೆ.
ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ರಾಣಾ ಎಂಗೇಜ್ಮೆಂಟ್ ಆಗಿರುವ ಹುಡುಗಿ ಯಾರು? ಎಲ್ಲಿಯವರು? ಎಂಬ ಮಾಹಿತಿ ಬಹಿರಂಗವಾಗಿಲ್ಲ. ನಿಶ್ಚಿತಾರ್ಥದ ಫೋಟೋ ನೋಡಿದ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರೇಮ್ ಮಿಸ್ ಯಾಕೆ?
ರಾಣಾ ಎಂಗೇಜ್ಮೆಂಟ್ ಸಮಾರಂಭದಲ್ಲಿ ನಟಿ ರಕ್ಷಿತಾ ಪ್ರೇಮ್ ಕುಟುಂಬ ಇದೆ. ಆದ್ರೆ ನಿರ್ದೇಶಕ ಪ್ರೇಮ್ ಇಲ್ಲ. ಅವರು ಏನು ಭಾಗಿಯಾಗಿಲ್ಲ ಎಂಬ ಅನುಮಾನ ಹುಟ್ಟಿರೋದು ಸಹಜ. ಪ್ರೇಮ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋದರಿಂದ ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೆಡಿ ಸಿನಿಮಾದ ಶೂಟಿಂಗ್ ಗಾಗಿ ಅವರು ಚಿಕ್ಕಮಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಣಾ, ಪ್ರೇಮ್ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ್ ಈಶ್ವರ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಾನ್ವಿ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.
ಕನ್ನಡ ಚಿತ್ರರಂಗ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ನವೆಂಬರ್ 12) ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ಅವಿವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಿದಿತ್ತು. ಅದರ ಬೆನ್ನಲ್ಲೇ ಸೆಪ್ಟೆಂಬರ್ 18, 2024ರಂದು ಅವಿವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಸೀಮಂತದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಸೀಮಂತ ಕಾರ್ಯಕ್ರಮದ ಅವಿವಾ ಫೋಟೋ ನೋಡಿದ ಅಭಿಮಾನಿಗಳು ಗಂಡು ಮಗುವೇ ಜನಿಸುವುದು ಎಂದು ಗೆಸ್ ಮಾಡಿದ್ದರು. ಅವಿವಾ ಬಿದ್ದಪ್ಪ ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೂ ಕೂಡ ಅನೇಕರು ಗಂಡು ಮಗು, ಅಂಬರೀಷ್ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಮಾಡುತ್ತಿದ್ದರು.
ಇದೀಗ ಎಲ್ಲರ ನಿರೀಕ್ಷೆಗಳು ಸರಿಯಾಗಿದ್ದು ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಗಂಡು ಮಗುವಾಗಿದೆ. ಹೀಗಾಗಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಾಗಿ ಅಂಬರೀಷ್ ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಮಾತುಗಳು ಎಲ್ಲರ ಬಾಯಲ್ಲಿ ಇದೆ. ಜೊತೆಗೆ ಇನ್ನೊಂದು ವಿಶೇಷವಾದ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದ್ದರೆ. ಮುದ್ದಾದ ಮೊಗ್ಗಗನಿಗೆ ತಾತನ ಹೆಸರೇ ಇಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಅಂದರೆ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಮಗನಿಗೆ ಅಂಬರೀಷ್ ಅವರ ಹೆಸರೇ ಇಡಲಾಗುತ್ತದೆ. ಹಳೆಯ ಸಂಪ್ರದಾಯದಂತೆ ತಾತನ ಹೆಸರನ್ನೇ ಮೊಮ್ಮಗನಿಗೆ ಇಡುವ ಪದ್ಧತಿಯನ್ನು ಸುಮಲತಾ ಹಾಗೂ ಅಭಿಷೇಕ್ ಮುಂದುವರಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲವರು ಹೊಸ ಹೆಸರಿಟ್ಟು ಸರ್ ನೇಮ್ ಅಂಬರೀಷ್ ಎಂದು ಇಡುವ ಸಾಧ್ಯತೆ ಎಂದು ಸಹ ಹೇಳುತ್ತಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಜೂನ್ 5, 2023ರಂದು ಪೋಷಕರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
LATEST NEWS
ಶೀಘ್ರದಲ್ಲೇ ಉಬರ್ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?
ಉತ್ತರ ಕನ್ನಡದಲ್ಲಿ ಮಂಗನಬಾವು ಸೋಂಕು 125 ಕ್ಕೆ ಏರಿಕೆ
ಸದ್ದಿಲ್ಲದೇ ನಡೆಯಿತು ನಟಿ ರಕ್ಷಿತಾ ಸಹೋದರ ರಾಣಾ ಎಂಗೇಜ್ಮೆಂಟ್; ಪ್ರೇಮ್ ಇರಲಿಲ್ಲ ಯಾಕೆ?
ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ
ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾ*ವು: ಮೂವರ ಬಂಧನ
ಕಾಸರಗೋಡು: ಮಹಿಳಾ ಪೊಲೀಸ್ಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ