Connect with us

    DAKSHINA KANNADA

    ಮಂಗಳೂರು ಸಬ್‌ ಜೈಲಿನಲ್ಲಿ ಪೊಲೀಸರ ದಿಢೀರ್ ದಾಳಿ..!! ಗಾಂಜಾ, ಡ್ರಗ್‌ ಪ್ಯಾಕೇಟ್‌ಗಳು ವಶ

    Published

    on

    ಮಂಗಳೂರು: ಮಂಗಳೂರು ನಗರ ಪೊಲೀಸರು ಇಂದು(ಜು.25) ಮುಂಜಾನೆ ಏಕಾಏಕಿ ಮಂಗಳೂರು ಸಬ್‌ ಜೈಲಿಗೆ ದಾಳಿ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್‌ ಅವರ ಸೂಚನೆಯಲ್ಲಿ ಮುಂಜಾನೆ 4 ಗಂಟೆಗೆ ದಾಳಿ ಮಾಡಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳಿಂದ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3 ಕೇಬಲ್‌ಗಳು ಮತ್ತು ಗಾಂಜಾ ಮತ್ತು ಇತರ ಮಾದರಿಯ ಡ್ರಗ್‌ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ದುಬೈನಿಂದ ಬೆಂಗಳೂರಿಗೆ ಬಂದವನಿಂದ 40 ಐಪೋನ್, 5 ಆ್ಯಪಲ್ ವಾಚ್ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

    ಈ ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಪಿಐಗಳು, ಸುಮಾರು 150 ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಕೊಠಡಿಗಳಲ್ಲೂ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ದಾಳಿ ಕಾರ್ಯಾಚರಣೆಯ ಗೋಪ್ಯತೆಯನ್ನು ಕೊನೆಕ್ಷಣದವರೆಗೂ ಕಾಯ್ದುಕೊಳ್ಳಲಾಗಿತ್ತು. ಜೈಲಿನೊಳಗೆ ನಡೆಯುವ ಅಹಿತಕರ ಘಟನೆ, ಹೊಡೆದಾಟ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅದರ ಭಾಗವಾಗಿ ಇಂದು ನಸುಕಿನ ವೇಳೆಯೂ ಕಾರ್ಯಾಚರಣೆ ನಡೆಸಲಾಗಿದೆ.

     

     

    DAKSHINA KANNADA

    ಕಟಪಾಡಿಯಲ್ಲಿ ವಾಹನಗಳ ಸರಣಿ ಅಪಘಾತ; ವಾಹನಗಳು ಜಖಂ

    Published

    on

    ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಅ.17 ರ ಗುರುವಾರ ಸರಣಿ ಅಪಘಾತ ಸಂಭವಿಸಿದೆ.


    ತಾಂತ್ರಿಕ ತೊಂದರೆಯಿಂದ ಟ್ಯಾಂಕ್‌ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್‌ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.


    ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    Continue Reading

    BELTHANGADY

    ಅಪ್ರಾಪ್ತ ಬಾಲಕಿಗೆ ಕಿರುಕುಳ; ಆರೋಪಿ ಅರೇಸ್ಟ್

    Published

    on

    ಬೆಳ್ತಂಗಡಿ: ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕೊಂಡು ಬಂದು ಮೊಬೈಲ್ ನಂಬರ್ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

    ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎನ್ನುವಲ್ಲಿ ಈ ಘಟನೆ ನಡೆದಿದೆ.

    ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿವಾಸಿ, ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್‌ ಆಗಿರುವ ಜುಮಾರ್‌ (24) ಬಂಧಿತ ಆರೋಪಿ. ಸಂಬಂಧಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಬಾಲಕಿ ಕಾಲೇಜಿಗೆ ಹೋಗುತ್ತಿರುವ ವೇಳೆ ಕಳೆದ ಐದು ದಿನಗಳಿಂದ ಆರೋಪಿಯು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗುತ್ತಿದ್ದ.

    ಬೈಕ್‌ನಲ್ಲಿ ಜೊತೆಯಾಗಿ ಬರುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೆ, ಮೊಬೈಲ್‌ ನಂಬರ್ ಕೊಡುವಂತೆ ಕೇಳಿಕೊಳ್ಳುತ್ತಿದ್ದ.

    ಅಂತೆಯೇ ಅ. 15ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತ ಬೈಕ್‌ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.

    ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ವಿಧಾನ ಪರಿಷತ್‌ ಉಪ ಚುನಾವಣೆ: ದ.ಕ. ಜಿಲ್ಲಾದ್ಯಂತ ಮದ್ಯ ನಿಷೇಧ

    Published

    on

    ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.19ರಂದು ಸಂಜೆ 4ರಿಂದ ಅ.21ರ ಸಂಜೆ 4ರವರೆಗೆ ಹಾಗೂ ಮತ ಎಣಿಕೆಯ ದಿನವಾದ ಅ.24ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

    Continue Reading

    LATEST NEWS

    Trending