Connect with us

LATEST NEWS

ಕುಂಪಲ – ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ ವಿಧ್ಯಾರ್ಥಿನಿ ಧನ್ಯಾ ಇನ್ನಿಲ್ಲ

Published

on

ಉಳ್ಳಾಲ ಫೆಬ್ರವರಿ 19: ತಾಯಿ ಗದರಿದ್ದಕ್ಕೆ ಫೆಬ್ರವರಿ 14 ರಂದು ಕೀಟನಾಶ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ವಿಧ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.


ಮೃತಳನ್ನು ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯಾ ದಂಪತಿಯ ಹಿರಿಯ ಪುತ್ರಿ ಧನ್ಯಾ(17) ಎಂದು ಗುರುತಿಸಲಾಗಿದ್ದು, ಈಕೆ ರಾಮಕೃಷ್ಣ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದರು.

ಫೆಬ್ರವರಿ 14 ರಂದು ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಗದರಿದ್ದರು, ಇದಕ್ಕೆ ಮನನೊಂದ ಧನ್ಯಾ ತಾಯಿ ಪಕ್ಕದ ಮನಗೆ ತೆರಳಿದ್ದ ವೇಳೆ ಮನೆಯೊಳಗಿದ್ದ ಗೆದ್ದಲು ಹೊಡೆಯುವ ಕೀಟನಾಶಕ ಸೇವಿಸಿದ್ದಾರೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಧನ್ಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರಿಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

 

LATEST NEWS

123 ವರ್ಷಗಳಲ್ಲಿ 2ನೇ ಬಾರಿಗೆ ಅತ್ಯಧಿಕ ತಾಪಮಾನ..! ಇನ್ನೂ 11 ದಿನ ಮುಂದುವರಿಯಲಿದೆ ಬಿಸಿ ಶಾಖ..!

Published

on

ದೆಹಲಿ: ಭಾರತೀಯ ಹವಾಮಾನ ಇಲಾಖೆ ಮೇ ತಿಂಗಳ ಹವಾಮಾನ ಮುನ್ಸೂಚನೆ ಬಿಡುಗಡೆ ಮಾಡಿದ್ದು ಇದೀಗ ಅಚ್ಚರಿ ಮೂಡಿಸಿದೆ. 1901ರ ನಂತರ ಏಪ್ರಿಲ್‌ನಲ್ಲಿ ಇಷ್ಟೊಂದು ತಾಪಮಾನವನ್ನು ದಾಖಲಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

havamana

ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತಾಪಮಾನ ದಾಖಲಾಗಿದೆ. ದೇಶದಲ್ಲಿ 1901ರ ನಂತರ ಇದೇ ಮೊದಲ ಬಾರಿಗೆ ಹೆಚ್ಚು ತಾಪಮಾನ ಏರಿಕೆಯಾಗಿರುವುದು. ಎಪ್ರಿಲ್ ತಿಂಗಳಿನಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತೆ ಮಳೆ ಬಂದಿದ್ದು, ಮೇ ತಿಂಗಳಿನಲ್ಲಿ ಹೆಚ್ಚಿನ ಉರಿಬಿಸಿಲು, ಶಾಖ ಮತ್ತು ಆಲಿಕಲ್ಲು ಮುಂದವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನು ಮೇ ತಿಂಗಳಿನಲ್ಲಿ ಬಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 11 ದಿನಗಳ ಕಾಲ ಬಿಸಿಗಾಳಿ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂದೆ ಓದಿ..; ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಏಪ್ರಿಲ್ 5 ರಿಂದ 7 ರವರೆಗೆ, ನಂತರ 15 ರಿಂದ 30 ರವರೆಗೆ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಾಗಿದೆ. ಸರಾಸರಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಾಸರಿ ಕನಿಷ್ಠ ತಾಪಮಾನ 28.12 ಡಿಗ್ರಿ ಸೆಲ್ಸಿಯಸ್ ಎಂದು ಮೊಹಾಪಾತ್ರ ಹೇಳಿದ್ದಾರೆ. ದಕ್ಷಿಣ ಪರ್ಯಾಯ ದ್ವೀಪದ ಭಾರತದಲ್ಲಿ 1980 ರ ದಶಕದಿಂದಲೂ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಮುಂದಿನ 11 ದಿನದ ಶಾಖದ ಅಲೆ, ಆಲಿಕಲ್ಲು ಮಳೆ:

ದಕ್ಷಿಣ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಗುಜರಾತ್‌ನಲ್ಲಿ ಮೇ ತಿಂಗಳಲ್ಲಿ 8-11 ದಿನಗಳವರೆಗೆ ಶಾಖದ ಅಲೆಗಳು ಇರಬಹುದೆಂದು ಮಹಾಪಾತ್ರ ಹೇಳಿದ್ದಾರೆ. ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಆಂತರಿಕ ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಒಳಭಾಗ ಕರ್ನಾಟಕ, ತೆಲಂಗಾಣದಲ್ಲಿ 5-5 ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಉತ್ತರ ಭಾರತ, ಮಧ್ಯ ಭಾರತ ಮತ್ತು ಪೆನಿನ್ಸುಲಾರ್ ಭಾರತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ದಿನಗಳ ಕಾಲ ಆಲಿಕಲ್ಲು ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

Published

on

ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣದ ಆರೋಪ ಎದುರಿಸುತ್ತಿರೋ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿದ್ದಾರೆ ಎನ್ನಲಾಗಿದೆ. ಇದೀಗ ಎಸ್ಐಟಿ ಅಧಿಕಾರಿಗಳು ಲುಕ್‌ ಔಟ್ ನೋಟಿಸ್ ಹೊರಡಿಸಿದ್ದಾರೆ.


ಸಂಸದ ಪ್ರಜ್ವಲ್‌ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ಲೈಂ*ಗಿಕ ದೌರ್ಜ*ನ್ಯ ಆರೋಪ ಕೇಳಿಬಂದಿದೆ. ಈ ಬಗ್ಗೆ ವೀಡಿಯೋ ಹಾಸನ ಜಿಲ್ಲೆಯಾದ್ಯಂತ ಸದ್ದು ಮಾಡಿದೆ. ಈ ಬಗ್ಗೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ಈಗಾಗಲೇ ದೂರನ್ನೂ ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿದ್ದು, ಎಸ್ಐಟಿ ತಂಡ ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅದಕ್ಕೂ ಮೊದಲೇ ಪ್ರಜ್ವಲ್‌ ದೇಶದಿಂದ‌ ಪರಾರಿಯಾಗಿದ್ದಾರೆ. ವಿಚಾರಣೆಗೆ ನೋಟಿಸ್ ನೀಡಿದರೂ ಹಾಜರಾಗಿಲ್ಲ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಸಮಯಾವಕಾಶ ಕೇಳಿದ್ದ ಪ್ರಜ್ವಲ್ :

ಸದ್ಯಕ್ಕೆ ಜರ್ಮನಿಯವಲ್ಲಿರುವ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ, ತಮಗೆ ಏಳು ದಿನಗಳ ಕಾಲಾವಕಾಶ ಬೇಕು ಎಂದು ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು. ಆದರೆ, ಆ ಮನವಿಯ ಹೊರತಾಗಿಯೂ ಎಸ್ಐಟಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದೆ.

Continue Reading

dehali

ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

Published

on

ದೆಹಲಿ: ಕೇಂದ್ರ ಸರಕಾರ ದೇಶದಾದ್ಯಂತ ಆಧಾರ್ ಕಾರ್ಡ್‌ಅನ್ನು ಕಡ್ಡಾಯಗೊಳಿಸಿದೆ. ಭಾರತೀಯ ನಾಗರಿಕರನ್ನು ಗುರುತಿಸುವುದಕ್ಕಾಗಿ ಹಾಗೂ ದೇಶದ ಭದ್ರತೆ ದೃಷ್ಠಿಯಿಂದ ಆಧಾರ್ ಕಾರ್ಡ್‌ನ್ನು ಜಾರಿಗೊಳಿಸಿದೆ. ಹಾಗಾಗಿ ಜನರು ತಮ್ಮ ಆಧಾರ್ ಕಾರ್ಡ್‌ಗಳ ಅಪ್ಡೇಟ್ ಮಾಡಲು, ಹೊಸ ಆಧಾರ್‌ ಮಾಡಿಸಲು ಸೈಬರ್ ಸೆಂಟರ್ ಗಳು ಸರಕಾರಿ ಕಛೇರಿಗಳ ಮುಂದೆ ಮುಗಿ ಬೀಳುತ್ತಾರೆ. ಇದೀಗ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಯಾಕಂದ್ರೆ ಇದೀಗ ನಾಯಿಗಳಿಗೂ ಆಧಾರ್ ಹೊಂದಿರಬೇಕು ಎನ್ನುವ ನಿಯಮ ಜಾರಿಗೆ ಬಂದಿದೆ.

dog

ದೆಹಲಿಯಲ್ಲಿ ಆಧಾರ್ ಕಾರ್ಡ್‌ ಹೋಲ್ಡರ್‌ಗಳಾದ 100 ನಾಯಿಗಳು!

ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆಯಂತೆ. ಸರ್ವೆ ಪ್ರಕಾರ ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ಆಧಾರ್ ಕಾರ್ಡ್‌ಅನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ. ದಾರಿ ತಪ್ಪಿದ ನಾಯಿಗಳನ್ನು ರಕ್ಷಿಸುವ ಹಾಗೂ ಅವುಗಳನ್ನು ಸ್ಥಳಾಂತರಿಸುವ ದೃಷ್ಟಿಯಲ್ಲಿ ಎನ್‌ಜಿಒ ಗಳು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

dog

ನಾಯಿಗೂ ಬಂತು ಸ್ಕ್ಯಾನರ್‌ ಒಳಗೊಂಡ ಟ್ಯಾಗ್ ಕಾರ್ಡ್:

ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ . ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದೆ ನೋಡಿ..; ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Pawfriend.in ಎಂಬ ಎನ್‌ಜಿಒ ಇದನ್ನು ಆವಿಷ್ಕಾರ ಮಾಡಿದ್ದು  ನಾಯಿಗಳಿಗೆ ನೀಡುವ ಆಧಾರ್ ಕಾರ್ಡ್‌ನಲ್ಲಿ ಕ್ಯೂ ಆರ್‌ ಕೋಡ್‌ಅನ್ನು ಕೂಡಾ ಅಳವಡಿಸಿದ್ದಾರೆ.  ಇದು ಮೈಕ್ರೋಚಿಪ್‌ಗಳನ್ನು ಒಳಗೊಂಡಿದ್ದು, ನಾಯಿಗಳು ಒಂದು ವೇಳೆ ಕಳೆದು ಹೋದಲ್ಲಿ ಈ ಟ್ಯಾಗ್‌ಗಳಲ್ಲಿರುವ ಕ್ಯೂಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದ್ರೆ ನಾಯಿಯ ಕುರಿತು ವಿವರಗಳನ್ನು ಪಡೆಯಬಹುದಾಗಿದೆ. ಇದು ನಾಯಿಯ ಯಜಮಾನನಿಗೆ ಬಹಳ ಸಹಾಯಕಾರಿಯಾಗಿದೆ.

 

 

Continue Reading

LATEST NEWS

Trending