Connect with us

    NATIONAL

    ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್..!

    Published

    on

    ಹೈದರಾಬಾದ್: ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳುತ್ತಿರುವಾಗ ಇಲ್ಲೊಬ್ಬ ಕಾಮುಕ ಬೀದಿ ನಾಯಿಯನ್ನೂ ಬಿಡದೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.

    ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ. 58 ವರ್ಷದ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ಹೇಯ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

    ಪರಿಣಾಮ ವೀಡಿಯೋ ನೋಡಿದ ಪ್ರಾಣಿ ಪ್ರೇಮಿಯೊಬ್ಬ ಆರೋಪಿ ವಿರುದ್ಧ ದೂರು ಕೊಟ್ಟಿದ್ದಾರೆ.

    ಈ ಘಟನೆ ಹೈದರಾಬಾದ್‍ನ ನಲ್ಲಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುದ್ದಿ ಬಹಿರಂಗವಾದಾಗಿನಿಂದ ನಲ್ಲಕುಂಟಾದಲ್ಲಿ ಸಂಚಲನ ಮೂಡಿದೆ.ಪೊಲೀಸರಿಗೆ ದೂರು ನೀಡಿದ ಪ್ರಾಣಿ ಪ್ರೇಮಿ, ಈ ರೀತಿಯ ವ್ಯಕ್ತಿಗಳು ಸಮಾಜದಲ್ಲಿ ಇದ್ರೆ, ಮಹಿಳೆಯರಿಗೂ ಸುರಕ್ಷಿತವಲ್ಲ.

    ಈ ರೀತಿ ಹೇಯ ಕೃತ್ಯ ಮಾಡುವವರು ಜೈಲಿನಲ್ಲಿರಬೇಕು. ಇಂಥವರು ಹೊರಗೆ ಉಳಿಯುವುದು ಅಪಾಯಕಾರಿ ಎಂದು ತಿಳಿಸಿದ್ದು, ಆರೋಪಿಯನ್ನ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ.ಆರೋಪಿ ತನ್ನ ಪತ್ನಿಯೊಂದಿಗೆ ನಲ್ಲಕುಂಟಾ ಸ್ಥಳದಲ್ಲಿಯೇ ವಾಸವಾಗಿದ್ದಾನೆ.

    ಆರೋಗ್ಯ ಸಮಸ್ಯೆಯಿದ್ದ ಹಿನ್ನೆಲೆ ಆತ ಮನೆಯಲ್ಲಿಯೇ ವಾಸಿಸುತ್ತಿದ್ದನು. ಆದರೆ ಆತನ ಪತ್ನಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆತ ಬೀದಿ ನಾಯಿಯೊಂದಿಗೆ ಅಸ್ವಾಭಾವಿಕ ಸಂಬಂಧ ಹೊಂದಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

     

    LATEST NEWS

    ಥೈಲ್ಯಾಂಡ್​ನಲ್ಲಿ ಶಾಲಾ ಬಸ್‌ಗೆ ಬೆಂಕಿ- 25 ವಿದ್ಯಾರ್ಥಿಗಳು ದುರ್ಮ*ರಣ

    Published

    on

    ಥೈಲ್ಯಾಂಡ್​: ಥೈಲ್ಯಾಂಡ್​ನಲ್ಲಿ​ 44 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್​ ಬೆಂಕಿಯಿಂದ ಹೊತ್ತಿ ಉರಿದ ಪರಿಣಾಮ 25 ವಿದ್ಯಾರ್ಥಿಗಳು ಸಾ*ವನ್ನಪ್ಪಿದ ಘಟನೆ ನಡೆದಿದೆ.

    ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಹೆಚ್ಚಿನ ವಿದ್ಯಾರ್ಥಿಗಳು ಸಾ*ವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಕಿಯ ಕಾರಣ ಇದುವರೆಗೆ ತಿಳಿದಿಲ್ಲ. ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಥೈಲ್ಯಾಂಡ್​ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ಲಾನ್ ಸಕ್ ಜಿಲ್ಲೆಯ ವಾಟ್ ಖಾವೊ ಪ್ರಾಯ ಸಂಘರಮ್‌ನಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸದಲ್ಲಿ ಆರು ಶಿಕ್ಷಕರು ಸಹ ಭಾಗವಹಿಸಿದ್ದರು. ಅವರ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

    ಗೃಹ ಸಚಿವ ಅನುತಿನ್ ಚರಣ್ವಿರಾಕುಲ್ ಅವರು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಸಾ*ವಿನ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾ*ವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ನಿಲ್ಲಿಸಿದ ಬಸ್ಸಿನ ಹೊರಗೆ ಕಪ್ಪು ಹೊಗೆಯು ಕಾಣಿಸಿಕೊಂಡಿತ್ತು, ಸದ್ಯ ವಿದ್ಯಾರ್ಥಿಗಳ ವಯಸ್ಸು ತಿಳಿದುಬಂದಿಲ್ಲ.

    Continue Reading

    LATEST NEWS

    ದೇಗುಲ ಆಗಿರಲಿ, ದರ್ಗಾ ಆಗಿರಲಿ ಅಕ್ರಮವಾಗಿ ಕಟ್ಟಿದ್ದರೆ ತೆರವು : ಸುಪ್ರೀಂ ಕೋರ್ಟ್

    Published

    on

    ಮಂಗಳೂರು/ನವದೆಹಲಿ : ಸಾರ್ವಜನಿಕ ಸುರಕ್ಷತೆಯು ಅತ್ಯುನ್ನತವಾಗಿದೆ. ರಸ್ತೆ, ಜಲಮೂಲಗಳು ಅಥವಾ ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ರಚನೆಯನ್ನು ಸುಮ್ಮನೆ ಬಿಡಬಾರದು ಕೆಡವಿ ಹಾಕಬೇಕು. ದೇಗುಲ ಆಗಿರಲಿ, ದರ್ಗಾ ಆದ್ರೂ ಅಷ್ಟೇ ಅಕ್ರಮವಾಗಿ ಕಟ್ಟಿದ್ದರೆ ತೆರವುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ಬಿ. ಆರ್. ಗವಾಯಿ ಹಾಗೂ ಜಸ್ಟೀಸ್ ವಿ. ಕೆ. ವಿಶ್ವನಾಥನ್ ಅವರನ್ನು ಒಳಗೊಂಡ ದ್ವಿ ಸದಸ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಪರಾಧ ಕೃ*ತ್ಯ ಎಸಗಿದ ಆರೋಪಿಗಳ ವಿರುದ್ಧ ಒತ್ತುವರಿ ತೆರವು ಕಾರ್ಯಾಚರಣೆ ನಡೆಸೋದನ್ನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ  ಈ ಆದೇಶ ಹೊರಡಿಸಿದೆ.

    ಬುಲ್ಡೋಜರ್ ಕಾರ್ಯಾಚರಣೆ ಮತ್ತು ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳಿಗೆ ಕೋರ್ಟ್ ನಿರ್ದೇಶನಗಳು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.  ನಮ್ಮ ಆದೇಶವು ಯಾವುದೇ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣದಾರರಿಗೆ ಸಹಾಯ ಮಾಡದಂತೆ ನೋಡಿಕೊಳ್ಳುವುದಾಗಿದೆ ಎಂದು ನ್ಯಾಯಪೀಠ ಹೇಳಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣಗಳ ಕುರಿತ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಲವಾರು ರಾಜ್ಯಗಳಲ್ಲಿ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಗಳ ನಮೂನೆಗಳ ಮೇಲಿನ ವಾದವನ್ನು ಸುಪ್ರೀಂ ಕೋರ್ಟ್ ಆಲಿಸುತ್ತಿದೆ.

    ಇದನ್ನೂ ಓದಿ: 56 ವರ್ಷಗಳ ಹಿಂದೆ ಪತನವಾಗಿದ್ದ ಯುದ್ಧ ವಿಮಾನ ಪತ್ತೆ

    ಸೆಪ್ಟೆಂಬರ್ 17 ರಂದು ಸುಪ್ರೀಂ ಕೋರ್ಟ್, ತನ್ನ ಅನುಮತಿಯಿಲ್ಲದೆ ಅಕ್ಟೋಬರ್ 1 ರವರೆಗೆ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಲಾಗುವುದಿಲ್ಲ ಎಂದು ಹೇಳಿತ್ತು. ಅಕ್ರಮ ನೆಲಸಮ ಮಾಡುವಿಕೆ ಸಂವಿಧಾನದ ತತ್ವಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

     

    Continue Reading

    LATEST NEWS

    56 ವರ್ಷಗಳ ಹಿಂದೆ ಪತನವಾಗಿದ್ದ ಯುದ್ಧ ವಿಮಾನ ಪತ್ತೆ

    Published

    on

    ಮಂಗಳೂರು/ ಹಿಮಾಚಲ ಪ್ರದೇಶ : 56 ವರ್ಷಗಳ ಹಿಂದೆ ಪತನಗೊಂಡ ಭಾರತೀಯ ವಾಯುಪಡೆಯ ವಿಮಾನದ ಅವಶೇಷಗಳೆಡೆಯಿಂದ ಮೂವರ ಮೃ*ತದೇಹಗಳು ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯ ಹಿಮಾವೃತ ಪ್ರದೇಶದಲ್ಲಿ ಇದೀಗ ಪತ್ತೆಯಾಗಿದೆ. ಮೃ*ತದೇಹದ ಅಳಿದುಳಿದ ಅವಶೇಷಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲು ಸಿದ್ಧತೆಗಳು ನಡೆದಿವೆ.

    1968 ರಂದು ನಡೆದಿದ್ದ ಅವಘ*ಡ:

    ಪತ್ತೆಯಾಗಿರುವ ಮೃತ ದೇಹಗಳನ್ನು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂಥೂರ್ ಮೂಲದ ಯೋಧ ಥಾಮಸ್ ಚೆರಿಯನ್ , ಉತ್ತರಾಖಂಡ್‌ನ ಗರ್ವಾಲ್‌ನ ಚಮೋಲಿ ತೆಹಸಿಲ್‌ನ ಕೋಲ್ಪಾಡಿ ಗ್ರಾಮದ ಮಲ್ಖಾನ್ ಸಿಂಗ್ ಮತ್ತು ಸಿಪಾಯಿ ನಾರಾಯಣ್ ಸಿಂಗ್ ಅವರದ್ದೆಂದು ಗುರುತಿಸಲಾಗಿದೆ.

    1968 ರ ಫೆಬ್ರವರಿ 7 ರಂದು 102 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಅವಳಿ-ಎಂಜಿನ್ ಟರ್ಬೊಪ್ರಾಪ್ ಹೊಂದಿದ್ದ ಎಎನ್-12 ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದಾಗ ಹಿಮಾಚಲ ಪ್ರದೇಶದ ರೋಹ್ಟಾಂಗ್ ಕಣಿವೆಯಲ್ಲಿ ಪತನಗೊಂಡು ನಾಪತ್ತೆಯಾಗಿತ್ತು.

    2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ ಪರ್ವತಾರೋಹಿಗಳು ಮೊದಲ ಬಾರಿಗೆ ಈ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಆ ಬಳಿಕ ಕಳೆದ ಹಲವು ವರ್ಷಗಳಿಂದ  ಭಾರತೀಯ ಸೇನೆಯು ವಿಶೇಷವಾಗಿ ಡೋಗ್ರಾ ಸ್ಕೌಟ್ಸ್‌ 2005, 2006, 2013, ಮತ್ತು 2019 ರಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

    ಇದನ್ನೂ ಓದಿ : ಸ್ವರ್ಗವಾಸಿಗಳಿಗೆ ನರಕ ತೋರಿಸಿ ಆರಂಭದಲ್ಲೇ ನಾಮಿನೇಟ್ ಆದ ಚೈತ್ರಾ

    ಆದರೆ, ದುರಂ*ತದ ಸ್ಥಳವು ಅಪಾಯಕಾರಿ ಆಗಿದ್ದರಿಂದ ಶೋಧ ಕಾರ್ಯಕ್ಕೆ ಹಿನ್ನೆಡೆಯಾಗಿದ್ದು, 2019 ರ ವೇಳೆಗೆ ಕೇವಲ ಐದು ಮೃ*ತದೇಹಗಳನ್ನು ಮಾತ್ರ ಪತ್ತೆ ಮಾಡಲು ಸಾಧ್ಯವಾಗಿತ್ತು. ಇದೀಗ ನಿನ್ನೆ(ಸೆ.30) ಡೋಗ್ರಾ ಸ್ಕೌಟ್ಸ್‌ ಮತ್ತು ತಿರಂಗಾ ಮೌಂಟೇನ್ ತಂಡಗಳು ಮತ್ತೆ ಮೂವರ ಮೃ*ತದೇಹಗಳನ್ನು ಪತ್ತೆ ಮಾಡಿದೆ.

    Continue Reading

    LATEST NEWS

    Trending