Friday, July 1, 2022

ಆಂಧ್ರಪ್ರದೇಶ: ಬರೋಬ್ಬರಿ 2 ಲಕ್ಷ ಕೆ.ಜಿ ಗಾಂಜಾ ನಾಶ ಪಡಿಸಿದ ಪೊಲೀಸರು

ವಿಶಾಖಪಟ್ಟಣಂ: ಕಳೆದೆರಡು ವರ್ಷಗಳಲ್ಲಿ ಆಂಧ್ರಪ್ರದೇಶದ ಪೊಲೀಸರು ವಶಪಡಿಸಿಕೊಂಡಿದ್ದ ಬರೋಬರಿ 2 ಲಕ್ಷ ಕೆ.ಜಿಯ ಗಾಂಜಾವನ್ನು ನಾಶಪಡಿಸಿದ್ದಾರೆ.

ಸದ್ಯ ಅದರ ವಿಡಿಯೋವನ್ನು ಆಂಧ್ರಪ್ರದೇಶ್‌ ಪೊಲೀಸ್‌ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಆಂಧ್ರ ಪೊಲೀಸರ ‘ಪರಿವರ್ತನ್’ ಕಾರ್ಯಾಚರಣೆಯ ಭಾಗವಾಗಿ 406 ವಿಶೇಷ ಪೊಲೀಸ್ ತಂಡಗಳು 11 ಮಂಡಲಗಳ 313 ಗ್ರಾಮಗಳಲ್ಲಿ ಗಾಂಜಾ ತೋಟಗಳನ್ನು ನಾಶಪಡಿಸಿದವು.

ಆಂಧ್ರ-ಒಡಿಶಾ ಗಡಿಯಲ್ಲಿ ವಿವಿಧ ರಾಜ್ಯಗಳ ಹಲವಾರು ಗುಂಪುಗಳು ಗಾಂಜಾ ಕೃಷಿ ಮತ್ತು ಮಾದಕ ದ್ರವ್ಯದ ಅಕ್ರಮ ಸಾಗಣೆಯಲ್ಲಿ ತೊಡಗಿವೆ. ಗಾಂಜಾ ಗಿಡ ಬೆಳೆಸಿದ್ದಕ್ಕಾಗಿ 1,500 ಜನರನ್ನು ಬಂಧಿಸಲಾಗಿದೆ ಮತ್ತು 577 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಅವರು ಹೇಳಿದರು.

ಜೊತೆಗೆ ಗಾಂಜಾ ಸಾಗಾಟದಲ್ಲಿ ತೊಡಗಿದ್ದ 314 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮೂಡುಬಿದಿರೆ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ ಸಭಾಭವನ ನಿರ್ಮಾಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಶಿಲಾನ್ಯಾಸ ನೆರವೇರಿಸಿದರು.ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ಪತ್ರಕರ್ತರ ಸಂಘದ ಶ್ರೀನಿವಾಸ್ ನಾಯಕ್,...

ಉಳ್ಳಾಲ: ಮಳೆ ನೀರು ಬ್ಲಾಕ್‌ ಆಗಿದ್ದನ್ನು ತೆಗೆಯಲು ಹೋಗಿದ್ದ ವ್ಯಕ್ತಿ ಟೆರೇಸ್‌ನಿಂದ ಜಾರಿ ಬಿದ್ದು ಕೊನೆಯುಸಿರು

ಉಳ್ಳಾಲ: ಮನೆಯ ಟೆರೇಸ್‌ನಲ್ಲಿ ಮಳೆ ನೀರು ಬ್ಲಾಕ್‌ ಆಗಿದನ್ನು ತೆಗೆಯಲು ಹೋಗಿ‌ ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಣಾಜೆ‌ ಠಾಣಾ ವ್ಯಾಪ್ತಿಯ ದಾಸರಮೂಲೆ ಎಂಬಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು...

ಬಲ್ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯ ನೀಡದಿದ್ದರೆ ಉಗ್ರ ಹೋರಾಟ

ಮಂಗಳೂರು: ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಸರಕಾರಿ ಹಿರಿಯ ಪ್ರಾಥಮಿಕ (ಟಿಟಿಐ) ಶಾಲೆಯಲ್ಲಿ ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿನ ವಿದ್ಯಾರ್ಥಿಗಳು ದಿನನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.ಈ ಶಾಲೆಯಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಏಳನೇ...