Connect with us

DAKSHINA KANNADA

ರಾಜ್ಯ BJP ಉಪಾಧ್ಯಕ್ಷ ವಿಜಯೇಂದ್ರ ಹುಟ್ಟುಹಬ್ಬ-ಕಾರ್ಯಕರ್ತರಿಂದ ಕದ್ರಿ ದೇಗುಲದಲ್ಲಿ ವಿಶೇಷ ಪೂಜೆ

Published

on

ಮಂಗಳೂರು: ಯುವ ನಾಯಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ, ಅಲೆಮಾರಿ-ಅರೆ ಅಲೆಮಾರಿ ಅಭಿವೃದ್ದಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ ರವೀಂದ್ರ ಶೆಟ್ಡಿ ಉಳಿದೊಟ್ಟು ಇವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ದೇವರಿಗೆ ಪೂಜೆ ಸಲ್ಲಿಸಿದರು.


ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸುಪುತ್ರ ವಿಜಯೇಂದ್ರ ರಾಜಕೀಯದಲ್ಲಿ ಹಂತಹಂತವಾಗಿ ಬೆಳೆದು ಪಕ್ಷದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ.


ಅವರ ಮುಂದಿನ ಜೀವನ ಸುಖಕರವಾಗಲಿ, ರಾಜಕೀಯದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೆ ಅವರು ಏರಲಿ ಎಂದು ರವೀಂದ್ರ ಶೆಟ್ಟಿ ವಿಜಯೇಂದ್ರರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಮಾತನಾಡಿದರು.
ಬಹು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

Baindooru

ಪತಿ ಪತ್ನಿ ನಡುವೆ ವಿರಸ..! ರಸ್ತೆಯಲ್ಲಿ ಇಬ್ಬರ ಕಿತ್ತಾಟ..! ಮಧ್ಯೆ ಬಂದ ಯುವಕನ ಮೇಲೆ ಬಿತ್ತು ಕೇಸ್

Published

on

ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪತ್ನಿ ಹಾಗೂ ಪತ್ನಿಯ ತಾಯಿ ಪತಿ ಹಾಗೂ ಆತನ ಬಾವ ಹಲ್ಲೆ ನಡೆಸುವಾಗ ಯವಕ ನಮಗೆ ರಕ್ಷಣೆ ನೀಡಿದ್ದಾನೆ ಎಂದಿದ್ದಾರೆ.

sirajuddin

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿಯಾಗಿರುವ ಸುರೇಶ್ ಭಟ್‌ ಎಂಬವರು ತನ್ನ ಪತ್ನಿಯನ್ನು ದಾರಿ ಮಧ್ಯೆ ನಿಲ್ಲಿಸಿ ಮಾತನಾಡುವಾಗ ಪತ್ನಿಯ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯಕೋಮಿನ ಯುವಕ ತನಗೆ ಹಲ್ಲೆ ನಡೆಸಿರುವುದಾಗಿ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾನೋ ಕಾರಿನಲ್ಲಿ ಅನ್ಯ ಕೋಮಿನ ಯುವಕನ ಜೊತೆ ಬರುತ್ತಿರುವುದು ನೋಡಿ ತಾನು ಕಾರು ನಿಲ್ಲಿಸಿ ವಿಚಾರಿಸಿದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಸುರೇಶ್ ಭಟ್‌ ಅವರ ದೂರನ್ನು ಅಲ್ಲಗಳೆದಿರುವ ಪತ್ನಿ ಪ್ರತಿಮಾ ಹಾಗೂ ಅತ್ತೆ ಶಿವಕುಮಾರಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರು ನೀಡಿರುವ ಶಿವಕುಮಾರಿ ತನ್ನ ಮಗಳು ಪ್ರತಿಮಾ ಹಾಗೂ ಪತಿ ಸುರೇಶ್ ಭಟ್‌ ಅವರಿಗೆ ಹಲವು ತಿಂಗಳಿನಿಂದ ಭಿನ್ನಾಬಿಪ್ರಾಯ ಇದ್ದು ಹೀಗಾಗಿ ಮಾನ ಹರಾಜು ಹಾಕಲು ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ. ಸಿರಾಜುದ್ದೀನ್ ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಆಗಿದ್ದು, ಕೆಲವೊಮ್ಮೆ ತಮ್ಮ ಕಾರಿಗೂ ಡ್ರೈವರ್ ಆಗಿ ಬರುತ್ತಾನೆ. ನನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಹೋಗಲು ತಾನೇ ಸಿರಾಜುದ್ದಿನ್ ಗೆ ಕರೆ ಮಾಡಿದ್ದೆ. ಹೀಗೇ ನನ್ನ ಮಗ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಅವರ ಮೇಲೆ ಸುರೇಶ್ ಭಟ್ ಹಾಗೂ ಆತನ ಭಾವ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಸಿರಾಜುದ್ದೀನ್ ರಕ್ಷಣೆ ನೀಡಿದ್ದಾರೆ. ಆದರೆ ಇದಕ್ಕೆ ಬೇರೆ ಕಥೆ ಕಟ್ಟಿ ಈ ರೀತಿ ಸುಳ್ಳು ದೂರು ನೀಡಲಾಗಿದೆ ಎಂದು ಶಿವಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಹಲ್ಲೆಗೆ ಒಳಗಾದ ಸುರೇಶ್ ಭಟ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸುಳ್ಳು ದೂರು ಎಂದು ಸುರೇಶ್ ಭಟ್‌ ಅವರ ಅತ್ತೆ ಪ್ರತಿ ದೂರನ್ನು ಅದೇ ಠಾಣೆಗೆ ನೀಡಿದ್ದಾರೆ . ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

40ರೂ.ಎಳನೀರು ಕುಡಿದು 137 ಮಂದಿ ಅಸ್ವ*ಸ್ಥ.. ಬೊಂಡ ಫ್ಯಾಕ್ಟರಿಗೆ ತಾತ್ಕಾಲಿಕ ನಿಷೇಧ..!!

Published

on

ಮಂಗಳೂರು: ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ಸುಮಾರು 137 ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರು ಬೊಂಡ ಫ್ಯಾಕ್ಟರಿಗೆ ಬೀಗ ಹಾಕಿದ್ದಾರೆ.

bonda factory

ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಎ.8ರಂದು ಬೊಂಡ ನೀರು ಖರೀದಿಸಿ ಮನೆಗೆ ಕೊಂಡು ಹೋಗಿದ್ದರು ಎನ್ನಲಾಗಿದೆ. ಬೊಂಡ ನೀರು ಸೇವಿಸಿದ 137 ಮಂದಿ ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಅಸ್ವಸ್ಥಗೊಂಡವರು ಫಾದರ್ ಮುಲ್ಲರ್ ಆಸ್ಪತ್ರೆ, ಬಿ.ಸಿ.ರೋಡ್ ಪರ್ಲಿಯ ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆ, ಮಂಗಳೂರು ನಗರದ ಹೈಲ್ಯಾಂಡ್, ಯುನಿಟಿ, ಕನಚೂರ್, ಯನಪೋಯ, ಇಂಡಿಯಾನ, ಕೊಲಾಸೊ ಹಾಗೆಯೇ ಇನ್ನಿತರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರನ್ನು ಆರೋಗ್ಯ ಅಧಿಕಾರಿಗಳ ತಂಡ ಭೇಟಿಯಾಗಿ ಅವರಿಂದ ಮಾಹಿತಿ ಪಡೆದಿದ್ದಾರೆ.

ಬೊಂಡ ಫ್ಯಾಕ್ಟರಿ ಬಂದ್:

ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಒಳಗೊಂಡ ತಂಡ ಗುರುವಾರ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮತ್ತು ಮತ್ತು ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಿಳುವಳಿಕೆ ನೋಟೀಸ್ ನೀಡಿ ಬಂದ್ ಮಾಡಿಸಿದ್ದಾರೆ.

Continue Reading

DAKSHINA KANNADA

ಬತ್ತೇರಿ ಹೆಸರು ‘ಗಣಪತಿ ವೆಟ್ಟಂ’… ಟೀಕೆಗೆ ಗುರಿಯಾದ ಸುರೇಂದ್ರನ್ ಹೇಳಿಕೆ.

Published

on

ಮಂಗಳೂರು ( ವಯನಾಡು ) : ದೇವರ ನಾಡು ಎಂದೇ ಬಿಂಬಿತವಾಗಿರುವ ಕೇರಳದಲ್ಲಿ ಬಿಜೆಪಿ ತನ್ನ ಕಮಲ ಅರಳಿಸಲು ಸರ್ವ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ, ಈ ಗುರಿಯನ್ನು ಸಾಧಿಸುವುದು ಬಿಜೆಪಿಗೆ ಸವಾಲಿನಂತಿದೆ. ಆದರೆ, ಕೇರಳದಲ್ಲಿ ಪಕ್ಷವು ಧಾರ್ಮಿಕ ನೆಲೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದು, ಈಗ ಎಲ್ಲಾ ಪಕ್ಷಗಳ ಟೀಕೆಗೆ ಗುರಿಯಾಗಿದೆ.

ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ನೀಡಿರುವ ಹೇಳಿಕೆ ಕೇರಳದಲ್ಲಿ ವಿವಾದ ಹುಟ್ಟು ಹಾಕಿದೆ. ವಯನಾಡಿನ ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸಲು ಸೂಚಿಸಿದ್ದಕ್ಕಾಗಿ ಸುರೇಂದ್ರನ್ ಎಲ್ಲಾ ರಾಜಕೀಯ ಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನರೇಂದ್ರ ಮೋದಿಯವರ ಮೂಲಕ ಒತ್ತಡ ಹಾಕಿಸಿ ಬತ್ತೇರಿ ಹೆಸರು ಬದಲಾಯಿಸುವುದಾಗಿ ಹೇಳಿದ್ದಾರೆ.

                ಕೇರಳ ಬಿಜೆಪಿ ರಾಜ್ಯಾಧ್ಯಕ್ಷ. ವಯನಾಡು ಲೋಕಸಭಾ ಅಭ್ಯರ್ಥಿ

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸುರೇಂದ್ರನ್, ಸುಲ್ತಾನ್ ಬತ್ತೇರಿಯ ನಿಜವಾದ ಹೆಸರು  ‘ಗಣಪತಿ ವೆಟ್ಟಂ’ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಅವರು ಅದೇ ಹೆಸರಿನಿಂದ ಕರೆಯುತ್ತಿರುವುದಾಗಿ ಹೇಳಿದ್ದು, ಮೋದಿಯವರ ನೆರವಿನೊಂದಿಗೆ ಗಣಪತಿ ವಟ್ಟಂ ಎಂದು ಮರುನಾಮಕರಣ ಮಾಡಿಸುವುದಾಗಿ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಲೀಗ್ ಶಾಸಕ ಪಿ.ಕೆ.ಕುಂಞಲಿ ಕುಟ್ಟಿ ಸುರೇಂದ್ರ ಹೇಳಿಕೆಗೆ ತೆಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸುರೇಂದ್ರನ್ ಗೆಲ್ಲುವ ಅಭ್ಯರ್ಥಿ ಅಲ್ಲ… ಹಾಗೊಂದು ವೇಳೆ ಗೆದ್ದರೂ ಬತ್ತೇರಿ ಹೆಸರು ಬದಲಾಯಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.

                          ಸುಲ್ತಾನ್ ಬತ್ತೇರಿಯಲ್ಲಿನ ಜೈನ ಮಂದಿರ

ಹೆಸರು ಬದಲಾವಣೆ ವಿಚಾರ ಬಿಜೆಪಿಯ ಕೋಮುವಾದಿ ಅಜೆಂಡಾ ಆಗಿದೆ. ವನ್ಯ ಜೀವಿ ಕಾನೂನಗಳಲ್ಲಿನ ಸಮಸ್ಯೆಯಿಂದ ಹೊರತಾಗಿ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗಿದೆ ಎಂದು ಸಿಪಿಎಂ ಹೇಳಿದೆ. ಇದು ಕೇರಳ ಎಂಬುದು ಎಲ್ಲರಿಗೂ ಗೊತ್ತಿದೆ, ಇಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಸಾದ್ಯವಿಲ್ಲ ಎಂದು ಹೇಳಿದೆ. ಆದ್ರೆ ಕೇರಳದಲ್ಲಿ ಅಸ್ಥಿತ್ವ ಹಿಡಿಯಲು ಬಿಜೆಪಿ ಇಂತಹ ಧರ್ಮ ಧ್ವೇಶದ ಹೇಳಿಕೆ ನೀಡುತ್ತಿದೆ ಎಂದು ಸಿಪಿಎಂ ಸೇರಿದಂತೆ ಹಲವು ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

Continue Reading

LATEST NEWS

Trending