Connect with us

DAKSHINA KANNADA

‘ಭೂತಾರಾಧನೆಯಲ್ಲಿ ದೈವ ಮೈಯಲ್ಲಿ ಬರೋದು ಶುದ್ಧ ಸುಳ್ಳು’-ರಿಷಬ್‌ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಬಿ.ಟಿ ಲಲಿತಾ ನಾಯ್ಕ್

Published

on

ಹುಬ್ಬಳ್ಳಿ: ಭೂತಾರಾಧನೆ ಸಂದರ್ಭದಲ್ಲಿ ಅವರ ಮೈಯಲ್ಲಿ ದೈವ ಬರೋದು ಶುದ್ಧ ಸುಳ್ಳು. ಹಾಗಿರುವಾಗ ದೈವನರ್ತಕರಿಗೆ ಇತ್ತೀಚೆಗೆ ಸರ್ಕಾರ ಎರಡು ಸಾವಿರ ರೂಪಾಯಿ ಮಾಸಾಶನ ಘೋಷಣೆ ಮಾಡಿರುವುದು ತಪ್ಪು ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಖಾಸಗಿ ವಾಹಿನಿಯೊಂದರಲ್ಲಿ ಈ ಬಗ್ಗೆ ಮಾತನಾಡಿದ ಇವರು ‘ರಿಷಬ್ ಶೆಟ್ಟಿ ಒಬ್ಬ ವಿಚಾರವಾದಿ. ಆತನ ವಿಚಾರಗಳನ್ನು ನೇರವಾಗಿ ಹೇಳಿದರೆ ಆತನಿಗೆ ಹೊಡೆತ ಬೀಳುವುದು ಖಂಡಿತ. ಸತ್ಯವನ್ನು ನೇರವಾಗಿ ಹೇಳಿದ್ರೆ ಜನ ಆತನನ್ನು ಕೊಂದೇ ಹಾಕುತ್ತಾರೆ.

ಅದು ಆತನಿಗೆ ಬೇಕಿಲ್ಲ. ಅವನು ಇನ್ನೂ ಸ್ವಲ್ಪ ವರ್ಷ ಬದುಕಬೇಕೆಂದು ‘ಕಾಂತಾರ’ ಚಿತ್ರ ಮಾಡಿದ್ದಾನೆ. ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು’ ಎಂದು ಕಟುವಾಗಿ ವ್ಯಂಗ್ಯವಾಡಿದ್ದಾರೆ.

11 Comments

11 Comments

  1. John

    06/11/2022 at 8:21 AM

    Nimmanthavarighe bere kelasa yeella mosarinalli kallu hudukuvude kelasa nalayak Rajakiya avara sampradaya avarighe adannu kenakalu hodare nimaghe hakutthare hodetha

  2. Suresh

    06/11/2022 at 8:32 AM

    ಹಿಂದೂ ಧರ್ಮದ ಜನರಿಗೆ ಬೇರೆ ಧರ್ಮದ ಜನರ ಉಪದೇಶ ಬೇಡ. ಅವರ ದೇವರನ್ನು ನಂಬಿ ಪೂಜೆ ಮಾಡಲಿ. ಅವರ ನಂಬಿಕೆ ಯಾರೂ ಆಕ್ಷೇಪಣೆ ಮಾಡಿಲ್ಲ. ಹಾಗೆ ನೋಡಿದರೆ ನಂಬಿಕೆಯೇ ದೇವರು. ಅದೇ ನಮ್ಮನ್ನು ಪ್ರತಿ ಸಲ ಕಷ್ಟ ಬಂದಾಗ ನಮಗೆ ಎದುರಿಸಲು ಧೈರ್ಯ ಕೊಡುವುದು.

  3. Umesh

    06/11/2022 at 9:41 AM

    ಪಾಪ ಅವರಿಗೆ ದೈವದ ಬಗ್ಗೆ ನಂಬಿಕೆ ಇಲ್ಲ ಅನ್ಸುತ್ತೆ. ಹಾಗಾಗಿ ಅವರ ಮಾತಿಗೆ ಕಿಂಚಿತ್ತೂ ಬೆಲೆ ಯಾರೂ ಕೊಡಲ್ಲ ಅಂತ ಗೊತ್ತಿದ್ದೂ ಸುಮ್ನೆ ಪ್ರಚಾರಕ್ಕಾಗಿ ನಟ ಚೇತನ್ ತರಹ ಮಾತಾಡ್ತಾರೆ. ಪಾಪ ಇವರಿಬ್ಬರಿಗೂ ಚಿಕಿತ್ಸೆ ಅವಶ್ಯಕ ಇದೆ. ಸರ್ಕಾರದ ಖರ್ಚಿನಲ್ಲಿ ಕೊಡಿಸಬಹುದು ಚಿಕಿತ್ಸೆ.

  4. Haridas bhat k

    06/11/2022 at 10:22 AM

    If any one want to explanation on our belief Daiva aradhane.. our culture,
    Please let them come to *Dharmastala*
    temple & see how systematically done there. Or let them meet our beloved
    Dharmadhikari .
    Our Dharmadhikari, had a great good opinion on ‘kantara’ + all over the world people happily belied this..
    My personal opinion is that. This ‘katara’ story is not a story.. This is our real life’s day today life story ..not only present & 1000′ years real life story..
    We are (ದಕ್ಷಿಣ ಕನ್ನಡದ ಜನರು) not bothered who ever & whatever ನೆಗೆಟಿವ್ words.
    by the same time our “Panchurli” take care of them. Dhanyavadagalu.
    Haridas Bhat karinja..from udupi.
    9382737373

  5. Uthaiah

    06/11/2022 at 10:32 AM

    ಈ ತರಹದ ಹುಚ್ಚು ನಾಯಿಗಳು ನಮ್ಮ ದೇಶದಲ್ಲಿ ಬೇಕಾದಷ್ಟು ಇದೆ.ಒಬ್ಬ ಕನ್ನಡದ ಹುಡುಗ ಪ್ರಪಂಚದಲ್ಲೆ ಹೆಸರು ಮಾಡಿದಾಗ ಕುಷಿ ಪಡಬೇಕು ಹೊರತು ಈ ತರಹದ ಹೇಳಿಕೆ ನೀಡುವುದು ಈ ಪಿಶಾಚಿಗೆ ಶೋಭೆ ತರುವುದಿಲ್ಲ. ನಮ್ಮ ದೇಶ ಮತ್ತು ಸಂಸ್ಕೃತಿ ಹಾಳುಗೂದ್ ಈ ತರಹದ ದೇಶ ದ್ರೋಹಿಗಳಿಂದಲೆ..ಇಂಥವರು ಬಡುಕಿರಬಾರದು..wish you all the best Rishab Shetty God bless you..

  6. Haridas Bhat Karinja from udupi

    06/11/2022 at 10:34 AM

    Due to this *kantara*
    Now our realtor life belief spred all over the world. navoo ದಕ್ಷಿಣ ಕನ್ನಡದ ಎಲ್ಲಾ ಜನರು
    ಕಾoತರ ಟೀಮ್ ಗೆ ಹಾಗೂ ವೃಷಭ ಶೆಟ್ಯವರೆಗೆ ege
    ತುಂಬಾ ಧನ್ಯವಾದ ತಿಳಿಸುತ್ತೇವೆ
    ನಮ್ಮ ಎಲ್ಲಾ ದೈವ ಗಳ ಅನುಗ್ರಹ ಅವರೀ ಗೆ ಇದೆ .
    ಅವರ ‘ಕಾಂತರಾ’ 2
    ಎದುರು ನೋಡುತ್ತಿದ್ದಾರೆ .
    ಬೆದರಿಕೆ, ಬೇಡವಾದ ಮಾತು…ನಾವು ನಂಬಿದ
    ದೈವ..ಎಲ್ಲರಿಗೂ ಉತ್ತರ ಕೊಡುತ್ತಾರೆ .ಇದು ನಮ್ಮ ಎಚ್ಚರಿಕೆ.
    ಧನ್ಯವಾದಗಳು. ಹರಿದಾಸ ಭಟ್ ಕೆ. ಉಡುಪಿ

  7. P N Nagendra, Sirsi

    06/11/2022 at 11:11 AM

    Achara vichar hale talemarugalinda nadedukondu bandiruva sapradaya, ishta iddavaru swikarisali, illadiddavaru bidali yarigu vattayavilla

  8. Naresh uppi

    06/11/2022 at 11:35 AM

    ಹಾಸ್ಯಾಸ್ಪದ ಹೇಳಿಕೆ

  9. Ashwitha

    06/11/2022 at 11:59 AM

    This women is completely mad…you are shortly going to receive your bad days.. Count down start

  10. Purandar

    06/11/2022 at 12:20 PM

    Mental lady

  11. Purandar

    06/11/2022 at 12:24 PM

    Mental lady .bere yenu kitthakakke kelasa ella .chethan teem erbeku. Ninge yake daxina kannadada vishya .sayo kaladalli olle. Kelasa madi sayi…….

Leave a Reply

Your email address will not be published. Required fields are marked *

DAKSHINA KANNADA

ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ಕೊಂಡುಯ್ಯುತ್ತೀರಾ? ಹಾಗಿದ್ರೆ ಇದನ್ನು ಗಮನಿಸಿ

Published

on

ಮಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಎ.26ರಂದು ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಯ ಸಂದರ್ಭ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವ ಮೊದಲು ಯೋಚಿಸಿ. ಏಕೆಂದರೆ, ಬೂತ್‌ಗಳ ಆವರಣದಲ್ಲಿ ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್‌ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

mobile not allowed

ಈ ಹಿಂದೆ ಮತಗಟ್ಟೆಗೆ ಮೊಬೈಲ್ ಕೊಂಡೊಯ್ದು ಫೊಟೊ ಹಾಗೂ ವೀಡಿಯೋಗಳನ್ನು ಮಾಡಿದ್ದ ಘಟನೆ ನಡೆದಿತ್ತು. ಹಾಗಾಗಿ ಈ ಬಾರಿ ಮೊಬೈಲ್ ಫೋನ್ ಗಳನ್ನು ಮತಗಟ್ಟೆಯ ಒಳಗಡೆ ಪ್ರವೇಶಿಸುವ ಮೊದಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇಯಲ್ಲಿ ಇಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದೆ ಓದಿ..; ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

ಮತದಾನ ಮಾಡುವಾಗ ಫೋನ್‌ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್‌ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

BELTHANGADY

ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

Published

on

ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್‌ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.

chitha

ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?

ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

LATEST NEWS

Trending