Connect with us

LATEST NEWS

ಫೇಲ್ ಆದ್ರೆ ಮದುವೆ ಮಾಡಿಸ್ತಾರೆ…! ಉತ್ತರ ಪತ್ರಿಕೆಯಲ್ಲಿ ಬಾಲಕಿಯ ಅಳಲು…

Published

on

ವಿದ್ಯಾರ್ಥಿಗಳು ಪರೀಕ್ಷೆ ಪತ್ರಿಕೆಯಲ್ಲಿ ನಾನಾ ಬಗೆಯ ಉತ್ತರಗಳನ್ನು ಬರೆಯೋದು ಸಹಜ. ಪ್ರಶ್ನೆ ಒಂದು ಕೊಟ್ಟಿದ್ದರೆ, ಉತ್ತರ ಇನ್ನೇನೋ ಇರುತ್ತದೆ. ದೇವರ ನಾಮ ಜಪವೂ ಇರುತ್ತದೆ. ಇನ್ನೂ ಕೆಲವೊಮ್ಮೆ ವಿದ್ಯಾರ್ಥಿಗಳು ಮುಂದುವರೆದು, ನನ್ನನ್ನು ಪಾಸು ಮಾಡಿ ಎಂದು ಅಂಗಾಲಾಚಿಯೂ ಇರುತ್ತಾರೆ. ಕಳೆದ ಬಾರಿ ಒಮ್ಮೆ ವಿದ್ಯಾರ್ಥಿ ದುಡ್ಡು ಇಟ್ಟ ವಿಚಾರವೂ ವೈರಲ್ ಆಗಿತ್ತು.

ಪಾಸು ಮಾಡಿ ಇಲ್ಲವಾದಲ್ಲಿ ಸಾಯುತ್ತೇನೆ, ಪಾಸು ಮಾಡಿ ನಿಮಗೆ ಒಳ್ಳೆಯದಾಗುತ್ತದೆ ಎಂದು ವಿದ್ಯಾರ್ಥಿಗಳು ಬರೆಯುತ್ತಿರುತ್ತಾರೆ. ಆದರೆ, ಈ ಬಾರಿ ಭಿನ್ನವಾದ ಉತ್ತರ ಪತ್ರಿಕೆಯೊಂದು ಬಂದಿದೆ. ಇದರಲ್ಲಿ ವಿದ್ಯಾರ್ಥಿನಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಮದುವೆ ಮಾಡಿಸ್ತಾರೆ…!

10 ನೇ ತರಗತಿ ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಪಾಲಿಗೆ ಯುದ್ಧವೇ ಸರಿ…ಪೋಷಕರಿಗೂ ದೊಡ್ಡ ಚಿಂತೆ. ಹೀಗಾಗಿ ವಿದ್ಯಾರ್ಥಿಗಳು ಬಹಳ ತಲೆಕೆಡಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಪಾಸಾಗಬೇಕು ಎಂಬ ನಿಟ್ಟಿನಲ್ಲಿ ಮನೆಯವರು ಸೈಕಲ್ ಕೊಡಿಸುವುದಾಗಿಯೋ, ಚಿನ್ನ ಕೊಡಿಸುವುದಾಗಿಯೋ ಭರವಸೆ ನೀಡಿ ಓದುವಂತೆ ಉತ್ತೇಜಿಸುವುದನ್ನು ಕಾಣಬಹುದು.
ಫೇಸ್ ಆದ್ರೆ ಏನೂ ಕೊಡಿಸಲ್ಲ. ಕೆಲಸಕ್ಕೆ ಹೋಗಬೇಕು ಹೀಗೆ ಬಯ್ಯುತ್ತಾರೆ. ಆದರೆ, ಇಲ್ಲಿ ಮಾತ್ರ ಭಿನ್ನ. ವಿದ್ಯಾರ್ಥಿನಿಯೊಬ್ಬಳು ಉತ್ತರ ಪತ್ರಿಕೆಯಲ್ಲಿ ಬರೆದ ವಿಚಾರ ಸದ್ಯ ವೈರಲ್ ಆಗುತ್ತಿದೆ. ಫೇಲ್ ಆದ್ರೆ ಮದುವೆ ಮಾಡಿಸುತ್ತಾರೆ ಎಂದು ಬರೆದಿದ್ದಾಳೆ.

ಬರೆದಿರುವುದೇನು?

ಮಧ್ಯಪ್ರದೇಶದ 10ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಉತ್ತರ ಪತ್ರಿಕೆಯಲ್ಲಿ ಬರೆದಿರುವ ವಿಚಾರ ಸದ್ಯ ವೈರಲ್ ಆಗುತ್ತಿದೆ. ”ನನ್ನನ್ನು ಹೇಗಾದರೂ ಮಾಡಿ ತೇರ್ಗಡೆ ಮಾಡಿ. ಇಂಗ್ಲಿಷ್‌ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ತಂದೆ ನನಗೆ ಮದುವೆ ಮಾಡಿಸಿಬಿಡುತ್ತಾರೆ. ನನಗೆ ಈಗಲೇ ಮದುವೆಯಾಗುವುದಕ್ಕೆ ಇಷ್ಟವಿಲ್ಲ. ಮದುವೆ ತಪ್ಪಿಸಲು ಹೇಗಾದರೂ ಮಾಡಿ ಪಾಸು ಮಾಡಿ” ಎಂದು ಮನವಿ ಮಾಡಿಕೊಂಡಿದ್ದಾಳೆ.

ಅರಾ ಮಾಡೆಲ್‌ ಸ್ಕೂಲ್‌ನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಈ ಉತ್ತರ ಪತ್ರಿಕೆ ಕಂಡು ಅಚ್ಚರಿಯಾಗಿದೆ. ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ ಮದುವೆ ಮಾಡಿಸುವುದಾಗಿ ಪೋಷಕರು ಬೆದರಿಸಿದ್ದಾರೆ. ಇದರಿಂದ ತನ್ನ ಓದು ನಿಂತು ಹೋಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾಳೆ.

‘ನನ್ನ ತಂದೆ ಒಬ್ಬ ರೈತ. ನನ್ನನ್ನು ಓದಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಹಾಗಾಗಿ, ನನ್ನ ಪೋಷಕರಿಗೆ ನನ್ನನ್ನು ಓದಿಸಲು ಇಷ್ಟವಿಲ್ಲ. ಅವರು ಈ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್‌ ತೆಗೆದುಕೊಳ್ಳದಿದ್ದರೆ ಓದು ಮುಂದುವರಿಸುವುದನ್ನು ಬಿಟ್ಟು ನನಗೆ ಮದುವೆ ಮಾಡಿಸುತ್ತಾರೆ. ದಯವಿಟ್ಟು ನನ್ನ ಮರ್ಯಾದೆ ಉಳಿಸಿ, ನಾನು ತುಂಬಾ ಬಡಕುಟುಂಬದಿಂದ ಬಂದವಳು” ಎಂದು ಬರೆದಿದ್ದಾಳೆ. ಈ ಉತ್ತರ ಪತ್ರಿಕೆಯು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ.

ಮಧ್ಯಪ್ರದೇಶದಲ್ಲಿ 10ನೇ ತರಗತಿ ಬೋರ್ಡ್‌ ಪರೀಕ್ಷೆಯು ಕಳೆದ ಫೆಬ್ರವರಿ 5ರಿಂದ 28ರವರೆಗೆ ನಡೆದಿತ್ತು. ಇದು ಮಧ್ಯ ಪ್ರದೇಶದ ಜಬಲ್ಪುರದ ವಿದ್ಯಾರ್ಥಿನಿಯೊಬ್ಬಳು ಬರೆದ ಉತ್ತರ ಪತ್ರಿಕೆ ಎಂದು ಕೆಲವು ಮಾಧ್ಯಮ ವರದಿ ಮಾಡಿವೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

DAKSHINA KANNADA

ನಿಮ್ಮ ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನು ಇಟ್ಟರೆ ಶುಭ

Published

on

ಮಂಗಳೂರು: ವಾಸ್ತುಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದನ್ನು ಪಾಲಿಸಿದರೆ ಅದೃಷ್ಟ ನಿಮ್ಮದಾಗುತ್ತದೆ. ಕಚೇರಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅನುಸರಿಸಿ ಕೆಲಸದಲ್ಲಿ ಪ್ರಗತಿ ಹೊಂದಬಹುದು. ಈ ವಾಸ್ತುಗಳನ್ನು ಅನುಸರಿಸಿದರೆ ನಿಮಗೆ ಬಡ್ತಿ ದೊರೆಯುವುದಲ್ಲದೆ, ಸಂಬಳ ಕೂಡ ಹೆಚ್ಚಾಗುತ್ತದೆ.

ಸ್ಫಟಿಕ ಲೋಹ

ವಾಸ್ತು ಪ್ರಕಾರ ನಿಮ್ಮ ಆಫೀಸ್ ಡೆಸ್ಕ್ ಮೇಲೆ ಸ್ಫಟಿಕ ಲೋಹವನ್ನು ಇಟ್ಟರೆ ಅದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಬಿದಿರಿನ ಗಿಡ

ವಾಸ್ತು ಪ್ರಕಾರ ಬಿದಿರಿನ ಗಿಡವನ್ನು ನೀವು ಡೆಸ್ಕ್ ಮೇಲೆ ಇಡುವುದು ಬಹಳ ಮಂಗಳಕರ. ಇದು ನಿಮಗೆ ಚೈತನ್ಯ ತುಂಬುತ್ತದೆ.

ಬುದ್ಧನ ಪ್ರತಿಮೆ

ಬುದ್ಧನ ಪ್ರತಿಮೆಯನ್ನು ಡೆಸ್ಕ್ ಮೇಲಿಟ್ಟರೆ ಅದು ನಿಮ್ಮನ್ನು ಶಾಂತಿಯುತವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಹಡಗು ಚಿತ್ರವಿರುವ ನಾಣ್ಯ

ನಿಮಗೆ ಉದ್ಯೋಗದಲ್ಲಿ ಬಡ್ತಿ ಬೇಕಾದರೆ ವಾಸ್ತುಪ್ರಕಾರ ನಿಮ್ಮ ಟೇಬಲ್ ಮೇಲೆ ಹಡಗು ಚಿತ್ರವಿರುವ ನಾಣ್ಯ ಇಟ್ಟುಕೊಳ್ಳಬೇಕು.

ಗಣೇಶ ಮೂರ್ತಿ

ಇವಿಷ್ಟೇ ಅಲ್ಲದೆ ನೀವು ಮೇಜಿನ ಮೇಲೆ ಗಣೇಶ ಮೂರ್ತಿಯನ್ನು ಇಟ್ಟುಕೊಂಡರೆ ನಿಮಗೆ ಎಂದಿಗೂ ಯಾವ ವಿಘ್ನಗಳೂ ಬರುವುದಿಲ್ಲ.

Continue Reading

LATEST NEWS

Trending