DAKSHINA KANNADA
ಮೃ*ತದೇಹ ಕೊಂಡೊಯ್ಯಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಸಹಾಯಹಸ್ತ ಚಾಚಿದ ಸ್ಪೀಕರ್ ಖಾದರ್
ಮಂಗಳೂರು : ಅನಾರೋಗ್ಯದಿಂದ ಮೃ*ತಪಟ್ಟ ಕಾರವಾರ ಮೂಲದ ಮಹಿಳೆಯೊಬ್ಬರ ಮೃ*ತದೇಹವನ್ನು ತವರೂರಿಗೆ ಸಾಗಿಸಲು ಆರ್ಥಿಕ ಸಹಾಯ ಮಾಡುವ ಮೂಲಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದಾರೆ.
ಕೆಎಸ್ ಆರ್ ಪಿಯಲ್ಲಿ ಕ್ಲೀನಿಂಗ್ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ಬವಲ್ ಗ್ರಾಮದ ಮೂಲದ ಗೋವಿಂದ ಟಿ.ಸಾಲಿ ಎಂಬವರ ಪುತ್ರಿ 33ರ ಹರೆಯದ ವಿದ್ಯಾ ವಿಕ್ರಮ್ ಅಂಬಿಗ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದರು. ಕಾಮಾಲೆ ರೋಗಕ್ಕೆ ತುತ್ತಾಗಿ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬದ ವಿಚಾರವನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ನಝರ್ ಷಾ ಪಟ್ಟೋರಿ ಅವರು ವಿಧಾನಸಭಾಧ್ಯಕ್ಷರಲ್ಲಿ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಆಸ್ಪತ್ರೆ ಚಿಕಿತ್ಸೆ ಹಣವನ್ನು ಭರಿಸಿದ್ದಾರೆ. ಬಳಿಕ ಮೃ*ತದೇಹವನ್ನು ಕಾರವಾರದ ಹುಟ್ಟೂರಿಗೆ ಕೊಂಡೊಯ್ಯಲು ನಮ್ಮೂರ ಧ್ವನಿ ಆಂಬ್ಯುಲೆನ್ಸ್ ಮೂಲಕ ಕಾರವಾರಕ್ಕೆ ಉಚಿತವಾಗಿ ತಲುಪಿಸಲು ಸಹಕರಿಸಿದ್ದಾರೆ.
ಇದನ್ನೂ ಓದಿ : ಅಪ್ರತಿಮ ಕನ್ನಡತಿ ಅಪರ್ಣಾ ಇನ್ನಿಲ್ಲ..!
ಗೋವಿಂದ ಅವರು ಕೆ ಎಸ್ ಆರ್ ಪಿ ಬೆಟಾಲಿಯನ್ ನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದಾಗಿ ಕೆಲಸಕ್ಕೆ ತೆರಳಲಾಗದೆ ಕಳೆದ 5 ವರ್ಷಗಳಿಂದ ಕೊಣಾಜೆಯ ನಡುಪದವಿನ ಸಣ್ಣ ಬಾಡಿಗೆ ಮನೆಯಲ್ಲಿ ನಾಲ್ವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಇದರಲ್ಲಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದರೂ, ತಂದೆಯ ಜತೆಗೆ ವಾಸವಾಗಿದ್ದರು. ಇದರಲ್ಲಿ ಹಿರಿಯ ಪುತ್ರಿ ಕಾಮಾಲೆ ರೋಗಕ್ಕೆ ತುತ್ತಾಗಿ , ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದು, ಮೃ*ತದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗದೆ ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದರು. ಮೃ*ತ ಮಹಿಳೆಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಪತಿಯೂ ಕೂಲಿ ಕೆಲಸ ಮಾಡಿಕೊಂಡು ನಡುಪದವಿನ ಒಂದೇ ಕೊಠಡಿಯಿರುವ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
DAKSHINA KANNADA
ಕಟಪಾಡಿಯಲ್ಲಿ ವಾಹನಗಳ ಸರಣಿ ಅಪಘಾತ; ವಾಹನಗಳು ಜಖಂ
ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ನಲ್ಲಿ ಅ.17 ರ ಗುರುವಾರ ಸರಣಿ ಅಪಘಾತ ಸಂಭವಿಸಿದೆ.
ತಾಂತ್ರಿಕ ತೊಂದರೆಯಿಂದ ಟ್ಯಾಂಕ್ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
BELTHANGADY
ಅಪ್ರಾಪ್ತ ಬಾಲಕಿಗೆ ಕಿರುಕುಳ; ಆರೋಪಿ ಅರೇಸ್ಟ್
ಬೆಳ್ತಂಗಡಿ: ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕೊಂಡು ಬಂದು ಮೊಬೈಲ್ ನಂಬರ್ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎನ್ನುವಲ್ಲಿ ಈ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿವಾಸಿ, ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್ ಆಗಿರುವ ಜುಮಾರ್ (24) ಬಂಧಿತ ಆರೋಪಿ. ಸಂಬಂಧಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಬಾಲಕಿ ಕಾಲೇಜಿಗೆ ಹೋಗುತ್ತಿರುವ ವೇಳೆ ಕಳೆದ ಐದು ದಿನಗಳಿಂದ ಆರೋಪಿಯು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗುತ್ತಿದ್ದ.
ಬೈಕ್ನಲ್ಲಿ ಜೊತೆಯಾಗಿ ಬರುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೆ, ಮೊಬೈಲ್ ನಂಬರ್ ಕೊಡುವಂತೆ ಕೇಳಿಕೊಳ್ಳುತ್ತಿದ್ದ.
ಅಂತೆಯೇ ಅ. 15ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತ ಬೈಕ್ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.
ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
DAKSHINA KANNADA
ವಿಧಾನ ಪರಿಷತ್ ಉಪ ಚುನಾವಣೆ: ದ.ಕ. ಜಿಲ್ಲಾದ್ಯಂತ ಮದ್ಯ ನಿಷೇಧ
ಮಂಗಳೂರು: ಕರ್ನಾಟಕ ವಿಧಾನ ಪರಿಷತ್ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.19ರಂದು ಸಂಜೆ 4ರಿಂದ ಅ.21ರ ಸಂಜೆ 4ರವರೆಗೆ ಹಾಗೂ ಮತ ಎಣಿಕೆಯ ದಿನವಾದ ಅ.24ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
- FILM6 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- LATEST NEWS5 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- FILM7 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- BIG BOSS5 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು