Connect with us

    LATEST NEWS

    ದಸರಾ ಹಬ್ಬ: ಮೈಸೂರಿಗೆ ತೆರಳುವ 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

    Published

    on

    ಬೆಂಗಳೂರು: ದಸರಾ ಸಂಬಂಧ ಮೈಸೂರಿಗೆ ಪ್ರಯಾಣಿಸುವರ ಸಂಖ್ಯೆ ಅಧಿಕವಾಗುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.

    1 ಸ್ಲೀಪರ್‌ ಬೋಗಿ

    ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್‌

    ಅಕ್ಟೋಬರ್ 1 ರಿಂದ 12 ರವರೆಗೆ ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್‌ (17302)

    ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್‌ಪ್ರೆಸ್‌ (06233/06234)

    ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್‌ (17307)

    ಅಕ್ಟೋಬರ್ 3 ರಿಂದ 14 ರವರೆಗೆ ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್‌ (17308)

    ಅಕ್ಟೋಬರ್ 1 ರಿಂದ 12 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌ (16591)

    ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್‌ (16592)

    ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16535)

    ಅಕ್ಟೋಬರ್ 3 ರಿಂದ 14 ರವರೆಗೆ ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ (16536)

    (ಈ ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ)

    2 ಸ್ಲೀಪರ್‌ ಬೋಗಿ

    ಅಕ್ಟೋಬರ್ 3 ರಿಂದ 12 ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌

    ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ (16228)

    (ಈ ರೈಲುಗಳಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ)

    1 ಜನರಲ್‌ ಬೋಗಿ

    ಅಕ್ಟೋಬರ್ 4 ರಿಂದ 13 ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್

    ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (16221)

    ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌

    ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06273/06274)

    ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06581/06582)

    ಅಕ್ಟೋಬರ್ 3 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06213)

    ಅಕ್ಟೋಬರ್ 5 ರಿಂದ 14 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06214)

    ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (16225)

    ಅಕ್ಟೋಬರ್ 5 ರಿಂದ 14 ರವರೆಗೆ ಶಿವಮೊಗ್ಗ ಟೌನ್-ಮೈಸೂರು ಎಕ್ಸ್‌ಪ್ರೆಸ್‌ (16226)

    ಅಕ್ಟೋಬರ್ 3 ರಿಂದ 12 ರವರೆಗೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್ (07365)

    ಅಕ್ಟೋಬರ್ 5 ರಿಂದ 14 ರವರೆಗೆ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (07366)

    ಅಕ್ಟೋಬರ್ 4 ರಿಂದ 13 ರವರೆಗೆ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ (16239/16240)

    ಅಕ್ಟೋಬರ್ 1 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06267)

    ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06268)

    ಅಕ್ಟೋಬರ್ 1 ರಿಂದ 12 ರವರೆಗೆ ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269)

    ಅಕ್ಟೋಬರ್ 3 ರಿಂದ 14 ರವರೆಗೆ ಎಸ್ಎಂವಿಟಿ ಬೆಂಗಳೂರು-ಮೈಸೂರು (06270)

    ಅಕ್ಟೋಬರ್ 2 ರಿಂದ 13 ರವರೆಗೆ ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್‌ಪ್ರೆಸ್‌ (16529)

    ಅಕ್ಟೋಬರ್ 3 ರಿಂದ 14 ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    bangalore

    ಆಟೋದಲ್ಲಿ ಆಫೀಸ್ ಚೇರ್; ಏನಿದು ವಿಚಿತ್ರ ?

    Published

    on

    ಮಂಗಳೂರು/ಬೆಂಗಳೂರು : ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನಲ್ಲಿರುವ ಸ್ಮಾರ್ಟ್ವಾಚ್ನಲ್ಲಿ ಯುಪಿಐ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಸ್ವೀಕರಿಸಿರುವ ಫೋಟೋ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಡ್ರೈವರ್ ಸೀಟನ್ನೇ ಆಫೀಸ್ ಚೇರ್ ಆಗಿ ಅಪ್ಗ್ರೇಡ್ ಮಾಡಿದ್ದ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.


    @shivaniiiiiii_ ಎಂಬ ಟ್ವಿಟರ್ ಖಾತೆಯಲ್ಲಿ ಆಟೋ ಚಾಲಕನ ಈ ಫೋಟೋ ಸೆಪ್ಟೆಂಬರ್ 23ರಂದು ಹಂಚಿಕೊಂಡಿದ್ದು, ಈ ಪೋಸ್ಟ್ ಒಂದೇ ದಿನದಲ್ಲಿ 76 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಿದೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
    ಎಷ್ಟೇ ಟ್ರಾಫಿಕ್ ಇದ್ದರೂ ಕೂಡ ಆರಾಮಾಗಿ ಅಟೋದಲ್ಲಿ ಕುಳಿತುಕೊಳ್ಳಲು ಆಗುವಂತೆ ಆಫೀಸ್ ಚೇರ್ ಫಿಟ್ ಮಾಡಿರುವುದನ್ನು ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾಗೆ ಜನರು ಪೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

    Continue Reading

    FILM

    ಲೈಂಗಿಕ ದೌರ್ಜನ್ಯ ಆರೋಪ; ಮಲಯಾಳಂ ನಟ, ರಾಜಕಾರಣಿ ಮುಕೇಶ್ ಬಂಧನ

    Published

    on

    ಕೇರಳ/ಮಂಗಳೂರು: ಮಲಯಾಳಂ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರೋ ಜಸ್ಟಿಸ್ ಹೇಮಾ ವರದಿ ಒಬ್ಬೊಬ್ಬರ ತಲೆದಂಡಕ್ಕೆ  ಕಾರಣವಾಗಿತ್ತು. ಇದೀಗ ಮತ್ತೊಂದು ಹಂತ ತಲುಪಿದ್ದು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಹಾಗೂ ರಾಜಕಾರಣಿ ಮುಕೇಶ್  ಅವರನ್ನು ಬಂಧಿಸಲಾಗಿದೆ.
    ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸಿನಲ್ಲಿ ಮುಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಬಂಧನವಾಗಿದೆ. ದೌರ್ಜನ್ಯ  ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್ ಅವರ ಬಂಧನ ಹಲವು ಚರ್ಚೆಗೆ ಕಾರಣವಾಗಿದೆ. ಬಂಧಿಸಿ ನಂತರ ಬಿಡುಗಡೆ ಮಾಡುವ ಮಾಹಿತಿಯೂ ಇದೆ. ಒಟ್ಟಿನಲ್ಲಿ ಮುಕೇಶ್ ಬಂಧನ ಇತರರಲ್ಲಿ ಆತಂಕ ಸೃಷ್ಟಿ ಮಾಡಿದೆ.
    ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಬಂದ ಕೂಡಲೇ ಚಲನಚಿತ್ರ ನೀತಿ ಸಮಿತಿ ರಾಜಿನಾಮೆ ಸಲ್ಲಿಸಿದ್ದಾರೆ. ಇನ್ನು ಮಲಯಾಳಂ ಚಿತ್ರರಂಗದ ನಟರುಗಳಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಇಡವೆಲ್ ಬಾಬು, ಚಂದ್ರಶೇಖರನ್ ಸೇರಿದಂತೆ ಹಲವರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
    Continue Reading

    LATEST NEWS

    ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃ*ತ್ಯು

    Published

    on

    ಮಂಗಳೂರು: ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ “ಫ್ಲೋಂಟ್” ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ವಿವಾಹಿತ ಯುವಕನೊಬ್ಬ ಮೃ*ತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

    ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಮೃ*ತಪಟ್ಟವರು. ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಶನಿವಾರ ಬೆಳಗ್ಗೆ “ಫ್ಲೋಂಟ್” ಕ್ಲಿನಿಕ್ ಗೆ ತೆರಳಿದ್ದರು. ಮಾಝಿನ್ ರೊಂದಿಗೆ ಅವರ ತಾಯಿ ಮತ್ತು ಪತ್ನಿ ಕೂಡಾ ಇದ್ದು, ಹೊರಗೆ ಕಾಯುತ್ತಿದ್ದರು. ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಈ ಸಣ್ಣ ಶಸ್ತ್ರ ಚಿಕಿತ್ಸೆಯು ಸಂಜೆಯಾದರೂ ಮುಗಿಯಲಿಲ್ಲ ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಮಾಝಿನ್ ರ ತಾಯಿ ಮತ್ತು ಪತ್ನಿ ವಿಚಾರಿಸಿದಾಗ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ ಎಂಬ ಉತ್ತರ ಲಭಿಸಿದೆ. ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾಝಿನ್ ಮೃ*ತಪಟ್ಟಿರುವುದಾಗಿ ಘೋಷಿಸಿದರು.

    ಈ ಬಗ್ಗೆ ಶಮನ್ ಇಬ್ರಾಹಿಂ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ವೈದ್ಯರ ನಿರ್ಲಕ್ಷ್ಯದ ಆರೋಪ: ಮಾಝಿನ್ ಪ್ರಾಣ ಕಳಕೊಳ್ಳಲು ಫ್ಲೋಂಟ್ ಕ್ಲಿನಿಕ್ ನ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿದ್ದರಿಂದ ಹೀಗಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

    ಈ ಕ್ಲಿನಿಕ್ ತೀರಾ ಇಕ್ಕಟ್ಟಾದ ಸ್ಥಳದಲ್ಲಿದೆ. ಮಾಝಿನ್ ಪ್ರಜ್ಞೆ ಕಳಕೊಂಡಾಗ ತಕ್ಷಣ ಆ್ಯಂಬುಲೆನ್ಸ್ ತರಿಸಲಾಯಿತು. ಆದರೆ ಕ್ಲಿನಿಕ್ ಬಳಿ ಸ್ಟ್ರಚ್ಚರ್ ಕೊಂಡೊಯ್ಯಲು ಆಗಲಿಲ್ಲ. ಕೊನೆಗೆ ಮಾಝಿನ್ ಅವರನ್ನು ಹೇಗೋ ಆ್ಯಂಬುಲೆನ್ಸ್ ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾಝಿನ್ ಮೃತಪಟ್ಟಿರುವ ವಿಷಯವು ಫ್ಲೋಂಟ್ ಕ್ಲಿನಿಕ್ ನ ಮುಖ್ಯಸ್ಥರ ಗಮನಕ್ಕೆ ತಂದಿದ್ದರೂ ಅವರು ಕನಿಷ್ಟ ಮಾಝಿನ್ ರ ಕುಟುಂಬವನ್ನು ಭೇಟಿಯಾಗಿ ಕ್ಷಮೆಕೋರಿ, ಸಾಂತ್ವನ ಹೇಳುವ ಪ್ರಯತ್ನ ಮಾಡಲಿಲ್ಲ. ಇದು ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಕಾಸ್ಮೆಟಿಕ್ ಸರ್ಜರಿಯ ವೇಳೆ ಮೂಲಭೂತ ಸೌಕರ್ಯವಿಲ್ಲದ ಇಂತಹ ಕ್ಲಿನಿಕ್ ಗಳತ್ತ ಸುಳಿಯದಿರಿ ಎಂದು ಸಾಮಾಜಿಕ ಕಾರ್ಯಕರ್ತ ರಿಝ್ವಾನ್ ಪಾಂಡೇಶ್ವರ ಮನವಿ ಮಾಡಿದ್ದಾರೆ.

    Continue Reading

    LATEST NEWS

    Trending