Connect with us

    LATEST NEWS

    ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ

    Published

    on

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿದ ನಂತರ ವಿಜಯದಶಮಿ ಮೆರವಣಿಗೆ ಪ್ರಾರಂಭವಾಗಲಿದೆ.

    750 ಕೆಜಿ ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ಸಾಗಲಿದ್ದಾನೆ.

    ಇನ್ನು ಮಧ್ಯಾಹ್ನ ಮಕರ ಲಗ್ನದಲ್ಲಿ 1.41ರಿಂದ 2.10ರ ನಡುವೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಸಂಜೆ ಕುಂಭ ಲಗ್ನ 4 ರಿಂದ 4.30ರ ನಡುವೆ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಈ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಿನ್ನಿಗೋಳಿ: ರೈತನ ಮೇಲೆ ಚಿರತೆ ದಾಳಿ.!

    Published

    on

    ಕಿನ್ನಿಗೋಳಿ: ದನಗಳಿಗೆ ಮೇವು ತರಲು ಹೋದ ರೈತರೊಬ್ಬರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಕಿನ್ನಿಗೋಳಿ ಸಮೀಪದ ಎಳತ್ತೂರಿನಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಗಾಯಗೊಂಡ ರೈತನನ್ನು ಎಳತ್ತೂರು ದೇವಸ್ಥಾನದ ಬಳಿಯ ನಿವಾಸಿ ಲಿಗೋರಿ ಪಿರೇರಾ ಎಂದು ಗುರುತಿಸಲಾಗಿದೆ.

    ಭಾನುವಾರ ಬೆಳಿಗ್ಗೆ 9.30ರ ಸಂದರ್ಭ ಮನೆಯ ಹತ್ತಿರ ದನಗಳಿಗೆ ಹುಲ್ಲು ಕೊಯ್ಯುತ್ತಿದ್ದ ಸಂದರ್ಭ ಚಿರತೆಯೊಂದು ಲಿಗೋರಿಯವರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಈ ಸಂದರ್ಭ ಲಿಗೋರಿಯವರು ಸಮೀಪದಲ್ಲೇ ಇದ್ದ ಕೋಲನ್ನು ಚಿರತೆಯತ್ತ ಬೀಸಿದ್ದು ಚಿರತೆ ಕಾಡಿನತ್ತ ಓಡಿದೆ ಎನ್ನಲಾಗುತ್ತಿದೆ.

    ಲಿಗೋರಿಯವರ ಮುಖಕ್ಕೆ ಮತ್ತು ಬೆನ್ನಿಗೆ ಚಿರತೆ ಉಗುರು ತಾಗಿ ಗಾಯಗಳಾಗಿವೆ ಎಂದು ಲಿಗೋರಿ ಮಗ ಜೈಸನ್ ತಿಳಿಸಿದ್ದಾರೆ. ವಾರದ ಹಿಂದೆ ಜೈಸನ್ ಅವರು ಬೈಕಿನಲ್ಲಿ ಹೋಗುವಾಗ ತಾಳಿಪಾಡಿ ಬೀಡು ಬಳಿ ಚಿರತೆ ಸಿಕ್ಕಿತ್ತು ಎಂದು ಕೂಡ ಅವರು ತಿಳಿಸಿದ್ದಾರೆ. ಕಟೀಲು ದುರ್ಗಾಸಂಜೀವನಿ ಆಸ್ಪತ್ರೆಯಲ್ಲಿ ಲಿಗೋರಿ ಪಿರೇರ ಅವರು ಚಿಕಿತ್ಸೆ ಪಡೇಯುತ್ತಿದ್ದಾರೆ.

    ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಜನರು ಅಲರ್ಟ್ ಆಗಿದ್ದು, ಎಳತ್ತೂರು ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಕೃಷಿಕರು ನೆಲೆಸಿದ್ದು ಇಂದು (ನ.೦೩) ನಡೆದ ಚಿರತೆ ದಾಳಿ ಗ್ರಾಮಸ್ಥರನ್ನ ಭಯಭೀತರನ್ನಾಗಿಸಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

    Continue Reading

    LATEST NEWS

    ಉಡುಪಿ : ಪ್ರಿಯಕರನೊಂದಿಗಿನ ಚಕ್ಕಂದಕ್ಕೆ ಅಡ್ಡಿಯಾಗಿದ್ದ ಮಗುವಿಗೆ ತಾಯಿಯಿಂದ ಹ*ಲ್ಲೆ; ಜಾಮೀನು ಅರ್ಜಿ ವಜಾ

    Published

    on

    ಉಡುಪಿ : ಮೂರೂವರೆ ವರ್ಷ ಮಗುವಿನ ಮೇಲೆ ತಾಯಿ ಹಾಗೂ ಆಕೆಯ ಪ್ರಿಯಕರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.

    ಪೂರ್ಣಪ್ರಿಯಾ ಮತ್ತು ಆಕೆಯ ಪ್ರಿಯಕರ ಸುಹೇಲ್ ಮಗುವಿನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು. ಸೆ.13ರಂದು ಈ ದುರ್ಘಟನೆ ಸಂಭವಿಸಿದೆ.

    ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನೇ ತಾಯಿ, ಅನಾರೋಗ್ಯದ ಕಾರಣ ನೀಡಿ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದಳಾದರೂ ಮಗುವಿನ ಮೇಲಾದ ಗಾಯದ ಬಗ್ಗೆ ತಾಯಿ ಪೂರ್ಣ ಪ್ರಿಯಾ ಯಾವುದೇ ಮಾಹಿತಿ ನೀಡಿರಲಿಲ್ಲ.

    ಮಗುವಿನ ಮೇಲಾದ ಗಾಯಗಳಿಂದ ಅನುಮಾನಗೊಂಡ ಜಿಲ್ಲಾ ಆಡೋಗ್ಯಾಧಿಕಾರಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.  ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿತ್ತು.  ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮಗುವನ್ನ8ಉ ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

    ಬಳಿಕ , ಮಗುವಿನ ಮೇಲೆ ತಾಯಿ ಹಾಗೂ ಪ್ರಿಯಕರ ಹ*ಲ್ಲೆ ನಡೆಸಿರುವ ವಿಚಾರ ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಅಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮೊದಲಿಗೆ ಮಗು ಜಾರಿಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದ ತಾಯಿ ಪೂರ್ಣ ಪ್ರಿಯಾ ಆದರೆ ತೀವ್ರ ವಿಚಾರಣೆ ಬಳಿಕ ತಪ್ಪು ಒಪ್ಪಿಕೊಂಡಿದ್ದರು.

    ಪೂರ್ಣ ಪ್ರಿಯಾಳ ಗಂಡ ಇತ್ತೀಚೆಗಷ್ಟೆ ನಿಧನರಾಗಿದ್ದರು. ಆ ಬಳಿಕ ಪ್ರಿಯಕರ ಸುಹೇಲ್‌ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಳು. ಅವನು ಬಂದ ವೇಳೆ ಮಗು ಮಂಚದ ಮೇಲೆ ಮಲಗಿದ್ದ ಕಾರಣಕ್ಕೆ ಪಾಪಿ ತಾಯಿ ಹಾಗೂ ಪ್ರಿಯಕರ ಕುಪಿತಗೊಂಡು ಮಗುವಿನ ಮೇಲೆ ಅಮಾನುಷ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದರು.

    ಅ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಆರೋಪಿಗಳು ಶರಣಾಗಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ ಪ್ರಕರಣದ ಗಂಭೀರತೆ ಮನಗಂಡು ಇದೀಗ ಎರಡನೆ ಹೆಚ್ಚುವರಿ ಸಿವಿಲ್‌ ಕೋರ್ಟ್‌ ಜೆಎಂಎಫ್‌ಸಿಯಲ್ಲಿ ಇಬ್ಬರ ಮಧ್ಯಂತರ ಜಾಮೀನು ಅರ್ಜಿ ನ್ಯಾಯಾಲಯ ವಜಾಗೊಳಿಸಿದೆ.

    Continue Reading

    FILM

    ಹುಡುಗಿಯರಿಗಿಂತ ನಾಚಿಕೆ ಜಾಸ್ತಿ; ಸಂದರ್ಶನದಲ್ಲಿ ಸೋನಾಲ್ ಅಭಿಪ್ರಾಯ ಹೀಗಿತ್ತು….

    Published

    on

    ಮಂಗಳೂರು/ ಬೆಂಗಳೂರು: ಕಳೆದ ಆಗಸ್ಟ್ ತಿಂಗಳಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂಥೆರೋ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ಸಹ ಹೋಗಿ ಬಂದಿದ್ದರು. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದರು ಮಾತ್ರವಲ್ಲದೇ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಾಲ್‌ ಹಾಗೂ ತರುಣ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು  ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ರ್ಯಾಪಿಡ್ ಫೈರ್‌ನಲ್ಲಿ ತರುಣ್ ಹಾಗೂ ಸೋನಾಲ್‌ಗೆ ಸಂದರ್ಶಕಿ ಎರಡು ಸ್ಲೇಟ್ ಕೊಟ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಉತ್ತರವನ್ನು ಅವರಿಬ್ಬರು ಸ್ಲೇಟ್ ಮೇಲೆ ಬರೆದು ತೋರಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಮೊದಲ ಬಾರಿಗೆ ತರುಣ್ ಅವರ ಮನೆಗೆ ಬಂದಾಗ ಸೋನಾಲ್ ಮಾಡಿಕೊಟ್ಟ ಅಡುಗೆ ಏನು? ಎಂದಾಗ ತರುಣ್ ಸುಧೀರ್ ಕಬಾಬ್, ಸೋನಲ್‌ ಮೊಂಥೆರೋ ಡಯಟ್ ಫುಡ್ ಬಾಯ್ಲ್ಡ್ ರೈಸ್ ಎಂದು ಬರೆಯುತ್ತಾರೆ. ಆಗ ತರುಣ್ ಬಾಯ್ಲ್ಡ್ ರೈಸ್ ಅಲ್ಲ ಕಬಾಬ್ ಮಾಡಿಕೊಟ್ಟಿದ್ರಿ ಅಂದ್ರು. ವಿಶೇಷವಾಗಿ ಸೋನಾಲ್ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದಾಗಲೂ ಕಬಾಬ್ ಹಾಗೂ ದಾಲ್ ರೈಸ್ ಅನ್ನೇ ಸೋನಾಲ್ ಮಾಡಿಕೊಟ್ಟಿದ್ರು ಎಂದರು.

    ತರುಣ್ ಹಾಗೂ ಸೋನಾಲ್‌ ಇವರಿಬ್ಬರಲ್ಲಿ ಯಾರಿಗೆ ಬೇಗ ಸಿಟ್ಟು ಬರುತ್ತೆ? ಎಂದಾಗ ಸೋನಾಲ್ ಅವರು ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ಗೆ ಎಂದು ತೋರಿಸುತ್ತಾರೆ. ಹೌದು ನನಗೆ ಬೇಗ ಸಿಟ್ಟು ಬರುತ್ತೆ ಎಂದು ತರುಣ್ ಮುಗುಳ್ನಗುತ್ತಾ ಹೇಳುತ್ತಾರೆ. ತರುಣ್‌ಗೆ ಸಿಟ್… ಸಿಟ್ಟು ಬರಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಬರುತ್ತೆ ಎಂದು ಸೋನಾಲ್ ನಗುತ್ತಾ ಹೇಳುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ಒಸಿಡಿ ಪ್ರಾಬ್ಲಮ್ ಇದೆ. ಅಂದ್ರೆ ತುಂಬಾ ನೀಟ್‌ನೆಸ್ ಇರಬೇಕು, ಕ್ಲೀನ್ ಇರಬೇಕು? ಎಂಬ ಪ್ರಶ್ನೆಗೆ ಸೋನಾಲ್ ಮತ್ತೆ ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ ಎಂದು ತೋರಿಸುತ್ತಾರೆ. ಆಗ ತರುಣ್ ನನಗೆ ಕ್ಲೀನ್ ಇರಬೇಕು ಎನ್ನುತ್ತಾರೆ.

    ಸೋನಾಲ್ ನಟಿಸಿರುವ ಯಾವ ಚಿತ್ರ, ಯಾವ ಪಾತ್ರ ತರುಣ್‌ಗೆ ಇಷ್ಟ? ಎಂದಾಗ ತರುಣ್ ಬನಾರಸ್ ಸಿನಿಮಾ ಎಂದು, ಸೋನಾಲ್ ರಾಬರ್ಟ್ ಚಿತ್ರ ಎಂದು ಬರೆದು ತೋರಿಸುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ನಾಚಿಕೆ ಸ್ವಭಾವ ಜಾಸ್ತಿ? ಎಂಬ ಪ್ರಶ್ನೆಗೆ ಸೋನಾಲ್ ನಗುತ್ತಾ 100 ಪರ್ಸೆಂಟ್ ತರುಣ್ ಎಂದು ನಗುತ್ತಾ ಹೇಳುತ್ತಾರೆ. ಆಗ ತರುಣ್ ಸಹ ನಗುತ್ತಾ ನಾನೇ ಅನ್ನುತ್ತಾರೆ. ಜೊತೆಗೆ ನಾನು ಎಲ್ಲೆ ಇದ್ದರೂ ನಾಚಿಕೆ ಸ್ವಭಾವ ಇರುತ್ತದೆ. ಆದರೆ ಕೆಲಸದ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ. ಸೋನಾಲ್ ಸಹ ಮೊದಲ ಬಾರಿಗೆ ನಾವು ಭೇಟಿಯಾದಾಗ ಇವರು ಜಾಸ್ತಿ ಮಾತಾಡೇ ಇಲ್ಲ ಅಂದ್ರು.

    ಸೋನಾಲ್‌ ಹಾಗೂ ತರುಣ್ ಇವರಿಬ್ಬರಲ್ಲಿ ಖರ್ಚು ಜಾಸ್ತಿ ಮಾಡೋದು ಯಾರು? ಎಂದು ಕೇಳಿದಾಗ ತರುಣ್ ನಾನೇ ಅನ್ನುತ್ತಾರೆ. ಸೋನಾಲ್ ಸಹ ತರುಣ್ ಜಾಸ್ತಿ ಖರ್ಚು ಮಾಡುತ್ತಾರೆ. ಯಾಕಂದ್ರೆ ಎಲ್ಲ ಹುಡುಗೀರೂ ಜಾಸ್ತಿ ಶಾಪಿಂಗ್ ಅಂತ ಖರ್ಚು ಮಾಡುತ್ತಾರೆ. ಆದರೆ ಅದು ನಮ್ಮಲ್ಲಿ ಉಲ್ಟಾ. ಹಾಗೇ ನಾನು ನಾನೇ ಶಾಪಿಂಗ್ ಹೋಗ್ತೀನಿ. ತರುಣ್‌ಗೆ ಶಾಪಿಂಗ್ ಅಂದ್ರೆ ಇಷ್ಟ. ಡ್ರೆಸ್ ಮಾಡ್ಕೊಳ್ಳಕ್ಕೆ ಹುಡುಗೀರು ಜಾಸ್ತಿ ಟೈಮ್ ತಗೋತಾರೆ. ಆದರೆ ನಮ್ಮನೇಲಿ ತರುಣ್ ಜಾಸ್ತಿ ಟೈಮ್ ತಗೋತಾರೆ. ಆದರೆ ನಾನು ಮಾತ್ರ ಬೇಗ ರೆಡಿ ಆಗ್ತೀನಿ. ಆಕಸ್ಮಾತ್ ಮೇಕಪ್, ಹೇರ್‌ಸ್ಟೈಲ್ ಇದ್ದರೆ ನಾನು ಸ್ವಲ್ಪ ಲೇಟ್ ಆಗಿ ರೆಡಿ ಆಗ್ತೀನಿ ಎಂದು ನಗುತ್ತಾ ಸೋನಾಲ್ ಹೇಳಿದ್ದಾರೆ.

    ಇವರ ಸಂದರ್ಶನದ ವಿಡಿಯೋ ಬಹಳ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ಪಡುವುದರೊಡನೆ ಶಭಾಶಯ ವ್ಯಕ್ತ ಪಡಿಸಿದ್ದಾರೆ.

    Continue Reading

    LATEST NEWS

    Trending