Connect with us

    LATEST NEWS

    ಪ್ರಾಮಾಣಿಕ ಕಳ್ಳರಿದ್ದಾರೆ ಎಚ್ಚರಿಕೆ! ಕಾರು ಕದ್ದು I am Sorry ಎಂದ ಕಿಲಾಡಿ ?

    Published

    on

    ಕಳ್ಳರ ಕೈಗೆ ಒಂದು ಬಾರಿ ಅನ್ಯರ ವಸ್ತು ಹೋದ್ರೆ ಮುಗಿತು ಅದಕ್ಕೆ ಎಳ್ಳು ನೀರು ಬಿಟ್ಟ ಹಾಗೆಯೇ. ವಾಪಸ್ ಮಾಲೀಕರ ಕೈಗೆ ಸಿಗೋದು ಹೆಚ್ಚು ಕಡಿಮೆ ಕನಸಿನ ಮಾತು ಆದ್ರೆ ರಾಜಸ್ತಾನದ, ಬಿಕನೇರ್​ನಲ್ಲೊಬ್ಬ ಪ್ರಾಮಾಣಿಕ ಕಳ್ಳನೊಬ್ಬ ಸಿಕ್ಕಿದ್ದಾನೆ. ಕದ್ದ ಕಾರನ್ನು 450 ಕಿಲೋ ಮೀಟರ್​ವರೆಗೂ ತೆಗೆದುಕೊಂಡು ಹೋಗಿ, ವಾಪಸ್ ಅದು ಮಾಲೀಕರಿಗೆ ಸಿಗುವಂತೆ ಒಂದು ಪೇಪರ್​ನಲ್ಲಿ ಒಂದಿಷ್ಟು ನೋಟ್ಸ್ ಬರೆದು ಕಾರಿಗೆ ಅಂಟಿಸಿದ್ದಾನೆ. ಇದು ಕಳ್ಳರಿಗೂ ಅಪರೂಪಕ್ಕೆ ಆತ್ಮಸಾಕ್ಷಿ ಮಿಡಿಯುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.

    ದೆಹಲಿಯಿಂದ ಕಾರನ್ನು ಕದ್ದುಕೊಂಡು ಬಂದ ಕಳ್ಳ ರಾಜಸ್ತಾನದ ಬಿಕನೇರ್​ನಲ್ಲಿ ನಿಲ್ಲಿಸಿ ಅದರ ನಂಬರ್ ಪ್ಲೇಟ್​ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಕಾರು ಕದ್ದ ಕಳ್ಳನಿಗೆ ನಡುರಸ್ತೆಯಲ್ಲಿ ಪಾಪಪ್ರಜ್ಞೆ ಕಾಡಿದೆಯೋ ಏನೊ ಬಿಕನೇರ್​ನ ನಪಸಾರ್​ ಪಟ್ಟಣದ ಹೆದ್ದಾರಿ ಬಳಿ ಕಾರು ನಿಲ್ಲಿಸಿ ಅದರ ಮೇಲೆ ಮೂರು ಕರಪತ್ರ ಅಂಟಿಸಿ ಹೋಗಿದ್ದಾನೆ. ಮೊದಲ ಕರಪತ್ರದಲ್ಲಿ ಈ ಕಾರನ್ನು ದೆಹಲಿಯ ಪಾಲಮ್​ನಿಂದ ಕದಿಯಲಾಗಿದೆ. ದಯವಿಟ್ಟು ಇದನ್ನು ಪೊಲೀಸರ ಗಮನಕ್ಕೆ ತನ್ನಿ, Sorry ಎಂದು ಬರೆಯಲಾಗಿದ್ದು, ಕಾರಿನ ನಂಬರ್​ನ್ನು ಕೂಡ ಅದರ ಮೇಲೆ ಉಲ್ಲೇಖಿಸಿದ್ದಾನೆ. ಇದು ಪೊಲೀಸರಿಗೆ ಕಾರಿನ ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಸಹಾಯಕವಾಗಿದೆ.

    ಮತ್ತೊಂದು ಕರಪತ್ರದಲ್ಲಿ ಐ ಲವ್ ಮೈ ಇಂಡಿಯಾ ಎಂದು ಬರೆದಿರುವ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗೆ ಕರಪತ್ರಗಳನ್ನು ಅಂಟಿಸಿಕೊಂಡು ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಕರಪತ್ರದಲ್ಲಿ ಅಂಟಿಸಲಾಗಿದ್ದ ನಂಬರ್​ನ್ನು ಟ್ರೇಸ್ ಮಾಡಿ ಕಾರಿನ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು. ಕಾರ್​ ಮಾಲೀಕರು ಅಕ್ಟೋಬರ್ 10ರಂದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    LATEST NEWS

    ಯುವತಿಯರೆ ಎಚ್ಚರ : ‘ಮ್ಯಾಟ್ರಿಮೊನಿ’ಯಲ್ಲಿ ಚೆಂದದ ಹುಡುಗಿಯರೇ ಈ ಸರ್ಕಾರಿ ನೌಕರನಿಗೆ ಟಾರ್ಗೆಟ್!

    Published

    on

    ರಾಯಚೂರು: ಸಾಮಾನ್ಯವಾಗಿ ಗಂಡು ಅಥವಾ ಹೆಣ್ಣು ತಮಗೆ ಬಾಳ ಸಂಗಾತಿ ಸಿಗದೇ ಇರುವ ಯುವ ಜನತೆಗೆ ಅನುಕೂಲ ಆಗಲೆಂದೆ ಮ್ಯಾಟ್ರಿಮೊನಿ ಎಂಬ ಒಂದು ಆಪ್ ಪರಿಚಯಿಸಲಾಗಿದೆ. ಆದರೆ ಈ ಒಂದು ಆಪ್ ಇದೀಗ ದುರ್ಬಳಕೆ ಆಗುತ್ತಿದ್ದು, ಸರ್ಕಾರಿ ನೌಕರ ಒಬ್ಬ ಮ್ಯಾಟ್ರಿಮೊನಿಯಲ್ಲಿ ಚೆಂದದ ಯುವತಿಯನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ನಂತರ ಬೀದಿಗೆ ತಳ್ಳುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ಹೌದು ರಾಯಚೂರು ಜಿಲ್ಲೆ ಮಾನ್ವಿ ಜೆಸ್ಕಾಂ ಸಹಾಯಕ ಇಂಜಿನಿಯರ್ ಆಗಿರುವ ಗುರುರಾಜ್ ನಾಯಕ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಅಮೃತಾ ಎಂಬ ಮಹಿಳೆ ಆರೋಪ ಮಾಡಿದವರಾಗಿದ್ದಾರೆ. ಈತನಿಗೆ ಮೊದಲೇ ಮದುವೆಯಾಗಿದ್ದರು ಕೂಡ ಸುಳ್ಳು ಹೇಳಿ ನನ್ನನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸಂತ್ರಸ್ತ ಮಹಿಳೆ ಅಮೃತಾ ಎರಡು ಬಾರಿ ತನ್ನ ಪತಿ ವಿರುದ್ಧ ಮಾನ್ವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

    ಮ್ಯಾಟ್ರಿಮೂನಿದಲ್ಲಿ ಅಮೃತಾ ಮತ್ತು ಗುರುರಾಜ್ ನಾಯಕ ಪರಿಚಯವಾಗಿದೆ. ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸರ್ಕಾರಿ ನೌಕರ ಗುರುರಾಜ್ ನಾಯಕ ಅಮೃತಾಳನ್ನು 2021ರ ಜನವರಿ 10ರಂದು ಅಂತರ್ಜಾತಿ ವಿವಾಹ ಆಗಿದ್ದಾನೆ. ಇದಾದ ನಂತರ ಗುರುರಾಜನಿಗೆ ಮೊದಲೇ ಮದುವೆಯಾಗಿತ್ತು ಎಂಬ ವಿಚಾರ ಗೊತ್ತಾಗಿದೆ. ಬಳಿಕ ಮನೆಯಿಂದ ಹೊರ ಹೋಗುವಂತೆ ಅಮೃತ ಮೇಲೆ ಹಲ್ಲೆ ಮಾಡಿದ್ದಾನೆ.

    ಜೊತೆಗೆ, ನನ್ನನ್ನು ಕೊಲೆ ಮಾಡುವುದಕ್ಕೆ ಪತಿ ಕಡೆಯವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮೃತಾ ಆರೋಪ ಮಾಡಿದ್ದಾರೆ.ನೀನು ನನ್ನ ಮೇಲೆ ದೂರು ಕೊಟ್ಟರೆ ಫಸ್ಟ್ ನೈಟ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೆ ಪತಿ ಬೆದರಿಕೆ ಹಾಕುತ್ತಿದ್ದರಂತೆ. ಪತಿ ಬೆದರಿಕೆಯಿಂದ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಇನ್ನು ಮನೆಯಿಂದ ಹೊರಬಂದ್ರೆ ಟಿಪ್ಪರ್ ಹತ್ತಿಸಿ ಕೊಲೆ ಮಾಡುವುದಾಗಿ ಪತಿ ಗುರುರಾಜ್ ನಾಯಕ ಬೆದರಿಕೆ ಹಾಕಿದ್ದಾನೆ. ಹೀಗಾಗಿ, ಜೆಸ್ಕಾಂ ಮತ್ತು ಪೊಲೀಸ್ ಇಲಾಖೆ ತನ್ನ ಗಂಡ ಗುರುರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    Continue Reading

    LATEST NEWS

    ಟ್ರೆಂಡಿಂಗ್ ಹೆಸರಲ್ಲಿ ಕೋಟಿ ಕೋಟಿ ವಂಚನೆ; ಬ್ಯಾಂಕ್ ಮ್ಯಾನೇಜರ್ ಸಹಿತ 8 ಜನ ಅರೆಸ್ಟ್

    Published

    on

    ಮಂಗಳೂರು/ಬೆಂಗಳೂರು; ಟ್ರೆಡಿಂಗ್ ಹೆಸರಿನಲ್ಲಿ 265 ಜನರಿಗೆ 97 ಕೋಟಿ ರೂಪಾಯಿ ವಂಚನೆ ಮಾಡಿದ 8 ಜನರನ್ನು ಬಂಧಿಸಲಾಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.


    ಸ್ವಲ್ಪ ಬುದ್ದಿ ಖರ್ಚು ಮಾಡಿ ಇನ್ವೆಸ್ಟ್ ಮಾಡಿದ್ರೆ, ಹಾಕಿದ್ದ ಹಣಕ್ಕೆ ಒಳ್ಳೆ ರಿಟರ್ನ್ ಸಿಗೋ ಮಾರ್ಗ ಇರುತ್ತವೆ. ಅದರೆ ಟ್ರೆಡಿಂಗ್ ಹೆಸರಿನಲ್ಲಿ ಬರೊಬ್ಬರಿ 265 ಜನರಿಗೆ 97 ಕೋಟಿ ರೂಪಾಯಿ ನಾಮ ಹಾಕಲಾಗಿದೆ.‌ ಈ ಸ್ಕ್ಯಾಮ್ ನಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಶಾಮೀಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.‌ ವ್ಯಕ್ತಿಯೊಬ್ಬರು ನೀಡಿದ ದೂರಿನ‌ ಆಧಾರದಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಸಹಿತ 8 ಜನರನ್ನ ಬಂಧಿಸಿದ್ದಾರೆ.‌

    ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು, ಸೇಲ್ಸ್ ಮ್ಯಾನ್ ಗಳಾದ ಮನೋಹರ್, ಕಾರ್ತಿಕ್, ರಾಕೇಶ್ ಪೊಲೀಸರ ಬಲೆಗೆ ಬಿದಿದ್ದಾರೆ.‌ ಹಾಗೂ ಅಕೌಂಟ್ ಹೊಲ್ಡರ್ ಗಳಾದ ರಘುರಾಜ್, ಕಾರ್ತಿಕ್, ಲಕ್ಷ್ಮಿಕಾಂತ, ಕೆಂಚೇಗೌಡ ಹಾಗು ಮಾಲಾ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದಾರೆ.

    ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಲು ಜನರಿಗೆ l ಸೇಲ್ಸ್ ಮ್ಯಾನ್ ಪ್ರಚೋದನೆ ನೀಡ್ತಿದ್ದರು. ಆಕರ್ಷಕ ಸ್ಕೀಂಗಳನ್ನ ನಂಬಿದ ಜನರು ಲಕ್ಷಾಂತರ ಹಣವನ್ನು ಹೂಡಿಕೆ ಮಾಡ್ತಿದ್ದು, ನಂತರ ಟ್ರೇಡಿಂಗ್ ಅಕೌಂಟ್ ನಲ್ಲಿ ಕೋಟಿ ಲೆಕ್ಕದಲ್ಲಿ ಹಣ ತೋರಿಸಿ ವಂಚನೆ ಮಾಡಿದ್ದರು.

    ಅದೇ ರೀತಿ ದೂರುದಾರನ ಟ್ರೇಡಿಂಗ್ ಅಕೌಂಟ್ ನಲ್ಲಿ 28 ಕೋಟಿ ತೋರಿಸಿ, ಡ್ರಾ ಮಾಡಿಕೊಳ್ಳಲು 75 ಲಕ್ಷ ಕೊಡಬೇಕು ಎಂದು ಆಸೇ ತೋರಿಸಿ ಗ್ರಾಹಕರಿಂದ ಹಣ ಹಾಕಿಸಿಕೊಳ್ಳುತ್ತಿದ್ದರು.

    ಗ್ರಾಹಕರು ಟ್ರಾನ್ಸ್ಫರ್ ಮಾಡುವ ಹಣವು ನಾಗರಭಾವಿಯಲ್ಲಿರುವ ಖಾಸಗಿ ಬ್ಯಾಂಕ್ ನ ಟ್ರೇಡಿಂಗ್ ಅಕೌಂಟ್ ಗೆ ಬೀಳುತ್ತಿತ್ತು. ಈ ಅಕೌಂಟ್ ಹೋಲ್ಡರ್ ಆಗಿ ಕೆಂಚೇಗೌಡ, ಮಾಲ, ಲಕ್ಷ್ಮಿಕಾಂತ ಹಾಗೂ ರಘು ಹೆಸರಿನಲ್ಲಿದ್ದು, ಇದಕ್ಕೆ ಸಾಥ್ ನೀಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಕಿಶೋರ್ ಸಾಹು, ಕಮೀಷನ್ ರೂಪದಲ್ಲಿ ತನ್ನ ಅಕೌಂಟ್‌ಗೆ ಟ್ರಾನ್ಸ್ಫರ್ ಮಾಡಿಕೊಲ್ಳುತ್ತಿದ್ದ.

    ಸದ್ಯ ಆರು ಜನರ ಅಕೌಂಟ್ ನಲ್ಲಿದ್ದ 28 ಲಕ್ಷ ಹಣವನ್ನ ಫ್ರೀಝ್ ಮಾಡಲಾಗಿದೆ. ಮತ್ತಷ್ಟು ವಂಚನೆಯಾಗಿರುವುದರ ಬಗ್ಗೆ ಮಾಹಿತಿ ಇದ್ದು ಸೈಬರ್ ಪೊಲೀಸರು ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

    Continue Reading

    LATEST NEWS

    ಉಡುಪಿ: ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ 40 ಕೆ.ಜಿ. ಪಟಾಕಿ ಪೊಲೀಸರ ವಶಕ್ಕೆ

    Published

    on

    ಉಡುಪಿ: ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ 40 ಕೆ.ಜಿ. ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿ ನಗರದ ಜಿಟಿಎಸ್ ಶಾಲೆಯ ಎದುರಿನ ವಿದ್ಯಾಜ್ಯೋತಿ ಕಟ್ಟಡದಲ್ಲಿರುವ ಕಬ್ರಾಲ್ ಗನ್ ಹೌಸ್ ನಡೆದಿದೆ.

    ಉಡುಪಿ ನಗರ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ಅವರು ನೀಡಿದ ಸುಳಿವಿನ ಮೇರೆಗೆ ಕಬ್ರಾಲ್ ಗನ್ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಪಟಾಕಿಗಳ ದಾಸ್ತಾನು ಪತ್ತೆಯಾಗಿದೆ.

    ದಾಳಿ ವೇಳೆ ಸ್ಥಳದಲ್ಲಿದ್ದ ರೊನಾಲ್ಡ್ ಜಿ ಕ್ಯಾಬ್ರಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆವರಣದಲ್ಲಿದ್ದ ಒಟ್ಟು 40 ಕೆ.ಜಿ. ಪಟಾಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ರೊನಾಲ್ಡ್ ಜಿ. ಕ್ಯಾಬ್ರಾಲ್ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಈ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇನ್ನು ಪರವಾನಗಿ ಇಲ್ಲದಿರುವುದರಿಂದ ಈ ಸ್ಫೋಟಕಗಳ ಶೇಖರಣೆಯು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending