Connect with us

    BELTHANGADY

    ಕುಡಿತದ ಚಟ ಬುದ್ದಿ ಹೇಳಿದ ಅಪ್ಪನನ್ನೆ ಕೊಂದ ಮಗ

    Published

    on

    ಬೆಳ್ತಂಗಡಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುಡಿತದ ಚಟಕ್ಕೆ ಮತ್ತೊಂದು ಹಿರಿಯ ಜೀವ ಸಾವನಪ್ಪಿದ್ದೆ. ಯಾವುದೇ ಕೆಲಸ ಮಾಡದೆ ತಿರುಗಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ಅಪ್ಪನನ್ನೆ ಪಾಪಿ ಮಗ ಕೊಲೆ ಮಾಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.


    ಮೃತರನ್ನು ಬೆಳ್ತಂಗಡಿ ನಿವಾಸಿ ವಾಸು ಸಪಲ್ಯ‌ (75) ಎಂದು ಗುರುತಿಸಲಾಗಿದ್ದು, ವಾಸು ಸಪಲ್ಯ ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದು ಎಂದಿನಂತೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನಕ್ಕೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಮಗ ದಯಾನಂದ್ ಮಾರಕಾಸ್ತ್ರದಿಂದ ಕೊಲೆಗೆ ಯತ್ನಿಸಿದ್ದಾನೆ.


    ಕುತ್ತಿಗೆ ಹಾಗೂ ತಲೆಗೆ ಮಾರಕಾಸ್ತ್ರದಿಂದ ಗಂಭೀರವಾಗಿ ಗಾಯಗೊಂಡ ವಾಸು ಸಪಲ್ಯ‌ರನ್ನು ಪೋಲೀಸರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 75 ವರ್ಷದ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದ ವಾಸು ಸಪಲ್ಯ‌ರ ಎರಡನೇ ಮಗನಾಗಿರುವ ದಯಾನಂದ್ ಯಾವುದೇ ಉದ್ಯೋಗ ಮಾಡದೆ ತಿರುಗಾಟದಲ್ಲಿ ಜೀವನ ಕಳೆಯುತ್ತಿದ್ದ.


    ತಂದೆಯ ಬುದ್ಧಿವಾದ ಮಗ ದಯಾನಂದನಿಗೆ ಹಿಡಿಸುತ್ತಿರಲಿಲ್ಲ ಹಾಗು ಇದೇ ವಿಚಾರವಾಗಿ ತಂದೆ ಮಗನ ನಡುವೆ ಜಗಳವೂ ಅಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಂದು ಮುಂಜಾನೆ ವಾಸು ಸಪಲ್ಯ‌ ವಾಕಿಂಗ್ ತೆರಳುವ ಸಂದರ್ಭಕ್ಕೆ ಕಾದು ಕುಳಿತಿದ್ದ ಪಾಪಿ ದಯಾನಂದ್ ಮಾರಕಾಸ್ತ್ರದಿಂದ ತಂದೆಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅಪ್ಪ ಚಡಪಡಿಸುವುದನ್ನು ನೋಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

    BELTHANGADY

    ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡ ಸತ್ಯನಾರಾಯಣ ತೋಡ್ತಿಲ್ಲಾಯ

    Published

    on

    ಬೆಳ್ತಂಗಡಿ:  ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ.

    ಇವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
    ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು.

    Read More..; ದೇವಸ್ಥಾನದ ಗೋಶಾಲೆಯಿಂದ ಗೋ ಕಳವಿಗೆ ಯತ್ನ..!

    ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

    ಅಕ್ಕರ ದೇಸಿ ಸಮುದಾಯ ಸಂಘವು ಸತ್ಯನಾರಾಯಣರವರ ನೇಮಕಕ್ಕೆ ಶಿಫಾರಸು ಮಾಡಿತ್ತು. ಕೊಕ್ಕಡದ ಎಡಪಡಿತ್ತಾಯ, ಬಾಳ್ತಿಲ್ಲಾಯ, ಶಬರಾಯ, ಉಪ್ಪಾರ್ಣ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.

    Continue Reading

    BELTHANGADY

    ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ..! ಬಿಜೆಪಿ ಮುಖಂಡ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

    Published

    on

    ಬೆಳ್ತಂಗಡಿ:  ಗಲಾಟೆ ವೇಳೆ ಅಪ್ರಾಪ್ತೆ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ್ದಾನೆ ಎಂದು ಆರೋಪಿಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮುಂದೆ ಓದಿ..; ಬೈಕ್ – ಕಾರು ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃ*ತ್ಯು
    ಬೆಳ್ತಂಗಡಿ ಕಳೆಂಜ ಗ್ರಾಮದ ನಿವಾಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಮ್ ಕೆ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಪೋಕ್ಸೋ ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    BANTWAL

    ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ನೋಟಾಗೆ ದಾಖಲೆಯ ಮತ ಚಲಾವಣೆ

    Published

    on

    ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹೊರತುಪಡಿಸಿ ನೋಟಾಗೆ ಅತೀ ಹೆಚ್ಚು ಮತ ಚಲಾವಣೆಯಾಗಿದೆ. ಈ ಮೂಲಕ ಉಭಯ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಟಾ ಮೂರನೇ ಸ್ಥಾನ ಪಡೆದುಕೊಂಡಿದೆ.

    ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನೋಟಾಗೆ 23,576 ಮತಗಳು ಚಲಾವಣೆಯಾಗಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನೋಟಾಗೆ 11,269 ಮತಗಳು ಬಿದ್ದಿದೆ.

    ದಕ್ಷಿಣ ಕನ್ನಡ ಕ್ಷೇತ್ರದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಬೆಳ್ತಂಗಡಿಯಲ್ಲಿ 7,691 ಮತ, ಮೂಡುಬಿದಿರೆ 2,166, ಮಂಗಳೂರು ನಗರ ಉತ್ತರ 2,019, ಮಂಗಳೂರು ನಗರ ದಕ್ಷಿಣ 1,551, ಮಂಗಳೂರು 892, ಬಂಟ್ವಾಳ 2,353, ಪುತ್ತೂರು 2302, ಸುಳ್ಯ 4,541 ಮತಗಳು ನೋಟಾಕ್ಕೆ ಬಿದ್ದಿದೆ. ಅಂಚೆ ಮತದಾನದಲ್ಲೂ 61 ಮತಗಳು ನೋಟಾಕ್ಕೆ ಬಂದಿದೆ.

    ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುಂದಾಪುರ 1,578, ಉಡುಪಿ 1,778, ಕಾಪು 1,523, ಕಾರ್ಕಳ 2,780, ಶೃಂಗೇರಿ 943, ಮೂಡಿಗೆರೆ 1,135, ಚಿಕ್ಕಮಗಳೂರು 814, ತರಿಕೆರೆ 684 ನೋಟ ಮತ ಚಲಾವಣೆಯಾಗಿರುತ್ತದೆ.

    Continue Reading

    LATEST NEWS

    Trending