Saturday, August 13, 2022

“ನ್ಯಾಯಮೂರ್ತಿಗಳ ವೈಯುಕ್ತಿಕ ದಾಳಿ ನಡೆಸುವ ಸೋಷಿಯಲ್‌ ಮೀಡಿಯಾ ಅಪಾಯಕಾರಿ”

ನವದೆಹಲಿ: ನ್ಯಾಯಧೀಶರ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ.

ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಹೇಳಿದ್ದಾರೆ.


ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ (ಸಿಎಎನ್‌ ಪ್ರತಿಷ್ಠಾನದ) ಸಹಭಾಗಿತ್ವದಲ್ಲಿ

ಲಖನೌನ ಡಾ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಮತ್ತು ಒಡಿಶಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಿನ್ನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತವನ್ನು ಸಂಪೂರ್ಣ ಪ್ರಬುದ್ಧ ಅಥವಾ ಸ್ಪಷ್ಟ ಪ್ರಜಾಪ್ರಭುತ್ವ ಎನ್ನಲಾಗದು. ಶುದ್ಧ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತಿದೆ.

ನ್ಯಾಯಾಧೀಶರ ಮೇಲೆ ಮಾಧ್ಯಮಗಳಿಂದ ಅನಿಯಂತ್ರಿತ ವೈಯಕ್ತಿಕ ದಾಳಿಗಳು ಅಪಾಯಕಾರಿ. ನ್ಯಾಯಾಧೀಶರು ತಾವು ನೀಡಿದ ತೀರ್ಪುಗಳಿಗಾಗಿ ಎದುರಿಸುವ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗಲಿದ್ದು, ಅಲ್ಲಿ ನ್ಯಾಯಾಧೀಶರು ತೀರ್ಪು ನೀಡುವ ಮೊದಲು ಕಾನೂನು ಏನು ಹೇಳುತ್ತದೆ ಎಂಬುದರ ಬದಲು ಮಾಧ್ಯಮಗಳು ಏನು ಯೋಚಿಸುತ್ತವೆ ಎಂದು ಆಲೋಚಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಮೂಡುಬಿದಿರೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ತೋಡಾರು ಗ್ರಾಮದ ನಿವಾಸಿ 33 ವರ್ಷದ ಆರೋಪಿ ಫೈಝಲ್ ಯಾನೆ ಕ್ಯಾಬರೆ...

ಆ.15ರಂದು ಸಾರ್ವಜನಿಕರ ವೀಕ್ಷಣೆಗೆ ಪಿಲಿಕುಳ ತೆರೆದಿರುತ್ತದೆ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕೃತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಆ.15ರಂದು ತೆರೆಯಲಾಗುವುದು ಎಂದು...

ಉಡುಪಿ: ದೇಗುಲದಲ್ಲಿ ಹಾಡಹಗಲೇ ದೋಚಲು ಬಂದಿದ್ದ ಖತರ್ನಾಕ್ ದಂಪತಿ ಅಂದರ್

ಉಡುಪಿ: ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಹಾಡಹಗಲೇ ದರೋಡೆ ಮಾಡಲು ಯತ್ನಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ...