Connect with us

  FILM

  ಸ್ನೇಹಿತ್-ನಮೃತಾ ನಡುವೆ ಮನಸ್ತಾಪ, ಇಷ್ಟ ಪಟ್ಟಾಕೆಯನ್ನು ಇಗ್ನೋರ್ ಮಾಡಿದ ಸ್ನೇಹಿತ್

  Published

  on

  BIGGBOSS10 : ಬಿಗ್ ಬಾಸ್ ಸೀಸನ್ 10 ಇನ್ನೇನು ಕೇಲವೇ ವಾರಗಳಲ್ಲಿ ಮುಗಿಯುತ್ತೆ. ಈ ನಡುವೆ ನಿನ್ನೆ ಬಿಗ್ ಬಾಸ್ ಮನೆಗೆ ಎಲಿಮಿನೇಟ್ ಆದ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ.
  ಆದ್ರೆ ಸ್ನೇಹಿತ್ ಮನೆ ಬಂದಾಗ ನಮೃತಾ ಅವರಲ್ಲಿ ಅಷ್ಟೊಂದು ಕ್ಲೋಸ್ ಆಗಿ ಮಾತನಾಡಿದ್ದು ಕಾಣಲೇ ಇಲ್ಲ. ಇಂದಿನ ಎಪಿಸೋಡ್ ನಲ್ಲಿ ಯಾರು ಗೆಲ್ಲಬೇಕು ಎನ್ನುವ ವಿಚಾರ ಬಂದಾಗ ಸ್ನೇಹಿತ್ ಅವರು ವಿನಯ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಈ ವೇಳೆ ತಮ್ಮ ಹೆಸರನ್ನು ಏಕೆ ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ನಮ್ರತಾ ಪ್ರಶ್ನೆ ಮಾಡಿದ್ದಾರೆ. ಎಲ್ಲರ ಮುಂದೆ ನೀವು ನಿಮ್ಮನ್ನು ಹುಡಕಬೇಕು. ಆಗ ನೀವು ಗೆಲ್ತೀರಾ? ನಿಮ್ಮ ಗೆಲುವನ್ನು ನಾನು ಬಯಸುತ್ತೇನೆ ಎನ್ನುತ್ತಾರೆ.
  ಆಗ ನಮೃತಾ “ನೀವು ಎಷ್ಟು ಜನರನ್ನು ವಿನ್ ಮಾಡ್ತೀರಾ ಸ್ನೇಹಿತ್ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಮುಂದೇನಾಗುತ್ತೋ ಕಾದು ನೋಡ್ಬೇಕಾಷ್ಟೆ.

  Click to comment

  Leave a Reply

  Your email address will not be published. Required fields are marked *

  FILM

  ‘ಬಿಗ್ ಬಾಸ್ ಕನ್ನಡ ಸೀಸನ್ 11′ ಶುರು ಆಗೋದು ಯಾವಾಗ? ಸ್ಪರ್ಧಿಗಳು ಇವರೇನಾ?

  Published

  on

  ‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ವಿಯಾಗಿ ಮುಗಿದಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗುವ ಸಮಯ ಹತ್ತಿರ ಬಂದಿದೆ. ಹೌದು, ಅಕ್ಟೋಬರ್ 3ನೇ ವಾರದಿಂದ ಹೊಸ ಸೀಸನ್ ಆರಂಭವಾಗಲಿದೆಯಂತೆ.

  ತಯಾರಿ ಶುರು ಆಗಿದೆ!

  ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಅಕ್ಟೋಬರ್‌ನಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ. ಈ ಮನೆಗೋಸ್ಕರ 300 ಜನರು ಕೆಲಸ ಮಾಡುತ್ತಿರುತ್ತಾರೆ. ದೊಡ್ಡ ಮನೆ, ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಬೇಕು.

  ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ

  ಸ್ಪರ್ಧಿಗಳ ಆಯ್ಕೆ ಮಾಡೋದು ಕೂಡ ದೊಡ್ಡ ಟಾಸ್ಕ್. ಇಲ್ಲಿ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಎನ್ನಬಹುದು.

  ಸ್ಪರ್ಧಿಗಳು ಯಾರು ಯಾರು?

  ‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ‘ತುಕಾಲಿ ಸ್ಟಾರ್’ ಸಂತು ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ‘ಬಿಗ್ ಬಾಸ್’ ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಹೇಳೋದಿಲ್ಲ. ‘ಬಿಗ್ ಬಾಸ್’ ಪ್ರಸಾರ ಆದಮೇಲೆ ಯಾರು ಸ್ಪರ್ಧಿಗಳು ಎನ್ನೋದು ಗೊತ್ತಾಗುವುದು.

  Continue Reading

  FILM

  ಹಿರಿಯ ಚಲನಚಿತ್ರ ನಿರ್ಮಾಪಕ, ರಂಗಕರ್ಮಿ ಸದಾನಂದ ಸುವರ್ಣ ಇನ್ನಿಲ್ಲ

  Published

  on

  ಮಂಗಳೂರು : ಹಿರಿಯ ಚಲನಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ಅವರು ಇಂದು(ಜು.16) ವಯೋಸಹಜ ಅನಾರೋಗ್ಯದಿಂದ ನಿಧ*ನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೀರ್ತಿ ಸದಾನಂದ ಸುವರ್ಣರದು.
  ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಹುಟ್ಟಿದ ಅವರು ಬೆಳೆದದ್ದು ಮುಂಬಯಿಯಲ್ಲಿ. ಮುಂಬಯಿಯಲ್ಲಿ ರಂಗಶಿಕ್ಷಣ ಕೇಂದ್ರವನ್ನು ಸ್ಥಾಪಿಸಿರುವ ಅವರಿಂದ ಹಲವು ನಾಟಕಗಳು, ಕಲಾತ್ಮಕ ಚಿತ್ರಗಳು ಮೂಡಿ ಬಂದಿವೆ.


  ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್‌ ಮಾರ್ಷಲ್‌, ಉರುಳು ಮತ್ತಿತರ ಜನಪ್ರಿಯ ನಾಟಕ ರಚಿಸಿ ಜನಮನಸೂರೆಗೊಂಡಿದ್ದಾರೆ. ಅವರು ಬರೆದು, ನಿರ್ಮಾಣ ಮಾಡಿದ್ದ ‘ಗುಡ್ಡೆದ ಭೂತ’ ಧಾರಾವಾಹಿ ದೂರದರ್ಶನದಲ್ಲಿ ಬಹಳ ಜನಮೆಚ್ಚುಗೆ ಗಳಿಸಿತ್ತು. ತುಳು ನಾಡಿನ ಹಳ್ಳಿ ಪ್ರದೇಶದ ಜೀವನ ಶೈಲಿ, ನಂಬಿಕೆಗಳ ಮೇಲೆ ಈ ಸರಣಿ ಮೂಡಿಬಂದಿತ್ತು. ಈ ಕಿರು ಸರಣಿ ವೀಕ್ಷಿಸಲು ಜನರು ತುದಿಗಾಲಲ್ಲಿ ಕಾಯುತ್ತಿದ್ದರು. ಕುತೂಹಲಭರಿತವಾಗಿ ಈ ಧಾರಾವಾಹಿ ಮೂಡಿ ಬರುತ್ತಿತ್ತು.

  ಇದನ್ನೂ ಓದಿ :  ಇದೊಂದು ಯಕ್ಷ ಪ್ರಶ್ನೆ! ಎಫ್ ಐ ಆರ್ ಕುರಿತು ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

  ಅವರ ನಿರ್ಮಾಣದ ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ಡಾ. ಶಿವರಾಮ ಕಾರಂತ, ಬ್ರಹ್ಮಶ್ರೀ ನಾರಾಯಣಗುರು ಅವರ ಸಾಕ್ಷ್ಯಚಿತ್ರಗಳು ಕಿರುತೆರೆಗೆ ಅವರು ನೀಡಿದ ಅಮೂಲ್ಯ ಕೊಡುಗೆ. ಸುವರ್ಣಗಿರಿ ಪ್ರಕಾಶನ, ಸದಾನಂದ ಸುವರ್ಣ ಪ್ರತಿಷ್ಠಾನಗಳ ಮೂಲಕ ಅವರು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ.

  Continue Reading

  FILM

  ಇದೊಂದು ಯಕ್ಷ ಪ್ರಶ್ನೆ! ಎಫ್ ಐ ಆರ್ ಕುರಿತು ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ

  Published

  on

  ಬೆಂಗಳೂರು : ಕಾಪಿರೈಟ್ಸ್‌ ವಿಚಾರದಲ್ಲಿ ದಾಖಲಾದ ಎಫ್ ಐ ಆರ್ ಕುರಿತು ನಟ,ನಿರ್ಮಾಪಕ ಹಾಗೂ ನಿರ್ದೇಶಕ ರಕ್ಷಿತ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬ್ಯಾಚುಲರ್‌ ಪಾರ್ಟಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ಎನ್ನುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು‌. ಈ ಬಗ್ಗೆ ತಮ್ಮ ‘ಪರಂವಃ ಸ್ಟುಡಿಯೋಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್ ಶೆಟ್ಟಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

  ಪೋಸ್ಟ್ ನಲ್ಲಿ ಏನಿದೆ?

  ಪ್ರೀತಿಯ ಪ್ರೇಕ್ಷಕರೆ ಮತ್ತು ಮಾಧ್ಯಮ ಮಿತ್ರರೆ, ನಾವು ಈ ಬಹಿರಂಗ ಪತ್ರವನ್ನು ಎಂ ಆರ್ ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ ಎರಡು ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ. ಮೊದಲಿಗೆ ಸ್ಪಷ್ಟೀಕರಿಸಲು, ಚಿತ್ರದಲ್ಲಿ ಬಳಕೆಯಾಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಕಾರಣ ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿವೆ ಎಂದು ಮತ್ತು ಬಳಕೆಯ ರೂಪವನ್ನು ನಿಮ್ಮ ಮುಂದೆ ತರಲು.

  ಬಳಕೆಯ ವಿವರ : 
  1.ತರಗತಿಯೊಂದರಲ್ಲಿ ಶಾಲಾ ಬಾಲಕಿ -”ಒಮ್ಮೆ ನಿನ್ನನ್ನು” ಹಾಡನ್ನು ಸಹಪಾಠಿಗಳ ಮುಂದೆ ಹಾಡುವುದು
  2. ಮನೆಯ ಟಿವಿಯಲ್ಲಿ ”ನ್ಯಾಯ ಎಲ್ಲಿದೆ” ಹಾಡಿನ ಪ್ರಸಾರ

  ಈ ಮುಂಚೆ ಅಂದರೆ, ಬ್ಯಾಚುಲರ್ ಪಾರ್ಟಿ ಸಿನಿಮಾ ತೆರೆಕಾಣುವುದಕ್ಕೂ ಮುನ್ನವೇ ನಾವು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೆವು. ಆದರೆ, ಅವರು ನಮ್ಮ ಮುಂದೆ ಇತ್ತ ಶುಲ್ಕ ನಮ್ಮ ಬಜೆಟ್ ಅನ್ನು ಮೀರಿತ್ತು. ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಶುಲ್ಕದ ಕುರಿತು ಮಾತುಕತೆಗೆ ತಯಾರಿರಲಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಬಂದಿದ್ದು, ಎಫ್ ಐಆರ್ ದಾಖಲಾಗಿದೆ. ಇದು ನಿಜವಾಗಿ ಹಾಡಿನ ಹಕ್ಕು ಉಲ್ಲಂಘನೆಯೇ ? ಹೌದಾಗಿದ್ದೆ ಆಗಿದ್ದಲ್ಲಿ ನಾವು ತೆರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂಆರ್‌ಟಿ ಸಂಸ್ಥೆಯಿಂದ ಕೇಳಲ್ ಪಟ್ಟಿದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ ಈ ತರಹದ ಆರೋಪವನ್ನು ಈಗಾಗಲಿ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು! ಇದೊಂದು ಯಕ್ಷ ಪ್ರಶ್ನೆ! ಇದಕ್ಕೆ ಉತ್ತರ ನಾವು ಹುಡುಕ ಬಯಸುತ್ತೇವೆ.

  ಇದನ್ನೂ ಓದಿ : WATCH VIDEO: ತರಕಾರಿ ಮಾರುವ ಮಹಿಳೆಯ ಮಗ CA ಪಾಸ್..!! ತಾಯಿಯ ಖುಷಿ ಹೇಳತೀರದು..

  ಹಾಗಾಗಲಿ, ನ್ಯಾಯ ಮತ್ತು ಪ್ರಬುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯ ಸ್ಥಾನದಲ್ಲಿಯೇ ನಿರ್ಧಾರವಾಗಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ. ಇದರಿಂದ ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿನಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು ನಮ್ಮ ಈ ಪ್ರಾಮಾಣಿಕ ಪ್ರಯತ್ನ, ನಿಮ್ಮ ಬೆಂಬಲ ಮತ್ತು ಪ್ರೀತಿಯನ್ನು ಆಶಿಸುವ ಪರಂವಃ ಸ್ಟುಡಿಯೋಸ್ ” ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಬರುವ ಹಾಡಿನ ಸನ್ನಿವೇಶದ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.

  Continue Reading

  LATEST NEWS

  Trending