Connect with us

BELTHANGADY

ಬೆಳ್ತಂಗಡಿ: ಸಂಘಟನೆಯಲ್ಲಿದ್ದಾನೆಂದು ವಿದ್ಯಾರ್ಥಿ ಡಿಬಾರ್‌-ಕಾಲೇಜು ಮುಂಭಾಗ ಏಕಾಂಗಿ ಪ್ರತಿಭಟನೆ

Published

on

ಬೆಳ್ತಂಗಡಿ: ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ನೆಪವನ್ನೊಡ್ಡಿ ಕಾಲೇಜಿನಿಂದ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ ಘಟನೆಯು ಬೆಳ್ತಂಗಡಿ ವಾಣಿ ಪಿ ಯು ಕಾಲೇಜಿನಲ್ಲಿ ನಡೆದಿದೆ.

ಕಳೆದ 19 ದಿನಗಳಿಂದ ಸಂಸ್ಥೆಯೊಂದಿಗೆ ಕಾಲೇಜಿಗೆ ಸೇರಿಸುವಂತೆ ವಿನಂತಿ ಮಾಡಿದ್ದರೂ ಮಣಿಯದ ಸಂಸ್ಥೆಯು ಕಾಲೇಜಿನಂದ ಹೊರಹಾಕಿದೆ.

ಇಂದು ನ್ಯಾಯಕ್ಕಾಗಿ ವಿದ್ಯಾರ್ಥಿಯು ಕಾಲೇಜಿನ ಮುಂಭಾಗ ಒಂಟಿ ಪ್ರತಿಭಟನೆ ನಡೆಸುತ್ತಿದ್ದಾನೆ. ಕಾಲೇಜಿನಲ್ಲಿ ವಿದ್ಯಾಭ್ಯಾ ಮುಂದುವರೆಸಬೇಕು, ಡಿಬಾರ್ ಹಿಂಪಡೆಯಬೇಕೆಂದು ವಿದ್ಯಾರ್ಥಿ ಆಗ್ರಹಿಸುತ್ತಿದ್ದಾನೆ.

ಘಟನೆ ಹಿನ್ನೆಲೆ
ಇತ್ತೀಚೆಗೆ ವಾಣಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳನ್ನು ಪಾಲಿಸದೆ ವಿಧ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡ ಬಗ್ಗೆ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ ಎಂಟು ವಿದ್ಯಾರ್ಥಿಗಳ ವಿರುದ್ದ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿತ್ತು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಕಾಲೇಜು ಆಡಳಿತದೊಂದಿಗೆ ಸಮಾಲೋಚನೆ ನಡೆಸಿದ್ದರಿಂದ ಏಳು ವಿದ್ಯಾರ್ಥಿಗಳ ಮೇಲಿನ ಶಿಸ್ತು ಕ್ರಮವನ್ನು ಕೈಬಿಟ್ಟು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳಲಾಗಿದೆ. ಆದರೆ ಸಅದ್ ಮುಹಮ್ಮದ್ ನನ್ನು ಮಾತ್ರ ಶಾಲೆಯಿಂದ ಡಿಬಾರ್ ಮಾಡಲಾಗಿದೆ.

ಇದನ್ನು ವಿರೋಧಿಸಿ ಆತ ಪ್ರತಿಭಟನೆ ನಡೆಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿ ಸಅದ್ ಮುಹಮ್ಮದ್ ನಿರಂತರವಾಗಿ ಕಾಲೇಜಿನ ನಿಯಮಗಳನ್ನು ಪಾಲಿಸದೆ ಅಶಿಸ್ತಿನಿಂದ ವರ್ತಿಸಿದ್ದು, ಈ ಹಿಂದೆಯೂ ಈತನ ವಿರುದ್ದ ಕಾಲೇಜಿನಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.

ಆ ವೇಳೆ ಆತನ ಪೋಷಕರು ಬಂದು ಇನ್ನು ಮುಂದೆ ಇಂತಹ ಘಟನೆಗಳು ನಡೆದರೆ ಆತನನ್ನು ಕಾಲೇಜಿನಿಂದ ಡಿಬಾರ್ ಮಾಡಬಹುದು ಎಂದು ಸಮ್ಮತಿಸಿದ್ದರು. ಇದೀಗ ಮತ್ತೆ ಆತ ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದ್ದು, ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿ ಪ್ರಾಂಶುಪಾಲರ,

ಶಿಕ್ಷಕರ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾನೆ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದ ಬಳಿಕ ಇದೀಗ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

BELTHANGADY

ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಮಳೆಯ ಸಿಂಚನ..! ಹವಾಮಾನ ಇಲಾಖೆ ಮುನ್ಸೂಚನೆ

Published

on

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿಗೆ ಬಸವಳಿದು ಜನರು ಕಂಗಾಲಾಗಿದ್ದು, ಕೆಲವೊಂದು ಕಡೆ ವರುಣನ ಕೃಪೆಗಾಗಿ ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

rain

ಈ ನಡುವೆ ಬಿಸಿ ಶಾಖದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಜನರು ನಿನ್ನೆ ಕೆಲವೆಡೆ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅಲ್ಲಲ್ಲಿ ಅಲ್ಪಾ ಸ್ವಲ್ಪ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ​ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಅದರಲ್ಲೂ ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಜತೆಗೆ ಅಲ್ಲಲ್ಲಿ ಚದುರಿದ ಮಳೆ ಬೀಳುವ ಸಂಭವವಿದೆ. ಮೇ 6 ಮತ್ತು 7 ರಂದು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

BELTHANGADY

ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

Published

on

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(59 ವ) ಅವರು ಹೃದಯಾಘಾತದಿಂದ ಮೇ.1ರಂದು ರಾತ್ರಿ ನಿಧನರಾಗಿದ್ದಾರೆ.

gangadhar

ಮುಂದೆ ಓದಿ..;ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

ಕೋಟದಲ್ಲಿ ಮೇ.1ರಂದು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಕುಕ್ಕಿತ್ತಾಯನ ವೇಷ ಹಾಕಿದ್ದರು. ಮೇಳದ ಬಳಿಕ ಚೌಕಿಯಲ್ಲಿ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

gangadhar

ನಾರಾಯಣ ಮಯ್ಯು ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿದ್ದು 1964ರಲ್ಲಿ ಪುತ್ತೂರಿನ ಸೇಡಿಯಾಪಿನಲ್ಲಿ ಜನಿಸಿದರು. ತನ್ನ 18 ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಬಣ್ಣ ಹಚ್ಚಲು ಆರಂಭಿಸಿದ ಇವರು ಸ್ತ್ರೀ ವೇಷ, ರಾಜ ವೇಷ, ಪುಂಡು ವೇಷಗಳಲ್ಲಿ ನಿಸ್ಸೀಮರಾಗಿದ್ದರು. ಇನ್ನು ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿನಿ, ಪ್ರಮೀಳೆ, ಶ್ರೀ ದೇವಿ, ಸೀತೆ, ದೇವೆಂದ್ರ, ದುಶ್ಯಾಸನ ಮೊದಲಾದ ಪಾತ್ರಗಳ ಅಭಿನಯದಲ್ಲಿಯೂ ಸೈ ಎನಿಸಿಕೊಂಡಿದ್ದರು. ಮೃತರು  ಆರೋಗ್ಯ ಸಹಾಯಕಿಯಾಗಿರುವ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Continue Reading

BELTHANGADY

ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

Published

on

ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್‌ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.

chitha

ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?

ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Continue Reading

LATEST NEWS

Trending