DAKSHINA KANNADA
NK special: ಕರಾವಳಿಯ ಮೊದಲ ಲೇಡಿ ನ್ಯೂಸ್ ಆ್ಯಂಕರ್ ಇವರೇ…..
Published
3 years agoon
By
Adminಕಳೆದ ಒಂದೂವರೆ ದಶಕದಿಂದಾಚೆಗೆ ಕನ್ನಡ ಪತ್ರಿಕೋದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಈಗಿನ ಕನ್ನಡ ಸುದ್ದಿವಾಹಿನಿಗಳನ್ನು ನೋಡಿದರೆ ಹುಡುಗಿಯರದ್ದೇ ಮೇಲುಗೈ.
ಯಾವುದೇ ಸುದ್ದಿಯನ್ನು ಅತ್ಯಂತ ಸುಲಲಿತವಾಗಿ ನಿರೂಪಣೆ ಮಾಡುವ ಘಟಾನುಘಟಿ ಮಹಿಳಾ ನಿರೂಪಕರಿದ್ದಾರೆ. ಆದರೆ 90ರ ದಶಕದಲ್ಲಿ ಈಗಿನಂತೆ ಹೆಣ್ಮಕ್ಕಳು ಮನೆಯಿಂದ ಮುಕ್ತವಾಗಿ ಹೊರಬಂದು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವಷ್ಟು ಸ್ವಾತಂತ್ರ್ಯಇರಲಿಲ್ಲ.
ಈ ಕಷ್ಟಸಾಧ್ಯಗಳ ಮಧ್ಯೆ ಕಳೆದ 25 ವರ್ಷದಿಂದ ಕರಾವಳಿಗರ ನೆಚ್ಚಿನ ಈಗಲೂ ಸುದ್ದಿ ಓದುತ್ತಿರುವ ಆ ನಿರೂಪಕಿಯನ್ನು ನಿಮಗೆ ಪರಿಚಯಿಸಲೇಬೇಕು.
ಅವರೇ ಶೀಲಾ ಕುಂದರ್
ಈ ಹೆಸರು ಕೇಳಿದಾಕ್ಷಣ ಕರಾವಳಿಗರು ಅದರಲ್ಲೂ ಮಂಗಳೂರಿಗರ ಮನಸ್ಸಿನಲ್ಲಿ ಬರುವ ಚಿತ್ರ ಎಂದರೆ ಸ್ಪಷ್ಟ ಉಚ್ಛಾರದ,
ಸುದ್ದಿಯನ್ನು ಅತ್ಯಂತ ಸುಲಲಿತವಾಗಿ ಓದುವ ವಾರ್ತಾ ವಾಚಕಿ. ನಮ್ಮ ಕುಡ್ಲ ವೆಬ್ ಅವರ ಸಂದರ್ಶನ ನಡೆಸಿದೆ. ಅದನ್ನ ಅವರ ಮಾತಿನಲ್ಲೇ ಕೇಳುವ……
ನಾನು ಮೂಲತಃ ಮಂಗಳೂರು ನಗರದ ಬೊಕ್ಕಪಟ್ಣದವಳು.
ಪ್ರೌಢ ಶಾಲಾ ದಿನಗಳಲ್ಲಿ ನನಗೆ ಕಥೆ, ಕವನ ಬರೆಯುವ ಮೂಲಕ ಸಾಹಿತ್ಯದ ಒಲವು ಇತ್ತು. 1988ರಲ್ಲಿ ಪಿಯುಸಿ ಶಿಕ್ಷಣ ಕಲಿಯುತ್ತಿರುವಾಗ ನನ್ನ ಸಾಹಿತ್ಯಾಸಕ್ತಿ ಕಂಡು ಆಗಿನ ಮಂಗಳೂರು ಆಕಾಶವಾಣಿಯ
ನಿಲಯ ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷಾ ಅವರು ನನ್ನನ್ನು ತಾತ್ಕಾಲಿಕ ಉದ್ಘೋಷಕಿಯಾಗಿ ಆಯ್ಕೆ ಮಾಡುತ್ತಾರೆ. ಅಲ್ಲಿ ಹಿನ್ನೆಲೆ ಧ್ವನಿ, ಎಡಿಟಿಂಗ್, ಪ್ರೊಡಕ್ಷನ್ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬೇಕಿತ್ತು.
ಆಗ ಚಂದನ ವಾಹಿನಿ ಬಿಟ್ಟರೆ ಖಾಸಗಿಯಾಗಿ ಸನ್ ನೆಟ್‌ವರ್ಕ್‌ನ ‘ಉದಯ’ ವಾಹಿನಿಯಲ್ಲಿ ಉದಯ ವಾರ್ತೆ ಪ್ರಸಾರವಾಗುತ್ತಿತ್ತು.
ಅದರಲ್ಲಿ ರಾಷ್ಟ್ರ ಹಾಗೂ ಬೆಂಗಳೂರಿನ ಸುದ್ದಿಗಳಿಗೆ ಮಾತ್ರ ಆ ಚಾನೆಲ್‌ಗಳು ಸೀಮಿತವಾಗಿದ್ದವು.
ಕರ್ನಾಟಕ ವಾಣಿಜ್ಯ ಹೆಬ್ಬಾಗಿಲಾಗಿರುವ ಮಂಗಳೂರು ಆರ್ಥಿಕವಾಗಿ ಬೆಳೆದಿದ್ದರೂ, ಇಲ್ಲಿನ ಸುದ್ದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು.
ಆದರೆ ಪತ್ರಿಕೆ ಎಲ್ಲರಿಗೂ ತಲುಪುವುದು ಕಷ್ಟಸಾಧ್ಯ ಜೊತೆಗೆ ಅನಕ್ಷರಸ್ಥರಿಗೆ ಸುದ್ದಿಗಳು ತಲುಪುತ್ತಿರಲಿಲ್ಲ.
ಈ ವೇಳೆಗೆ ಮಂಗಳೂರಿನಲ್ಲಿ ದಿ. ರೋಹಿತ್ ರಾಜ್ ಎಂಬುವವರ ಒಡೆತನದ ‘ಮಂಗಳೂರು ಚಾನೆಲ್’ ಕೇಬಲ್ ಮೂಲಕ ಕಾರ್ಯ ನಿರ್ವಹಿಸುತಿತ್ತು. ಅದರಲ್ಲಿ ಪ್ರತಿನಿತ್ಯ ರಾತ್ರಿ 8 ಗಂಟೆಗೆ ಸ್ಥಳೀಯ ಸುದ್ದಿ ಪ್ರಸಾರವಾಗುತ್ತಿದ್ದವು.
ಆ ಸುದ್ದಿಯನ್ನು ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಓದುತ್ತಿದ್ದರು.
1996ರಲ್ಲಿ ಅದೇ ಚಾನೆಲ್‌ನಲ್ಲಿ ಸುದ್ದಿ ನಿರೂಪಕರು ಬೇಕಾಗಿದ್ದಾರೆಂಬ ಜಾಹೀರಾತು ಬಂದಿತ್ತು. ಆ ಜಾಹೀರಾತು ನೋಡಿ ಅರ್ಜಿ ಸಲ್ಲಿಸಿ, ಸುದ್ದಿ ನಿರೂಪಕಿಯಾಗಿ ಆಯ್ಕೆಯಾದೆ.
ತಂತ್ರಜ್ಞಾನ ಭಾರತದಲ್ಲಿ ಅಂಬೆಗಾಲಿಡುತ್ತಿದ್ದ ಸಮಯ, ಕಂಪ್ಯೂಟರ್‌ನ ಮುಖ ನೋಡದ ಕಾಲವದು.
ಆಗ ಮಂಗಳೂರಿನ ಸರ್ಕ್ಯೂಟ್ ಹೌಸ್‌ನ ಒಂದು ಸಣ್ಣ ಕೊಠಡಿಯಲ್ಲಿ ಅದರ ನ್ಯೂಸ್ ರೆಕಾರ್ಡಿಂಗ್ ಕಾರ್ಯ ಮಾಡಲಾಗುತ್ತಿತ್ತು.
ಬಳಿಕ ಅದನ್ನು ನಂತೂರ್ ಪದವಿನ ಅಜ್ಜಿಯೊಬ್ಬರ ಮನೆಯ ಕೋಣೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಗ್ರೀನ್ ಮ್ಯಾಟ್ ಬಳಸಿ ಸುದ್ದಿ ಓದಲಾರಂಭಿಸಿದೆವು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ಇದಾದ ಕೆಲ ತಿಂಗಳಲ್ಲಿ ಆ ಸುದ್ದಿ ವಾಹಿನಿ ಕಾರಣಾಂತರದಿಂದ ನಿಂತುಹೋಯಿತು.
ಅದಾಗಲೇ ಮಂಗಳೂರಿನಲ್ಲಿ ಮತ್ತೊಂದು ಸುದ್ದಿವಾಹಿನಿ ಪ್ರಾರಂಭವಾಗಿತ್ತು. ಅದುವೇ ‘ನ್ಯೂ ಮಂಗಳೂರು ಚಾನೆಲ್’ ಸರಿಯಾಗಿ ನೆನಪಿಗೆ ನನಗೆ 1997ರ ಸೆ.5ರಂದು ಮದರ್ ತೆರೇಸಾ ನಿಧನ ಹೊಂದಿದ್ದರು.
ಆ ಸುದ್ದಿಯನ್ನು ನ್ಯೂ ಮಂಗಳೂರು ಚಾನೆಲ್‌ನಲ್ಲಿ ಮೊದಲ ಬಾರಿಗೆ ನಾನೇ ಬರೆದು ಓದಿದ ನೆನಪು. ಪ್ರತಿನಿತ್ಯ 3 ಗಂಟೆಗೆ ಬಂದು ನಾನೇ ಸುದ್ದಿ ಬರೆದು ಅದನ್ನು ಕ್ಯಾಮಾರಾದ ಮುಂದೆ ಓದುತ್ತಿದ್ದೆ.
ಬಳಿಕ ಆ ಸುದ್ದಿಯನ್ನು ಎರಡು ವಿಸಿಆರ್ ಇಟ್ಟು ವಿಎಚ್‌ಎಸ್ ಕ್ಯಾಸೆಟ್‌ನಲ್ಲಿ ಫೈನಲ್ ರೆಕಾರ್ಡ್ ಮಾಡಿ ಅದನ್ನು ಮಂಗಳೂರಿನಲ್ಲಿರುವ 20 ಕೇಬಲ್ ಆಪರೇಟರ್‌ಗಳಿಗೆ ತಲುಪಿಸಲಾಗುತ್ತಿತ್ತು.
ರೆಕಾರ್ಡಿಂಗ್ ತಡವಾದ ಸಂದರ್ಭ ನಾನೇ ಎಷ್ಟೋ ಬಾರಿ ಆಪರೇಟರ್‌ಗಳಿಗೆ ಕ್ಯಾಸೆಟ್ ಕೊಟ್ಟು ಮನೆಗೆ ಹೋದದ್ದಿದ್ದೆ. ಆ ಸುದ್ದಿ ರಾತ್ರಿ 8.30ರ ಹೊತ್ತಿಗೆ ಏಕಕಾಲದಲ್ಲಿ ಮಂಗಳೂರಿನಾದ್ಯಂತ ಪ್ರಸಾರವಾಗುತ್ತಿತ್ತು.
ಆಗ ಪತ್ರಿಕೆ ಬಿಟ್ಟರೆ ಜನರಿಗೆ ಯಾವುದೇ ಸುದ್ದಿ ಮೂಲ ಇರಲಿಲ್ಲ. ಹಾಗಾಗಿ ರಾತ್ರಿ 8.30ರ ವೇಳೆಗೆ ಟಿವಿ ಇರುವ ಮನೆಯಲ್ಲಿ ಸುದ್ದಿ ನೋಡಲು ಜನವೋ ಜನ.
ವಿಶೇಷ ಎಂದರೆ ಆಗ ನಾನು ನ್ಯೂಸ್ ಓದುತ್ತಿದ್ದರೂ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ. ನಾನು ನ್ಯೂಸ್ ಓದಿ ಮತ್ತೆ ರಾತ್ರಿ ವೇಳೆ ಪಕ್ಕದವರ ಮನೆಗೆ ನನ್ನದೇ ನ್ಯೂಸ್ ನೋಡಲು ಹೋಗುತ್ತಿದೆ ಎನ್ನುತ್ತಾರೆ ಶೀಲಾ.
ಚಲನಚಿತ್ರ ಶೂಟಿಂಗ್‌ಗೆ ಕನ್ನಡ ಸೇರಿದಂತೆ ಹಲವು ಭಾಷೆಗಳ ನಟ-ನಟಿಯರು ಮಂಗಳೂರಿಗೆ ಬರುತ್ತಿದ್ದರು.
ಅದರಲ್ಲಿ ನಟ ಅನಂತ್‌ನಾಗ್, ಶ್ರೀನಾಥ್, ದಿ.ಅಂಬರೀಷ್, ರಮೇಶ್, ನಟಿ ಲಕ್ಷ್ಮೀ ಸೇರಿದಂತೆ ಹಲವರ ಸಂದರ್ಶನ ಸಹ ಮಾಡಿದ್ದೇನೆ.
ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿಯವರ 3 ಚುನಾವಣೆಗಳನ್ನು ಫೀಲ್ಡಿಗಿಳಿದು ಪ್ರತ್ಯಕ್ಷವಾಗಿ ವರದಿ ಮಾಡಿದ ಚಿತ್ರಣ ಇಂದಿಗೂ ಕಣ್ಣ ಮುಂದಿದೆ.
ನಾನು ಅವರ ಇಷ್ಟದ ಸುದ್ದಿ ನಿರೂಪಕಿಯಾಗಿದ್ದೆ, ಅವರು ನನಗೆ ಸೀರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ಆ ಸೀರೆ ಇಂದಿಗೂ ನನ್ನ ಕಪಾಟಿನಲ್ಲಿ ಜೋಪಾನವಾಗಿ ಇಟ್ಟಿದ್ದೇನೆ.
ಅದಾದ ನಂತರ 1999ರ ಗಣೇಶ ಚತುರ್ಥಿಯಂದು ನಮ್ಮ ಕುಡ್ಲ ತುಳು ವಾರ್ತಾ ವಾಹಿನಿ ಪ್ರಾರಂಭವಾಯಿತು.
ಅದರಲ್ಲಿ ಪ್ರಥಮ ಬಾರಿಗೆ ತುಳು ವಾರ್ತೆ ಆರಂಭವಾಯಿತು. ಇದರ ಮೊದಲ ವಾರ್ತೆಯನ್ನು ನವನೀತ್ ಶೆಟ್ಟಿ ಕದ್ರಿ ವಾಚಿಸಿದರು.
ಎರಡನೇ ವಾರ್ತೆಯನ್ನು ನಾನು ಓದಿದ್ದೆ. ಅಷ್ಟು ವರ್ಷ ಕನ್ನಡ ನ್ಯೂಸ್ ಓದುತ್ತಿದ್ದ ನಾನು, ತುಳು ವಾರ್ತೆ ಓದಲು ಈ ಮೂಲಕ ಆರಂಭಿಸಿದೆ.
ಆಗ ಇಬ್ಬರು ಒಂದೇ ಸ್ಕ್ರೀನ್‌ನಲ್ಲಿ ವಾರ್ತೆ ವಾಚಿಸುವ ಪರಿಪಾಠವಿತ್ತು. ಅದಾಗಿ ಕದ್ರಿ ನವನೀತ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ನಾನು ನ್ಯೂಸ್ ಓದುತ್ತಿದ್ದೆವು.
ಅದಾಗಿ ಮಧ್ಯಭಾಗದಲ್ಲಿ ದುಬೈಗೆ ಹೋದೆ. ಮತ್ತೆ ಊರಿಗೆ ಬಂದು ಸುದ್ದಿ ನಿರೂಪಣೆಯ ಕಾರ್ಯ ಮುಂದುವರೆಸಿದೆ.
ಈಗಲೂ ನಮ್ಮ ಕುಡ್ಲದಲ್ಲಿ ತುಳು ವಾರ್ತೆ ಓದುತ್ತಿದ್ದೇನೆ. ನಾನು ದುಬೈಗೆ ಹೋಗುವಾಗಲೂ ಅಲ್ಲಿನ ತುಳುವರು ‘ಈರ್ ವಾರ್ತೆ ಓದುನಾರ್ ಅತಾ?
ಎಂದು ಕೇಳುತ್ತಿದ್ದಾಗ ತುಂಬಾ ಖುಷಿಯಾಗುತ್ತದೆ ಎನ್ನುತ್ತಾರೆ ನಿರೂಪಕಿ ಶೀಲಾ ಕುಂದರ್. ಇವರ ಪತಿ ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದು,
ಇಬ್ಬರು ಮಕ್ಕಳ ತುಂಬು ಸಂಸಾರ ಇವರದು ಮತ್ತು ಸುದ್ದಿ ಸಂಸಾರ ಜೊತೆ ಜೊತೆ ಸಾಗುತ್ತಿದ್ದಾರೆ. ಕಳೆದ 24 ವರ್ಷಗಳಿಂದ ನಿರಂತರವಾಗಿ ಸುದ್ದಿ ಓದುತ್ತಿದ್ದ ಶೀಲಾ ಕುಂದರ್ ಇದೀಗ ಬೆಳ್ಳಿ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಅವರಿಗೆ ಮುಂದಿನ ಜೀವನ ಸುಖಮಯವಾಗಿರಲೆಂದು ಹಾರೈಸುವ…..
ರಾಜೇಶ್ ಫೆರಾವೋ
DAKSHINA KANNADA
ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ವರ್ಗಾವಣೆ
Published
8 hours agoon
19/01/2025By
NEWS DESK4ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ತತ್‌ಕ್ಷಣ ಜಾರಿಗೆ ಬರುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅವರನ್ನು ಹಿಂಪಡೆಯಲಾಗಿದೆ.
ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ನೂತನ ಆಯುಕ್ತರಾಗಿ ಸರಕಾರ ನೇಮಕ ಮಾಡಿದೆ.
ಇದನ್ನೂ ಓದಿ : ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ
ರವಿಚಂದ್ರ ನಾಯಕ್ ಅವರು ಈ ಮೊದಲು ಮಂಗಳೂರಿನಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
DAKSHINA KANNADA
ನಾಳೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಹಾರಕ್ಕೆ
Published
9 hours agoon
19/01/2025By
NEWS DESK3ಮಂಗಳೂರು : ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜ. 20 ಮತ್ತು 21ರಂದು ಬಿಹಾರಕ್ಕೆ ತೆರಳಿದ್ದಾರೆ.
ಪಾಟ್ನಾದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಪೀಠಾಸೀನಾ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿರುವ ಅವರು “ಸಂವಿಧಾನದ 75ನೇ ವಾರ್ಷಿಕೋತ್ಸವ: ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳ ಕೊಡುಗೆ” ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ: ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ
ಈ ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
DAKSHINA KANNADA
ಮಾಟಮಂತ್ರದ ಹೆಸರು ಹೇಳಿ ವೃದ್ಧೆಗೆ ಮೂತ್ರ ಕುಡಿಸಿದ ಗ್ರಾಮಸ್ಥರು
Published
9 hours agoon
19/01/2025ಮಂಗಳುರು/ಅಮರಾವತಿ: ಮಾಟಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ್ದು ಮಾತ್ರವಲ್ಲದೆ ಬಳಿಕ ಕಬ್ಬಿಣದ ರಾಡ್‌ನಿಂದ ಹೊಡೆದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಡಿಸೆಂಬರ್ 30ರಂದು ಈ ಘಟನೆ ನಡೆದಿದ್ದರೂ ಈ ತಿಂಗಳ ಆರಂಭದಲ್ಲಿ ಪೊಲೀಸ್ ದೂರು ದಾಖಲಾಗಿದ್ದು, ಶುಕ್ರವಾರ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಚಿಕಲ್ದಾರಾ ತಾಲೂಕಿನ ರೆತ್ಯಾಖೇಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಡಿಸೆಂಬರ್ 30ರಂದು ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ನೆರೆಹೊರೆಯವರು ಆಕೆಯನ್ನು ಹಿಡಿದು ಆಕೆ ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಕಟ್ಟಿಹಾಕಿದ್ದಾರೆ. ಬಳಿಕ, ಗ್ರಾಮಸ್ಥರು ಸಂತ್ರಸ್ತೆಯನ್ನು ಮರದ ಕೋಲಿನಿಂದ ಹೊಡೆದು, ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ. ಆಕೆಯ ಕೈ ಮತ್ತು ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿದೆ. ಆ ಮಹಿಳೆಗೆ ಮೂತ್ರ ಕುಡಿಯಲು ಮತ್ತು ನಾಯಿಯ ಮಲ ಸೇವಿಸಲು ಒತ್ತಾಯಿಸಲಾಯಿತು. ನಂತರ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಕೆಲಸಕ್ಕೆ ಹೋಗಿದ್ದ ಆ ಮಹಿಳೆಯ ಮಗ ಮತ್ತು ಸೊಸೆ ಮನೆಗೆ ಬಂದಾಗ ಈ ವಿಷಯ ತಿಳಿದು ಅವರು ಜನವರಿ 5ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
LATEST NEWS
ಮದುವೆ ತಯಾರಿ ನಡೆಯುತ್ತಿರುವಾಗಲೇ ಅ*ಪಘಾ*ತ; ಇಂಜಿನಿಯರ್ ವಧು ವಿ*ಧಿವಶ
ಟಿಕ್ ಟಾಕ್ಗೆ ಶಾಕ್ ನೀಡಿದ ಅಮೆರಿಕ !
ಕಾರಿಗೆ ದಿಢೀರ್ ಬೆಂ*ಕಿ; ಹಸೆಮಣೆ ಏರಬೇಕಿದ್ದ ವರ ಸು*ಟ್ಟು ಬೂ*ದಿ
ಭೀಕರ ರಸ್ತೆ ಅ*ಪಘಾತ; ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಕುಟುಂಬಕ್ಕೆ ಆ*ಘಾತ
ಮದುವೆಯಾಗುವ ಹೊಸ್ತಿಲಲ್ಲಿ ಇರುವ ಯುವ ಸಮೂಹಕ್ಕೆ ಕಿವಿಮಾತು..
ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS5 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS5 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS6 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?