Connect with us

  LATEST NEWS

  ಜು.17ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್‌

  Published

  on

  ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸಪೂಜೆ ಸಲುವಾಗಿ ಜು.17ರಿಂದ 21ರವರೆಗೆ (5ದಿನಗಳು) ಬಾಗಿಲು ತೆರೆಯಲಿದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.

  ಕೇರಳದಲ್ಲೀಗ ಮಲಯಾಳಂ ತಿಂಗಳು ನಡೆಯುತ್ತಿದ್ದು, ಅದರ ನಿಮಿತ್ತ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಶನಿವಾರ ಮಾಹಿತಿ ನೀಡಿದೆ.
  ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು. 48 ಗಂಟೆಗಳ ಹಿಂದೆ ಪಡೆದ ಆರ್​ಟಿ-ಪಿಸಿಆರ್​ ನೆಗೆಟಿವ್​​ ರಿಪೋರ್ಟ್​ ತರಬೇಕು. ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ ಎಂದೂ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗೇ, ದೇಗುಲಕ್ಕೆ ಆಗಮಿಸಲು ಯಾತ್ರಿಕರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿಯನ್ನು ವರ್ಚ್ಯುವಲ್​ ಕ್ಯೂ ಮೂಲಕ ನೀಡಿ, ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಬೇಕಾಗುತ್ತದೆ ಎಂದೂ ಹೇಳಲಾಗಿದೆ.

  ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮೇ ತಿಂಗಳಿಂದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿತ್ತು. ಇದೀಗ 5 ದಿನಗಳ ಅವಕಾಶ ಸಿಕ್ಕರೂ ಕೇವಲ 5000 ಜನರಿಗೆ ಮಾತ್ರ ಅವಕಾಶ ಇರಲಿದೆ.

  DAKSHINA KANNADA

  ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ; 800 ಸಿಬ್ಬಂದಿ, 53 ವಾಹನಗಳ ನಿಯೋಜನೆ

  Published

  on

  ಮ೦ಗಳೂರು: ವಿದ್ಯುತ್‌ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ದವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪನಿ (ಮೆಸ್ಕಾಂ) ವ್ಯವಸ್ಥಾಪಕ ನಿದೇ೯ಶಕರಾದ ಡಿ.ಪದ್ಮಾವತಿ ಅವರು ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾಯ೯ಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

  ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾಗ೯ದಲ್ಲಿ ಅಪಾಯ, ಅವಘಡಗಳಾದಲ್ಲಿ ಸ೦ಪಕಿ೯ಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಅನ್ನು ಕೂಡಾ ಸ೦ಪಕಿ೯ಸಬಹುದಾಗಿದೆ ಎ೦ದು ತಿಳಿಸಿದ್ದಾರೆ.

  ವಿದ್ಯುತ್‌ ಸ೦ಪಕ೯ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸುವ೦ತೆ ಮೆಸ್ಕಾ೦ ಎಲ್ಲಾ ಮುಖ್ಯ ಇಂಜಿನಿಯರ್‌ (ವಿ), ಅಧೀಕ್ಷಕ ಇಂಜಿನಿಯರ್‌ರವರುಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ.ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲಾ ವಿಭಾಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎ೦ದು ಅವರು ವಿವರಿಸಿದ್ದಾರೆ.

  ವಿಶೇಷ ಕಾರ್ಯಪಡೆ ಹಾಗೂ ವಾಹನಗಳು

  – ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ- 40 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕಾವೂರು- 71 ಮ೦ದಿಯ ಕಾರ್ಯಪಡೆ, 6 ವಾಹನಗಳು; ಪುತ್ತೂರು- 95 ಮ೦ದಿಯ ಕಾಯ೯ಪಡೆ,
  5 ವಾಹನಗಳು; ಬಂಟ್ವಾಳ- 113 ಮ೦ದಿಯ ಕಾಯ೯ಪಡೆ, 6 ವಾಹನಗಳು.
  – ಉಡುಪಿ ಜಿಲ್ಲೆಗೆ ಸ೦ಭವಿಸಿದ೦ತೆ ಉಡುಪಿ-65 ಮ೦ದಿಯ ಕಾಯ೯ಪಡೆ,  5 ವಾಹನಗಳು; ಕಾರ್ಕಳ-48 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕುಂದಾಪುರ- 76 ಮ೦ದಿಯ ಕಾಯ೯ಪಡೆ, 2 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಶಿವಮೊಗ್ಗಕ್ಕೆ ಜಿಲ್ಲೆಗೆ ಸ೦ಭವಿಸಿದ೦ತೆ, ಶಿವಮೊಗ್ಗ- 42 ಮ೦ದಿಯ ಕಾಯ೯ಪಡೆ, 2 ವಾಹನಗಳು; ಶಿಕಾರಿಪುರ- 21 ಮ೦ದಿಯ ಕಾಯ೯ಪಡೆ,  2 ವಾಹನಗಳು; ಭದ್ರಾವತಿ- 12ಮ೦ದಿಯ ಕಾಯ೯ಪಡೆ,  1  ವಾಹನ, ಸಾಗರ- 67 ಮ೦ದಿಯ ಕಾಯ೯ಪಡೆ,  6 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
  – ಚಿಕ್ಕಮಗಳೂರು ಜಿಲ್ಲೆಗೆ ಸ೦ಭವಿಸಿದ೦ತೆ, ಚಿಕ್ಕಮಗಳೂರು- 80 ಮ೦ದಿಯ ಕಾಯ೯ಪಡೆ,  4 ವಾಹನಗಳು; ಕೊಪ್ಪ- 51 ಮ೦ದಿಯ ಕಾಯ೯ಪಡೆ, 3 ವಾಹನಗಳು; ಕಡೂರು 19 ಮ೦ದಿಯ ಕಾಯ೯ಪಡೆ, ಹಾಗೂ  3 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.

  ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾಯ೯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
  – ಡಿ.ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

  Continue Reading

  DAKSHINA KANNADA

  ಕುಟುಂಬ ರಾಜಕಾರಣದ ಬಗ್ಗೆ ಮತ್ತೆ ಕಿಡಿಕಾರಿದ ಕೆಎಸ್ ಈಶ್ವರಪ್ಪ

  Published

  on

  ಮಂಗಳೂರು: ಕರ್ನಾಟಕದಲ್ಲಿ ಅಪ್ಪ ಮಕ್ಕಳನ್ನು ಪಕ್ಷದಿಂದ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಪಕ್ಷದ ಶುದ್ಧೀಕರಣ ಆಗಬೇಕು. ಖಂಡಿತಾ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

   

   

  ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ರಘುಪತಿ ಭಟ್ ಪರ ಅವರು ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ ಎಂದರು.

  ಕರ್ನಾಟಕದಲ್ಲಿ ಹಿಂದುತ್ವ ಹಿಂದೆ ಸರಿದು ಜಾತೀಯತೆಗೆ ಸರಿಯುತ್ತಿರುವ ಸಂದರ್ಭ, ಪಕ್ಷ, ಹಿಂದುತ್ವ ಎಂದು ಬಯಸುವ ಎಲ್ಲ ಕಾರ್ಯಕರ್ತರು ರಘುಪತಿ ಭಟ್ ಪರ ಕೆಲಸ ಮಾಡಬೇಕು. ಬಿಜೆಪಿ ಶುದ್ಧೀಕರಣ ಆಗಬೇಕು. ರಘುಪತಿ ಗೆಲ್ಲುತ್ತಾರೆ. ಹಿಂದುತ್ವಕ್ಕೆ ಆಗುತ್ತಿರುವ ಅವಮಾನ, ರಘುಪತಿ ಭಟ್ ಹಾಗೂ ನನಗೆ ಆಗಿರುವ ಅನ್ಯಾಯ ಬಗ್ಗೆ ಎಲ್ಲರೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನಿಂದ ಬಂದ ಅಭ್ಯರ್ಥಿ ಗೆ ಟಿಕೆಟ್ ನೀಡಿರುವುದಕ್ಕೆ ಅರ್ಥವೇ ಇಲ್ಲ. ಹಿಂದುತ್ವದ ನೆಲೆ ಸ್ವಾರ್ಥಿಗಳ ಕೈ ಸೇರಿದೆ. ಇದನ್ನು ಮತ್ತೆ ಪಡೆಯಲು ಎಲ್ಲರೂ ಕೆಲಸ ಮಾಡಬೇಕು ಎಂದರು.

  ಇದು ವಿಶೇಷವಾದ ಚುನಾವಣೆ. ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತದಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದರೆ ರಾಜ್ಯದಲ್ಲಿ ಅದಕ್ಕೆ ತಿಲಾಂಜಲಿ ಇಟ್ಟು ಕಾರ್ಯ ನಿರ್ವಹಿಸುತ್ತಿದೆ. ಜನತಾ ಪಕ್ಷ ಕಟ್ಟಿದ್ದು ಇತಿಹಾಸ. ವಿಶ್ವವನ್ನು ಒಂದು ಗೂಡಿ ಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಕುಟುಂಬ ರಾಜಕೀಯದ ವಿರುದ್ಧ ಕೆಲಸ ಆಗುತ್ತಿದ್ದರೆ, ಕರ್ನಾಟಕದಲ್ಲಿ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ಇದರ ನೋವಲ್ಲಿ ಕಾರ್ಯಕರ್ತರಿದ್ದಾರೆ ಎಂದರು.

  ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ವಿಧಾನಸಭಾ ಚುನಾವಣೆಯ ವೇಳೆಯೂ 45 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ಉಡುಪಿಯ ರಘುಪತಿ ಭಟ್ ಗೆ ನೋವಾಗಿದೆ. ನನಗಾದರೂ ದೆಹಲಿಯಿಂದ ಕರೆ ಬಂದಿತ್ತು. ರಘುಪತಿ ಭಟ್ ಗೆ ಅದೂ ಬಂದಿಲ್ಲ. ಅವರು ಪಕ್ಷ ನಿಷ್ಠೆ ಬಿಟ್ಟಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಅನ್ಯಾಯವಾಗಿದೆ ಎಂದರು.

  Continue Reading

  LATEST NEWS

  ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ : ಇಬ್ಬರು ಎಸ್‌ಐಟಿ ವಶಕ್ಕೆ

  Published

  on

  ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಎಸ್​ಐಟಿ ಬಂಧಿಸಿದೆ. ಹೈಕೋರ್ಟ್​​ಗೆ ಬಂದಿದ್ದ ನವೀನ್ ಗೌಡ, ಚೇತನ್​ನನ್ನು ಎಸ್​ಐಟಿ ಮಂಗಳವಾರ (ಮೇ 28) ಬಂಧಿಸಿದೆ.
  ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್ ಗೌಡ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದು ಭಾರೀ ಚರ್ಚೆಗೆ ಹುಟ್ಟು ಹಾಕಿತ್ತು.


  ಆತ ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಫೇಸ್​ಬುಕ್​ನಲ್ಲಿ ಮೊದಲ ಪೋಸ್ಟ್ ಮಾಡಿದ್ದ. ನಂತರ ಸ್ವಲ್ಪ ಹೊತ್ತಿನಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆಗೆ ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್, ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು.

  ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್​ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ. ಈ ಸಂಬಂಧ ಎಸ್​ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದ್ರೆ, ನವೀನ್​ ಗೌಡ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
  ಈ ಇಬ್ಬರು ಆರೋಪಿಗಳು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ವೇಳೆಯೇ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  ಇನ್ನು ಪ್ರಕರಣದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶ ಸೇರಿದ್ದಾರೆ. ಸೋಮವಾರ(ಮೇ 27) ವೀಡಿಯೋ ಹರಿಬಿಟ್ಟು, ಮೇ 31 ರಂದು ಎಸ್ ಐ ಟಿ ಮುಂದೆ ಹಾಜಾರಾಗುವುದಾಗಿ ತಿಳಿಸಿದ್ದರು.

  Continue Reading

  LATEST NEWS

  Trending