ಮಂಗಳೂರು: ನಿಂತಿದ್ದ ಬಸ್ ಗೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯ ಗೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ ಬಳಿ ಇಂದು ಮಧ್ಯಾಹ್ನ ನಡೆದಿದೆ.
ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಉಚ್ಚಿಲ ಬಳಿ ನಿಂತಿತ್ತು. ತಲಪಾಡಿ ಟೋಲ್ ನಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿ ಊಟಕ್ಕೆಂದು ಇದೇ ವೇಳೆ ತೆರಳುತ್ತಿದ್ದಾಗ ಉಚ್ಚಿಲ ಬಳಿ ಸ್ಕಿಡ್ ಆಗಿ ಬಸ್ ಗೆ ಹಿಂದಿನಿಂದ ಢಿಕ್ಕಿಯಾಗಿದೆ. ಬೈಕ್ ಸವಾರ ಆಂಧ್ರ ಮೂಲದ ಚಂದ್ರ ಶೇಖರ್ ರೆಡ್ಡಿ ಹಾಗು ಅಮೀ ಪಾಶಾ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಇಲ್ಲಿನ ಗ್ರಾಮಾಂತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.