Connect with us

    BELTHANGADY

    ಬೆಳ್ತಂಗಡಿ: ಅಪ್ರಾಪ್ತನಿಂದ ಅಪ್ರಾಪ್ತೆಯ ಮೇಲೆ ಮಧ್ಯರಾತ್ರಿ ಲೈಂಗಿಕ ದೌರ್ಜನ್ಯ

    Published

    on

    ಬೆಳ್ತಂಗಡಿ: ಅಪ್ರಾಪ್ತ ಚಾಲಕನೋರ್ವ ಬಾಲಕಿಯೊಬ್ಬಳ ಮನೆಗೆ ಮಧ್ಯರಾತ್ರಿಯಲ್ಲಿ ಬಂದು ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ‘ಪ್ರೌಢಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿರುವ ಬಾಲಕಿಗೆ ವರ್ಷಗಳ ಹಿಂದೆ ಇನ್‌ ಸ್ಟಾಗ್ರಾಂ ಮೂಲಕ 17 ವರ್ಷ ಬಾಲಕನೊಬ್ಬನ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.

    ಬಾಲಕನು ಮೊಬೈಲ್‌ನಲ್ಲಿ ಬಾಲಕಿಗೆ ಸಂದೇಶ ಕಳುಹಿಸಿ ಆಕೆಯ ಮನೆಗೆ ಬರುವುದಾಗಿ ತಿಳಿಸುತ್ತಿದ್ದನು ಅದರಂತೆ ಆ.13 ರಂದು ರಾತ್ರಿ ಬಾಲಕಿಗೆ ಸಂದೇಶ ಕಳುಹಿಸಿ, ‘ನಾನು ಮನೆಗೆ ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು. ಇಲ್ಲದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆ’ ಎಂದು ಹೆದರಿಸಿದ್ದ.

    ಅಂದು ಎಲ್ಲರೂ ಮಲಗಿದ ನಂತರ ರಾತ್ರಿ 12ರ ವೇಳೆ ಆಕೆಯ ಮನೆಗೆ ಬಂದಿದ್ದ. ಬಾಲಕಿ ಮೇಲೆ ಬಲವಂತದಿಂದ ನಾಲ್ಕೈದು ಸಲ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ.’
    ‘ಇದೇ ರೀತಿ ಸೆ.‌02ರಂದು ಬಾಲಕಿಗೆ ಮತ್ತೆ ಕರೆ ಮಾಡಿದ ಬಾಲಕ ರಾತ್ರಿ ಮನೆಗೆ ಬರುವುದಾಗಿ ತಿಳಿಸಿದ್ದ. ಬೇಡವೆಂದು ಬಾಲಕಿ ಅಂಗಲಾಚಿದರೂ ಕೇಳದೇ ರಾತ್ರಿ 11.50 ಗಂಟೆಗೆ ಮನೆಯವರೆಲ್ಲ ಮಲಗಿದ್ದ ಹೊತ್ತಲ್ಲಿ ಮನೆಯೊಳಗೆ ಬಂದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ’.
    ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಬಾಲಕ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

    BELTHANGADY

    ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತ; ಫುಲ್‌ ಟ್ರಾಫಿಕ್ ಜಾಮ್

    Published

    on

    ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮವಾಗಿ ಚಾರ್ಮಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಧಾರಾಕಾರ ಮಳೆಯಿಂದ ನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದ್ದು, ಹೀಗಾಗಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ವಾಹನಗಳು ಹಿಂದಕ್ಕೂ ಹೋಗದೇ, ಮುಂದಕ್ಕೆ ಹೋಗದೆ ಮಧ್ಯವೇ ಪರದಾಡುವಂತಾಗಿದೆ.


    ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಕ್ಕಿಂಜೆ, ಚಾರ್ಮಾಡಿ ಘಾಟ್‌ ರಸ್ತೆ ಸಂಪೂರ್ಣ ಜಲಮಯವಾಗಿದೆ. ನೆರಿಯಾ, ಪುಲ್ಲಾಜೆ ಸೇತುವೆಗಳು ಮುಳುಗಡೆಯಗಿದೆ.

    ಚಾರ್ಮಾಡಿಯ 3ನೇ ತಿರುವಿನಲ್ಲಿ ರಸ್ತೆ ಮೇಲೆ ನೀರು ನದಿಯಂತೆ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    Continue Reading

    BELTHANGADY

    ಬೆಳ್ತಂಗಡಿ: ಸಹಾಯದ ಹೆಸರಲ್ಲಿ ಅಪರಿಚಿತರಿಂದ ವಂಚನೆ

    Published

    on

    ಬೆಳ್ತಂಗಡಿ: ಸಹಾಯ ಮಾಡುವ ಹೆಸರು ಹೇಳಿ ಬ್ಯಾಂಕ್ ಖಾತೆಯಿಂದ ಇನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಅಬೂಬಕ್ಕರ್ (71) ಅವರ ಹಣ ಎಗರಿಸಿದ ಘಟನೆ ಬೆಳ್ತಂಗಡಿ ಗೇರಕಟ್ಟೆ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದಿದೆ.


    ಅ.2 ರಂದು ಮಧ್ಯಾಹ್ನ 12 ಗಂಟೆಗೆ ಹಣ ಡ್ರಾ ಮಾಡುತ್ತಿರುವಾಗ ಒಳ ಪ್ರವೇಶಿಸಿದ ಅಪರಿಚಿತರಿಬ್ಬರು ಹಿಂದಿಯಲ್ಲಿ ಮಾತಾಡಿ ಸಹಾಯಕ್ಕೆ ಬಂದಿದ್ದರು. ಅಬಾಬಕ್ಕರ್ ಸಹಾಯದ ಅಗತ್ಯ ಇಲ್ಲ ಎಂದು ಹೇಳಿದರೂ, ಒಳಗಡೆಯೇ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಹಣ ತೆಗೆದು ಎಟಿಎಂ ಕೇಂದ್ರದಿಂದ ಕಾರ್ಡ್ ಸಹಿತ ಹೊರಗೆ ಹೋಗಿದ್ದರು. ನಂತರ ಅ.4 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದಾಗ ಕಾರ್ಡ್ ರೀಡ್ ಆಗಲಿಲ್ಲ.
    ಅನುಮಾನದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್ ಬದಲಾಗಿದೆ ಎಂದು ತಿಳಿಸಿದ್ದು, ನಂತರ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ 49,200 ರೂ. ಅನ್ನು ವಂಚಿಸಿರುವುದು ಗೊತ್ತಾಯಿತು.
    ಅ.2 ರಂದು ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಎಟಿಎಂ ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ, ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗುತ್ತಿದೆ.
    ಸಂಪರ್ಕಿಸಬೇಕಾದ ಸಂಖ್ಯೆ: 08256-232093

    Continue Reading

    BELTHANGADY

    ಉಕ್ಕಿ ಹರಿದ ನದಿಗಳು; ರಾತ್ರೋ ರಾತ್ರಿ ಭಯಾನಕ ವಾತವರಣ ಸೃಷ್ಠಿ

    Published

    on

    ಬೆಳ್ತಂಗಡಿ: ಅಚಾನಕ್ಕಾಗಿ ಬಂದ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜನರು ಆತಂಕಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.


    ನಿನ್ನೆ (ಅ.8) ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚಾರ್ಮಾಡಿ, ದಿಡುಪೆ, ನೆರಿಯ ಭಾಗದ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆಗೆ ನೀರು ನುಗ್ಗಿದೆ.
    ನೆರಿಯಾದಲ್ಲಿ ಸೇತುವೆ ಮುಳುಗಡೆಯಾಗಿದಲ್ಲದೆ ಅಲ್ಲಲ್ಲಿ ರಸ್ತೆಗೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದೆ. ಸ್ಥಳೀಯರು ಹೇಳುವಂತೆ 2019 ರ ನೆರೆಯ ನಂತರ ಮಂಗಳವಾರ ರಾತ್ರಿ ನದಿಗಳಲ್ಲಿ ಅತೀ ಹೆಚ್ಚು ನೀರು ಬಂದಿದೆ. ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೆ ನೀರಿನ ಮಟ್ಟ ಏರಿಕೆ ಕಂಡಿದ್ದು ಮತ್ತೆ ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    Trending