ಉಡುಪಿ: ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿಯ ಮಣಿಪಾಲ ಕಾಯಿನ್ ಸರ್ಕಲ್ ಬಳಿ ತಡರಾತ್ರಿ ನಡೆದಿದೆ.
ಶಿವಮೊಗ್ಗದ ಕಾರು ಚಾಲಕ ಸುಹಾಸ್ ಎಂಬಾತ ಬಂಧಿತ ಆರೋಪಿ.
ಇಲ್ಲಿನ ಪಬ್ಬೊಂದರಲ್ಲಿ ಕುಡಿದು ಮತ್ತೇರಿದ 5 ಜನರಿದ್ದ ತಂಡ ಪಬ್‌ನಿಂದ ಹೊರಬಂದು ಕಾರಿನಲ್ಲಿ ಹೊರಟಿದೆ.
ಈ ವೇಳೆ ನಿಯಂತ್ರಣ ತಪ್ಪಿದ ಚಾಲಕ ಒಟ್ಟಾರೆಯಾಗಿ ಕಾರು ಚಲಾಯಿಸಿದ್ದಾನೆ. ಗಾಬರಿಗೊಂಡ ಜನ ಬೊಬ್ಬೆ ಹೊಡೆದಿದ್ದಾರೆ.
ಇದರಿಂದ ಗೊಂದಲಕ್ಕೀಡಾಗಿ ಚಾಲಕ ಕಾರು ಚಲಾಯಿಸಿಕೊಂಡು ಪರಾರಿಯಾಗುವ ವೇಳೆ ಎರಡು ಕಾರುಗಳು ಜಖಂಗೊಂಡಿದೆ.
ಇನ್ನು ಸುಹಾಸ್ ಜೊತೆ ಕಾರಿನಲ್ಲಿ ನಾಲ್ಕು ಮಂದಿ ಕಾರಿನಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ಇಲ್ಲಿನ ಪೆರಂಪಳ್ಳಿ ರಸ್ತೆಯಲ್ಲಿ ಕಾರು ವಶಕ್ಕೆ ಪಡೆದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.