Connect with us

    NATIONAL

    ಮದುವೆ ಭರವಸೆ ನೀಡಿ ನಡೆಸಿದ ಲೈಂಗಿಕ ಕ್ರಿಯೆ, ಅತ್ಯಾಚಾರಕ್ಕೆ ಸಮ : ಅಲಹಾಬಾದ್ ಹೈ ಕೋರ್ಟ್ ತೀರ್ಪು

    Published

    on

    ಅಲಹಾಬಾದ್‌: ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಡೆಸಿದ ಲೈಂಗಿಕ ಕ್ರಿಯೆ, ಅತ್ಯಾಚಾರಕ್ಕೆ ಸಮ ಎಂದು ತೀರ್ಪು ನೀಡಿದೆ.

    ‘ಸುಳ್ಳು ಭರವಸೆ ನೀಡಿ ನಡೆಸುವ ಸಮ್ಮತಿಯ ಲೈಂಗಿಕ ಕ್ರಿಯೆಯು ಅತ್ಯಾಚಾರವೇ ಸರಿ. ಏಕೆಂದರೆ ಸಂತ್ರಸ್ತೆಯು ಸುಳ್ಳು ಭರವಸೆ ನಂಬಿ ಒಪ್ಪಿಗೆ ನೀಡಿರುತ್ತಾಳೆ,’ ಎಂದು ನ್ಯಾಯಮೂರ್ತಿ ಪ್ರದೀಪ್‌ಕುಮಾರ್‌ ಶ್ರೀವಾಸ್ತವ ಹೇಳಿದರು.

    ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಡೆಸಿದ ಲೈಂಗಿಕಕ್ರಿಯೆಯ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸಿದ ಶ್ರೀವಾಸ್ತವ್, ಇದನ್ನು ಅತ್ಯಾಚಾರ ಎಂದು ತೀರ್ಪು ನೀಡಿದ್ದಾರೆ.

    ‘ಸಮಾಜದಲ್ಲಿ ದಿನೇದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಲೈಂಗಿಕ ದೌರ್ಜನ್ಯದಂತೆಯೇ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ದೊಡ್ಡ ಪಿಡುಗಿನ ರೀತಿ ಬೆಳೆಯುತ್ತಿದೆ.

    ಒಪ್ಪಿತ ಲೈಂಗಿಕ ಕ್ರಿಯೆ ಎಂಬ ಕಾರಣದಿಂದ ಆರೋಪಿಗಳು ಬಚಾವಾಗುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ,’ ಎಂದು ನ್ಯಾಯಮೂರ್ತಿ ಹೇಳಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

    Published

    on

    ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

    ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

    Continue Reading

    FILM

    ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

    Published

    on

    ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


    ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

    ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

    Continue Reading

    LATEST NEWS

    ಚಾರ್ ಧಾಮ್ ಯಾತ್ರೆ ವೇಳೆ 14 ಮಂದಿಯ ಜೀವಾಂತ್ಯ!

    Published

    on

    ಉತ್ತರಾಖಂಡ : ಹಿಂದೂಗಳ ಪ್ರಮುಖ ಯಾತ್ರೆಯಲ್ಲಿ ಚಾರ್ ಧಾಮ್ ಯಾತ್ರೆಯೂ ಒಂದು. 6 ತಿಂಗಳಿಗೊಮ್ಮೆ ಈ ಯಾತ್ರೆ ಆರಂಭವಾಗಲಿದ್ದು, ಈ ಬಾರಿ ಮೇ 10 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಈ ಸಮಯದಲ್ಲಿ, ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಕಂಡುಬರುತ್ತಾರೆ. ಕೆಲವೇ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ. ಆದರೆ, ಈ ನಡುವೆ ಕೆಟ್ಟ ಸುದ್ದಿಗಳು ನಿರಂತರವಾಗಿ ಹೊರಬೀಳುತ್ತಿವೆ. ಗಂಗೋತ್ರಿ-ಯಮುನೋತ್ರಿ ಧಾಮದಲ್ಲಿ ಇದುವರೆಗೆ ಒಟ್ಟು 14 ಭಕ್ತರು ಸಾ*ವನ್ನಪ್ಪಿದ್ದಾರೆ.

    ಇತ್ತೀಚೆಗಷ್ಟೇ ಯಮುನೋತ್ರಿ ಯಾತ್ರೆಯ ವೇಳೆ ಗುಜರಾತ್ ಮತ್ತು ಮಹಾರಾಷ್ಟ್ರದ ಮತ್ತಿಬ್ಬರು ಭಕ್ತರು ಸಾ*ವನ್ನಪ್ಪಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಎಲ್ಲಾ ಸಾವುಗಳು ಹೃದಯಾಘಾತದಿಂದ ಸಂಭವಿಸಿವೆ.

    ಇದನ್ನೂ ಓದಿ : ತಾಯಿಯ ಶ*ವದೊಂದಿಗೆ ನಾಲ್ಕು ದಿನ ಕಳೆದು ಇಹಲೋಕ ತ್ಯಜಿಸಿದ ಮಗಳು..!!

    ಇದಲ್ಲದೇ, ಚಾರ್ ಧಾಮ್ ಯಾತ್ರೆಗೆ ಆಫ್ ಲೈನ್ ನೋಂದಣಿಗಾಗಿ ಜನರು ಬಹಳ ಸಮಯ ಕಾಯಬೇಕಾಗಿದ್ದು, ಇದರಿಂದ ಸರದಿಗಾಗಿ ಕಾಯುತ್ತಿದ್ದ ಜನರ ಆಕ್ರೋಶ ಆಡಳಿತದ ವಿರುದ್ಧ ಭುಗಿಲೆದ್ದಿದೆ. ಜನರು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅದೇ ಸಮಯದಲ್ಲಿ ನೋಂದಣಿ ಕೊರತೆಯಿಂದ ಆಡಳಿತದ ವಿರುದ್ಧ ಅಸಮಾಧಾನವಿದೆ. 5-5 ದಿನಗಳಿಂದ ಜನರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

    Continue Reading

    LATEST NEWS

    Trending