Connect with us

  LATEST NEWS

  ಲವ್‌ ಗೆ ವಿರೋಧಿಸಿದ ತಾಯಿಯನ್ನೇ ಕೊಂದ ಮಗಳು: ವಿಡಿಯೋ ಕಾಲ್‌ನಲ್ಲಿ ಕೊಲೆ ಮಾಡಿಸುವುದನ್ನು ಹೇಳಿಕೊಟ್ಟ ಪ್ರಿಯತಮ

  Published

  on

  ಫರಿದಾಬಾದ್: ತನ್ನ ಪ್ರೀತಿಗೆ ವಿರೋಧ ಮಾಡಿದ ಕಾರಣಕ್ಕೆ ಅಪ್ರಾಪ್ತೆಯೊಬ್ಬಳು ತನ್ನ ಅಮ್ಮನನ್ನೇ ಹತ್ಯೆ ಮಾಡಿದ ದುರಂತ ಘಟನೆ ಹರ್ಯಾಣದ ಫರಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ.
  ಈಕೆಗೆ 16 ವರ್ಷದ ಬಾಲಕಿಗೆ 18ವರ್ಷದ ಯುವಕನೊಬ್ಬನನ್ನು ಪ್ರೀತಿ ಮಾಡಿದ್ದಳು. ಆತನೂ ಈಕೆಯನ್ನು ಪ್ರೀತಿಸುತ್ತಿದ್ದ. ಆದರೆ ಇವರ ಸಂಬಂಧಕ್ಕೆ ಬಾಲಕಿಯ ಅಮ್ಮನ ವಿರೋಧವಿತ್ತು. ಇದರಿಂದ ಕೋಪಗೊಂಡ ಹುಡುಗಿ, ಅಮ್ಮನನ್ನು ಹತ್ಯೆ ಮಾಡಿದ್ದಾಳೆ. ಸದ್ಯ ಆರೋಪಿಗಳಾದ ಬಾಲಕಿ ಮತ್ತು ಆಕೆಯ ಪ್ರಿಯತಮ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.


  ಜುಲೈ 10ರಂದು ಮಧ್ಯರಾತ್ರಿ ಅಪ್ರಾಪ್ತೆಯ ಬಾಯ್​ಫ್ರೆಂಡ್ ಮೊದಲು ಆಕೆಯ ಮನೆ ಬಳಿ ಬಂದು ನಿದ್ದೆ ಮಾತ್ರೆ ಕೊಟ್ಟು ಹೋಗಿದ್ದ. ಅಂದು ರಾತ್ರಿ ವಿಡಿಯೋ ಕಾಲ್​ ಮೂಲಕ ಆ ಮಾತ್ರೆಯನ್ನು ಲಿಂಬೆ ಪಾನಕದಲ್ಲಿ ಬೆರೆಸಿಕೊಟ್ಟಿದ್ದಾಳೆ. ಇದರಿಂದ ತಾಯಿ ಅಮಲಾಗಿ ನಿದ್ದೆಗೆ ಜಾರಿದ್ದಾಳೆ. ಈ ವೇಳೆ ತಾಯಿ ಮುಖಕ್ಕೆ ತಲೆದಿಂಬನ್ನು ಒತ್ತಿ ಹಿಡಿಯುವಂತೆ ಆತ ಸೂಚಿಸಿದ, ಅದರಂತೆ ಬಾಲಕಿ ತಲೆದಿಂಬನ್ನು ಗಟ್ಟಿಯಾದ ತಾಯಿ ಮುಖಕ್ಕೆ ಅದುಮಿ ಕೊಲೆ ಮಾಡಿದ್ದಾಳೆ. ಈ ಘಟನೆಯನ್ನು ಪ್ರಿಯತಮ ವಿಡಿಯೋ ಕಾಲ್‌ನಲ್ಲಿ ನೋಡಿದ್ದಾನೆ.
  ಇಬ್ಬರನ್ನೂ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ. 18 ವರ್ಷದ ಯುವಕನನ್ನು ಜೈಲಿಗೆ ಹಾಕಲಾಗುತ್ತದೆ ಮತ್ತು ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಬಾಲಾಪರಾಧ ಕೇಂದ್ರಕ್ಕೆ ಕಳಿಸುತ್ತೇವೆ ಎಂದು ಫರಿದಾಬಾದ್​ ಪೊಲೀಸ್​ ಪಿಆರ್​ಒ ಸ್ಯೂಬ್​ ಸಿಂಗ್​ ತಿಳಿಸಿದ್ದಾರೆ.

  Click to comment

  Leave a Reply

  Your email address will not be published. Required fields are marked *

  LATEST NEWS

  ಜಮೀನಿಗಾಗಿ ಸ್ವಾಮೀಜಿಗಳ ಕಿತ್ತಾಟ..! ಹ*ಲ್ಲೆಗೆ ಓರ್ವ ಸ್ವಾಮೀಜಿ ಬ*ಲಿ

  Published

  on

  ಮಂಗಳೂರು ( ಕೋಲಾರ ) : ಎರಡು ಸ್ವಾಮೀಜಿಗಳ ಜಮೀನು ಗಲಾಟೆಯಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಸ್ವಾಮೀಜಿ ಕೊ*ಲೆಯಾದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದ ‘ಆಚಾರ್ಯ ಚಿನ್ಮಯಾನಂದ’ (65) ಹ*ತ್ಯೆಯಾದ ಸ್ವಾಮೀಜಿ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹ*ತ್ಯೆ ನಡೆದಿದೆ ಎನ್ನಲಾಗಿದೆ.

  ಆಶ್ರಮದ ಜಮೀನು ವಿಚಾರವಾಗಿ ಈ ಎರಡೂ ಸ್ವಾಮಿಗಳ ನಡುವೆ ಹಲವು ಸಮಯದಿಂದ ವಿವಾದ ನಡೆಯುತ್ತಿತ್ತು. ವಿವಾದ ಕೋರ್ಟ್‌ ಮೆಟ್ಟಿಲೇರಿದ್ರೂ ಇಬ್ಬರ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಇಂದು ಕೋರ್ಟ್‌ಗೆ ದಾಖಲೆ ತೆಗೆದುಕೊಂಡು ಹೋಗುತ್ತಿದ್ದ ಆಚಾರ್ಯ ಚಿನ್ಮಯಾನಂದ ಸ್ವಾಮಿ ಮೇಲೆ ಆಚಾರ್ಯ ಧರ್ಮ ಪ್ರಾಣನಂದರ ಗುಂಪಿನಿಂದ ಹ*ಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡ ಚಿನ್ಮಾಯಾನಂದ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಚಿನ್ಮಯಾನಂದ ಸ್ವಾಮಿ ಅಸುನೀಗಿದ್ದಾರೆ. ಇದೀಗ ಆರೋಪಿ ಸ್ವಾಮಿ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

  Continue Reading

  LATEST NEWS

  ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

  Published

  on

  ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮಳೆಯು 5 ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿಯಲಿದೆ. ಬಲವಾದ ಗಾಳಿ ಜೊತೆಗೆ ಮಳೆ ಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

  ಹೇಗಿರುತ್ತೆ ಮಳೆಯ ಆರ್ಭಟ..?

  22/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆ ಆಗಲಿದೆ. ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆ ಆಗಲಿದೆ. ಗುಡುಗು ಸಹಿತ ಭಾರೀ ಗಾಳಿ ಕೂಡ ಬೀಸಲಿದ್ದು, 30-40 kmph ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

  23/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಚದುರಿದ ಮಳೆ ಆಗಲಿದೆ. ಗುಡುಗು ಸಹಿತ ಭಾರೀ ಮಳೆ ಆಗಲಿದೆ. ದಕ್ಷಿಣ ಒಳ ಕರ್ನಾಟಕದ ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಚದುರಿದ ಭಾರೀ ಗಾಳಿ ಮಳೆ ಆಗಲಿದೆ. 30-40 kmph ವೇಗದಲ್ಲಿ ಗಾಳಿ ಬೀಸಲಿದೆ. ಉತ್ತರ ಒಳ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳ ಕರ್ನಾಟಕದ ದಾವಣಗೆರೆ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ.

  24/06/2024: ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ಉತ್ತರ ಒಳ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗಲಿದೆ.

  25-26/06/2024: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

  Continue Reading

  LATEST NEWS

  ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್

  Published

  on

  ಉಳ್ಳಾಲ: ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರು ಠಾಣಾ ವ್ಯಾಪ್ತಿಯ ಕೆಲವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ಮನೆಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಠಾಣಾ ವ್ಯಾಪ್ತಿಯ ಜನರು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು ಎಂದು ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

  ಈ ಪ್ರದೇಶದಲ್ಲಿ ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ. ಮನೆ ಬಳಿ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರು ಎಂದು ಕಂಡು ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Continue Reading

  LATEST NEWS

  Trending