LATEST NEWS
ಅಪ್ರಾಪ್ತ ಬಾಲಕಿಯೊಂದಿಗೆ ಸೆ*ಕ್ಸ್; ವ*ಯಾಗ್ರ ಕೈಕೊಟ್ಟು ಜೀ*ವಹಾನಿ !!
ಮಂಗಳೂರು/ಮುಂಬೈ: ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಹೋಟೆಲ್‌ನಲ್ಲಿ 41 ವರ್ಷದ ವ್ಯಕ್ತಿಯೋರ್ವ ಸಾ*ವನ್ನಪ್ಪಿದ್ದ ಘಟನೆ ಬೆಳಕಿಗೆ ಬಂದಿದೆ.
ಗುಜರಾತಿನ ಸೂರತ್ ನಿವಾಸಿಯಾದ ಸಂಜಯ್ ಕುಮಾರ್ ತಿವಾರಿ ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಷ್ಟೇ.
ನವೆಂಬರ್ 2 ರಂದು ಅಪ್ರಾಪ್ತ ಬಾಲಕಿ ಜೊತೆ ಲೈಂ*ಗಿಕ ಕ್ರಿಯೆ ಮಾಡುತ್ತಿರುವಾಗಲೇ ಕೆಳಗೆ ಬಿದ್ದಿದ್ದಾನೆ. ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರಂಭಿಕ ತನಿಖೆಯಲ್ಲಿ ಇದೊಂದು ಹೃ*ದಯಾಘಾತ ಎಂದು ಶಂಕಿಸಲಾಗಿತ್ತು. ಆದರೆ ರೂಮ್‌ನಲ್ಲಿ ವ*ಯಾಗ್ರ ಮಾತ್ರೆ ಕಂಡು ಬಂದ ಹಿನ್ನಲೆ, ಅದೇ ಸಾವಿಗೆ ಕಾರಣವಾಗಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸಂಜಯ್ ಡೈಮಂಡ್ ಪಾಲಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಜೊತೆಗಿದ್ದ ಹುಡುಗಿ ಪಕ್ಕದ ಮನೆಯವಳು. ಬಾಲಕಿಯ ತಂದೆಗೆ ಪಾರ್ಶ್ವವಾಯು ಉಂಟಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ್ದ ಸಂಜಯ್ ಕುಮಾರ್, ಬಾಲಕಿಯ ಮನೆಯ ಖರ್ಚು ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ಹಣ ಸಹಾಯ ಮಾಡುತ್ತಿದ್ದ. ಈ ಮಧ್ಯೆ ಇವರಿಬ್ಬರ ಸ್ನೇಹ ಉಂಟಾಗಿದ್ದು, ಸುತ್ತಾಟಕ್ಕೆಂದು ಹುಡುಗಿಯನ್ನು ಸಂಜಯ್ ಮೂರು ಗಂಟೆ ಸುಮಾರಿಗೆ ಮುಂಬೈಗೆ ಕರೆತಂದಿದ್ದಾನೆ.
ಹುಡುಗಿ ಅಪ್ರಾಪ್ತೆಯಾಗಿದ್ದ ಕಾರಣ ನಕಲಿ ಆಧಾರ್ ಕಾರ್ಡ್ ಬಳಸಿ ನಾಲ್ಕು ಗಂಟೆ ಸುಮಾರಿಗೆ ಹೋಟೆಲ್ ರೂಮ್ ಬುಕ್ ಮಾಡಿದ್ದಾನೆ. ರೂಮ್‌ನಲ್ಲಿ ಬಾಲಕಿ ಮೇಲೆ ಹ*ಲ್ಲೆ, ಲೈಂ*ಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದ್ದು, ನಂತರ ತಿವಾರಿ ಕು*ಸಿದು ಬಿದ್ದಿದ್ದಾನೆ. ಬಾಲಕಿ ಹೆದರಿ ಹೋಟೆಲ್ ಸಿಬ್ಬಂದಿಯನ್ನು ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾಳೆ. ಕೂಡಲೇ ಸಂಜಯ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಸಾ*ವಿಗೀಡಾಗಿದ್ದಾನೆ.
ಪೊಲೀಸರು ಮೊದಲಿಗೆ ಬಾಲಕಿ ಜೊತೆ ದೈ*ಹಿಕ ಸಂಬಂಧ ಬೆಳೆಸುವ ವೇಳೆ ಹೃ*ದಯಾಘಾತಕ್ಕೆ ಒಳಗಾಗಿದ್ದಾನೆಂದು ಪ್ರಾಥಮಿಕ ಹಂತದಲ್ಲಿ ಹೇಳಿಕೆ ನೀಡಿದ್ದರೂ, ಬಳಿಕ ಕೋಣೆಯಲ್ಲಿ ದೈ*ಹಿಕ ಶಕ್ತಿ ಹೆಚ್ಚಿಸುವ ವಯಾಗ್ರ ದೊರಕಿದೆ. ದೈ*ಹಿಕ ಸಂಬಂಧ ಬೆಳೆಸುವ ಮೊದಲು ಸಂಜಯ್ ವಯಾಗ್ರ ಸೇವಿಸಿದ್ದಾನೆ. ಅದರ ಓ*ವರ್‌ಡೋಸ್‌ನಿಂದ ಮೃ*ತ ಹೊಂದಿರುವುದಾಗಿ ಶಂಕಿಸಲಾಗಿದೆ.
ಸಂಜಯ್ ಕುಮಾರ್ ತಿವಾರಿ ಗುಜರಾತಿನಲ್ಲಿ ಸಂಸಾರ ಹೊಂದಿದ್ದಾನೆ. ಇತ್ತ ಬಾಲಕಿಯ ತಾಯಿ ಘಟನೆಯಿಂದ ದಂಗಾಗಿದ್ದಾರೆ. ಸಂಜಯ್ ಕುಮಾರ್ ತಿವಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
BELTHANGADY
ಬೆಳ್ತಂಗಡಿ : ಯುವಕನೊಂದಿಗೆ ಯುವತಿ ಪರಾರಿ ಶಂಕೆ; ಪ್ರಕರಣ ದಾಖಲು
ಬೆಳ್ತಂಗಡಿ: ಕೆಲಸಕ್ಕೆ ಹೋಗಿ ಬರುವೆನೆಂದು ಹೇಳಿ ಹೋದ ಯುವತಿಯೊಬ್ಬಳು ಕಾಣೆಯಾಗಿರುವ ಘಟನೆ ವೇಣೂರು ಸಮೀಪ ಕರಿಮಣೇಲಿನಲ್ಲಿ ನಡಡೆದಿದೆ.
ಲ
ಸಂಧ್ಯಾ (22) ಕಾಣೆಯಾದ ಯವತಿ.
ನ. 4ರಂದು ಸಂಧ್ಯಾ ಮನೆಯಿಂದ ಕೆಲಸಕ್ಕೆ ಹೋದವಳು ಸಂಜೆ ತನ್ನ ಸಹೋದರಿಯ ಮೊಬೈಲ್‌ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾಳೆ. ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರವನ್ನು ಸಹೋದರಿಗೆ ರವಾನಿಸಿದ್ದು, ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂಬುವುದು ತಿಳಿದಿತ್ತು. ವೇಣೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
LATEST NEWS
ALERT : ಮಕ್ಕಳಿಗೆ `ಜೆಲ್ಲಿ ಕ್ಯಾಂಡಿ’ ನೀಡುವ ಪೋಷಕರೇ ಎಚ್ಚರ : ಗಂಟಲಲ್ಲಿ ಸಿಲುಕಿ 4 ವರ್ಷದ ಬಾಲಕ ದುರಂತ ಸಾ*ವು!
ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಚೂಯಿಂಗ್ ಗಮ್ ತಿಂದು ನಾಲ್ಕು ವರ್ಷದ ಬಾಲಕಿ ಮೃ*ತಪಟ್ಟಿರುವ ಘಟನೆ ನಡೆದಿದೆ.
ಬಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ರಾ ಜರೌಲಿ ಹಂತ -1 ರಲ್ಲಿ ನವೆಂಬರ್ 3 ರಂದು ಸಂಜೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, 4 ವರ್ಷದ ಮಗು ಫ್ರುಟೊಲಾ ಕ್ಯಾಂಡಿ ಎಂಬ ಕಣ್ಣಿನ ಆಕಾರದ ಬಬಲ್ ಗಮ್ ತಿನ್ನುತ್ತಿದ್ದಾಗ, ಅನಿರೀಕ್ಷಿತವಾಗಿ ಬಬಲ್ ಗಮ್ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮಗು ತನ್ನ ಮನೆಯ ಹತ್ತಿರದ ಸ್ಥಳೀಯ ಅಂಗಡಿಯಲ್ಲಿ ಈ ಸಿಹಿತಿಂಡಿಯನ್ನು ಖರೀದಿಸಿದೆ.
ಮಗುವಿನ ಗಂಟಲಿನಲ್ಲಿ ಬಬಲ್ ಗಮ್ ಸಿಲುಕಿಕೊಂಡಿದೆ ಎಂದು ಗೊತ್ತಾದ ತಕ್ಷಣ ಮಗುವಿನ ತಾಯಿ ಬಾಲಕಿಗೆ ನೀರು ಕುಡಿಸಿದ್ದಾರೆ. ಆಗ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಬಬಲ್ ಗಮ್ ಗಂಟಲಿನಲ್ಲಿ ಆಳವಾಗಿ ಜಾರಿ ಹೆಚ್ಚು ಜಟಿಲವಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಶುರುವಾಗಿದೆ.
ಮಗುವಿನ ಸಂಬಂಧಿಕರು ತಕ್ಷಣ ಆಕೆಯನ್ನ ಚಿಕಿತ್ಸೆಗಾಗಿ ಮನೆಯ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಮಗುವಿನ ಗಂಟಲಿನಿಂದ ಬಬಲ್ ಗಮ್ ತೆಗೆದುಹಾಕಲು ವೈದ್ಯರಿಗೆ ಸಾಧ್ಯವಾಗಿಲ್ಲ. ದೀಪಾವಳಿಗಾಗಿ ಹೆಚ್ಚಿನ ಸ್ಥಳೀಯ ಆಸ್ಪತ್ರೆಗಳು ಮುಚ್ಚಲ್ಪಟ್ಟಿದ್ದರಿಂದ ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯವಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅವರು ಮಗುವನ್ನು ಸತತವಾಗಿ ನಾಲ್ಕು ವಿಭಿನ್ನ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಹೋರಾಡಿದ ನಂತರ ಮಗು ಸಾ*ವನ್ನಪ್ಪಿದೆ. ಮಗುವಿನ ಸಾವಿನ ಬಗ್ಗೆ ಟಾಫಿ ಮಾದರಿಯ ಚಾಕೊಲೇಟ್ ತಯಾರಕರಿಂದ ಉತ್ತರವನ್ನ ಮೃ*ತರ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
LATEST NEWS
70 ಲಾರಿಗಳ ಮಾಲಕನಾಗಿದ್ದ ವ್ಯಕ್ತಿ ಸರಗಳ್ಳತನ ಪ್ರಕರಣದಲ್ಲಿ ಬಂಧನ!
ಬೆಂಗಳೂರು: ಒಂದು ಕಾಲದಲ್ಲಿ 70 ಲಾರಿಗಳ ಮಾಲಿಕನಾಗಿದ್ದ ಉದ್ಯಮಿಯೊಬ್ಬ ಶೋಕಿ ಜೀವನದಿಂದ ನಷ್ಟ ಹೊಂದಿ, ಸರಗಳ್ಳತನಕ್ಕಿಳಿದು ಇದೀಗ ಜೈಲು ಸೇರಿದ್ದಾನೆ.
ಹುಬ್ಬಳ್ಳಿಯ ಕೋಳಿ ವಾಡ ಮೂಲದ ವಿಶ್ವನಾಥ್(40) ಬಂಧಿತ. ಆರೋಪಿಯಿಂದ 24.15 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಬೆಂಗಳೂರು, ಧಾರ ವಾಡ, ಹೈದ್ರಾಬಾದ್ ಸೇರಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ 150ಕ್ಕೂ ಅಧಿಕ ಸರಗಳ್ಳತನ ಪ್ರಕರಣ ಗಳು ದಾಖಲಾಗಿದ್ದು, 8-10 ವರ್ಷಗಳಿಂದ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದರು.
ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಬನಶಂಕರಿ 3ನೇ ಹಂತದಲ್ಲಿ ವಾಸವಾಗಿದ್ದ ರಾಜಶೇಖರ್ ಎಂಬವರ ಮನೆ ಬಳಿ ಆ.19ರಂದು ರಾತ್ರಿ 8 ಗಂಟೆ ಸುಮಾರಿಗೆ ಹೋಗಿದ್ದು, ಅವರ ಪತ್ನಿಗೆ ರಾಜಶೇಖರ್ ಬಗ್ಗೆ ವಿಚಾರಿಸಿದ್ದಾನೆ. ಆಗ ಮಹಿಳೆ, ಪತಿ ಮೈಸೂರಿನಲ್ಲಿದ್ದಾರೆ ಎಂದಿದ್ದಾರೆ. ನಂತರ ಆರೋಪಿ ಮೈಸೂರಿನ ವಿಳಾಸ ಕೊಡಿ ಎಂದು ಕೇಳಿದ್ದಾನೆ. ಯಾರೋ ಪರಿಚಯಸ್ಥ ಇರಬೇಕೆಂದು ಮಹಿಳೆ ಮನೆಯೊಳಗೆ ಬನ್ನಿ ಎಂದು ಕರೆದೊಯ್ಯುತ್ತಿದ್ದಂತೆ, 40 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆದರೆ, ಆರೋಪಿ ಸುಳಿವು ಸಿಕ್ಕಿರಲಿಲ್ಲ. ಅ.11ರಂದು ಆರೋಪಿಯನ್ನು ತೆಲಂಗಾಣದ ಹೈದ್ರಾಬಾದ್‌ನ ಚೈತನ್ಯಪುರಿ ಠಾಣೆ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿರುವ ಮಾಹಿತಿ ಸಿಕ್ಕಿತ್ತು. ಬಳಿಕ ಬಾಡಿ ವಾರೆಂಟ್ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ ಕಳವು ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾನೆ. ಬಳಿಕ ಆರೋಪಿ ಬೆಂಗಳೂರು ರಾಜ್ಯದ ವಿವಿಧೆಡೆ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಸ್ನೇಹಿತನ ಮನೆಯಲ್ಲೂ ಚಿನ್ನಾಭರಣ ಇಟ್ಟಿದ್ದ
ಸರಗಳ್ಳತನ ಮಾಡಿದ್ದ ಚಿನ್ನಾಭರಣವನ್ನು ಹೊಸೂರು ರಸ್ತೆಯ ಗಾರ್ವೆಭಾವಿ ಪಾಳ್ಯದಲ್ಲಿ ನೆಲೆಸಿದ್ದ ಸ್ನೇಹಿತನ ಮನೆಯಲ್ಲಿ, ಸ್ನೇಹಿತನಿಗೆ ತಿಳಿಯದಂತೆ ಅಡಗಿಸಿಟ್ಟಿದ್ದ. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ತೆರಳಿ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಯಿತು. ಪೊಲೀಸರ ಕಂಡ ಆತನ ಸ್ನೇಹಿತ ವಿಚಾರ ತಿಳಿದುಕೊಂಡು ಅಚ್ಚರಿಗೊಳಗಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಶೋಕಿಗಾಗಿ ಆಸ್ತಿಪಾಸ್ತಿಕಳಕೊಂಡು ಬೀದಿಗೆ ಬಿದ್ದ ಕೋಟ್ಯಾಧಿಪತಿ!
ಒಂದು ಕಾಲದಲ್ಲಿ ಕೋಳಿವಾಡದಲ್ಲಿ 70 ಲಾರಿಗಳ ಮಾಲಿಕನಾಗಿದ್ದ ವಿಶ್ವನಾಥ್, ಗಣಿಗಾರಿಕೆ ವ್ಯವಹಾರವನ್ನು ಮಾಡುತ್ತಿದ್ದ. ಆದರೆ, ಶೋಕಿ ಜೀವನ ಹಾಗೂ ಹೆಣ್ಣಿನ ವ್ಯಾಮೋಹಕ್ಕೆ ಬಲಿಯಾಗಿ ಕೋಟ್ಯಂತರ ರೂ. ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದಾನೆ. ಬಳಿಕ ಕುಟುಂಬದಿಂದ ದೂರವಾಗಿ, ಜೀವನ ನಿರ್ವಹಣೆ ಹಾಗೂ ತನ್ನ ಶೋಕಿ ಜೀವನಕ್ಕಾಗಿ ಸರ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿ ಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ರಾಷ್ಟ್ರಮಟ್ಟದ ಬೈಕ್ ರೈಡರ್!
ಬಂಧಿತ ಆರೋಪಿ ವಿಶ್ವನಾಥ್ ಅವರ ವಿಚಾರಣೆಯಲ್ಲಿ ಮತ್ತೂಂದು ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ವಿಶ್ವನಾಥ್ ಕೋಟ್ಯಧಿಪತಿ ಮಾತ್ರವಲ್ಲ. ರಾಷ್ಟ್ರೀಯ ಮಟ್ಟದ ಬೈಕ್ ರೈಡರ್ ಕೂಡ ಆಗಿದ್ದ. ರಾಷ್ಟ್ರಿಯ ಮಟ್ಟದ ಹತ್ತಾರು ಬೈಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ ಎಂಬುದು ಗೊತ್ತಾಗಿದೆ. ಹೀಗಾಗಿ ಸರ ಕಳವು ಮಾಡುವ ಮೊದಲು ಪ್ರವೇಶ ಮತ್ತು ನಿರ್ಗಮನ ರಸ್ತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದ. ಪ್ರಮುಖವಾಗಿ ಸಂಚಾರ ದಟ್ಟಣೆ ಬಗ್ಗೆ ಎಚ್ಚವಹಿಸುತ್ತಿದ್ದ. ಬಳಿಕ ಸರ ಕಳವು ಮಾಡಿ, ಕ್ಷಣಾರ್ಧದಲ್ಲೇ ಬೈಕ್ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ನಗರದಿಂದ ಹೊರ ಹೋಗುತ್ತಿದ್ದ. ಈತನ ಬೈಕ್ ಚಾಲನೆ ವೇಗಕ್ಕೆ ಯಾರು ಹಿಂಬಾಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ಅವರು ಮಾಹಿತಿ ನೀಡಿದರು.
- DAKSHINA KANNADA4 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS2 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್
- FILM7 days ago
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಕರಾವಳಿ ಬೆಡಗಿ ಆ್ಯಂಕರ್ ಅನುಶ್ರೀ
- LATEST NEWS4 days ago
ಬಲಗೈ ಬಿಟ್ಟು ಎಡಕೈಗೆಯೇ ಯಾಕೆ ವಾಚ್ ಕಟ್ಟುವುದು ಗೊತ್ತಾ ?