Connect with us

    LATEST NEWS

    ಹಿರಿಯ ಪತ್ರಕರ್ತ ಶ್ಯಾಮಸುಂದರ್ ಹೃದಯಘಾತದಿಂದ ನಿಧನ..

    Published

    on

    ಹಿರಿಯ ಪತ್ರಕರ್ತ ಶ್ಯಾಮಸುಂದರ್ ಹೃದಯಘಾತದಿಂದ ನಿಧನ

    ಬಳ್ಳಾರಿ: ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ಯಾಮ ಸುಂದರ್(70) ಅವರು ಹೃದಯಾಘಾತದಿಂದ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    ಮೃತ ಶ್ಯಾಮ ಸುಂದರ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

    ಬಳ್ಳಾರಿಯ ಮೋಕಾ ರಸ್ತೆಯಲ್ಲಿರುವ ಬಗೀಚಾ ಹೋಟೆಲ್ ಹಿಂದುಗಡೆಯ ಕೆ.ಹೆಚ್.ಬಿ ಕಾಲೊನಿಯ ನಿವಾಸಿಯಾಗಿದ್ದ ಹಿರಿಯ ಪತ್ರಕರ್ತ ಶಾಮಸುಂದರ್ ಅವರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

    ಅವರನ್ನು ಚಿಕಿತ್ಸೆಗೆಂದು ಬಿಕೆಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ, ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದಿತ್ತು ಎಂದು ಹೇಳಲಾಗಿದೆ.

    ಶ್ಯಾಮಸುಂದರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.

    ಶ್ಯಾಂ ಸುಂದರ್ ದಿ ಹಿಂದು’ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ್ದರು.

    ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದ ಶ್ಯಾಮ್ ಸುಂದರ್ ಅವರು, ದಿ ಹಿಂದು ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿದ್ದರು.

    ಇವರ ವರದಿಗಾರಿಕೆ ಮೆಚ್ಚಿ ರಾಜ್ಯ ಸರ್ಕಾರವು ಮಾಧ್ಯಮ ವಿಭಾಗದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    DAKSHINA KANNADA

    ರೆಡ್‌ ಅಲರ್ಟ್‌ ಹಿನ್ನೆಲೆ…! ಜುಲೈ 9 ಶಾಲೆಗೆ ರಜೆ ಘೋಷಣೆ..!

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನಾಳೆ (ಜುಲೈ9 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 8 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

     

    ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 9 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    Continue Reading

    LATEST NEWS

    ರಾಹುಲ್‌ಗೆ ಕೆನ್ನೆಗೆ ಯಾರಾದ್ರೂ ಹೊಡಿಬೇಕು..! ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ..!

    Published

    on

    ಮಂಗಳೂರು : ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಕೆಯ ತನ್ನ ಭಾಷಣದ ವೇಳೆ ಹಿಂದೂ ಸಮಾಜವನ್ನು ಅವಹೇಳನ ಮಾಡಿದ್ದಾರೆ ಅಂತ ಬಿಜೆಪಿ ಪ್ರತಿಭಟನೆ ನಡೆಸ್ತಾ ಇದೆ. ಇದೇ ವಿಚಾರಕ್ಕೆ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದೇನು..?

    ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿ ತನ್ನ ಮೊದಲ ಭಾಷಣದಲ್ಲೇ ವಿವಾದ ಸೃಷ್ಠಿಸಿದ್ದಾರೆ. ಭಾಷಣದಲ್ಲಿ ರಾಹುಲ್ ಗಾಂಧಿ “ಬಿಜೆಪಿ ಹಾಗೂ ಸಂಘಪರಿವಾರ ಸೇರಿದಂತೆ ಪ್ರಧಾನಿ ಮೋದಿ ಕೂಡಾ ನೈಜ್ಯ ಹಿಂದೂ ಅಲ್ಲ” ಎಂದು ಹೇಳಿಕೆ ನೀಡಿದ್ದರು.  ಈಶ್ವರನ ಫೋಟೋ ತೋರಿಸಿ ” ಹಿಂದೂ ಯಾವತ್ತೂ ಹಿಂಸೆಯನ್ನು ಪ್ರೋಚೋಧಿಸುವುದಿಲ್ಲ ಎಂದು ಈಶ್ವರನ ಈ ಚಿತ್ರ ಹೇಳುತ್ತದೆ . ಆದ್ರೆ ಬಿಜೆಪಿ ಹಿಂಸೆಯನ್ನು ಪ್ರಚೋಧಿಸುತ್ತದೆ, ಪ್ರಧಾನಿ ಮೋದಿ ಹಿಂಸೆಯ ಭಾಷಣ ಮಾಡುತ್ತಾರೆ ಹೀಗಾಗಿ ಅವರು ನೈಜ್ಯ ಹಿಂದೂ ಆಗಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.


    ಇದೇ ವಿಚಾರ ಈಗ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸ್ತಾ ಇದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕ್ರೋಶಭರಿತ ಮಾತನಾಡಿರುವ ಶಾಸಕ ಭರತ್ ಶೆಟ್ಟಿ “ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಯಾರಾದ್ರೂ ಕೆನ್ನೆಗೆ ಹೊಡಿಬೇಕು ಅನಿಸುತ್ತಿದೆ” ಎಂಬ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

    ರಾಹುಲ್ ಗಾಂಧಿ ಪರ ನಿಂತ ಜೋತಿರ್‌ ಮಠದ ಜಗದ್ಗುರು

    ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿಯವರು ರಾಹುಲ್ ಗಾಂಧಿ ಎಲ್ಲೂ ಹಿಂದೂ ಧರ್ಮಕ್ಕೆ ಅವಮಾನ ಮಾಡಿಲ್ಲ. ಅವರು ಭಾಷಣದಲ್ಲಿ ಇದು ಸ್ಪಷ್ಟವಾಗಿದ್ದು, ಅವರು ತನ್ನ ಎದುರು ಇರುವ ಪಕ್ಷವನ್ನು ಉಲ್ಲೇಖಸಿದ್ದಾರೆ ಎಂದು ಹೇಳಿದ್ದಾರೆ.

    ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಜಗದ್ಗುರು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿ, “ಆರೋಪ ಕೇಳಿ ಬಂದಾಗ ನಾನೂ ಕೂಡಾ ಅವರ ಸಂಪೂರ್ಣ ಭಾಷಣವನ್ನು ವೀಕ್ಷಿಸಿದ್ದೇನೆ. ಎಲ್ಲೂ ಕೂಡಾ ಅವರು ಹಿಂದೂ ಧರ್ಮವನ್ನು ಹಿಂಸೆ ಮಾಡುವವರು ಎಂದಿಲ್ಲ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶ ಇಲ್ಲಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಅವರ ಹೇಳಿಕೆಯನ್ನು ತಿರುಚಿ ಒಂದು ಭಾಗವನ್ನು ಮಾತ್ರ ಹರಡಿ ಅವರು ಹಿಂದೂಗಳಿಗೆ ಹಿಂಸಾತ್ಮಕರು ಎಂದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ರಾಹುಲ್ ಗಾಂಧಿ ತನ್ನ ಎದರು ಇರುವಂತಹ ರಾಜಕೀಯ ಪಕ್ಷ ಹಾಗೂ ಅದರ ನಾಯಕನನ್ನು ಉದ್ದೇಶಿಸಿ ಹೇಳಿದ ಭಾಗವಷ್ಟೇ ಹರಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

    Continue Reading

    LATEST NEWS

    ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆ*ತ್ಮಹ*ತ್ಯೆಗೆ ಶರಣು

    Published

    on

    ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್​ ಅವರು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಬಿಸಿ ಪಾಟೀಲ್ ದೊಡ್ಡ ಮಗಳಾದ ಸೌಮ್ಯ ಅವರ ಗಂಡ ಪ್ರತಾಪ್​​ ಕುಮಾರ್​​ ಅವರು ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ.

    ಪ್ರತಾಪ್​ ಕುಮಾರ್​ ಅವರಿಗೆ 43 ವರ್ಷ. ಈ ಘಟನೆ ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್​ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರ ಸಾ*ವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

    Continue Reading

    LATEST NEWS

    Trending