Connect with us

    LATEST NEWS

    ನೀವು ಪ್ರಾಣಿ ಪ್ರಿಯರಾ? ನಿಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಿದ್ದಾವಾ? ಹಾಗಾದ್ರೆ ಈ ಸ್ಟೋರಿ ನೋಡಿ

    Published

    on

    ಮಂಗಳೂರು : ನೀವು ಮನೆಯಲ್ಲಿ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು (ಪೆಟ್ಸ್‌) ಸಾಕುತ್ತಿದ್ದೀರಾ ಅಂದ್ರೆ ಈ ಸ್ಟೋರಿಯನ್ನು ತಪ್ಪದೆ ಓದಬೇಕು. ಯಾಕಂದ್ರೆ ಮನೆಯಲ್ಲಿ ನಾಯಿ, ಬೆಕ್ಕು ಸಹಿತವಾಗಿ ನೀವು ಸಾಕುವ ಪ್ರಾಣಿಗಳಿಗೆ ಸ್ಥಳೀಯಾಡಳಿತದ ಲೈಸೆನ್ಸ್‌ ಕಡ್ಡಾಯ ಇದೆ ಅನ್ನೋದು ಹಲವರಿಗೆ ಗೊತ್ತಿಲ್ಲ.
    ನಿಮ್ಮ ಮನೆಯಲ್ಲಿ ನಾಯಿ ಇದೆ ಅಂತಾದ್ರೆ ನಿಮ್ಮ ಮನೆಯಲ್ಲಿ ಯಾವ ತಳಿಯ ನಾಯಿ ಇದೆ ಎಂಬ ಬಗ್ಗೆ ನೀವು ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಬೇಕು. ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್‌ ಹಾಗೂ ನಾಯಿಯ ಎರಡು ಫೋಟೋ ಹಾಗೂ ಅಕ್ಕಪಕ್ಕದ ನಿವಾಸಿಗಳು ಅಥವಾ ಫ್ಲ್ಯಾಟ್‌ ಅಸೋಷಿಯೇಷನ್‌ನ ನಿರಾಕರಣ ಪತ್ರ (ಎನ್‌ಒಸಿ)ಯನ್ನು ನೀಡಬೇಕಾಗುತ್ತದೆ.


    ಇದು ಬೆಕ್ಕು ಸೇರಿದಂತೆ ಪೆಟ್‌ ಶಾಪ್‌ನಲ್ಲಿ ಖರೀದಿಸುವ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಅನ್ವಯ ಆಗುತ್ತದೆ. 1976ರ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯ ಸೆಕ್ಷನ್ 344 ರ ಪ್ರಕಾರ ಲೈಸೆನ್ಸ್‌ ಕಡ್ಡಾಯ ಮಾಡಿ ಆದೇಶ ಮಾಡಲಾಗಿದೆ. ಮಂಗಳೂರು ನಗರದಲ್ಲೂ ಈ ಕಾನೂನು ಜಾರಿಯಲ್ಲಿದ್ದು, ಮನೆಯಲ್ಲಿ ಸಾಕುವ ಎಲ್ಲಾ ಪ್ರಾಣಿ ಪಕ್ಷಿಗಳ ಬಗ್ಗೆ ಹಾಗೂ ಕೆಲವೊಂದು ಬಗೆಯ ಮೀನುಗಳನ್ನು ಸಾಕುವ ಬಗ್ಗೆಯೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿ ಪರವಾನಿಗೆ ಪಡೆದುಕೊಳ್ಳಬೇಕಿದೆ.

    ದೇಶದ ಕೆಲವೊಂದು ಭಾಗದಲ್ಲಿ ನಿಷೇದಿತ ಪ್ರಾಣಿ ಪಕ್ಷಿಗಳನ್ನು ಸಾಕುವ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕಾನೂನನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗಿದೆ. ಫೆಸೆಂಟ್, ಗಿಳಿ, ಬಾತುಕೋಳಿ, ನವಿಲು, ಗೂಬೆ ಮತ್ತು ಗಿಡುಗಗಳನ್ನು ಯಾವುದೇ ಕಾರಣಕ್ಕೂ ಸಾಕಲು ಕಾನೂನಿನಲ್ಲಿ ಅವಕಾಶ ಇಲ್ಲ.

    ಇದನ್ನೂ ಓದಿ :  ಚಿರತೆ ಸೆರೆ ಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ; ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ!?

    ಇನ್ನು ಒಂಟೆ, ಜಿಂಕೆ, ಕೋತಿ, ಆನೆಯನ್ನೂ ಸಾಕಲು ಅವಕಾಶ ಇಲ್ಲ. ಇವುಗಳನ್ನು ಸಾಕುವುದು ಕಂಡು ಬಂದ್ರೆ ಅರಣ್ಯ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇನ್ನು ಅಗತ್ಯ ಪರವಾನಿಗೆಯೊಂದಿಗೆ ಒಂಟೆ, ಆನೆಗಳನ್ನು ಸೂಕ್ತ ಕಾರಣ ನೀಡಿ ಸಾಕಲು ಅವಕಾಶ ಇದೆಯಾದ್ರೂ ಪ್ರತಿ ವರ್ಷ ಈ ಪರವಾನಿಗೆಯನ್ನು ನವೀಕರಿಸಬೇಕಾಗುತ್ತದೆ.

    LATEST NEWS

    ಕಾಸರಗೋಡು: ಗ್ರೈಂಡರ್ ಗೆ ಶಾಲ್‌ ಸಿಲುಕಿ ಮಹಿಳೆ ಸಾ*ವು

    Published

    on

    ಕಾಸರಗೋಡು: ಗ್ರೈಂಡರ್ ಗೆ ಶಾಲ್ ಸಿಲುಕಿ ಗೃಹಿಣಿ ಮೃ*ತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಪೆರುವಾಡ್ ನಲ್ಲಿ ನಡೆದಿದೆ.

    ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( ೫೨) ಮೃ*ತಪಟ್ಟವರು. ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಪತಿ ಇಸ್ಮಾಯಿಲ್ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿ*ತ ಪ್ರಕರಣ : ನೀರುಪಾಲಾಗಿದ್ದ ವೃದ್ಧೆಯ ಶ*ವಕ್ಕೆ ಹೆಗಲು ಕೊಟ್ಟ ಮಂಗಳೂರಿನ ಪತ್ರಕರ್ತರು!

    Published

    on

    ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನೀರುಪಾಲಾಗಿದ್ದ ಉಳವರೆ ಗ್ರಾಮದ ನಿವಾಸಿ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃ*ತದೇಹ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿಯ ತೀರದಲ್ಲಿ ಪತ್ತೆಯಾಗಿದ್ದು, ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಯಿತು.
    ದುರಂತದಲ್ಲಿ ಉಳವರೆ ಗ್ರಾಮದ 6 ಮನೆಗಳು ಸಂಪೂರ್ಣ ನಾಮಾವಶೇಷವಾಗಿದೆ. 18ರಷ್ಟು ಮನೆಗಳು ಭಾಗಶ: ಹಾ*ನಿಗೊಳಗಾಗಿದೆ.

    ಬೇಸರದ ಸಂಗತಿ ಎಂದರೆ, ಮೃ*ತದೇಹವನ್ನು ಕುಟುಂಬಿಕರಿಗೆ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ, ಸ್ಥಳೀಯ ಆಡಳಿತ, ಶಾಸಕರು ಹೀಗೆ ಯಾರೆಂದರೆ ಯಾರೂ ಇರಲಿಲ್ಲ. ಗ್ರಾಮದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಹಿಳೆಯರು ಕಾಳಜಿ ಕೇಂದ್ರದಲ್ಲಿದ್ದಾರೆ.

    ಹೆಗಲಾದ ಪತ್ರಕರ್ತರು :
    ಹೊರುವವರಿಲ್ಲದೆ ರಸ್ತೆಯೂ ಸರಿಯಿಲ್ಲದೇ ವೃದ್ಧೆಯ ಶ*ವ ಆಂಬುಲೆನ್ಸ್ ನಲ್ಲಿ ಉಳಿದಿದ್ದು, ಕೊಳೆತ ವಾಸನೆಯಿಂದಾಗಿ ಯಾರೂ ಹೊರಲು ಸಿದ್ಧರಿರಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಮಂಗಳೂರಿನ ಪತ್ರಕರ್ತರು ಮೃ*ತದೇಹವನ್ನು ತಾವೇ ಹೊತ್ತುಕೊಂಡು ಸಾಗಿ ಮನೆಯವರಿಗೆ ಒಪ್ಪಿಸಿ ಮುಂದಿನ ಅಂತಿಮ ಸಂ*ಸ್ಕಾರ ನಡೆಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ನಿರಾಶ್ರಿತರು ಮತ್ತು ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ನೀಡಲು ಮಂಗಳೂರಿನಿಂದ ತೆರಳಿದ್ದ ಪತ್ರಕರ್ತರ ಚಾರಣ ತಂಡದ ಸದಸ್ಯರಾದ ಮೋಹನ್ ಕುತ್ತಾರ್, ಶಶಿ ಬೆಳ್ಳಾಯರು, ಆರಿಫ್ ಯು.ಆರ್.ಕಲ್ಕಟ್ಟ, ಗಿರೀಶ್ ಮಳಲಿ, ಶಿವಶಂಕರ್ ಅವರು ಶ*ವಸಂಸ್ಕಾರದಲ್ಲಿ ಸಹಕರಿಸಿದರು.

    ಇದನ್ನೂ ಓದಿ : 4 ವರ್ಷದ ಬಾಲಕಿ ಕಿಡ್ನಾ*ಪ್, ಅತ್ಯಾ*ಚಾರ ಮಾಡಿ ಕೊ*ಲೆ.. ಮೃ*ತದೇಹ ಏನು ಮಾಡಿದ್ದ ಗೊತ್ತಾ?
    ಟ್ಯಾಂಕರ್ ಸ್ಫೋಟವೇ ಘಟನೆಗೆ ಕಾರಣ!
    ಶಿರೂರು ಗುಡ್ಡ ಕು*ಸಿತ ಉಂಟಾದಾಗ ಹೆದ್ದಾರಿಯಲ್ಲಿದ್ದ ಗ್ಯಾಸ್ ಟ್ಯಾಂಕರ್ ನೀರಿಗೆ ಬಿದ್ದು ಭಾರಿ ಸದ್ದಿನೊಂದಿಗೆ ಸ್ಫೋ*ಟ ಸಂಭವಿಸಿತ್ತು. ಇದರಿಂದಲೇ ಉಳವರೆ ಗ್ರಾಮ ನಾಶಗೊಂಡು ಹಲವರು ಪ್ರಾ*ಣ ಕಳೆದುಕೊಳ್ಳುವಂತಾಯ್ತು ಎನ್ನುವ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

    ನೀರು‌ ಚಿಮ್ಮುತ್ತಿದ್ದಂತೆ ಬಾಂ*ಬ್‌ನಂತೆ ಸ್ಫೋ*ಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಈ ಸಂಶಯ ಬಲವಾಗಿದೆ. ಈ ನಡುವೆ ಕೇರಳ ಟ್ಯಾಂಕರ್ ಡ್ರೈವರ್ ಅರ್ಜುನಗಾಗಿ ಶೋಧ ಮುಂದುವರಿದಿದೆ.

    Continue Reading

    DAKSHINA KANNADA

    ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಮಧ್ಯೆ ಅಪ*ಘಾತ; ಹಲವರಿಗೆ ಗಾ*ಯ

    Published

    on

    ಚಿಕ್ಕಮಗಳೂರು: KSRTC ಹಾಗೂ ಟ್ಯಾಂಕರ್ ಮಧ್ಯೆ ಭಯಾನಕ ಡಿ*ಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹಲವರಿಗೆ ಗಂಭೀರ ಗಾ*ಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೂಡಿಗೆರೆ ತಾಲೂಕಿನ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರವಳಲು ಬಳಿ ಈ ಅಪ*ಘಾತ ಸಂಭವಿಸಿದೆ. ಅಪ*ಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾ*ಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾ*ನಿ ಸಂಭವಿಸಿಲ್ಲ.

    KSRTC, ಟ್ಯಾಂಕರ್ ಅಪ*ಘಾತದಿಂದ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Continue Reading

    LATEST NEWS

    Trending