Connect with us

    LATEST NEWS

    ಕಾರ್ಮಿಕ ನಾಯಕ, ಹೋರಾಟಗಾರ ಮಾರುತಿ ಮಾನ್ಪಡೆ ಇನ್ನಿಲ್ಲ..!

    Published

    on

    ಕಾರ್ಮಿಕ ನಾಯಕ, ಹೋರಾಟಗಾರ ಮಾರುತಿ ಮಾನ್ಪಡೆ ಇನ್ನಿಲ್ಲ..!

    ಕಲಬುರಗಿ: ಕಮ್ಯುನಿಷ್ಟ್ ಪಕ್ಷದ ಹಿರಿಯ ನಾಯಕರು,ಹೋರಾಟಗಾರರಾದ ಮಾರುತಿ ಮಾನ್ಪಡೆ ಮಂಗಳವಾರ ಸೊಲ್ಲಾಪುರ ಆಸ್ಪತ್ರೆಯ ಲ್ಲಿ ನಿಧನರಾಗಿದ್ದಾರೆ.66 ವರ್ಷದ ಮಾನ್ಪಡೆ ಕರ್ನಾಟಕದ ಕಮ್ಯೂನಿಸ್ಟ್​ ಸಿದ್ಧಾಂತಗಳ ನಾಯಕರಾಗಿದ್ದರು.

    ಕೊರೊನಾ ಸೋಂಕಿಗೆ ಒಳಗಾಗಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾನ್ಪಡೆ ಬದುಕಿನ ಹೋರಾಟ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ.

    ದಿಟ್ಟ ರೈತ ಹೋರಾಟಗಾರ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರೂ ಆಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರಿಗೆ ಮಹಾಮಾರಿ ಕೋವಿಡ್ ಭಾಧಿಸಿತ್ತು.

    ಇತ್ತೀಚಿನ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಅವರು, ಅಕ್ಟೋಬರ್ 3 ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.

    ಕೋವಿಡ್‌ ವಿರುದ್ಧದ 15 ದಿನಗಳ ಸತತ ಹೋರಾಟದ ನಡೆಸಿದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

    ಕೋವಿಡ್ ದೃಢಪಟ್ಟ ನಂತರ ಕಲಬರುಗಿಯ ಜೇಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರನ್ನು ನಂತರ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

    ಕಳೆದ ಮೂರು ದಿನಗಳಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು ಎನ್ನಲಾಗಿದೆ.

    ಸಿಪಿಐ(ಎಂ) ಪಕ್ಷದ ಸದಸ್ಯರಾಗಿದ್ದುಕೊಂಡು ನೂರಾರು ರೈತ ಹೋರಾಟಗಳನ್ನು ಸಂಘಟಿಸಿದ ಅನುಭವವಿದ್ದ ಮಾನ್ಪಡೆಯವರು ಸೆಪ್ಟಂಬರ್ ತಿಂಗಳಿನಲ್ಲಿ ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಸಂಘಟಿಸಿದ್ದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

     

     

    LATEST NEWS

    ನಕಲಿ ವೈದ್ಯನಿಂದ ಭ್ರೂಣ ಹ*ತ್ಯೆ ..! ತನಿಖೆ ವೇಳೆ ವೈದ್ಯನ ಕರಾಳ ಮುಖ ಬಯಲು..!!

    Published

    on

    ಬೆಳಗಾವಿ/ಮಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ನಕಲಿ ವೈದ್ಯನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ.

    ನಕಲಿ ವೈದ್ಯ ಡಾ.ಅಬ್ದುಲ್ ಗಫಾತ್ ಸೇರಿ ಐವರನ್ನು ಜೂ. 10 ರಂದು ಮಾಳಮಾರುತಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದರು. ತನಿಖೆ ವೇಳೆ ಇವನ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ. ಮಕ್ಕಳ ಮಾರಾಟ ಜಾಲ ಪ್ರಕರಣವನ್ನು ಬೆನ್ನು ಹತ್ತಿದ್ದ ಬೆಳಗಾವಿ ಪೊಲೀಸರಿಗೆ ವೈದ್ಯನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಈ ವೈದ್ಯ ಮಕ್ಕಳ ಮಾರಾಟ ಸೇರಿದಂತೆ ಭ್ರೂಣಗಳ ಹತ್ಯೆ ಮಾಡಿದ್ದಾನೆ. ಭ್ರೂಣ ಹತ್ಯೆಗೈದು ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾನೆ. ಪೊಲೀಸರ ತನಿಖೆ ವೇಳೆ ಅಬ್ದುಲ್ ಭ್ರೂಣ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಫಾರ್ಮ್‌ ಹೌಸ್‌ನಲ್ಲಿ ಶೋಧಕಾರ್ಯ ನಡೆಸಿದಾಗ ಮೂರು ಭ್ರೂಣಗಳ ಅವಶೇಷ ಪತ್ತೆಯಾಗಿದೆ. ಕಿತ್ತೂರಿನಲ್ಲಿದ್ದ ತನ್ನ ಫಾರ್ಮ್‌ ಹೌಸ್‌ನಲ್ಲಿ ಭ್ರೂಣ ಹತ್ಯೆ ಮಾಡಿ, ಫಾರ್ಮ್‌ಹೌಸ್‌ನಲ್ಲಿ ಹೂತುಹಾಕುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

    Read More..; ‘ನನ್ನಿಂದ ಹೀಗೆ ಆಗೋಯ್ತಲ್ಲ’ ತಂದೆ ಶವದ ಮುಂದೆ ಕಣ್ಣೀರಿಟ್ಟ ದರ್ಶನ್ ಕೇಸ್‌ ಆರೋಪಿ..!

    ಡಿಸಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದ್ದು, ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡದಿಂದ ಶೋಧ ಕಾರ್ಯ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿದ್ದು, ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

    Continue Reading

    LATEST NEWS

    ಗಂಗಾ ನದಿಯಲ್ಲಿ ದೋಣಿ ಮಗುಚಿ 6 ಮಂದಿ ನಾಪತ್ತೆ

    Published

    on

    ಪಾಟ್ನಾ: ದೋಣಿಯೊಂದು ಗಂಗಾ ನದಿಯಲ್ಲಿ ಮಗುಚಿ ಬಿದ್ದು, 6 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಿಹಾರದ ರಾಜಧಾನಿ ಪಾಟ್ನಾದ ಬಾರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 17 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. 11 ಮಂದಿ ಈಜಿ ದಡ ಸೇರಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ.


    ನದಿ ಮಧ್ಯದಲ್ಲಿ ದೋಣಿ ಮುಳುಗಿದೆ. ತಕ್ಷಣ ಎಲ್ಲರೂ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಈ ವೇಳೆ 11 ಜನ ಈಜಿ ದಡ ಸೇರಿದ್ದರೆ, ಇನ್ನೂ ಆರು ಮಂದಿ ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ : ಐಸ್‌ಕ್ರೀಂ ಪ್ರಿಯರೇ ಎಚ್ಚರ! ಆನ್‌ಲೈನ್‌ನಲ್ಲಿ ತರಿಸಿದ ಐಸ್‌ಕ್ರೀಂನಲ್ಲಿ ಸತ್ತ ಹುಳಗಳು ಪತ್ತೆ!

    ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು ಎಂದು ವರದಿಯಾಗಿದೆ. ಈ ವೇಳೆ ಉಮಾ ಘಾಟ್ ಬಳಿ ದೋಣಿ ಪಲ್ಟಿಯಾಗಿದೆ. ದುರಂತದಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃ*ತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುವ ಬಗ್ಗೆ ವರದಿಯಾಗಿದೆ.

    Continue Reading

    DAKSHINA KANNADA

    ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಪಲ್ಟಿ..!

    Published

    on

    ಮಂಗಳೂರು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ(ಜೂ.16) ಕಮ್ಮಾಜೆ-ಕಾಗುಡ್ಡೆ ಬಳಿ ನಡೆದಿದೆ.

    Read More..; ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾ*ವು

    ಬಿಸಿರೋಡು-ಪೊಳಲಿ ಮಂಗಳೂರು ಸಂಚರಿಸುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರವಿವಾರವಾದ ಕಾರಣ ಬಸ್ಸಿನಲ್ಲಿ ಕೇವಲ ಇಬ್ಬರೇ ಪ್ರಯಾಣಿಕರಿದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಬಸ್‌ ಬಿಸಿ ರೋಡಿನಿಂದ ಕೊಳತ್ತಮಜಲಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending