LATEST NEWS
ಚಡ್ಡಿಗಳೇ, ಧಂ ಇದ್ರೆ ರೆಡ್ಡಿ ನಾಶಗೈದ ಕ್ಷೇತ್ರದ ತಾಂಬೂಲ ಪ್ರಶ್ನೆ ಕೇಳಿ: ಅಬ್ದುಲ್ ಮಜೀದ್
ಮಂಗಳೂರು: ಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ. ಇಲ್ಲಿ ವ್ಯಾಪಾರ ಬಹಿಷ್ಕಾರ ಮಾಡಿ,
ನಿಮ್ಮ ಗುರು ಬೊಮ್ಮಾಯಿ ಯೂಸಫ್ ಅಲಿ ಜೊತೆ 2 ಸಾವಿರ ಕೋಟಿ ಒಪ್ಪಂದ ಮಾಡಿದಾಗ ನಾಚಿಕೆಯಾಗಲ್ವಾ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪ್ರಶ್ನಿಸಿದ್ದಾರೆ.
ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, 2006ರ ಸೆ.3.ರಂದು ಬಳ್ಳಾರಿಯ ಸಂಡೂರಿನಲ್ಲಿ 200 ವರ್ಷದ ಹಳೆಯದಾದ ಸುಗ್ಗುಲಮ್ಮ ದೇವಸ್ಥಾನವನ್ನು ಬಾಂಬ್ ಇಟ್ಟು ಒಡೆದು ಹಾಕಿ,
ದೇವಿಯ ವಿಗ್ರಹ ನಾಶ ಮಾಡಿದ್ದು ನಿಮ್ಮದೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ. ಈಗ ನಿಮಗೆ ತಾಕತ್ತಿದ್ದರೆ ತಾಂಬೂಲ ಪ್ರಶ್ನೆ ಕೇಳಿ, ರೆಡ್ಡಿ ಮನೆಗೆ ಪಾದಾಯಾತ್ರೆ ಮಾಡಿ. ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಬೆತ್ತಲೆ ಪ್ರಪಂಚ ಪುಸ್ತಕದಲ್ಲಿ ಬರೆದಿದ್ದಾರೆ.
ಒಂದು ನೆನಪಿಡಿ ಮಳಲಿ ಮಸೀದಿಯ ಜಾಗದ ಒಂದು ಹಿಡಿ ಮರಳು ನಿಮಗೆ ಸಿಗಲಿಕ್ಕಿಲ್ಲ. ಆರ್‌ಎಸ್‌ಎಸ್ ಆಟಾಟೋಪಕ್ಕೆ ಕಾಂಗ್ರೆಸ್-ಜೆಡಿಎಸ್ ಬೆದರಬಹುದು ನಿಮ್ಮ ಆಟಕ್ಕೆ ಬೆದರುವ ಮಕ್ಕಳು ನಾವಲ್ಲ. ಬೊಮ್ಮಾಯಿ ಅಧಿಕಾರಕ್ಕೆ ಬಂದ ನಂತರ ನಾಗ್ಪುರದ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದ್ದಾರೆ.
ಇಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುವ ನಿಮ್ಮ ಗುರು ಇದೇ ಬೊಮ್ಮಾಯಿ ಯೂಸಫ್ ಅಲಿ ಎಂಬ ಬ್ಯಾರಿಯೊಂದಿಗೆ 2 ಸಾವಿರ ಕೋಟಿಯ ವ್ಯವಹಾರಕ್ಕೆ ಸಹಿ ಹಾಕುತ್ತಾರೆ.
ನಾಚಿಕೆಯಾಗುದಿಲ್ವಾ, ನಿಮ್ಮ ಬಹಿಷ್ಕಾರ ಬಡ ಮುಸ್ಲಿಂಮನ ಮೇಲಾ, ನಿಮಗೆ ಯೂಸಫ್ ಅಲಿ ಪರ್ಸೆಂಟ್ ಕೊಡ್ತಾರೆ. ಮಂಗಳೂರು ಎನ್‌ಆರ್‌ಸಿ ಪ್ರತಿಭಟನೆ ವೇಳೆ ಗುಂಡು ಹಾರಿಸಲು ಸಾಧ್ಯವಾ ಗುವುದಾದರೆ.
ಶಿವಮೊಗ್ಗದಲ್ಲಿ 144 ಸೆಕ್ಷನ್ ವೇಳೆ ಮುಸ್ಲಿಂ ಅಂಗಡಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ದಾಳಿ ನಡೆಸುವಾಗ ಪೊಲೀಸರೇ ನಿಮ್ಮ ಬಂದೂಕಿನಲ್ಲಿ ಗುಂಡುಗಳು ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಈ ಜನಾಧಿಕಾರ ಸಮಾವೇಶ ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.
ಮುಖಂಡ ರಿಯಾಝ್ ಫರಂಗಿಪೇಟೆ ಮಾತನಾಡಿ, ದೇಶದಲ್ಲಿ ನಡೆಯುವ ಕೋಮುವಾದ ಆಟಾಟೋಪಗಳನ್ನು ನೋಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಟ್ಟೆ ಕಟ್ಟಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ನಿಮ್ಮ ಕಣ್ಣಿನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯುವ ದಿನಗಳು ದೂರವಿಲ್ಲ.
ಶ್ರೀಲಂಕಾ ಉದಾಹರಣೆಯಾಗಿ ನೋಡಿ ಎಲ್ಲಿ ಅನೀತಿ, ಕೋಮುವಾದ ಹೆಚ್ಚಾದಾಗ ಆಡಳಿತ ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಭಾಸ್ಕರ್ ಪ್ರಸಾದ್, ಅಬ್ದುಲ್ ಲತೀಫ್, ಅಲ್ಫೊನ್ಸ್ ಫ್ರಾಂಕೋ, ಶಾಫಿ ಬೆಳ್ಳಾರೆ, ರಿಯಾಝ್ ಫರಂಗಿಪೇಟೆ ಇದ್ದರು.
FILM
‘ಕನ್ನಡತಿ’ ಖ್ಯಾತಿಯ ನಟ ಕಿರಣ್ ರಾಜ್ ಕಾರು ಅಪಘಾ*ತ; ಆಸ್ಪತ್ರೆಗೆ ದಾಖಲು
ಮಂಗಳೂರು/ ಬೆಂಗಳೂರು : ‘ಕನ್ನಡತಿ’ ಖ್ಯಾತಿಯ ನಟ ಕಿರಣ್ ರಾಜ್ ಅವರ ಕಾರು ಅಪ*ಘಾತವಾಗಿದೆ. ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆ*ಟ್ಟಾಗಿದೆ. ಕಾರಿಗೆ ಹಾ*ನಿ ಆಗಿದೆ. ಕೆಂಗೇರಿ ಆಸ್ಪತ್ರೆಗೆ ಕಿರಣ್ ರಾಜ್ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಈ ವೇಳೆ ಅಪಘಾ*ತ ಸಂಭವಿಸಿದೆ. ಕಿರಣ್ ರಾಜ್‌ಗೆ ಪ್ರತಿವಾರ ನಿರಾಶ್ರಿತರ ಕೇಂದ್ರಕ್ಕೆ ಊಟ ಕೊಡುವ ಅಭ್ಯಾಸವಿತ್ತು. ಅದೇ ರೀತಿ ಈ ಬಾರಿ ಹೋಗುವಾಗ ಈ ದುರ್ಘ*ಟನೆ ನಡೆದಿದೆ.
ಅವರು ಓಡಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನ ಬಲಭಾಗಕ್ಕೆ ಹಾ*ನಿ ಆಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗೆ ಯಾವುದೇ ಅಪಾ*ಯ ಸಂಭವಿಸಿಲ್ಲ.
ಕಿರಣ್ ರಾಜ್ ‘ಕನ್ನಡತಿ’ ಧಾರಾವಾಹಿ ಮೂಲಕ ಪ್ರಸಿದ್ಧರಾಗಿದ್ದರು. ಹರ್ಷ ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಆ ಧಾರಾವಾಹಿ ಮುಗಿದಿದ್ದು, ಅವರು ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ : ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ
ಸೆಪ್ಟೆಂಬರ್ 12ರಂದು ಅವರ ನಟನೆಯ ‘ರಾನಿ’ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ.
DAKSHINA KANNADA
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ಗೌರವ ಡಾಕ್ಟರೇಟ್ ಪ್ರದಾನ
ಮಂಗಳೂರು : ಕರಾವಳಿ ಮೂಲದ ಕನ್ನಡ ಚಲನ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.
ಬೆಂಗಳೂರು ವಿವಿಯು ಈ ಗೌರವ ಡಾಕ್ಟರೇಟ್ ನೀಡಿ ಗುರುಕಿರಣ್ ಅವರನ್ನು ನೀಡಿ ಗೌರವಿಸಿದೆ. ಸೆಪ್ಟಂಬರ್ 10 ರಂದು ನಡೆದಿದ್ದ ವಿವಿ ಘಟಿಕೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರು ವಿವಿಯ ಈ ಪ್ರಶಸ್ತಿಯಿಂದ ಗುರು ಕಿರಣ್ ಇನ್ನು ಮುಂದೆ ಡಾಕ್ಟರ್ ಗುರುಕಿರಣ್ ಆಗಲಿದ್ದಾರೆ.
LATEST NEWS
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಮಂಗಳೂರು/ಉತ್ತರ ಪ್ರದೇಶ : ಇತ್ತೀಚೆಗೆ ಅಪಹರಣ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆಕ್ರೋಶ ಕೇಳಿ ಬರುತ್ತಿದೆ. ಆದರೂ ಅತ್ಯಾಚಾ*ರ ಪ್ರಕರಣಗಳು ನಿಂತಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಅಂತಹುದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ.
8 ಮಂದಿ ಯುವಕರು ನೃತ್ಯ ಮಾಡಲು ನಿರಾಕರಿಸಿದ ಯುವತಿಯರ ಮೇಲೆ ಅತ್ಯಾಚಾ*ರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.
ಅಪಹರಿಸಿ ಕೃ*ತ್ಯ :
ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿಆರೋಪಿಗಳು ನೃತ್ಯಗಾರ್ತಿಯರ ಹಣೆಗೆ ಬಂದೂಕಿಟ್ಟು ಅಪಹರಿಸಿ 10 ಕಿ.ಮೀ ದೂರಕ್ಕೆ ಕರೆದೊಯ್ದಿದ್ದಾರೆ. 2 ಜನ ನೃತ್ಯಗಾರ್ತಿಯರು ಬರ್ತ್ ಡೇ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಸಾಮೂಹಿಕ ಅತ್ಯಾಚಾ*ರ ಎಸಗಿದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.
ಆರೋಪಿಗಳಲ್ಲಿ ಒಬ್ಬನ ಮನೆಗೆ ಕರೆದೊಯ್ದು ಯುವತಿಯರ ಬಳಿ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಅವರ ನಿರಾಕರಣೆಯ ಸಹಿಸದೆ ಕುಡಿದ ಮತ್ತಿನಲ್ಲಿ ಅತ್ಯಾಚಾ*ರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.. ಅಪರಾಧಕ್ಕೆ ಬಳಸಿದ್ದ ಎರಡು ಎಸ್ ಯು ವಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳು 30 ವರ್ಷಕ್ಕಿಂತ ಕೆಳ ವಯಸ್ಸಿನವರಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದು ,ಯುವತಿಯರ ವೈದ್ಯಕೀಯ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
ಎನ್ ಕೌಂಟರ್ ನಡೆಸಿ ಅರೆಸ್ಟ್ :
ಸಪ್ಟೆಂಬರ್ 8 ರಾತ್ರಿ ಘಟನೆ ಕುರಿತು ಪೋಲಿಸರಿಗೆ ದೂರು ಬಂದಿತ್ತು. ನಾಗೇಂದ್ರ ಯಾಧವ್, ಆಸನ್ ಸಂಗ್, ಖ್ರಿಶ್ ತಿವಾರಿ, ಅರ್ಥಕ್ ಸಿಂಗ್ ಮತ್ತು ವಿವೆಕ್ ಸೇಠ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳಾದ ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ ಸೆಪ್ಟೆಂಬರ್ 10 ರಂದು ಪೋಲಿಸರು ನಡೆಸಿದ ಎನ್ಕೌಂಟರ್ನಲ್ಲಿ ಸಿಕ್ಕಿಬಿದ್ದರು. ಇಬ್ಬರ ಕಾಲಿಗೂ ಗುಂಡು ತಗುಲಿದ್ದು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ವಿಚಾರಣೆ ನಡೆಸಿದ ಬಳಿಕ ತಮ್ಮ ಎಲ್ಲಾ ವಿಷಯವನ್ನು ಬಹಿರಂಗಪಡಿಸಿದ್ದಾರೆ.
- LATEST NEWS7 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- LATEST NEWS2 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- DAKSHINA KANNADA6 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM6 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ