ನೆಲ್ಯಾಡಿ: ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಟಿಪ್ಪರ್ ಮತ್ತು ಲಾರಿ ಹಾಗೂ ಕಾರ್ ಪರಸ್ಪರ ಢಿಕ್ಕಿಯಾಗಿ ಅಪಘಾತ ಸಂಭವಿಸಿದ ಘಟನೆ ಪುತ್ತೂರಿನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಮಣ್ಣಗುಂಡಿಯಲ್ಲಿ ನಡೆದಿದೆ.
ಇಬ್ಬರ ಸ್ಥಿತಿ ಗಂಭೀರವಾಗಿದ್ದು ಗಾಯಳುಗಳನ್ನು ಮಂಗಳೂರಿಗೆ ಸಾಗಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಢಿಕ್ಕಿ ಆದ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು ‘ಟಿಪ್ಪರ್ ಲಾರಿಯ ಅತಿವೇಗ ಅಪಘಾತಕ್ಕೆ ಕಾರಣ.
ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಅತಿವೇಗದಿಂದ ಸಂಚಾರ ಮಾಡುತ್ತಿರುವ ವಾಹನಗಳಿಂದ ಇಂತಹ ಘಟನೆ ಸಂಭವಿಸುತ್ತಿದೆ.
ಘಟನೆ ಹಿನ್ನೆಲೆ ನೆಲ್ಯಾಡಿ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.