Connect with us

    DAKSHINA KANNADA

    ಸಂಜೀವ ಪೂಜಾರಿಯ ಹೇಳಿಕೆ ಸಮರ್ಥನೆ; ಆಯೋಜಕರಿಗೆ ಪ್ರತಿಭಾ ಕುಳಾಯಿ ಸವಾಲ್‌

    Published

    on

    ಮಂಗಳೂರು : ಭಜನೆಯಲ್ಲಿ ಭಾಗವಹಿಸುವ ಯುವತಿಯರ ವಿರುದ್ಧ ಹೇಳಿಕೆ ನೀಡಿದ್ದ ಪಂಜ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಪರವಾಗಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಬ್ಯಾಟಿಂಗ್ ಮಾಡಿದ್ದಾರೆ.

    ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳನ್ನು ನೃತ್ಯ ಭಜನೆಯ ಹೆಸರಿನಲ್ಲಿ ರಸ್ತೆಯಲ್ಲಿ ಕುಣಿಸುವುದು ಎಷ್ಟು ಸರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದು ಈ ಹಿಂದೆ ಇತ್ತಾ ಎಂದು ಕೇಳಿರುವ ಅವರು ಇದೊಂದು ರಾಜಕೀಯ ಉದ್ದೇಶದಿಂದ ಆರಂಭವಾದ ಆಚರಣೆ ಎಂದು ಆರೋಪಿಸಿದ್ದಾರೆ. ಹೆಣ್ಣು ಮಕ್ಕಳನ್ನು ಈ ರೀತಿ ಕುಣಿಸುವ ಯಾವೊಬ್ಬನ ಮನೆಯ ಹೆಣ್ಣು ಮಕ್ಕಳೂ ಈ ರೀತಿ ಕುಣಿಯುವುದಿಲ್ಲ. ಈ ಬಗ್ಗೆ ಮಾತಾಡುವ ಯಾವ ನಾಯಕರಾದ್ರೂ ತನ್ನ ಹೆಂಡತಿ, ತಂಗಿ ಅಥವಾ‌ ಮಕ್ಕಳನ್ನು ಈ ರೀತಿ ಕುಣಿದಿದ್ರೆ ನನಗೆ ತೋರಿಸಲಿ  ಎಂದು ಸವಾಲೆಸೆದಿದ್ದಾರೆ.

    ಇದನ್ನೂ ಓದಿ : 12 ವರ್ಷಗಳಿಂದ ಹೊಟ್ಟೆಯಲ್ಲಿತ್ತು ಕತ್ತರಿ; ಮುಂದೇನಾಯ್ತು ??

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ನೃತ್ಯ ಭಜನೆ ಸಹಿತ ರಾತ್ರಿ ಹೊತ್ತಿನಲ್ಲಿ ನಡೆಯುವ ಮನೆಮನೆಯ ಭಜನೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜ ವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಅವರು ಹೇಳಿರುವ ಕೆಲ ವಿಚಾರಗಳಲ್ಲಿ ಸತ್ಯಾಂಶ ಇದೆ ಎಂದು ಈ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    DAKSHINA KANNADA

    ಇನ್ನೆರಡು ದಿನ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ!

    Published

    on

    ಮಂಗಳೂರು : ಬಂಗಾಳಕೊಲ್ಲಿಯಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಪೂರ್ವ ಕರಾವಳಿ ಹಾಗೂ ಪಶ್ವಿಮ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.  ಇದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ಮಳೆ ಸುರಿಯಲಿದ್ದು,  ಅಕ್ಟೋಬರ್ 21 ಮತ್ತು 22 ರಂದು ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಈಗಾಗಲೇ ಬಂಗಾಳಕೊಲ್ಲಿಯ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಸಿತ್ತು. ಇತ್ತ ಅರಬ್ಬೀ ಸಮುದ್ರದಲ್ಲಿನ ವಾಯಭಾರ ಕುಸಿತದಿಂದಲೂ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮೊದಲಾದ ಕಡೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.

    ಇದನ್ನೂ ಓದಿ : WATCH : ಮಳೆಯಿಂದ ಮುಳುಗಿದ ಬೆಂಗಳೂರು; ನೀರಿನಲ್ಲಿ ಸಿಲುಕಿಕೊಂಡ ವಾಹನಗಳ ನಡುವೆ ಗಣಪತಿ ಪ್ರತ್ಯಕ್ಷ

    ಇನ್ನೆರಡು ದಿನಗಳ ಕಾಲ ಮಳೆ ತೀವ್ರತೆ ಪಡೆದುಕೊಳ್ಳಲಿದ್ದು, ಗಾಳಿ ಸಹಿತ ಮಳೆ ಸುರಿಯಲಿದ್ದು ಗುಡುಗು ಸಿಡಿಲಿನ ಅಬ್ಬರವೂ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡದೆ. ಒಟ್ಟಾಗಿ ರಾಜ್ಯದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಎಲ್ಲೆಲ್ಲಿ ಮಳೆ?

    ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಕ್ಟೋಬರ್ 21 ರಿಂದ ಮಳೆ ಚುರುಕು ಪಡೆಯಲಿದೆ ಎಂದು ಹೇಳಿದೆ.

    Continue Reading

    DAKSHINA KANNADA

    ರೈಲು ಸಂಚಾರದ ವೇಳೆ ಕೇಳಿಸಿದ ಭಾರೀ ಸದ್ದು; ಹಳಿಯಲ್ಲಿ ಜಲ್ಲಿ ರಾಶಿ ಪತ್ತೆ

    Published

    on

    ಮಂಗಳೂರು: ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲ ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಜಲ್ಲಿಕಲ್ಲು ಸುರಿದಿರುವ ಘಟನೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿಯಲ್ಲಿ ಕೇರಳಕ್ಕೆ ತೆರಳುತ್ತಿದ್ದ ರೈಲು ಸಂಚರಿಸಿದ ವೇಳೆ ಭಾರಿ ಸದ್ದು ಕೇಳಿ ಬಂದಿತ್ತು. ಕೆಲ ಹೊತ್ತಿನ ಬಳಿಕ ಮತ್ತೊಂದು ರೈಲು ಸಂಚರಿಸುವಾಗಲೂ ಇದೇ ರೀತಿಯ ಸದ್ದು ಕೇಳಿಸಿತ್ತು.


    ಸ್ಥಳೀಯರು ಈ ಸದ್ದು ಕೇಳಿ ಭೂಕಂಪ ಇರಬಹುದು ಎಂದು ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಕೆಲವರು ರೈಲು ಹೋದ ಸಮಯದಲ್ಲಿ ಈ ಸದ್ದು ಕೇಳಿಸಿದ್ದ ಕಾರಣ ಹಳಿಯಲ್ಲಿ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ವೇಳೆ ಹಳಿಯ ಮೇಲೆ ಜಲ್ಲಿಕಲ್ಲು ಸುರಿದಿರುವುದು ಪತ್ತೆಯಾಗಿದ್ದು, ರೈಲ್ವೇ ಪೊಲೀಸರು ಹಾಗೂ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಯಾರೋ ಉದ್ದೇಶಪೂರ್ವಕವಾಗಿ ಹಳಿಗಳ ಮೇಲೆ ಜಲ್ಲಿ ಕಲ್ಲು ಸುರಿದಿರ ಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.

    ಇತ್ತೀಚೆಗೆ ಹಲವು ರೈಲು ಅಪಘಾತಗಳು ಸಂಭವಿಸುತ್ತಿದ್ದು, ಇದೂ ಕೂಡ ಅಂತಹ ಒಂದು ಪ್ರಯತ್ನದ ಭಾಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮೂಲ್ಕಿ : ಮನೆಯ ಅಡುಗೆ ಕೋಣೆಗೆ ಏಕಾಏಕಿ ನುಗ್ಗಿದ ಚಿರತೆ

    Published

    on

    ಮೂಲ್ಕಿ : ಮೂಲ್ಕಿಯ  ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆ ನುಗ್ಗಿದ ಘಟನೆ ಸಂಭವಿಸಿದೆ. ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೋನಿನ ಮೂಲಕ ಚಿರತೆಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಿದರು.

    ಶನಿವಾರ ರಾತ್ರಿ 9:30 ಸುಮಾರಿಗೆ ಸದಾನಂದ ಕೋಟ್ಯಾನ್ ಅವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ದಿಢೀರನೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ಅವರ ನಾಯಿ ಬೊಗಳಲು ಶುರು ಮಾಡಿದ್ದು ಸದಾನಂದ ಕೋಟ್ಯಾನ್ ಚಿರತೆಯನ್ನು ನೋಡಿ ಕಂಗಾಲಾಗಿದ್ದಾರೆ.

    ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಚಿರತೆ ಹಿಡಿಯಲು ಮುಂದಾಗಿ ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿದರು. ಮಧ್ಯ ರಾತ್ರಿ ಸುಮಾರು 2.30 ರ ವೇಳೆಗೆ ಚಿರತೆ ಬೋನಿನೊಳಗೆ ಬಿದ್ದಿದೆ.

    ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ… ಯಾರು ಗೊತ್ತಾ ??

    ಚಿರತೆಯನ್ನು ನೋಡಲು ಜನರ ದಂಡೇ ಸೇರಿತ್ತು.  ಅರಣ್ಯ ಇಲಾಖೆಯ ಅಧಿಕಾರಿಗಳು, ಮೂಲ್ಕಿ ಪೊಲೀಸರು ಮತ್ತು ಸಾರ್ವಜನಿಕರ ಸಹಕಾರದಿಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಅದೃಷ್ಟವಶಾತ್‌ ಚಿರತೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ.

     

    Continue Reading

    LATEST NEWS

    Trending