Connect with us

ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ಮೈಕೆಲ್ ಮಧು

Published

on

ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ಮೈಕೆಲ್ ಮಧು

ಸ್ಯಾಂಡಲ್ ವುಡ್ ಗೆ ಮತ್ತೊಂದು ಅಘಾತವಾಗಿದೆ. ಹಾಸ್ಯ ನಟ ಬುಲೆಟ್ ಪ್ರಕಾಶ್ ಬಳಿಕ ಮತ್ತೋರ್ವ ಹಿರಿಯ ಹಾಸ್ಯ ನಟನನ್ನು ಸ್ಯಾಂಡಲ್ ವುಡ್ ಕಳೆದುಕೊಂಡಿದೆ.

ಮೈಕೆಲ್ ಮಧು ಕೊನೆಯುಸಿರೆಳೆದಿದ್ದಾರೆ. ನಿನ್ನೆ (ಮೇ 13) ಬೆಳಗ್ಗೆ ಮನೆಯಲ್ಲಿ ಜ್ಞಾನತಪ್ಪಿ ಬಿದ್ದಿದ್ದ ನಟ ಮೈಕೆಲ್ ಮಧು ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಕೆಲ್ ಮಧು ಮೃತಪಟ್ಟಿದ್ದಾರೆ. ತಮ್ಮ ಪಾತ್ರಗಳಿಂದಲೇ ನಕ್ಕು ನಗಿಸ್ತಿದ್ದ ಮತ್ತೊಬ್ಬ ಹಾಸ್ಯನಟ ಇದೀಗ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ನಟನಾಗಿ ಮೈಕಲ್ ಮಧು ಅಭಿನಯಿಸಿದ್ದರು. ಸುಮಾರು 80ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.

ಮೃತ ಮೈಕೆಲ್ ಮಧು ಅವರಿಗೆ 50 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮೈಕೆಲ್ ಮಧು ಅಗಲಿದ್ದಾರೆ.

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹಿಟ್ ‘ಓಂ’ ಸಿನಿಮಾ ಮೂಲಕ ಮೈಕೆಲ್ ಮಧು ಸಿನಿಮಾ ಪಯಣ ಆರಂಭವಾಗಿತ್ತು.

ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನೇ ಮೈಕೆಲ್ ಮಧು ನಿರ್ವಹಿಸಿದ್ದಾರೆ. ಇತ್ತೀಚಿಗೆ ‘ಗೋಸಿ ಗ್ಯಾಂಗ್’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.

ಎರಡೂ ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮೈಕೆಲ್ ಮಧು, 85 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು.

‘ಎ’, ‘ಯಜಮಾನ’, ‘ಸೂರ್ಯವಂಶ’, ‘ಎ.ಕೆ.47’, ‘ಭಜರಂಗಿ’ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ತಮಗೆ ಸಿಕ್ಕ ಸಣ್ಣಸಣ್ಣ ಪಾತ್ರಗಳಲ್ಲಿಯೇ ಗಮನ ಸೆಳೆದಿದ್ದರು.

ಇದೀಗ ಕನ್ನಡ ಚಿತ್ರರಂಗ ಮತ್ತೊಬ್ಬ ಹಾಸ್ಯನಟನನ್ನು ಕಳೆದುಕೊಂಡು ಬಡವಾಗಿದೆ.

ಸದ್ಯ ಲಾಕ್ ಡೌನ್ ಹಿನ್ನಲೆ ಪ್ರತ್ಯಕ್ಷವಾಗಿ ಭೇಟಿ ಮಾಡಲಾಗದ ಸ್ಯಾಂಡಲ್ ವುಡ್ ನಟ-ನಟಿಯರು ಹಾಗೂ ದಿಗ್ಗಜರು ಸಾಮಾಜಿಕ ಜಾಲತಾಣದ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BELTHANGADY

ಕಾಂಗ್ರೆಸ್ ಹಿರಿಯ ಮುಖಂಡ ವಸಂತ ಬಂಗೇರ ವಿಧಿವಶ

Published

on

ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ತಂಗಡಿ ಮಾಜಿ ಶಾಸಕ, ಸಚಿವ ವಸಂತ ಬಂಗೇರ(79 ವ) ಇಂದು(ಮೇ.8) ಸಂಜೆ 4 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

vasanth bangera

ಮುಂದೆ ಓದಿ..; ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

1946 ಜನವರಿ 15 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ದಿ. ಕೇದೆ ಸುಬ್ಬ ಪೂಜಾರಿ ಹಾಗೂ ದಿ. ದೇವಕಿ ದಂಪತಿ ಪುತ್ರ. 1972 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 1985 ರಲ್ಲಿ ಮತ್ತೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಮತ್ತೆ 1994 ರಲ್ಲಿ  ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುಮಾರು 52 ವರ್ಷಗಳ ಕಾಲ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.

ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Continue Reading

FILM

ಪ್ರತಿಷ್ಟಿತ ಮೆಟ್ ಗಾಲ ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್; ಆಲಿಯಾ ವಿಶಿಷ್ಟ ಉಡುಗೆಗೆ ಬೆರಗಾದ್ರು ಫ್ಯಾನ್ಸ್

Published

on

ಜಗತ್ತಿನ ವಿವಿಧ ಮನರಂಜನಾ ಕ್ಷೇತ್ರಗಳಲ್ಲಿ ತೊಡಗಿರುವ ಗಣ್ಯರು ಭಾಗಿಯಾಗುವ ಪ್ರತಿಷ್ಠಿತ ಮೆಟ್ ಗಾಲ ಸಮಾರಂಭದಲ್ಲಿ ಈ ಬಾರಿ ಆಲಿಯಾ ಭಟ್ ತನ್ನ ವಿಶಿಷ್ಟ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ. ಅವರು ಸಬ್ಯಸಾಚಿ ಮುಖರ್ಜಿ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅವರ ಲುಕ್‌ಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಅವರ ಸೊಗಸಾದ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


ದೇಸಿ ಉಡುಪಿಗೂ ಟ್ರೇನ್ ವಿನ್ಯಾಸ:

ತಿಳಿ ನೀಲಿ, ಬಿಳಿ ಮಿಶ್ರಿತ ಸುಂದರ ಸೀರೆಯಲ್ಲಿದ್ದ ಉದ್ದನೆಯ ಟ್ರೇನ್ ಸೆರಗು ಸೀರೆಗೆ ಮೆರುಗು ನೀಡಿತ್ತು. ಸಾಮಾನ್ಯವಾಗಿ ಗೌನ್ ಗೆ ಇಂತಹ ಟ್ರೇನ್ ವಿನ್ಯಾಸಗೊಳಿಸಲಾಗುತ್ತದೆ. ದೇಸಿ ಉಡುಪಿಗೂ ಟ್ರೇನ್ ವಿನ್ಯಾಸಗೊಳಿಸಿ ಕಂಟೆಂಪರರಿ ಸ್ಪರ್ಶ ನೀಡಬಹುದು ಎಂದು ಆಲಿಯಾ ಭಟ್ ತೋರಿಸಿದ್ದಾರೆ.


‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಗೆ ಅನುಗುಣವಾಗಿ ತಿಳಿ ಗುಲಾಬಿ ಎಂಬ್ರಾಯ್ಡರಿ ಹೂವು, ತಿಳಿ ಹಸಿರು ಎಲೆ, ಬಳಿಗಳ್ಳ ವಿನ್ಯಾಸವಿದೆ. ಸೀರೆಗೊಪ್ಪುವ ಹರಳು ಖಚಿತ ಬ್ಲೌಸ್, ಕಿವಿಗೆ ದೊಡ್ಡ ಇಯರಿಂಗ್ಸ್, ಬೈತಲೆಗೆ ಹರಳಿನ ಆಭರಣ ಧರಿಸಿದ್ದು ಮತ್ತಷ್ಟು ಮೆರುಗು ನೀಡಿತ್ತು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!

ಆಲಿಯಾ ಪಾವತಿಸಿದ್ದು ಎಷ್ಟು?


ಮೆಟ್ ಗಾಲಾ ಫ್ಯಾಶನ್ ಹೆಸರಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ನಿಧಿ ಸಂಗ್ರಹಣೆ ಕಾರ್ಯಕ್ರಮವಾಗಿದೆ. ಇಲ್ಲಿ ಭಾಗವಹಿಸುವವರು ಪ್ರತಿ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ USD 75,000 ವೆಚ್ಚವಾಗುತ್ತದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು ರೂ. 63 ಲಕ್ಷ ರೂ.ಗಳಾಗುತ್ತವೆ. ಪ್ರತಿ ಸಂಪೂರ್ಣ ಟೇಬಲ್‌ನ ಬೆಲೆ ಸುಮಾರು USD 350,000, ಇದು ಸುಮಾರು ರೂ. 2 ಕೋಟಿ 92 ಲಕ್ಷವಾಗುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಕಂಪನಿಯ ಮೂಲಕ ಹೋದರೆ, ಅವರ ವೆಚ್ಚವನ್ನು ಆ ಕಂಪನಿಗಳೇ ಭರಿಸುತ್ತವೆ.

ಆದರೆ, ವೈಯಕ್ತಿಕವಾಗಿ ಹೋದಾಗ ವ್ಯಕ್ತಿಯೇ ತಮ್ಮ ಟಿಕೆಟ್‌ಗಾಗಿ ಪಾವತಿಸುತ್ತಾರೆ. ಹೀಗಾಗಿ, ಆಲಿಯಾ ಭಟ್ ಕನಿಷ್ಠ 63 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೆ ಈ ಪ್ರದರ್ಶನದಲ್ಲಿ ಭಾಗವಹಿಸಲು ಸ್ವತಃ ಪಾವತಿಸಿದ್ದಾರೆ. ಈ ಬಾರಿ ಆಲಿಯಾ ಎರಡನೇ ಬಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Continue Reading

LATEST NEWS

ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Published

on

ಬೆಂಗಳೂರು : ಸದ್ಯ ಪ್ರಜ್ವಲ್ ರೇವಣ್ಣ, ರೇವಣ್ಣ ಕೇಸ್ ಭಾರೀ ಸದ್ದು ಮಾಡುತ್ತಿದೆ. ಅತ್ತ ಲೈಂ*ಗಿಕ ದೌರ್ಜ*ನ್ಯ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶದಿಂದ ಪ್ರಜ್ವಲ್ ರೇವಣ್ಣ ಎಸ್ಕೇಪ್ ಆಗಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಬಂಧನವಾಗಿತ್ತು. ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೂ ಪಡೆದಿದ್ದರು.

ಮೇ. 8 ರ ವರೆಗೆ ಎಸ್ ಐ ಟಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದು ರೇವಣ್ಣ ಎಸ್ ಐ ಟಿ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ  : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ವಿಚಾರಣೆ ನಡೆಸಿದ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Continue Reading

LATEST NEWS

Trending