Connect with us

    bangalore

    ಸೇಮ್ ಸೇಮ್ ಬಟ್ ಡಿಫರೆಂಟ್ , ಮೀ ಆ್ಯಂಡ್ ಮಿನಿ ಮೀ : ರಾಧಿಕ ಪಂಡಿತ್ ವೈರಲ್ ಫೋಟೋ

    Published

    on

    ಸ್ಯಾಂಡಲ್‌ವುಡ್‌ನ ಪ್ರಿಯತಮೆಯರಾದ ಯಶ್ ಮತ್ತು ರಾಧಿಕಾ ಪಂಡಿತ್, ಅಭಿಮಾನಿಗಳಿಂದ ‘ರಾಕಿಂಗ್ ಕಪಲ್’ ಎಂದು ಕರೆಯಲ್ಪಡುತ್ತಾರೆ. ಅವರಿಬ್ಬರು ತಮ್ಮ ಕುಟುಂಬ ಮತ್ತು ಮಕ್ಕಳ ಸಣ್ಣ ಟೀಸರ್‌ಗಳನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಹಾಕುತ್ತಿದ್ದು, ಅಭಿಮಾನಿಗಳು ಯಾವಾಗಲೂ ಈ ಪೋಸ್ಟ್‌ಗಳನ್ನು ಬಹಳ ಉತ್ಸಾಹ ಮತ್ತು ಪ್ರೀತಿಯಿಂದ ಲ್ಯಾಪ್ ಅಪ್ ಮಾಡುತ್ತಿದ್ದಾರೆ.


    ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮುದ್ದಿನ ಮಗಳ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ರಾಧಿಕಾ ಪಂಡಿತ್ ಅವರು ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಅಪ್ಪನ ತೋಳಲ್ಲಿ ತಾವಿರುವ ಬಾಲ್ಯದ ಫೋಟೋ ಹಾಗೂ ಐರಾಳ ಫೋಟೋ ಜೊತೆಯಾಗಿ ಹಾಕಿದ್ದು, ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
    ರಾಧಿಕಾ ಪಂಡಿತ್ ಮಗಳನ್ನು ತುಂಬಾನೇ ಹಚ್ಚಿಕೊಂಡಿದ್ದಾರೆ. ಮಗಳ ಮೇಲಿನ ಪ್ರೀತಿ ಅವರಿಗೆ ಯಾವಾಗಲೂ ಕಡಿಮೆ ಆಗುವಂಥದ್ದಲ್ಲ. ಈಗ ಅವರು ಹಂಚಿಕೊಂಡಿರುವ ಫೋಟೋ ಸಖತ್ ಗಮನ ಸೆಳೆದಿದೆ. ಚಂದನ್ ಶೆಟ್ಟಿ ಸೇರಿದಂತೆ ಅನೇಕರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.
    ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಅವರ ತೋಳಲ್ಲಿ ಕುಳಿತು ನಗುತ್ತಿದ್ದಾರೆ. ಅದೇ ರೀತಿ ಐರಾ ಕೂಡ ಕೃಷ್ಣಪ್ರಸಾದ್ ತೋಳಲ್ಲಿ ಕುಳಿತು ಸ್ಮೈಲ್ ಮಾಡಿದ್ದಾರೆ. ಅವರಿಬ್ಬರ ಮಧ್ಯೆ ತುಂಬಾ ಹೋಲಿಕೆ ಇದ್ದು, ನಗು, ಮುಖದ ಆಕಾರ ಒಂದೇ ರೀತಿ ಇದೆ. ಅನೇಕರು ಫೋಟೋಗೆ ‘ಜೂನಿಯರ್ ರಾಧಿಕಾ ಪಂಡಿತ್’ ಎಂದು ಕಮೆಂಟ್ ಮಾಡಿದ್ದಾರೆ.
    ‘ನಾನು ಹಾಗೂ ನನ್ನ ಮಿನಿಗೆ ಒಬ್ಬರೇ ಫೇವರಿಟ್​ ವ್ಯಕ್ತಿ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಶನ್ ನೀಡಿದ್ದಾರೆ. ‘ಆಹಾ ಎಂಥ ಅದ್ಭುತ. ಸೇಮ್ ಸೇಮ್.. ಬಟ್ ಡಿಫರೆಂಟ್’ ಎನ್ನುವ ಕಮೆಂಟ್​ಗಳು ಕೂಡ ಈ ಫೋಟೋಗೆ ಬಂದಿದ್ದು ಸಧ್ಯ ಫುಲ್ ವೈರಲ್ ಆಗುತ್ತಿದೆ.

    bangalore

    ಆಟೋದಲ್ಲಿ ಆಫೀಸ್ ಚೇರ್; ಏನಿದು ವಿಚಿತ್ರ ?

    Published

    on

    ಮಂಗಳೂರು/ಬೆಂಗಳೂರು : ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನಲ್ಲಿರುವ ಸ್ಮಾರ್ಟ್ವಾಚ್ನಲ್ಲಿ ಯುಪಿಐ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಸ್ವೀಕರಿಸಿರುವ ಫೋಟೋ ಇತ್ತೀಚೆಗೆ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಡ್ರೈವರ್ ಸೀಟನ್ನೇ ಆಫೀಸ್ ಚೇರ್ ಆಗಿ ಅಪ್ಗ್ರೇಡ್ ಮಾಡಿದ್ದ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.


    @shivaniiiiiii_ ಎಂಬ ಟ್ವಿಟರ್ ಖಾತೆಯಲ್ಲಿ ಆಟೋ ಚಾಲಕನ ಈ ಫೋಟೋ ಸೆಪ್ಟೆಂಬರ್ 23ರಂದು ಹಂಚಿಕೊಂಡಿದ್ದು, ಈ ಪೋಸ್ಟ್ ಒಂದೇ ದಿನದಲ್ಲಿ 76 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಿದೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
    ಎಷ್ಟೇ ಟ್ರಾಫಿಕ್ ಇದ್ದರೂ ಕೂಡ ಆರಾಮಾಗಿ ಅಟೋದಲ್ಲಿ ಕುಳಿತುಕೊಳ್ಳಲು ಆಗುವಂತೆ ಆಫೀಸ್ ಚೇರ್ ಫಿಟ್ ಮಾಡಿರುವುದನ್ನು ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾಗೆ ಜನರು ಪೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

    Continue Reading

    bangalore

    ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚಿಗೆ ಸಾಮಾಜಿಕ ಜಾಲತಾಣದ ಮೂಲಕ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಫೇಕ್ ಅಕೌಂಟ್ ಗಳ ಮೋಸದ ಜಾಲಕ್ಕೆ ಬಿದ್ದು ಲಕ್ಷಗಟ್ಟಲೆ ಕಳೆದುಕೊಳ್ಳುವವರಿಗೇನೂ ಕೊರತೆಯಿಲ್ಲ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಇಲ್ಲಿ ಉದ್ಯಮಿಯೊಬ್ಬರು ಹೆಣ್ಣಿನ ಹೆಸರಿನಲ್ಲಿ ನಡೆದ ಮಹಾಜಾಲಕ್ಕೆ ಬಲಿಯಾಗಿದ್ದಾರೆ.

    ಉದ್ಯಮಿ ಗಣೇಶ್ ಎಂಬುವವರಿಗೆ ಕುಟುಂಬ ಎಂಬ ಸೋಷಿಯಲ್ ಮೀಡಿಯಾ ಆ್ಯಪ್ನಲ್ಲಿ ಕಾವ್ಯ ಎಂಬಾಕೆ ಪರಿಚಯವಾಗಿದ್ದು, ಗಣೇಶ್ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಘಟನೆ ಕುರಿತು ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
    ಕಾವ್ಯ ನಾಲ್ಕು ವರ್ಷಗಳ ಹಿಂದೆ ಸಿನಿಮಾ ಮಾಡುವ ವಿಚಾರವಾಗಿ ಪರಿಚಯವಾಗಿದ್ದಾಳಂತೆ. ನಿರ್ದೇಶಕ ಎಸ್.ಆರ್.ಪಾಟೀಲ್ ಗೆ 4.25 ಲಕ್ಷ ಹಣ ಅಗತ್ಯತೆ ಇದೆ ಎಂದು ಹೇಳಿ ಗಣೇಶ್ನಿಂದ ವಸೂಲಿ ಮಾಡಿದ್ದಾಳೆ. ಕೊಟ್ಟ ಹಣ ವಾಪಸ್ಸು ಕೇಳಿದಾಗ ಅವನನ್ನು ರೂಮಿಗೆ ಬರ ಹೇಳಿ, ಒತ್ತಾಯದಿಂದ ಲೈಂಗಿಕ ಕ್ರಿಯೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
    ಲಕ್ಷಗಟ್ಟಲೆ ಕಬಳಿಸಿದ ಯುವತಿ :
    ಡೈರೆಕ್ಟರ್ಗೆ ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ನಾಲ್ಕು ಲಕ್ಷ ರೂ, ಹಣ ಪಡೆದಿದ್ದಾಳಂತೆ. ಅದನ್ನು ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದರ ವಿಡಿಯೋ ತೆಗೆದಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಉದ್ಯಮಿಯಿಂದ ಬ್ರಾಸ್ಲೈಟ್, ಚೈನ್ ಅಂತೆಲ್ಲಾ ಸುಮಾರು 40 ಲಕ್ಷ ರೂಪಾಯಿ ಹಣ ಪೀಕಿದ್ದಾಳಂತೆ. ಅಷ್ಟಕ್ಕೆ ಸುಮ್ಮನಾಗದೇ ಕಾರು ಕೊಡಿಸು ಎಂದು ದುಂಬಾಲು ಬಿದ್ದಿದ್ದಾಳಂತೆ. ಇದಕ್ಕೆ ಒಪ್ಪದಿದ್ದಾಗ ಆರೋಪಿ ಮಹಿಳೆ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿಸಿದ್ದಾಳಂತೆ. ಹಣ ಕೊಡದಿದ್ದರೆ ವೀಡಿಯೋಗಳನ್ನ ಟಿವಿಗೆ ಕೊಡೋದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾಳಂತೆ.
    ಉದ್ಯಮಿ ಗಣೇಶ್ ನೀಡಿದ ದೂರಿನ ಆಧಾರದ ಮೇಲೆ ಕಾವ್ಯ, ದಿಲೀಪ್, ರವಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬೆಂಬತ್ತಿದ್ದಾರೆ.

     

    ಇದನ್ನೂ ಓದಿ: WATCH : ‘ಶೆಡ್ಡಿಗ್ ಬಾ’ ಎಂದ ಹೈಕೋರ್ಟ್ ಜಡ್ಜ್; ವೀಡಿಯೋ ವೈರಲ್

    Continue Reading

    bangalore

    ಬಸ್ ಚಾಲನೆ ವೇಳೆಯೇ ಚಾಲಕನಿಗೆ ಹೃದಯಾಘಾತ,; ಪೊಲೀಸರ ಸಮಯಪ್ರಜ್ಞೆಯಿಂದ ಉಳಿಯಿತು 45 ಜೀವ !

    Published

    on

    ಮಂಗಳೂರು/ಬೆಂಗಳೂರು: ಸರ್ಕಾರಿ ಬಸ್ ಚಾಲಕನಿಗೆ ಬಸ್ ಚಾಲನೆ ವೇಳೆಯೇ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಪೊಲೀಸರು ತೋರಿದ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 45 ಜನರ ಜೀವ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


    BMTC ಬಸ್ ಡ್ರೈವರ್ ವೀರೇಶ್ ಅವರಿಗೆ ಗುರುವಾರ(ಸೆ.19) ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್ನಲ್ಲಿದ್ದ ವೇಳೆ ಏಕಾಏಕಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗ ತೊಡಗಿದ ವೇಳೆ ಅನುಮಾನಗೊಂಡ ಹಲಸೂರು ಟ್ರಾಫಿಕ್ ಪೊಲೀಸ್ ಎಎಸ್ಐ ಆರ್ . ರಘುಕುಮಾರ್ ಬಸ್ ಬಳಿ ಓಡಿ ಬಂದು ನೋಡಿದಾಗ ಎದೆಗೆ ಕೈ ಹಿಡಿದು ಬಸ್ ಚಾಲಕ ಒಂದು ಕಡೆಗೆ ವಾಲಿದ್ದನು.
    ಹಾರ್ಟ್ ಅಟ್ಯಾಕ್ ಆಗಿರುವುದನ್ನ ಗಮನಕ್ಕೆ ಬಂದಿದ್ದು, ಟ್ರಾಫಿಕ್ ಎಎಸ್ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿ ಆಂಬುಲೆನ್ಸ್ಗೂ ಕಾಯದೆ, ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು.
    ಅದೃಷ್ಟವಶಾತ್, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಪೊಲೀಸರ ಸಮಯಪ್ರಜ್ಞೆ 45 ಜನರ ಪ್ರಾಣವನ್ನೂ ಉಳಿಸಿದೆ.

    Continue Reading

    LATEST NEWS

    Trending