Friday, July 1, 2022

ವಶಕ್ಕೆ ಪಡೆದ ಐಷಾರಾಮಿ ಕಾರುಗಳ ಮಾರಾಟ ಪ್ರಕರಣ; ವಿಶೇಷ ತನಿಖಾ ತಂಡ ರಚಿಸಲು ಡಿವೈಎಫ್ಐ ಆಗ್ರಹ..!

ವಶಕ್ಕೆ ಪಡೆದ ಐಷಾರಾಮಿ ಕಾರುಗಳ ಮಾರಾಟ ಪ್ರಕರಣ; ವಿಶೇಷ ತನಿಖಾ ತಂಡ ರಚಿಸಲು ಡಿವೈಎಫ್ಐ ಆಗ್ರಹ..!

Sale of luxury cars seized; DYFI demands to create a special investigation team..

ಮಂಗಳೂರು: ಮಂಗಳೂರು  ಕಮೀಷನರೇಟ್ ಅಧೀನದ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಗಳ ಐಷಾರಾಮಿ ಕಾರುಗಳನ್ನು ಹಿರಿಯ ಅಧಿಕಾರಿಗಳು ಶಾಮೀಲಾಗಿ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ.

ಅಂದಿನ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್, ನಗರದ ಎಸಿಪಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವುದರಿಂದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದ ರಿಯಲ್ ಎಸ್ಟೇಟ್, ಹಣ ದ್ವಿಗುಣ ಪ್ರಕರಣದ ಆರೋಪಿಗಳಿಗೆ ಸೇರಿದ ಬಿಎಮ್ ಡಬ್ಲ್ಯೂ, ಜಾಗ್ವಾರ್ ಸಹಿತ ಮೂರು ಐಶಾರಾಮಿ ಕಾರುಗಳನ್ನು ಪೊಲೀಸರು ಮಾರಾಟ ಮಾಡಿರುವ ಪ್ರಕರಣವನ್ನು ಮಂಗಳೂರು ನಗರದ ನೂತನ ಪೊಲೀಸ್ ಕಮೀಷನರ್ ಬಯಲಿಗೆಳಿದಿದ್ದಾರೆ.

ತನಿಖೆಗೂ ಆದೇಶಿಸಿದ್ದಾರೆ. ಈ ಕುರಿತು ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕರು ವರದಿ ಕೇಳಿರುವ ಕುರಿತು ಸುದ್ದಿಯಾಗಿದೆ. ಇದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು, ಜನಸಾಮಾನ್ಯರು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.

ಮಂಗಳೂರಿನಿಂದ ತಿಂಗಳ ಹಿಂದೆಯಷ್ಟೆ ವರ್ಗಾವಣೆಗೊಂಡಿರುವ ಆಗಿನ ಕಮೀಷನರ್ ವಿಕಾಸ್ ಕುಮಾರ್ ಮೇಲೆ ಇದೊಂದೆ ಪ್ರಕರಣ ಅಲ್ಲದೆ ಭ್ರಷ್ಟಾಚಾರದಲ್ಲಿ  ಸೆಟಲ್ ಮೆಂಟ್ ಹೆಸರಿನಲ್ಲಿ ಹಣ ಸುಲಿಗೆಯ ಹಲವು ಗಂಭೀರ ಆರೋಪಗಳು ಕೇಳಿಬಂದಿತ್ತು.

ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಳೆಯ ಆರೋಪಿಗಳಿಂದ, ದಂಧೆ ನಿರತರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುವ, ಪ್ರಕರಣಗಳನ್ನು ಮುಚ್ಚಿ ಹಾಕಿರುವ ವದಂತಿಗಳು ನಗರದಲ್ಲಿ ಹರಿದಾಡಿದ್ದವು.‌

ಸಿಸಿಬಿಯನ್ನು ಮುಂದಿಟ್ಟು ಇಂತಹ ಹಲವು ಅಕ್ರಮ ಡೀಲಿಂಗ್ ನಡೆಸಿರುವ ಅನುಮಾನಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ಪೊಲೀಸ್ ಇಲಾಖೆಯ ವೃತ್ತಿಪರತೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಈಗಿನ‌ ಕಮೀಷನರ್ ಶಶಿಕುಮಾರ್ ಪ್ರಕರಣದ ತನಿಖೆಗೆ ಆದೇಶಿಸಿ ಜನರಲ್ಲಿ ಭರವಸೆ ಹುಟ್ಟಿಸಿದರೂ, ಈ ಪ್ರಕರಣದಲ್ಲಿ ಐಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಹೆಸರಿರುವುದರಿಂದ, ರಾಜಕೀಯ ನಂಟಿನ‌ ಅನುಮಾನಗಳೂ ವ್ಯಕ್ತವಾಗಿರುವುದರಿಂದ ಪಾರದರ್ಶಕ ತನಿಖೆಗಾಗಿ ಪ್ರಕರಣವನ್ನು ದಕ್ಷ ಅಧಿಕಾರಿಗಳುಳ್ಳ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ರಾಜಕೀಯ ಪ್ರಭಾವ ಬಳಸಿ ಈಗಿನ ಕಮೀಷನರ್ ಶಶಿ ಕುಮಾರ್ ರ ಕೈಗಳನ್ನು ಕಟ್ಟಿಹಾಕಿ, ಪ್ರಕರಣವನ್ನು ಸರಕಾರ ಮುಚ್ಚಿ ಹಾಕಲು ಯತ್ನಿಸಿದರೆ ನಾಗರಿಕರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ  ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ನೀರಿನಿಂದ ಮುಳುಗಡೆಯಾದ ಕೃಷಿಭೂಮಿ-ಅಪಾರ ಬೆಳೆ ನಷ್ಟ

ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂರು ನಾಲ್ಕು ದಿನಗಳಿಂದ ಗ್ರಾಮ ಜಲಾವೃತಗೊಂಡು ಕೃಷಿ ಭೂಮಿಗೆ ನೀರು ನುಗ್ಗಿ ನೂರಾರು ಎಕರೆ ಕೃಷಿಭೂಮಿ ನೀರಿನಲ್ಲಿ ಮುಳುಗಡೆಯಾದ ಘಟನೆ ಉಡುಪಿಯ ಬೈಂದೂರಿನ ನಾವುಂದದಲ್ಲಿ ನಡೆದಿದೆ.ರೈಲ್ವೆ ಮಾರ್ಗದ...

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...

ಉಡುಪಿ: ಬಾವಿಗೆ ಹಾರಿ ಯುವತಿ ಜೀವಾಂತ್ಯ

ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.ಶರ್ಮಿಳಾರವರು ಸುಮಾರು 8 ತಿಂಗಳಿನಿಂದ...