Saturday, June 3, 2023

ಬಿಲ್ಲವ ಸಮುದಾಯಕ್ಕೆ ಅವಹೇಳನ ಪ್ರಕರಣ: ಬಹಿರಂಗ ಕ್ಷಮೆ ಕೇಳಿದ ಬಿಜೆಪಿಯ ಅಧಿಕಾರಿ ..!

ಬಿಲ್ಲವ ಸಮುದಾಯಕ್ಕೆ ಅವಹೇಳನ ಪ್ರಕರಣ: ಬಹಿರಂಗ ಕ್ಷಮೆ ಕೇಳಿದ ಬಿಜೆಪಿಯ ಅಧಿಕಾರಿ ..!

ಮಂಗಳೂರು: ಬಿಲ್ಲವ ಸಮುದಾಯಕ್ಕೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಲ್ಲವರ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಕಾಲು ಹಿಡಿಯುವುದಿಲ್ಲ ಎಂದು ಧಾರ್ಮಿ ಸಭೆಯೊಂದರಲ್ಲಿ ಹೇಳಿದ್ದ ವಿಡಿಯೋ ವೈರಲ್ ಆದ ಬಳಿಕ ಫೋನ್​ ಕರೆಯೊಂದರಲ್ಲಿ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು.

ಇದರಿಂದ ಸಿಡಿದೆದ್ದ ಬಿಲ್ಲವ ಸಮುದಾಯ ಹಾಗೂ ಕಾಂಗ್ರೆಸ್ ನಾಯಕರು ಜಗದೀಶ್ ಅಧಿಕಾರಿ ವಿರುದ್ದ ತೀವ್ರ ಆಕೋಶ್ಶ ವ್ಯಕ್ತಪಡಿಸಿದ್ದರು.

ಜಗದೀಶ್ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲಿಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು.

ಈ ಬೆಳವಣಿಗೆಗಳಿಂದ ಎಚ್ಚೆತ್ತ ಬಿಜೆಪಿ ಮುಖಂಡರಾದ ಅಧಿಕಾರಿಯವರು ಇದೀಗ ಕ್ಷಮೆಯಾಚಿಸಿದ್ದಾರೆ.

ಮೂಡಬಿದಿರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮಾತಿನಿಂದ ಬಿಲ್ಲವ ಸಮುದಾಯಕ್ಕೆ ನೋವಾದ ಹಿನ್ನೆಲೆಯಲ್ಲಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ.

ಅವಳಿ ವೀರಪುರುಷರಾದ ಕೋಟಿ ಚೆನ್ನಯ್ಯ ಅವರ ಬಗ್ಗೆ ಭಯಭಕ್ತಿಯಿದ್ದು, ಮೂಲ ಕ್ಷೇತ್ರಕ್ಕೆ ತೆರಳಿ ಕೈಕಾಣಿಕೆ ಹಾಕಿ ಕ್ಷಮೆಯಾಚಿಸುತ್ತೇನೆ.

ನಾನು ಬಿಜೆಪಿಯಲ್ಲಿದ್ದರೂ ಜನಾರ್ದನ ಪೂಜಾರಿ ಅವರ ಅಭಿಮಾನಿ. ಅವರೊಂದಿಗೆ ಕಳೆದ ಮೂರು ದಶಕಗಳಿಂದ ಜೊತೆಗಿದ್ದೇನೆ. ನಿನ್ನೆ ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ ಎಂದರು.

LEAVE A REPLY

Please enter your comment!
Please enter your name here

Hot Topics