Connect with us

FILM

ರುಕ್ಮಿಣಿ ವಸಂತ್ ಸ್ಟಿಲ್ ಸಿಂಗಲ್ – ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹ್ಯಾಪಿ

Published

on

ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ನಾನು ಇನ್ನೂ ಸಿಂಗಲ್ ಅನ್ನೋ  ಮೂಲಕ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಗೆ ಸಿಹಿ ಸುದ್ದಿ  ನೀಡಿದ್ದಾರೆ. ಈ ಸುದ್ದಿ ಕೇಳಿದ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ. 

 

ಬೆಂಗಳೂರು : ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಬಂದ ಮೇಲಂತೂ ನಟಿ ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಆಗಿ ಬದಲಾಗಿದ್ದಾರೆ.ಅವರ ಸರಳವಾದ ಸೌಂದರ್ಯ, ಸಂಯಮದ ನಟನೆಗೆ ಕನ್ನಡ ಪ್ರೇಕ್ಷಕರು ಮಾರು ಹೋಗಿದ್ದಾರೆ. ಅದೆಷ್ಟೋ ಹುಡುಗರ ಮೊಬೈಲ್ ವಾಲ್ ಪೇಪರ್ ಕೂಡ ರುಕ್ಮಿಣಿ ವಸಂತ್ ಆಗಿದ್ದಾರೆ.


ಆದ್ರೆ ಪುಟ್ಟಿಗೆ ಲವ್ವರ್ ಇದ್ದರಾ ಅನ್ನೋ ಪ್ರಶ್ನೆ ಮಾತ್ರ ರುಕ್ಮಿಣಿ ಫ್ಯಾನ್ಸಲ್ಲಿ ಕಾಡ್ತಿತ್ತು. ಯಾಕಂದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿತ್ತು. ಆ ಫೋಟೋ ನೋಡಿ ರಕ್ಷಿತ್ ಫ್ಯಾನ್ಸ್ ನಿರಾಸೆಗೆ ಒಳಗಾಗಿದ್ರು.

ಹೌದು ಯುವಕನೊಬ್ಬನೊಟ್ಟಿಗೆ ರುಕ್ಮಿಣಿ ಆತ್ಮೀವಾಗಿ ಕಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಚಿತ್ರಕ್ಕೆ ರುಕ್ಮಿಣಿ ಕೂಡ “ಐ ಲವ್ ಯೂ” ಅಂತ ಪ್ರತಿಕ್ರಿಯೆ ನೀಡಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಇದೀ ಈ ಸುದ್ದಿಗೆ ಸ್ವತಃ ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದು, ಆ ವೈರಲ್ ಆಗಿರುವ ಚಿತ್ರದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನದ ಬಗ್ಗೆ ಜನ ಕೇರ್ ಮಾಡುತ್ತಿರುವುದು ಖುಷಿ ಆಗುತ್ತದೆ. ಇದೇ ಸಮಯದಲ್ಲಿ ಸುಳ್ಳು ಸುದ್ದಿಗಳು, ನೆಗೆಟಿವ್ ಕಮೆಂಟ್​ಗಳು ಬೇಸರವನ್ನು ತರಿಸುತ್ತವೆ” ಎಂದಿದ್ದಾರೆ.


ಈ ಮಾತುಗಳನ್ನು ಸ್ವತಃ ರುಕ್ಮಿಣಿ ವಸಂತ್ ಬಾಯಾರೆ ಕೇಳಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ನಿಜ ಜೀವನದಲ್ಲೂ ರಕ್ಷಿತ್-ರುಕ್ಮಿಣಿ ಒಂದಾಗಲಿ ಅಂತ ಮನಸಾರೆ ಹಾರೈಸುತ್ತಿದ್ದಾರೆ.

FILM

ಬದುಕಿನ ಕೊನೆಯವರೆಗೂ ನೋವು, ತಾತ್ಸಾರ, ಅಪವಾದಗಳೇ ಹೆಚ್ಚು-ಸ್ವರ್ಗದಲ್ಲಾದರೂ ನೆಮ್ಮದಿ ಸಿಗಲಿ ಅಮ್ಮಾ…

Published

on

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಕಲಿತದ್ದು ಕೇವಲ ಎರಡನೇ ತರಗತಿವರೆಗು ಮಾತ್ರ. 9ನೇ ವಯಸ್ಸಿಗೆ ತಂದೆ ಹಾಗೂ ತಾಯಿಯನ್ನು ಕಳೆದುಕೊಳ್ಳುತ್ತಾರೆ..

ಅವರನ್ನು ಕ್ರೈಸ್ತ ಕುಟುಂಬವೊಂದು ಆರೈಕೆ ಮಾಡಿದ್ದರು.
ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು.
ತುಳು ಚಿತ್ರರಂಗದಲ್ಲಿ ಅಂದಿಗೆ ತುಳು ಸಿನಿಮಾಗಳು ಆರಂಭ ಆದವು. ಹೊಟ್ಟೆ ಹಸಿವನ್ನು ನೀಗಿಸಲು ಚಂದದ ಹೆಣ್ಣು ಮಗಳೋರ್ವಳು ಸಿನಿಮಾದಲ್ಲಿ ಅವಕಾಶ ಕೊಡುವಂತೆ ಅಂಗಲಾಚುತ್ತಾಳೆ. ಅವಳೇ ಮುದ್ದು ಮುದ್ದು ಲೀಲಾ ಕಿರಣ್ ಅಲಿಯಾಸ್ ಇಂದಿನ ಲೆಜೆಂಡೆರಿ ಆಕ್ಟ್ರೆಸ್ ಲೀಲಾವತಿ ಅಮ್ಮ. ಇದರ ಪರಿಣಾಮವಾಗಿ ‘ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಣ್ಣದ ಬದುಕಿ ಕಟ್ಟಿಕೊಂಡು ಅವಕಾಶ ಪಡೆದು ಜೀವನ ಸಾಗಿಸಬಹುದು ಎಂಬ ಕನಸಿನೊಂದಿಗೆ ಬೆಂಗಳೂರಿಗೆ  ಹೋದ ಲೀಲಮ್ಮ ಅಲ್ಲಿ ಬರಬಾರದ ಕಷ್ಟಗಳನ್ನು ಅನುಭವಿಸಿದ್ರು.

ಆಗ ಆಸರೆಯಾಗಿದ್ದೇ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮ ಕಂಪೆನಿ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು ಲೀಲಾವತಿ ಅಮ್ಮ. ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರದ್ದು ಸೂಪರ್ ಡೂಪರ್ ಕಾಂಬಿನೇಷನ್. ಇವರಿಬ್ಬರ ಅದ್ಭುತ ಅಭಿನಯವನ್ನು ಕಂಡು ರಾಜ್ – ಲೀಲಾವತಿ ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭಿಸಿದರು.

ಆದ್ರೆ ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು. ಡಾ. ರಾಜ್ ಅವರಿಗೆ ಮಾತ್ರ ಲೀಲಾವತಿ ಅಂದರೆ ಬಹಳ ಪ್ರೀತಿ..ಅವರೇ ಲೀಲಾವತಿಯವರಿಗರ  ಬರೆದ ಪತ್ರಗಳು ವೈರಲ್ ಆಗಿದ್ದವು.ಇದೀಗ ಲೀಲಾವತಿ ಅಮ್ಮ ನಮ್ಮನೆಲ್ಲಾ ಬಿಟ್ಟು ಬಾರದ ಊರಿಗೆ ತೆರಳಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಬದುಕಿದ್ದಾಗ ಅಷ್ಟೇನೂ ಸುಖ  ಕಾಣದ ಲೀಲಾವತಿ ಅಮ್ಮನವರಿಗೆ ಸ್ವರ್ಗದಲ್ಲಾದರೂ ಸುಖ ನೆಮ್ಮದಿ ಸಿಗಲಿ.

Continue Reading

bangalore

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮ ನಿಧನ..!

Published

on

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅಮ್ಮ ವಯೋಸಹಜದ ಕಾಯಿಲೆಯಿಂದ ಇಂದು ನಿಧನ ಹೊಂದಿದರು.

ಲೀಲಾವತಿ ಅವರು ಕೆಲವು ಸಮಯದ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳಳುತ್ತಿದ್ದರು. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ಲೀಲಾವತಿ ಅವರು ಕೆಲವು ದಿನಗಳಿಂದ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಲು ಖುದ್ದು ಸಿಎಂ ಸಿದ್ದರಾಮಯ್ಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

ಸಿನಿಮಾ ರಂಗಕ್ಕೆ ಕಾಲಿಟ್ಟ ಲೀಲಾವತಿ ಅಮ್ಮ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದ್ದ ಅವರು ಕಿರಿಯ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಹಲವಾರು ಪುರಸ್ಕಾರಗಳೂ ಸಂದಿವೆ. ಕರ್ನಾಟಕ ಸರಕಾರ ಕೊಡಮಾಡುವ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತುಮಕೂರ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 

Continue Reading

bangalore

ದೈವದ ರೀಲ್ಸ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿದ ಕಾಂತಾರ ರಿಷಬ್ ಶೆಟ್ಟಿ..!!

Published

on

ಇತ್ತೀಚಿನ ದಿನಗಳಲ್ಲಿ ದೈವದ ಬಗ್ಗೆ ರೀಲ್ಸ್ ಮಾಡೋದು ಹೆಚ್ಚಾಗುತ್ತಿದೆ. ಅಲ್ಲದೆ ವೇದಿಕೆಗಳಲ್ಲೂ ದೈವದ ವೇಷ ಹಾಕಿ ನೃತ್ಯ ಮಾಡುತ್ತಿದ್ದಾರೆ. ಇಂತಹ ವೇಷಗಳು, ನೃತ್ಯಗಳು ಹಾಗೂ ರೀಲ್ಸ್ ಗಳನ್ನು ಮಾಡೋದರಿಂದ ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಆಗ್ತಾ ಇದೆ. ಇದರ ಬಗ್ಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಂದಿ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಚಿತ್ರ ಬಂದ್ಮೇಲೆ ಒಂದಷ್ಟು ಬೇಸರದ ಸಂಗತಿಗಳೂ ನಡೆದವು. ದೈವದ ರೀಲ್ಸ್ ಮಾಡೋರು ಹೆಚ್ಚಾಗಿದ್ದಾರೆ. ಅದರಿಂದ ದೈವವನ್ನ ನಂಬೋ ಜನರಿಗೆ, ದೈವವನ್ನ ಆರಾಧಿಸೋ ನರ್ತಕರಿಗೆ ಬೇಸರ ಕೂಡ ಆಗಿದೆ. ನನಗೆ ಇವರೆಲ್ಲ ಈ ಒಂದು ಸತ್ಯದ ಬಗ್ಗೆ ಹೇಳ್ತಾನೇ ಇದ್ದಾರೆ. ಹಾಗಾಗಿಯೇ ಈ ಒಂದು ವಿಚಾರವನ್ನು ಮಾಧ್ಯಮದ ಮೂಲಕ ತಿಳಿಸೋಕೆ ಇಷ್ಟಪಡುತ್ತೇನೆ. ಇದರಿಂದ ಇದು ಎಲ್ಲೋ ಒಂದು ಕಡೆಗೆ ಇಡೀ ಕಾಂತಾರ ಚಿತ್ರ ಉದ್ದೇಶಕ್ಕೆ ಕಪ್ಪು ಚುಕ್ಕಿ ಆಗುತ್ತಿದೆ ಅನಿಸುತ್ತಿದೆ. ಇದನ್ನ ಯಾರೂ ಮಾಡ್ಬೇಡಿ. ಇದರಿಂದ ಎಲ್ಲರಿಗೂ ಹರ್ಟ್ ಆಗುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

ರೀಲ್ಸ್ ಅನ್ನೋದು ಸದ್ಯದ ಅತಿ ದೊಡ್ಡ ಕಿಚ್ಚಾಗಿದೆ. ಇದರಿಂದ ಒಳ್ಳೆಯ ಎಂಜಾಯ್ ಮೆಂಟ್ ಸಿಗುತ್ತಿದೆ. ಆದರೆ ಇದರ ಎಫೆಕ್ಟ್ ಬೇರೆನೆ ಆಗ್ತಾ ಇದೆ. ಕಾಂತಾರ ದೈವದ ರೀಲ್ಸ್ ಮಾಡೋದರಿಂದಲೇ ತುಳುನಾಡ ದೈವಾರಾಧಕರಿಗೆ, ದೈವ ನರ್ತಕರಿಗೆ, ಬೇಸರ ಆಗುತ್ತದೆ. ನಾನು ಒಬ್ಬ ದೈವ ಭಕ್ತನೇ ಆಗಿದ್ದೇನೆ. ಇದು ನನಗೂ ಬೇಸರ ತರಿಸುತ್ತಿದೆ. ಚಿತ್ರದ ಮೂಲ ಉದ್ದೇಶ ದೈವದ ಶಕ್ತಿ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ಹೇಳೋದೇ ಆಗಿದೆ. ಆದರೆ ರೀಲ್ಸ್ ಅನ್ನೋದು ಎಲ್ಲೋ ಒಂದು ಕಡೆಗೆ ಕಪ್ಪು ಚುಕ್ಕೆ ಆಗುತ್ತದೆ ಎಂದು ನೊಂದು ಕೊಂಡು ಹೇಳಿದ್ದಾರೆ. ಕಾಂತಾರ ಚಿತ್ರದಲ್ಲಿ ದೈವಾರಾಧನೆ ಇದೆ. ಇದನ್ನ ಅಷ್ಟೆ ಗೌರವದಿಂದಲೇ ಮಾಡಿದ್ದೇವೆ. ದೈವ ನರ್ತಕರನ್ನ ಸಲಹೆ-ಸೂಚನೆಯಂತೆ ಚಿತ್ರೀರಿಸಿದ್ದೇವೆ. ಇಲ್ಲಿ ದೈವಕ್ಕೆ ಮಾಡಬೇಕಿರೋ ಎಲ್ಲ ಪಾವಿತ್ರ್ಯತೆಯನ್ನು ಅಚ್ಚುಕಟ್ಟಾಗಿಯೆ ಮಾಡಿದ್ದೇವೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂತಾರ ಚಿತ್ರ ಮಾಡಿದ್ದೇವೆ ಎಂದಿದ್ದಾರೆ. ಚಿತ್ರಕ್ಕೆ ಬಂದ ಪ್ರಶಸ್ತಿಯನ್ನ ದೈವ ನರ್ತಕರಿಗೆ, ಕನ್ನಡಿಗರಿಗೆ, ಪವರ್ ಸ್ಟಾರ್ ಪುನೀತ್ ಅವರಿಗೆ ಅರ್ಪಿಸಿದ್ದಾರೆ ಎಂದರು. ಜೊತೆಗೆ ದೈವದ ರೀಲ್ಸ್ ಮಾಡ್ಬೇಡಿ ಅಂತಲೂ ರಿಕ್ವೆಸ್ಟ್ ಮಾಡಿದ್ದಾರೆ.

 

Continue Reading

LATEST NEWS

Trending