ಕೇವಲ 35 ರೂ.ಗೆ ಕೊರೊನಾ ಮದ್ದು : ಸನ್ ಫಾರ್ಮಾ ದಿಂದ ಮಾರುಕಟ್ಟೆಗೆ ಔಷಧ ಬಿಡುಗಡೆ..!
ನವದೆಹಲಿ : ಕೊರೊನಾ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಅತೀ ಕಡಿಮೆ ದರದ ಕೋವಿಡ್ ಕೋವಿಡ್ 19ಗೆ ಔಷಧವನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.
ಮಾರುಕಟ್ಟೆಯಲ್ಲಿ ಎಲ್ಲರ ಕೈಗೆಟುಕುವ ಅಗ್ಗದ ಔಷಧ ಇದಾಗಿದೆ. ಪ್ರಮುಖ ಔಷಧೀಯ ಕಂಪನಿಯಾದ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಕೊರೊನಾವೈರಸ್ ಕಾಯಿಲೆಯ ಸೌಮ್ಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ಫ್ಲಗಾರ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ಈ ಆಂಟಿವೈರಲ್ ಔಷಧಿ ಫೆವಿಪಿರವಿರ್ ಅನ್ನು ಪರಿಚಯಿಸಿದೆ.
ಟ್ಯಾಬ್ಲೆಟ್‌ಗೆ ಬೆಲೆ ಕೇವಲ 35 ರೂ. ಆಗಿದೆ. ಈ ವಾರದಿಂದ ಫ್ಲಗಾರ್ಡ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಸನ್ ಫಾರ್ಮ ಮಾಹಿತಿ ನೀಡಿದೆ.
ಫವಿಪಿರಾವೀರ್ ಭಾರತದಲ್ಲಿ ಸೌಮ್ಯ ಮತ್ತು ಮಧ್ಯಮ ಕೋವಿಡ್ -19 ಕಾಯಿಲೆಯ ಚಿಕಿತ್ಸೆಗೆ ಅನುಮೋದನೆ ಪಡೆದ ಏಕೈಕ ಮೌಖಿಕ ಆಂಟಿ-ವೈರಲ್ ಚಿಕಿತ್ಸೆಯಾಗಿದೆ.
ನಾವು ಹೆಚ್ಚು ಹೆಚ್ಚು ರೋಗಿಗಳನ್ನು ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಕೈಗೆಟುಕುವ ವೆಚ್ಚದಲ್ಲಿ ಫ್ಲಗಾರ್ಡ್ ಅನ್ನು ನೀಡುತ್ತಿದ್ದೇವೆ ಎಂದು ಸನ್ ಫಾರ್ಮಾ ಇಂಡಿಯಾದ ಬಿಸಿನೆಸ್ ಸಿಇಒ ಕೀರ್ತಿ ಗಣೋರ್ಕರ್ ತಿಳಿಸಿದ್ದಾರೆ.
ಭಾರತದಲ್ಲಿ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ಬರುತ್ತಿವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯ ವೃತ್ತಿಪರರು ಹೆಚ್ಚಿನ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.