Wednesday, October 5, 2022

ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಭೂಕುಸಿತ ಪ್ರಕರಣ : ಕಾರ್ಯಾಚರಣೆಗೆ ಅಡ್ಡಿಯಾದ ಭಾರಿ ಮಳೆ..!

ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಭೂಕುಸಿತ ಪ್ರಕರಣ : ಕಾರ್ಯಾಚರಣೆಗೆ ಅಡ್ಡಿಯಾದ ಭಾರಿ ಮಳೆ..!

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ನಡೆದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಭೂಸಮಾಧಿಯಾಗಿರುವ ತೀವ್ರ ಶಂಕೆ ವ್ಯಕ್ಯವಾಗಿದೆ.

ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ನಾರಾಯಾಣಾಚಾರ್, ಪತ್ನಿ ಶಾಂತ, ಸೋದರ ಆನಂದ ತೀರ್ಥ, ಅರ್ಚಕ ಪವನ್, ರವಿಕಿರಣ್ ಅವರುಗಳು ತಡರಾತ್ರಿ ಸಂಭವಿಸಿದ ಭೂಕುಸಿತಕ್ಕೆ ಬಲಿಯಾಗಿರುವ ಅನುಮಾನಗಳು ದಟ್ಟವಾಗಿವೆ.

ಪ್ರಸ್ತುತ  ಪ್ರದೇಶದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಭಾಗಮಂಡಲದಿಂದಲೇ ಅಲ್ಲಲ್ಲಿ ಸಂಪರ್ಕ ಕಡಿತಗೊಂಡ ಕಾರಣ ಕಾರ್ಯಾಚರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಭೂ ಕುಸಿತ ಉಂಟಾದ ಈ ಪ್ರದೇಶ ತುಂಬಾ ಅಪಾಯಕಾರಿಯಾಗಿದ್ದು ಸುಮಾರು 2 ಕಿಲೋ ಮೀಟರ್‌ ನಷ್ಟು ಉದ್ದಕ್ಕೆ ಮಣ್ಣು ಭೂ ಕುಸಿತ ಉಂಟಾಗಿದೆ.

 

ಈ ಹಿನ್ನೆಲೆಯಲ್ಲಿ  ಜೆಸಿಬಿ- ಹಿಟಾಚಿಗಳಂತಹ ಬೃಹತ್‌ ಯಂತ್ರಗಳಿಂದ ಮಾತ್ರ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯ ಎಂದ ತೀರ್ಮಾನಕ್ಕೆ ಅಧಿಕಾರಿಗಳು ಮತ್ತು ಎನ್‌ ಡಿ ಆರ್‌ ಎಫ್ ಬಂದಿದೆ.

ಚಾರ್ಮಾಡಿಯಲ್ಲೂ ಸತತ ಭೂ ಕುಸಿತವಾಗಿವಾಗುತ್ತಿದ್ದು, ತಾತ್ಕಾಲಿಕ ಎಲ್ಲಾ ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ.

ತಲಕಾವೇರಿ  ಭೂಕುಸಿತ ಅಪ್‌ ಡೇಟ್..!

 

ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ನಡೆದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಮಣ್ಣಿನಡಿ ಸಿಲುಕಿರುವ ಅರ್ಚಕ ಕುಟುಂಬದ ಸದಸ್ಯರನ್ನು ಹೊರ ತೆಗೆಯುವ ಕಾರ್ಯ ಸ್ಥಳೀಯರಿಂದ ನಡೆಸಲಾಗುತ್ತಿದೆ.

ಮನೆ -ಮಠ ಕಳಕೊಂಡ ಅರ್ಚಕರ ಕುಟುಂಬಕ್ಕೆ ಭಾಗಮಂಡಲದಲ್ಲಿರುವ ಶ್ರೀ ಕಾಶೀ ಮಠದಲ್ಲಿ ಉಳಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ , ಘಟನೆಯಲ್ಲಿ ಎರಡು ಕಾರುಗಳು, 20 ಕ್ಕೂ ಹೆಚ್ಚು ಹಸುಗಳು ಸಾಮಾಧಿಯಾಗಿದೆ.

ಸುಮಾರು 6 ಕಿ.ಮೀ. ಉದ್ದಕ್ಕೆ ಬೆಟ್ಟ ಸಾಲುಗಳು ಕುಸಿದು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ದಟ್ಟ ಮಂಜು, ಮಳೆಯಿಂದಾಗಿ ರಕ್ಷಣಾ ಕಾಯಾ೯ಚರಣೆಗೆ ತೊಡಕಾಗಿದೆ.

ಭಾಗಮಂಡಲ – ತಲಕಾವೇರಿ ರಸ್ತೆಯಲ್ಲಿ  ಅಲ್ಲಲ್ಲಿ ಭೂಕುಸಿತ – ರಕ್ಷಣಾ ಕಾಯ೯ಪಡೆಯ ವಾಹನ ಸಾಮಗ್ರಿಗಳು ಶೀಘ್ರವಾಗಿ ಸ್ಥಳಕ್ಕೆ ತೆರಳಲು ಅಡ್ಡಿಯಾಗಿದೆ. ನಾಪತ್ತೆಯಾದ ಅಚ೯ಕರ ಕುಟುಂಬದ ಪತ್ತೆಗಾಗಿ ಸ್ಥಳೀಯರು ಹರಸಾಹಸ ನಡೆಸುತ್ತಿದ್ದು ಪ್ರಾಣಾಪಾಯ ಸಂಭವಿಸದಿರಲಿ ಎಂದು ಹಾರೈಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಭ್ಯಾಸ..!

ವರದಿ : ನಿಶಾಂತ್ ಕಿಲೆಂಜೂರುಕಿನ್ನಿಗೋಳಿ : ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಮಕ್ಕಳಿಗೆ ಅಕ್ಷರಾಬ್ಯಾಸ ನಡೆಯಿತು.ದುರ್ಗೆಯ ನನ್ನಿಧಿಯಲ್ಲಿ ಅಕ್ಷಾರಭ್ಯಾಸ ಪ್ರಾಂಭಿಸಿದರೆ ಒಳ್ಳೆಯದು ಎನ್ನುವ ನಂಬಿಗೆ ಇದೆ, ಆ...

ನಾರಾವಿ ಅರಸಿಕಟ್ಟೆ ಬಳಿ ಮರಕ್ಕೆ ಬೈಕ್ ಡಿಕ್ಕಿ : ಸವಾರ ಸಾವು..!

ಬೆಳ್ತಂಗಡಿ : ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ನಾರಾವಿಯ ಅರಸಿಕಟ್ಟೆ ಎಂಬಲ್ಲಿ ಸಂಭವಿಸಿದೆ.ಮಂಗಳವಾರ...