Thursday, August 11, 2022

ಈ ‘ಕುಡುಕ ಹುಂಜ’ನಿಗೆ ಸಾರಾಯಿಗೆ ತಿಂಗಳಿಗೆ ರೂ.2000 ಬೇಕಂತೆ…!

ಮುಂಬೈ: ಮನುಷ್ಯರು ಕುಡಿತಕ್ಕೆ ದಾಸರಾಗುವುದು ಸಾಮಾನ್ಯ. ಆದರೆ ಇಲ್ಲೊಂದು ಹುಂಜ ಪ್ರತಿನಿತ್ಯ ಸಾರಾಯಿ ಇಲ್ಲದೇ ನೀರನ್ನು ಕೂಡ ಮುಟ್ಟುವುದಿಲ್ಲ. ಇದು ಆಶ್ಚರ್ಯವೆಮದರೂ ನಂಬಲೇಬೇಕಾದ ಸತ್ಯ ಘಟನೆ.


ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಪಿಪರಿ ಗ್ರಾಮದ ಭಾವು ಕಟೋರೆ ಎನ್ನುವವರು ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ.

ತಮ್ಮ ಫಾರ್ಮ್‌ನಲ್ಲಿ ಬೇರೆ ಬೇರೆ ಜಾತಿಯ ಹಲವು ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಮಧ್ಯೆ ಹುಂಜವೊಂದು ಏಕಾಏಕಿ ಅನಾರೋಗ್ಯಕ್ಕೀಡಾಯಿತು. ಇದರಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿತು.

ಹಲವು ಕಡೆಯಿಂದ ಔಷಧಿ ಮಾಡಿದರೂ ಹುಂಜ ಗುಣವಾಗಿರಲಿಲ್ಲ. ಕೊನೆಗೆ ಸ್ಥಳೀಯ ವ್ಯಕ್ತಿಯೋರ್ವರ ಸಲಹೆ ಮೇರೆಗೆ ಸ್ವಲ್ಪ ಪ್ರಮಾಣದ ಮದ್ಯ ನೀಡಲು ಪ್ರಾರಂಭಿಸಿದರು.

ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಎಣ್ಣೆ ಕೊಡುತ್ತಿದ್ದಂತೆ ಹುಂಜ ಆರೋಗ್ಯವಾಗಿರಲು ಪ್ರಾರಂಭವಾಯಿತು.

ತನಗೆ ಕುಡಿತದ ಅಭ್ಯಾಸವಿಲ್ಲದಿದ್ದರೂ ಹುಂಜನಿಗೆ ಮದ್ಯದಂಗಡಿಯಿಂದ ಸಾರಾಯಿ ತಂದು ಕೊಡುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡಿತು.

ಆಗ ಹುಂಜ ತನ್ನ ಅಸಲಿ ಆಟ ಶುರುವಿಟ್ಟುಕೊಂಡಿತು. ಹುಂಜ ಚೇತರಿಸಿಕೊಂಡಿತಲ್ವಾ ಎಂದು ಭಾವು ಕಟೋರೆ ಮದ್ಯ ನೀಡುತ್ತಿದ್ದುದನ್ನು ನಿಲ್ಲಿಸಿದರು.

ಆದರೆ ಮದ್ಯದ ರುಚಿ ಅರಿತಿದ್ದ ಹುಂಜ ಮದ್ಯ ನೀಡದೇ ನೀರು, ಆಹಾರ ಮುಟ್ಟುತ್ತಿರಲಿಲ್ಲ. ಇದರಿಂದ ಮತ್ತೆ ಸಾರಾಯಿ ನೀಡುತ್ತಿದ್ದಂತೆ ನೀರು, ಆಹಾರ ತಿಂದು ಹಾಯಾಗಿ ರೆಕ್ಕೆ ಬಡಿದು ಕೂಗಿತು.

ಇದನ್ನು ನೋಡಿದ ಮಾಲೀಕ ಕಟೋರೆ ಒಂದು ಕ್ಷಣ ಶಾಕ್​ ಆದರು. ಅದಾಗಿನಿಂದ ಹುಂಜಗೆ ನಿತ್ಯವೂ ಎಣ್ಣೆ ಬೇಕೇ ಬೇಕು. ಹುಂಜನ ಸಾರಾಯಿಗಾಗಿಯೇ ಭಾವು ಕಟೋರೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು.

ಕೊನೆಗೆ ಈ ವೆಚ್ಚ ಭರಿಸಲಾಗದೇ ಕಟೋರೆ ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ. ಸದ್ಯ ಪಶು ವೈದ್ಯರು ಮದ್ಯದ ವಾಸನೆಯ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸಿ,

ಹಂತ ಹಂತವಾಗಿ ಅದರ ಮದ್ಯದ ಚಟ ಬಿಡಿಸಲು ಮುಂದಾಗಿದ್ದಾರೆ. ಸದ್ಯ ಕಟೋರೆಯ ಫಾರ್ಮ್‌ನಲ್ಲಿರುವ ಕುಡುಕ ಹುಂಜನನ್ನು ನೋಡಲು ಕುತೂಹಲದಿಂದ ಬರುತ್ತಿದ್ದಾರಂತೆ.

LEAVE A REPLY

Please enter your comment!
Please enter your name here

Hot Topics

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: 'ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ಅಮೃತ ಮಹೋತ್ಸವ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು-ಶಾಸಕ ಪೂಂಜಾ

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತಮಹೋತ್ಸವ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.ಈ ವೇಳೆ ಮಾಧ್ಯಗಳನ್ನು ಉದ್ದೇಶಿಸಿ ಮಾತನಾಡಿದ...